twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಮನೋರಂಜನಾ ವಾಹಿನಿಗಳಲ್ಲಿ ಬಾಲಿವುಡ್ ರೌಂಡ್ ಯಾಕೆ?

    By ಬಾಲರಾಜ್ ತಂತ್ರಿ
    |

    ಕೇಂದ್ರ ಸರಕಾರ ಹಿಂದಿಯನ್ನು ಬಲವಂತವಾಗಿ ಹೇರುತ್ತಿರುವುದಕ್ಕೆ ರಾಜ್ಯದಲ್ಲಿ ವ್ಯಾಪಕ ವಿರೋಧವಾಗುತ್ತಿರುವುದು ಗೊತ್ತೇ ಇದೆ. ಇತ್ತೀಚೆಗೆ ರಾಜ್ಯಪಾಲರು ಅಸೆಂಬ್ಲಿಯನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡಿದ್ದಕ್ಕೂ ಪ್ರತಿಭಟನೆ ವ್ಯಕ್ತವಾಗಿತ್ತು.

    ಹಿಂದಿಯನ್ನು ವಿರೋಧಿಸುವ ನಾವು, ಮನೋರಂಜನೆಯ ವಿಚಾರಕ್ಕೆ ಬಂದಾಗ ಈ ವಿಚಾರದಲ್ಲಿ ರಾಜಿಯಾಗುತ್ತಿರುವುದು ಯಾತಕ್ಕೆ? ಹಿಂದಿ ಬೇಡವೇ ಬೇಡ ಎನ್ನುವ ನಾವು ಈ ವಿಚಾರದಲ್ಲೂ ನಮ್ಮ ಭಾಷೆಯ ಮೇಲೆ ಅಭಿಮಾನ ತೋರಬೇಕಲ್ಲವೇ ಎನ್ನುವುದು ವಾದ.

    ವಿಚಾರಕ್ಕೆ ಬರುವುದಾದರೆ, ಕನ್ನಡ ಮನೋರಂಜನಾ ವಾಹಿನಿಗಳಲ್ಲಿ ಬರುತ್ತಿರುವ ರಿಯಾಲಿಟಿ ಶೋಗಳಲ್ಲಿ 'ಬಾಲಿವುಡ್ ರೌಂಡ್' ಎನ್ನುವ ಪರಿಪಾಠ ಕಳೆದೆರಡು ವರ್ಷಗಳಿಂದ ಆರಂಭವಾಗಿದೆ. ಈ ಸುತ್ತಿನಲ್ಲಿ ಹಿಂದಿ ಹಾಡುಗಳದ್ದೇ ಕಾರುಬಾರು ಎಂದು ಬೇರೆ ಹೇಳಬೇಕಾಗಿಲ್ಲ.

    ಇದಲ್ಲದೇ, ಈ ರಿಯಾಲಿಟಿ ಶೋಗಳ ಇತರ ರೌಂಡಿನಲ್ಲೂ ಹಿಂದಿ ಹಾಡುಗಳು ಬರಬಾರದಂತೇನೂ ಇಲ್ಲ. ಅದ್ಯಾಕೋ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ರೌಂಡ್ ಎನ್ನುವುದು ಫ್ಯಾಷನ್ ಆಗಿದೆ. (ಮೋದಿ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಕೂಗು)

    Why Bollywood round in reality show in Kannada entertainment channels

    ಕೆಲವೊಮ್ಮೆ ಈ ರಿಯಾಲಿಟಿ ಶೋಗಳನ್ನು ನೋಡುತ್ತಿದ್ದರೆ ಇದು ಹಿಂದಿ ವಾಹಿನಿಗಳೋ ಅಥವಾ ಕನ್ನಡದ ವಾಹಿನಿಗಳೋ ಎನ್ನುವಷ್ಟರ ಮಟ್ಟಿಗೆ ಹಿಂದಿ ಹಾಡುಗಳು ಆವರಿಸಿಕೊಂಡಿರುತ್ತವೆ. ಹೀಗಾಗಿ ಕರ್ನಾಟಕದಲ್ಲಿ ಹಿಂದಿ ಹಾಡು/ಚಿತ್ರಗಳ ಜನಪ್ರಿಯತೆಗೆ ನಮ್ಮ ವಾಹಿನಿಗಳ ಪಾಲೂ ಇದೆ, ಸಿಂಹಪಾಲು ಅಂದರೆ ತಪ್ಪಾಗಲಾರದು.

