»   » ನರ್ಸ್ ಜಯಲಕ್ಷ್ಮಿ ತುಪ್ಪಾ ಬೇಕಾ ತುಪ್ಪಾ ಐಟಂ ಡಾನ್ಸ್

ನರ್ಸ್ ಜಯಲಕ್ಷ್ಮಿ ತುಪ್ಪಾ ಬೇಕಾ ತುಪ್ಪಾ ಐಟಂ ಡಾನ್ಸ್

Posted by:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ ನಲ್ಲಿ 'ಬಿಗ್ ಬಾಸ್' ಕೊಟ್ಟಿರುವ ಹುಚ್ಚಾಸ್ಪತ್ರೆ ಟಾಸ್ಕ್ ಮುಗಿಲು ಮುಟ್ಟಿದೆ. 31ನೇ ದಿನವೂ ಹುಚ್ಚರ ಹುಚ್ಚಾಟಗಳು ಗರಿಗೆದರಿದವು. ಬಿಗ್ ಬಾಸ್ ಮನೆ ಥೇಟ್ ಹುಚ್ಚಾಸ್ಪತ್ರೆಯಂತೆ ಬದಲಾಗಿದ್ದು ಒಬ್ಬರನ್ನೊಬ್ಬರು ಕಾಲೆಳೆಯುವ ಆಟ ಮುಂದುವರಿದಿದೆ.

ಹುಚ್ಚಿಯಂತೆ ವರ್ತಿಸುತ್ತಿರುವ ಅನುಶ್ರೀ ಅವರು ಗಾರ್ಡನ್ ಏರಿಯಾವನ್ನು ರಾವಣ ಲಂಕೆಯಂತೆ ಊಹಿಸಿಕೊಂಡು ಬ್ರಹ್ಮಾಂಡ ಶರ್ಮಾರನ್ನು ಹನುಮಂತ ಎಂದರು. ಶರ್ಮಾ ಅವರು ಸಹ ಅಷ್ಟೇ ಹನುಮಂತನಂತೆ ವರ್ತಿಸಿದರು.

ಇನ್ನು ಜಯಲಕ್ಷ್ಮಿಯನ್ನು ಶೂರ್ಪಣಕಿ ಎಂದು ಕರೆದದ್ದೂ ನಡೆಯಿತು. ಇನ್ನು ಅರುಣ್ ಸಾಗರ್ ಅವರ ಹುಚ್ಚಾಟ ಮಿತಿಮೀರಿತ್ತು. ಈಜುಕೊಳಕ್ಕೆ ಧುಮುಕುವುದು, ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಬಿಸಾಕುವುದು ಹೀಗೆ ಥೇಟ್ ಹುಚ್ಚನಂತೆಯೇ ಅರುಣ್ ಮಾಡುತ್ತಿದ್ದರು.

ಅರುಣ್ ಪ್ಯಾಂಟ್ ಎಳೆದ ಜಯಲಕ್ಷ್ಮಿ

ಅರುಣ್ ಪ್ಯಾಂಟ್ ಎಳೆದ ಜಯಲಕ್ಷ್ಮಿ

ನರ್ಸ್ ಜಯಲಕ್ಷ್ಮಿ ಅವರು ಅರುಣ್ ಅವರಿಗೆ ಸ್ನಾನ ಮಾಡಿಸಲು ಹೋಗಿ ಇಕ್ಕಟ್ಟಿಗೆ ಸಿಕ್ಕಿಬಿದ್ದರು. ಮೊದಲೇ ಹುಚ್ಚನ ಪಾತ್ರ ಮಾಡುತ್ತಿರುವ ಅರುಣ್ ಪ್ಯಾಂಟ್ ಎಳೆದುಬಿಟ್ಟರು. ಆದರೆ ಒಳಗಡೆ ಚಡ್ಡಿ ಇತ್ತು ಬಿಡಿ! ಹುಚ್ಚನಂತೆ ವರ್ತಿಸುತ್ತಿದ್ದ ಅರುಣ್ ಈ ಘಟನೆಯಿಂದ ಸ್ವಲ್ಪ ಗಲಿಬಿಲಿಯಾದಂತೆ ಕಂಡರು. ಬಳಿಕ ನಿನ್ನ ಸೀರೆ ಬಿಚ್ಚು ಬಿಡ್ತೀನಿ ಎಂದು ನರ್ಸ್ ಗೆ ತಿರುಗೇಟು ನೀಡಿದ.

