»   » ಈ ಬಾರಿ ಎಕ್ಸ್ ಕ್ಯೂಸ್ ಇಲ್ಲ, ಸಂಜನಾ ಶಿಕ್ಷೆ ಅನುಭವಿಸಲೇ ಬೇಕು.!

ಈ ಬಾರಿ ಎಕ್ಸ್ ಕ್ಯೂಸ್ ಇಲ್ಲ, ಸಂಜನಾ ಶಿಕ್ಷೆ ಅನುಭವಿಸಲೇ ಬೇಕು.!

Posted by:
Subscribe to Filmibeat Kannada

''ನಾನು ಬಾತ್ ರೂಮ್ ತೊಳೆಯಲ್ಲ.. ಬಟ್ಟೆ ಒಗೆಯೋಕೆ ಬರಲ್ಲ.. ಪಾತ್ರೆ ತೊಳೆಯೋಕೆ ಆಗಲ್ಲ.. ನಾನು ಇದನ್ನೆಲ್ಲ ಮಾಡೇ ಇಲ್ಲ..'' ಅಂತ ಇಲ್ಲಿಯವರೆಗೂ 'ಬಿಗ್ ಬಾಸ್' ಮನೆಯಲ್ಲಿ ನೆಪ ಹೇಳುತ್ತಾ, ಸರಿಯಾಗಿ ಕೆಲಸ ಮಾಡದೆ ಇದ್ದ ಕಿರುತೆರೆ ನಟಿ ಸಂಜನಾ ಈ ವಾರ ತಪ್ಪಿಸಿಕೊಳ್ಳುವ ಹಾಗೇ ಇಲ್ಲ. ಯಾಕಂದ್ರೆ, ಸಂಜನಾಗೆ ಕಾರುಣ್ಯ ರಾಮ್ ಕೊಟ್ಟಿರುವ ಶಿಕ್ಷೆ ಅಂಥದ್ದು.!

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಈ ವಾರ ನಟಿ ಕಾರುಣ್ಯ ರಾಮ್ ಔಟ್ ಆದರು. ಹೊರ ಹೋಗುವ ಮುನ್ನ, ಎಂದಿನಂತೆ ಎಲಿಮಿನೇಟ್ ಆಗಿರುವ ಸ್ಪರ್ಧಿಗಳಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡುತ್ತಾರೆ. ಅದರಂತೆ, ನಟಿ ಕಾರುಣ್ಯ ರಾಮ್ ರವರಿಗೂ ವಿಶೇಷ ಅಧಿಕಾರ ಲಭಿಸಿತು.

ಕಾರುಣ್ಯ ರಾಮ್ ಗೆ ಸಿಕ್ಕ ವಿಶೇಷ ಅಧಿಕಾರ ಏನು.?

ಕಾರುಣ್ಯ ರಾಮ್ ಗೆ ಸಿಕ್ಕ ವಿಶೇಷ ಅಧಿಕಾರ ಏನು.?

'ಬಿಗ್ ಬಾಸ್' ಮನೆಯ ಎಲ್ಲಾ ಪಾತ್ರೆಗಳನ್ನು ತೊಳೆಯುವ ಒಬ್ಬ ಸದಸ್ಯರ ಹೆಸರನ್ನ ನಟಿ ಕಾರುಣ್ಯ ರಾಮ್ ಸೂಚಿಸಬೇಕಿತ್ತು. [ಬಿಗ್ ಬಾಸ್ ಕನ್ನಡ-4: 'ಬಿಗ್' ಮನೆಯಿಂದ ಕಾರುಣ್ಯ ರಾಮ್ ಔಟ್..!]

ಸಂಜನಾ ಹೆಸರನ್ನ ಸೂಚಿಸಿದರು.!

ಸಂಜನಾ ಹೆಸರನ್ನ ಸೂಚಿಸಿದರು.!

'ಬಿಗ್ ಬಾಸ್' ಮನೆಯ ಎಲ್ಲಾ ಪಾತ್ರೆಗಳನ್ನು ನಟಿ ಸಂಜನಾ ತೊಳೆಯಬೇಕು ಅಂತ ನಟಿ ಕಾರುಣ್ಯ ರಾಮ್ ಹೇಳಿದರು.

ಸಂಜನಾಗೂ ಕಾರುಣ್ಯ ರಾಮ್ ಗೂ ಅಷ್ಟಕಷ್ಟೆ.!

ಸಂಜನಾಗೂ ಕಾರುಣ್ಯ ರಾಮ್ ಗೂ ಅಷ್ಟಕಷ್ಟೆ.!

ನಟಿ ಸಂಜನಾಗೂ ನಟಿ ಕಾರುಣ್ಯ ರಾಮ್ ಗೂ ಅಷ್ಟಾಗಿ ಆಗ್ಬರ್ತಿರ್ಲಿಲ್ಲ. ಹೀಗಾಗಿ ಮುಲಾಜಿಲ್ಲದೇ, ಸಂಜನಾ ಹೆಸರನ್ನ ಕಾರುಣ್ಯ ರಾಮ್ ತೆಗೆದುಕೊಂಡರೋ ಏನೋ.?!

ಸಂಜನಾ ತಪ್ಪಿಸಿಕೊಳ್ಳುವ ಹಾಗಿಲ್ಲ.!

ಸಂಜನಾ ತಪ್ಪಿಸಿಕೊಳ್ಳುವ ಹಾಗಿಲ್ಲ.!

ಕಾರುಣ್ಯ ರಾಮ್ ಗೆ ಸಿಕ್ಕ ವಿಶೇಷ ಅಧಿಕಾರದ ಪರಿಣಾಮ, ಮನೆಯ ಎಲ್ಲಾ ಪಾತ್ರೆಗಳನ್ನೂ ಸಂಜನಾ ತೊಳೆಯಬೇಕು. ಇಲ್ಲಿ ಸಂಜನಾಗೆ ಭುವನ್ ಹೆಲ್ಪ್ ಕೂಡ ಮಾಡುವ ಹಾಗಿಲ್ಲ.! ಹೇಗೆ ನೋಡಿದರೂ, ಪಾತ್ರೆ ತೊಳೆಯುವ ಟಾಸ್ಕ್ ನಿಂದ ಸಂಜನಾ ತಪ್ಪಿಸಿಕೊಳ್ಳುವ ಹಾಗಿಲ್ಲ. ತಪ್ಪಿಸಿಕೊಂಡರೆ ಶಿಕ್ಷೆ ಗ್ಯಾರೆಂಟಿ.

English summary
BBK4, Week 6: Before leaving the house, eliminated contestant Actress Karunya Ram chose Sanjana for the punishment given by Bigg Boss. Read the article to know about the punishment.
Please Wait while comments are loading...

Kannada Photos

Go to : More Photos