»   » 'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಆಹುತಿಯಾದ ಅತಿಹೆಚ್ಚು ಮುಖಗಳಿವು.!

'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಆಹುತಿಯಾದ ಅತಿಹೆಚ್ಚು ಮುಖಗಳಿವು.!

Posted by:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಗೋಲ್ಡನ್ ಜ್ಯುಬಿಲಿ ಸೆಲೆಬ್ರೇಷನ್ಸ್ ಮುಗಿದ ಬಳಿಕ 50ನೇ ದಿನ 'ಬಿಗ್ ಬಾಸ್' ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಶುರು ಆಯ್ತು.

ಎಂದಿನಂತೆ ಕನ್ಫೆಶನ್ ರೂಮ್ ಒಳಗೆ ಈ ಬಾರಿ ನಾಮಿನೇಷನ್ ಪ್ರಕ್ರಿಯೆ ನಡೆಯಲಿಲ್ಲ. ಬದಲಾಗಿ, ಗಾರ್ಡನ್ ಏರಿಯಾದಲ್ಲಿ 'ಬಿಗ್ ಬಾಸ್' ಅಗ್ನಿಕುಂಡ ಇರಿಸಿದ್ದರು. ಪ್ರತಿಯೊಬ್ಬ ಸ್ಪರ್ಧಿ ಕೂಡ ತಾವು ನಾಮಿನೇಟ್ ಮಾಡಲು ಇಚ್ಛಿಸುವ ಇಬ್ಬರು ಸದಸ್ಯರ ಭಾವಚಿತ್ರವನ್ನ ಆಯ್ಕೆ ಮಾಡಿ, ಅದನ್ನು ಹರಿದು ಅಗ್ನಿಕುಂಡಕ್ಕೆ ಸಮರ್ಪಿಸಬೇಕಿತ್ತು.

ಓಪನ್ ನಾಮಿನೇಷನ್ ಜೊತೆಗೆ ಫೋಟೋ ಹರಿದು, ಬೆಂಕಿಗೆ ಹಾಕಬೇಕಾಗಿದ್ರಿಂದ ಸಹಜವಾಗಿ 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರಿಗೆ ಇದು ಅರಗಿಸಿಕೊಳ್ಳಲಾಗದ ಕಹಿ ಅನುಭವವಾಯ್ತು. 50 ದಿನದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬೆಂಕಿಗೆ ಆಹುತಿಯಾದ ಅತಿ ಹೆಚ್ಚು ಮುಖಗಳ ಪರಿಚಯ ಮಾಡಿಸ್ತೀವಿ ಬನ್ನಿ...

ಈ ಬಾರಿ ಕೂಡ ಪ್ರಥಮ್ ಮಿಸ್ ಇಲ್ಲ.!

ಈ ಬಾರಿ ಕೂಡ ಪ್ರಥಮ್ ಮಿಸ್ ಇಲ್ಲ.!

ಅಗ್ನಿಕುಂಡದ ಬೆಂಕಿಗೆ ಆಹುತಿಯಾದ ಭಾವಚಿತ್ರಗಳ ಪೈಕಿ 'ಒಳ್ಳೆ ಹುಡುಗ' ಪ್ರಥಮ್ ಭಾವಚಿತ್ರಗಳೇ ಹೆಚ್ಚು. ['ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಪ್ರಥಮ್ 'ಇತಿಹಾಸ' ಪುರುಷ.!]

ಪ್ರಥಮ್ ರನ್ನ ನಾಮಿನೇಟ್ ಮಾಡಿದವರು ಯಾರ್ಯಾರು.?

ಪ್ರಥಮ್ ರನ್ನ ನಾಮಿನೇಟ್ ಮಾಡಿದವರು ಯಾರ್ಯಾರು.?

ಭುವನ್ ಪೊನ್ನಣ್ಣ, ನಿರಂಜನ್ ದೇಶಪಾಂಡೆ, ಸಂಜನಾ, ಕಿರಿಕ್ ಕೀರ್ತಿ, ಶೀತಲ್ ಶೆಟ್ಟಿ, ಶಾಲಿನಿ ಮತ್ತು ಮೋಹನ್... ಪ್ರಥಮ್ ಹೆಸರನ್ನ ಸೂಚಿಸಿದ್ದರಿಂದ ಈ ವಾರ ಕೂಡ ಪ್ರಥಮ್ ನಾಮಿನೇಷನ್ ಲಿಸ್ಟ್ ನಲ್ಲಿದ್ದಾರೆ.