ಬಾತ್ ರೂಮಿನಲ್ಲಿ ಬಂಧಿಯಾದ ಜಯಲಕ್ಷ್ಮಿ

ಬಾತ್ ರೂಮಿನಲ್ಲಿ ಬಂಧಿಯಾದ ಜಯಲಕ್ಷ್ಮಿ

ಇನ್ನೊಂದು ಕಡೆ ಮನೆಯಲ್ಲಿ ಎಲ್ಲರೂ ಸೇರಿ ನರ್ಸ್ ಜಯಲಕ್ಷ್ಮಿ ಅವರನ್ನು ಬಾತ್ ರೂಮಿನಲ್ಲಿ ಕೂಡಿ ಹಾಕಲು ಪ್ರಯತ್ನಿಸಿದರು. ಅವರಿಂದ ತಪ್ಪಿಸಿಕೊಂಡು ಅವರು ಓಡಿ ಓಡಿ ಸುಸ್ತಾದರು. ಬಳಿಕ ತಮ್ಮ ಪಾಡಿಗೆ ತಾವು ಪ್ರಪಂಚವೇ ದೇವರು ಮಾಡಿದ ಹುಚ್ಚಾಸ್ಪತ್ರೆ, ಇಲ್ಲಿ ನಾನು ಹುಚ್ಚು ನರ್ಸು ಎಂದು ತಮ್ಮಷ್ಟಕ್ಕೆ ತಾವು ಹಾಡಿಕೊಂಡರು.

ಗುಂಡಣ್ಣ ಗುಂಡಣ್ಣ ನನಗೆ ಫ್ರೆಂಡಣ್ಣ

ಗುಂಡಣ್ಣ ಗುಂಡಣ್ಣ ನನಗೆ ಫ್ರೆಂಡಣ್ಣ

ಅದ್ಯಾಕೋ ಏನೋ ಬ್ರಹ್ಮಾಂಡ ಗುರುಗಳಿಗೆ ಸ್ನಾನ ಮಾಡಿಸಲು ನರ್ಸ್ ಜಯಲಕ್ಷ್ಮಿ ಕೈಯಲ್ಲಿ ಸಾಧ್ಯವಾಗಲಿಲ್ಲ. ಅವರು ನರ್ಸ್ ಕೈಯಲ್ಲಿ ತಪ್ಪಿಸಿಕೊಂಡು ಕೋಣೆಯೊಂದರಲ್ಲಿ ಚಿಲಕ ಹಾಕಿಕೊಂಡು ಅವಿತುಕೊಂಡು ಬಿಟ್ಟರು. ಗುಂಡಣ್ಣ ಗುಂಡಣ್ಣ ನನಗೆ ನೀನು ತುಂಬಾ ಫ್ರೆಂಡಣ್ಣ ಎಂದು ಬ್ರಹ್ಮಾಂಡ ಸುತ್ತಲೂ ಸುತ್ತುತ್ತಲೇ ಇದ್ದರು.

ವಿಜಯ್ ಗೆ ಬಿಗ್ ಬಾಸ್ ರಹಸ್ಯ ಟಾಸ್ಕ್

ವಿಜಯ್ ಗೆ ಬಿಗ್ ಬಾಸ್ ರಹಸ್ಯ ಟಾಸ್ಕ್

ಇದೇ ಸಂದರ್ಭದಲ್ಲಿ ವಿಜಯ ರಾಘವೇಂದ್ರ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಕರೆದು ರಹಸ್ಯ ಟಾಸ್ಕ್ ಒಂದನ್ನು ನೀಡಿದರು. ಅದೇನೆಂದರೆ ಬ್ರಹ್ಮಾಂಡ ಗುರುಗಳು ತುಂಬಾ ಅಸ್ವಸ್ಥರಾದಂತೆ ಕಾಣಿಸುತ್ತಿದ್ದಾರೆ. ಅವರಿಗೆ ಉತ್ಸಾಹ ತರಿಸಲು ನರ್ಸ್ ಜಯಲಕ್ಷ್ಮಿ ಅವರಿಂದ ಒಂದು ಐಟಂ ನಂಬರ್ ಮಾಡಿಸಬೇಕು ಎಂದರು.

ಬಿಗ್ ಬಾಸ್ ಗೆ ಐಟಂ ಡಾನ್ಸ್ ಮನಸ್ಸಾಯಿತಾ

ಬಿಗ್ ಬಾಸ್ ಗೆ ಐಟಂ ಡಾನ್ಸ್ ಮನಸ್ಸಾಯಿತಾ

ಈ ಟಾಸ್ಕ್ ರಹಸ್ಯವಾಗಿದ್ದ ಕಾರಣ ಜಯಲಕ್ಷ್ಮಿ ಹೊರತುಪಡಿಸಿ ಇನ್ಯಾರಿಗೂ ಗೊತ್ತಾಗಬಾರದಿತ್ತು. ಜಯಲಕ್ಷ್ಮಿ ಅವರ ಐಟಂ ಡಾನ್ಸ್ ನೋಡಲು ಬಿಗ್ ಬಾಸ್ ಅವರಿಗೂ ಮನಸ್ಸಾಯಿತೋ ಏನೋ ಒಟ್ಟಿನಲ್ಲಿ ಬ್ರಹ್ಮಾಂಡ ಅವರ ನೆಪ ಇಟ್ಟುಕೊಂಡು ಐಟಂ ಡಾನ್ಸ್ ಶುರುವಾಯಿತು.

