»   » ಹುಚ್ಚ ವೆಂಕಟ್ ಬದಲಿಗೆ 'ಬಿಗ್ ಬಾಸ್'ಗೆ ಈಶ್ವರಪ್ಪ?

ಹುಚ್ಚ ವೆಂಕಟ್ ಬದಲಿಗೆ 'ಬಿಗ್ ಬಾಸ್'ಗೆ ಈಶ್ವರಪ್ಪ?

Posted by:
Subscribe to Filmibeat Kannada

ಮೈಂಡ್ ಹಾಗೂ ನಾಲಿಗೆ ಮಧ್ಯೆ ಫಿಲ್ಟರ್ ಇಲ್ಲದೆ, ಬಾಯಿಗೆ ಬಂದಂತೆ ಒದರುವ ಜಾಯಮಾನ ಹುಚ್ಚ ವೆಂಕಟ್ ರದ್ದು. ಹಾಗೇ ಬಿಜೆಪಿ ಮುಖಂಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಕೂಡ ತಮ್ಮ ಮಾತಿಗೆ ಹೆಸರುವಾಸಿ.

ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಆಗಾಗ ಬ್ರೇಕಿಂಗ್ ನ್ಯೂಸ್ ಮಾಡುವ ಈಶ್ವರಪ್ಪ, ಹುಚ್ಚ ವೆಂಕಟ್ ಗೆ ಕಾಂಪಿಟೇಷನ್ ಕೊಟ್ಟು 'ಬಿಗ್ ಬಾಸ್' ಮನೆಯೊಳಗೆ ಪ್ರವೇಶಿಸುವ ಸಿದ್ಧತೆ ಮಾಡಿಕೊಳ್ತಿದ್ದಾರಂತೆ.! ಹೀಗಂತ ಸಾರುವ ವ್ಯಂಗ್ಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Cartoon ; Will K.S.Eshwarappa enter Bigg Boss Kannada 3?

ಕೆಲ ದಿನಗಳ ಹಿಂದೆಯಷ್ಟೇ 'ರಾಜ್ಯದಲ್ಲಿ ಟಿವಿ ಚಾನೆಲ್, ದಿನ ಪತ್ರಿಕೆಗಳನ್ನು ಬ್ಯಾನ್ ಮಾಡಿ' ಅಂತ ವಿಧಾನ ಪರಿಷತ್ ನಲ್ಲಿ ಈಶ್ವರಪ್ಪ ಆಗ್ರಹಿಸಿದರು. [ಸದನದಲ್ಲಿ ಇಂದು : ಬಿಗ್ ಬಾಸ್ ರಿಯಾಲಿಟಿ ಶೋ ರದ್ದು ಮಾಡಲು ಪತ್ರ]

'ಐಟಂ ಸಾಂಗ್ ಬ್ಯಾನ್ ಆಗ್ಬೇಕ್' ಅನ್ನೋದು ಹುಚ್ಚ ವೆಂಕಟ್ ರವರ ಸಿಗ್ನೇಚರ್ ಡೈಲಾಗ್. ಅದನ್ನ ಆಗಾಗ ಹೇಳಿ ಹೇಳಿ 'ಬ್ಯಾನ್ ಸ್ಟಾರ್' ಅಂತ ಟೈಟಲ್ ಪಡೆದಿದ್ದರು ಹುಚ್ಚ ವೆಂಕಟ್. ಇದೀಗ 'ಚಾನೆಲ್, ಪೇಪರ್ ಬ್ಯಾನ್ ಮಾಡಿ' ಅಂದು ಈಶ್ವರಪ್ಪ ಸುದ್ದಿ ಮಾಡಿದ್ದಾರೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಹಾಗಾದ್ರೆ, ಹುಚ್ಚ ವೆಂಕಟ್ ಬದಲಿಗೆ ಈಶ್ವರಪ್ಪ 'ಬಿಗ್ ಬಾಸ್' ಮನೆಗೆ ಹೋಗ್ತಾರಾ? ಅಂತ ಊಹಿಸುವುದಕ್ಕೂ ಹೋಗ್ಬೇಡಿ. {Image Courtesy - Satish Acharya}

English summary
Will BJP Politician K.S.Eshwarappa enter Bigg Boss Kannada 3 reality show? Check out the cartoon.
Please Wait while comments are loading...

Kannada Photos

Go to : More Photos