ಸತತ ಎಂಟನೇ ಬಾರಿಗೆ....

ಸತತ ಎಂಟನೇ ಬಾರಿಗೆ....

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸತತ ಎಂಟನೇ ಬಾರಿ ನಾಮಿನೇಟ್ ಆಗಿದ್ದಾರೆ ನಿರ್ದೇಶಕ ಪ್ರಥಮ್. [ಸತತ ಎಂಟನೇ ಬಾರಿ ಪುಟ್ಟೇಗೌಡ ಅಲಿಯಾಸ್ ಪ್ರಥಮ್ ಟಾರ್ಗೆಟ್.!]

ನಾಮಿನೇಷನ್ ಲಿಸ್ಟ್ ನಲ್ಲಿ ಮಾಳವಿಕಾ

ನಾಮಿನೇಷನ್ ಲಿಸ್ಟ್ ನಲ್ಲಿ ಮಾಳವಿಕಾ

ನಟಿ ಮಾಳವಿಕಾ ಅವಿನಾಶ್ ರವರ ಭಾವಚಿತ್ರವನ್ನ ನಟಿ ಸಂಜನಾ, ರೇಖಾ, ಕೀರ್ತಿ, ಶೀತಲ್ ಮತ್ತು ಶಾಲಿನಿ ಹರಿದು ಅಗ್ನಿಕುಂಡಕ್ಕೆ ಹಾಕಿದರು. [ಪ್ರಥಮ್ 'ಔಟ್'.. ಸುದೀಪ್ ಚಮಕ್.. ಶಾಲಿನಿ-ಕೀರ್ತಿ ಗಪ್-ಚುಪ್]

ಮೋಹನ್ ಕೂಡ ಮಿಸ್ ಇಲ್ಲ.!

ಮೋಹನ್ ಕೂಡ ಮಿಸ್ ಇಲ್ಲ.!

'ಒಳ್ಳೆ ಪ್ಲೇಯರ್' ಅಂತ ಹೇಳಿಕೊಳ್ಳುವ ನಟ ಮೋಹನ್ ಕೂಡ ಈ ಬಾರಿ ಟಾರ್ಗೆಟ್ ಆಗಿದ್ದಾರೆ. ಮೋಹನ್ ಭಾವಚಿತ್ರವನ್ನ ಪ್ರಥಮ್ ಮತ್ತು ನಿರಂಜನ್ ಅಗ್ನಿಕುಂಡಕ್ಕೆ ಸಮರ್ಪಿಸಿದರು.

ಶೀತಲ್ ಶೆಟ್ಟಿಗೆ ಎಲಿಮಿನೇಷನ್ ಭಯ

ಶೀತಲ್ ಶೆಟ್ಟಿಗೆ ಎಲಿಮಿನೇಷನ್ ಭಯ

ಸೀಕ್ರೆಟ್ ರೂಮ್ ನಿಂದ ಬಂದ್ಮೇಲೆ ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಈ ವಾರ ನಾಮಿನೇಟ್ ಆಗಿದ್ದಾರೆ.

ಶೀತಲ್ ಶೆಟ್ಟಿ ರವರನ್ನ ನಾಮಿನೇಟ್ ಮಾಡಿದವರು?

ಶೀತಲ್ ಶೆಟ್ಟಿ ರವರನ್ನ ನಾಮಿನೇಟ್ ಮಾಡಿದವರು?

ಭುವನ್ ಪೊನ್ನಣ್ಣ ಮತ್ತು ಮಾಳವಿಕಾ...ಶೀತಲ್ ಶೆಟ್ಟಿ ರವರನ್ನ ನಾಮಿನೇಟ್ ಮಾಡಿದರು.

ನಿರಂಜನ್ ದೇಶಪಾಂಡೆ ಕೂಡ ಬಚಾವ್ ಆಗಲಿಲ್ಲ

ನಿರಂಜನ್ ದೇಶಪಾಂಡೆ ಕೂಡ ಬಚಾವ್ ಆಗಲಿಲ್ಲ

ರೇಖಾ ಮತ್ತು ಮೋಹನ್...ನಿರಂಜನ್ ದೇಶಪಾಂಡೆ ಹೆಸರನ್ನ ಸೂಚಿಸಿದರು. ಹೀಗಾಗಿ ಈ ವಾರ ಕೂಡ ನಿರಂಜನ್ ದೇಶಪಾಂಡೆಗೆ ಎಲಿಮಿನೇಷನ್ ಭಯ ತಪ್ಪಿದ್ದಲ್ಲ.