ತುಪ್ಪಾ ಬೇಕಾ ತುಪ್ಪಾ ಎಂದ ನರ್ಸ್ ಜಯಲಕ್ಷ್ಮಿ

ತುಪ್ಪಾ ಬೇಕಾ ತುಪ್ಪಾ ಎಂದ ನರ್ಸ್ ಜಯಲಕ್ಷ್ಮಿ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಳ್ಳ ಮಳ್ಳ ಸುಳ್ಳ ಚಿತ್ರದಲ್ಲಿನ ರಾಗಿಣಿ ಕುಣಿದು ಪಡ್ಡೆಗಳ ನಿದ್ದೆಗೆಡಿಸಿದ್ದ ತುಪ್ಪಾ ಬೇಕಾ ತುಪ್ಪಾ ಹಾಡನ್ನು ಆಯ್ಕೆ ಮಾಡಲಾಗಿತ್ತು. ಈ ಹಾಡಿಗೆ ನರ್ಸ್ ಜಯಲಕ್ಷ್ಮಿ ಅವರ ಕೈಯಲ್ಲಿ ಸಂಪೂರ್ಣ ನ್ಯಾಯ ಸಲ್ಲಿಸಲು ಸಾಧ್ಯವಾಗಲಿಲ್ಲ. ರಸವತ್ತಾದ ಹಾಡಿಗೆ ಅವರ ಸೊಂಟ ಸಹಕರಿಸಲಿಲ್ಲ ಎಂಬುದು ದುರಂತ ಸತ್ಯ.

ಸ್ವಾಮೀಜಿಗಳ ಮುಂದೆ ಐಟಂ ಡಾನ್ಸ್ ಕಾನ್ಸೆಪ್ಟ್

ಸ್ವಾಮೀಜಿಗಳ ಮುಂದೆ ಐಟಂ ಡಾನ್ಸ್ ಕಾನ್ಸೆಪ್ಟ್

ಈ ಹಾಡಿನ ಬಳಿಕ ಎಲ್ಲರೂ ಗೆಲುವಾದರು. ಬ್ರಹ್ಮಾಂಡ ಗುರುಗಳ ಮನಸ್ಸಿಗೂ ಸಂತಸವಾಗಿತ್ತು. ಸ್ವಾಮೀಜಿಗಳ ಮುಂದೆ ಐಟಂ ಡಾನ್ಸ್ ಕಾನ್ಸೆಪ್ಟ್ ಕೆಲವರಿಗೆ ಮಜಾ ಕೊಟ್ಟರೆ ಇನ್ನು ಕೆಲವರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

ಜೋಶಿ, ಅರುಣ್ ನಡುವೆ ಅಂತರ ಹೆಚ್ಚಳ

ಜೋಶಿ, ಅರುಣ್ ನಡುವೆ ಅಂತರ ಹೆಚ್ಚಳ

ವಿನಾಯಕ ಜೋಶಿ ಹಾಗೂ ಅರುಣ್ ಸಾಗರ್ ನಡುವಿನ ಅಂತರ ಜಾಸ್ತಿಯಾಗುತ್ತಲೇ ಇದೆ. ಅವಕಾಶ ಸಿಕ್ಕಾಗಲ್ಲೆಲ್ಲಾ ಒಬ್ಬರನ್ನೊಬ್ಬರು ಕಾಳೆಯುವ ಕೆಲಸ ನಡೆಯುತ್ತಲೇ ಇದೆ. ಮನೆಯಲ್ಲಿ ಹುಚ್ಚಾಟ ಜಾಸ್ತಿಯಾಗಿ ಕಿತ್ತಾಟಕ್ಕೆ ದಾರಿ ಮಾಡಿಕೊಡುತ್ತಿದೆ. ಮರೆಯಲ್ಲಿ ಬಿಗ್ ಬಾಸ್ ಮಜಾ ನೋಡುತ್ತಿದ್ದಾರೆ.

English summary
Etv Kannada's big reality show 'Bigg Boss Kannada' day 31st highlights. A special luxury-budget task Mental Asylum continues on the day. At the same time Nurse Jayalakshmi shaks her legs for Item Nuber Tuppa Beka Tuppa.
Please Wait while comments are loading...

Kannada Photos

Go to : More Photos