»   » 'ಬಿಗ್ ಬಾಸ್' ಮನೆ ಗೇಟ್ ಆಚೆ ಕಾಲಿಟ್ಟ ತಕ್ಷಣ ಶಾಲಿನಿಗೆ ಏನಾಯ್ತು.?

'ಬಿಗ್ ಬಾಸ್' ಮನೆ ಗೇಟ್ ಆಚೆ ಕಾಲಿಟ್ಟ ತಕ್ಷಣ ಶಾಲಿನಿಗೆ ಏನಾಯ್ತು.?

Posted by:
Subscribe to Filmibeat Kannada

ಫಿನಾಲೆ ಹಂತಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ನಟಿ ಶಾಲಿನಿ ಎಡವಿ ಬಿದ್ದರು. 'ದೊಡ್ಮನೆ'ಯಿಂದ ಹೊರ ಹೋಗುವಾಗ ನಟಿ ಶಾಲಿನಿ ಬಿಕ್ಕಿ ಬಿಕ್ಕಿ ಅತ್ತರು. 'ಬಿಗ್ ಬಾಸ್' ಮನೆಯ ಗೇಟ್ ಆಚೆ ಕಾಲಿಟ್ಟ ಮೇಲಂತೂ ಶಾಲಿನಿ ಹಾಕಿದ ಕಣ್ಣೀರು ಅಷ್ಟಿಷ್ಟಲ್ಲ.

ಈ ಕುರಿತು ನಟಿ ಶಾಲಿನಿ ರವರನ್ನ 'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ನಟ ಸುದೀಪ್ ಪ್ರಶ್ನೆ ಕೇಳಿದರು. ಆಗ ಶಾಲಿನಿ ಕೊಟ್ಟ ಉತ್ತರ....

ಸುದೀಪ್ ಕೇಳಿದ್ದೇನು.?

ಸುದೀಪ್ ಕೇಳಿದ್ದೇನು.?

''ಬಿಗ್ ಬಾಸ್ ಮೇನ್ ಗೇಟ್ ಹೊರಗಡೆ ನಿಂತು ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ರಿ. ಬಿಗ್ ಬಾಸ್ ಅನೌನ್ಸ್ ಮೆಂಟ್ ಬಂದಾಗ ಅಷ್ಟೊಂದು ಅಳಲಿಲ್ಲ. ಎಲ್ಲವೂ ಓಕೆ ಆಗಿ ಕಾಣ್ತಿದ್ರಿ. ಗೇಟ್ ನಿಂದ ಹೊರಗೆ ಬಂದ್ಮೇಲೆ ಏನಾಯ್ತು?'' ಅಂತ ಶಾಲಿನಿಗೆ ಸುದೀಪ್ ಪ್ರಶ್ನೆ ಕೇಳಿದರು.['ಬಿಗ್ ಬಾಸ್' ಕಾರ್ಯಕ್ರಮದ ತಂತ್ರಜ್ಞರು ಕಣ್ಣೀರಿಟ್ಟಿದ್ದು ಯಾಕೆ?]

ಶಾಲಿನಿ ಹೇಳಿದ್ದೇನು?

ಶಾಲಿನಿ ಹೇಳಿದ್ದೇನು?

''ಒಂದೇ ಹೆಜ್ಜೆ ನಾನು ಆಚೆ ಇಟ್ಟೆ. ಡೋರ್ ಕ್ಲೋಸ್ ಆಯ್ತು. ನಾನಿನ್ನೂ ಅಲ್ಲೇ ನಿಂತಿದ್ದೇನೆ. 'ಬಿಗ್ ಬಾಸ್' ಈ ಸೀಸನ್ ನ ಐವರು ಫೈನಲಿಸ್ಟ್ ಗಳನ್ನ ಅನೌನ್ಸ್ ಮಾಡಿದ್ರು. ಒಂದ್ಸಲ ನನ್ನೆದೆ ಕುಸಿದು ಹೋಯ್ತು. ಪಟಾಕಿ ಹೊಡೆದರು. ಅಲ್ಲಿಗೆ ನಾನು ಆಫ್ ಆಗ್ಹೋದೆ. ಎಷ್ಟು ಅತ್ತಿದ್ದೇನೆ ನಾನು ಅಂದ್ರೆ.... ತುಂಬಾ ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ಒಂದೇ ಒಂದು ಹೆಜ್ಜೆ ಅಷ್ಟೆ'' ಎಂದರು ಶಾಲಿನಿ ['ಬಿಗ್ ಬಾಸ್' ಫಿನಾಲೆಗೂ ಮುನ್ನ ಎಡವಿ ಬಿದ್ದ 'ಡ್ರಾಮಾ ಕ್ವೀನ್' ಶಾಲಿನಿ.!]

ಶಾಲಿನಿಗೆ ಸಿಕ್ಕಾಪಟ್ಟೆ ಬೇಸರ

ಶಾಲಿನಿಗೆ ಸಿಕ್ಕಾಪಟ್ಟೆ ಬೇಸರ

''ಫೈನಲ್ 5 ನಲ್ಲಿ ನಾನು ಇಲ್ಲದೇ ಇರುವುದನ್ನು ಒಪ್ಪಿಕೊಂಡಿದ್ದೇನೆ. ಆದ್ರೆ ಅದು ತುಂಬಾ ಕಷ್ಟ'' ಅಂತ ಬೇಸರ ವ್ಯಕ್ತಪಡಿಸಿದರು ಶಾಲಿನಿ.

ಈಗ ಮಿಸ್ ಮಾಡಿಕೊಳ್ಳುತ್ತಿರುವುದೇನು.?

ಈಗ ಮಿಸ್ ಮಾಡಿಕೊಳ್ಳುತ್ತಿರುವುದೇನು.?

''ಅಲ್ಲಿರುವವರನ್ನು, ಮನೆಯನ್ನು ತುಂಬಾ ಮಿಸ್ ಮಾಡುತ್ತಿದ್ದೇನೆ'' ಎಂದರು ಶಾಲಿನಿ.

English summary
Bigg Boss Kannada 4: Was Shalini upset with Bigg Boss decision? Read the article to know the answer
Please Wait while comments are loading...

Kannada Photos

Go to : More Photos