    ಇದರಿಂದ ಕನ್ನಡಿಗರ ಮೇಲೆ ಹಿಂದಿಯ influence ಗೆ ನಮ್ಮ ವಾಹಿನಿಗಳೇ ಬೆಂಬಲ ನೀಡಿದಂತಾಗುವುದಿಲ್ಲವೇ ಎನ್ನುವುದು ಪ್ರಶ್ನೆ. ರಿಯಾಲಿಟಿ ಶೋಗಳಲ್ಲಿ ಹಿಂದಿ ಹಾಡುಗಳು ಇರಲೇ ಬಾರದು ಎನ್ನುವುದು ತಪ್ಪಾಗುತ್ತಾದರೂ, ಬಾಲಿವುಡ್ ರೌಂಡ್ ಎನ್ನುವ ಸುತ್ತಿಗೆ ಕಡಿವಾಣ ಹಾಕುವುದು ಸೂಕ್ತ ಅಲ್ಲವೇ?

    ಇದೇ ರೀತಿ ಮುಂದಿನ ದಿನಗಳಲ್ಲಿ ಕಾಲಿವುಡ್ ರೌಂಡ್, ಟಾಲಿವುಡ್ ರೌಂಡ್ ಎಂದು ಶುರುವಾದರೆ ಅದಕ್ಕೂ ಹೊಂದಿಕೊಂಡು ಹೋಗುವ ಅನಿವಾರ್ಯತೆ ನಮಗ್ಯಾಕೆ?

    ಇದರ ಬದಲು ರಾಜ್, ವಿಷ್ಣು, ಶಂಕರ್ ನಾಗ್ ರೌಂಡ್ ಎಂದು ಶುರು ಮಾಡಬಹುದಿಲ್ಲವೇ? ಯಾವ ಬಾಲಿವುಡ್ ಹೀರೋ ಅಥವಾ ಅವರ ಹಾಡುಗಳಿಗಿಂತ ಕಮ್ಮಿ ಈ ದಿಗ್ಗಜರ ಹಾಡು ಮತ್ತು ಚಿತ್ರಗಳು?

    ಅಂತರ್ಜಾಲದ ಮೂಲಕ ಸುದ್ದಿ ಬಿತ್ತರಿಸುವ ಸಂಸ್ಥೆಗಳು ಹಿಂದಿ, ಬಾಲಿವುಡ್ ಸಂಬಂಧ ಸುದ್ದಿ ಪ್ರಕಟಿಸುವುದಕ್ಕೂ, ವಾಹಿನಿಗಳು ಸುದ್ದಿ ಪ್ರಸಾರ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಯಾಕೆಂದರೆ ವಾಹಿನಿಗಳ ಕಾರ್ಯಕ್ರಮಗಳು ಎಲ್ಲಾ ವಯಸ್ಸಿನ ಜನರನ್ನು ನೇರವಾಗಿ ತಲುಪುತ್ತದೆ.

    ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವುದಕ್ಕೆ ಎಲ್ಲಡೆ ವಿರೋಧ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಪರವಾಗಿ ನಿಲ್ಲುವಲ್ಲಿ ಕನ್ನಡ ಮನೋರಂಜನಾ ವಾಹಿನಿಗಳ ಪಾತ್ರ ಮಹತ್ವದ್ದು.

    ಹಾಗಾಗಿ ನಮ್ಮ ವಾಹಿನಿಗಳು ತಮ್ಮ strategy ಬದಲಾಯಿಸಿಕೊಳ್ಳಲಿ ಎನ್ನುವುದು ಕೋರಿಕೆ. ಕಾರ್ಯರೂಪಕ್ಕೆ ತರುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ.

    English summary
    Bollywood round in reality show in Kannada entertainment channels, is it required.
    Tuesday, March 17, 2015, 16:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X