ನೇರವಾಗಿ ನಾಮಿನೇಟ್ ಆಗಿರುವ ಭುವನ್

ನೇರವಾಗಿ ನಾಮಿನೇಟ್ ಆಗಿರುವ ಭುವನ್

'ಕ್ಯಾಪ್ಟನ್' ಆಗಿ ಕಳೆದ ವಾರದ ಟಾಸ್ಕ್ ನ ಸಮರ್ಪಕವಾಗಿ ನಿಭಾಯಿಸದೆ, ಪಕ್ಷಪಾತ ಮಾಡಿದ್ದಕ್ಕಾಗಿ 'ಬಿಗ್ ಬಾಸ್' ಭುವನ್ ಪೊನ್ನಣ್ಣ ರವರನ್ನ ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಜಸ್ಟ್ ಎಸ್ಕೇಪ್ ಆದವರು..

ಜಸ್ಟ್ ಎಸ್ಕೇಪ್ ಆದವರು..

ನಟಿ ರೇಖಾ ಹಾಗೂ ಶಾಲಿನಿ ವಿರುದ್ಧ ಇನ್ನೊಂದು ವೋಟ್ ಎಕ್ಸ್ ಟ್ರಾ ಬಿದ್ದಿದ್ದರೆ ನಾಮಿನೇಟ್ ಆಗ್ತಿದ್ರು. ಒಂದು ವೋಟ್ ನಿಂದ ಇಬ್ಬರೂ ಬಚಾವ್ ಆಗಿದ್ದಾರೆ.

ಕೀರ್ತಿ-ಸಂಜನಾ ಬಗ್ಗೆ ಕೆಮ್ಮಂಗಿರಲಿಲ್ಲ.!

ಕೀರ್ತಿ-ಸಂಜನಾ ಬಗ್ಗೆ ಕೆಮ್ಮಂಗಿರಲಿಲ್ಲ.!

ಕಳೆದ ವಾರದ ಇಮ್ಯೂನಿಟಿ ಟಾಸ್ಕ್ ನಲ್ಲಿ ಕೀರ್ತಿ ಕುಮಾರ್ ಮತ್ತು ಸಂಜನಾ ವಿಜೇತರಾಗಿದ್ದರಿಂದ ಈ ವಾರ ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆಗಿದ್ದರು.

ಇವರ ಪೈಕಿ ನಿಮ್ಮ ಎಸ್.ಎಂ.ಎಸ್ ಯಾರಿಗೆ?

ಇವರ ಪೈಕಿ ನಿಮ್ಮ ಎಸ್.ಎಂ.ಎಸ್ ಯಾರಿಗೆ?

ಭುವನ್ ಪೊನ್ನಣ್ಣ, ನಿರಂಜನ್ ದೇಶಪಾಂಡೆ, ಮಾಳವಿಕಾ, ಮೋಹನ್, ಶೀತಲ್ ಶೆಟ್ಟಿ ಮತ್ತು ಪ್ರಥಮ್...ಇವರ ಪೈಕಿ ಯಾರು 'ಬಿಗ್ ಬಾಸ್' ಮನೆಯಲ್ಲಿ ಉಳಿಯಬೇಕು.? ನೀವು ಯಾರ ಪರ ಎಸ್.ಎಂ.ಎಸ್ ಮಾಡ್ತೀರಾ.?

ನಿಮ್ಮ ಅಭಿಪ್ರಾಯ ತಿಳಿಸಿ...

ನಿಮ್ಮ ಅಭಿಪ್ರಾಯ ತಿಳಿಸಿ...

ಭುವನ್ ಪೊನ್ನಣ್ಣ, ನಿರಂಜನ್ ದೇಶಪಾಂಡೆ, ಮಾಳವಿಕಾ, ಮೋಹನ್, ಶೀತಲ್ ಶೆಟ್ಟಿ ಮತ್ತು ಪ್ರಥಮ್...ಇವರ ಪೈಕಿ ಯಾರು ಔಟ್ ಆಗಬೇಕು.? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ...ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ....

English summary
Bigg Boss Kannada 4, Week 8 : Kannada Director 'Olle Huduga' Pratham, Malavika Avinash, Mohan, Sheethal Shetty, Niranjan Deshpande and Bhuvan are nominated for eviction.
Please Wait while comments are loading...

Kannada Photos

Go to : More Photos