twitter
    For Quick Alerts
    ALLOW NOTIFICATIONS  
    For Daily Alerts

    ಯಶ್ ಕರೆದ ಜಾಗಕ್ಕೆ ಚರ್ಚೆಗೆ ಬರಲ್ಲ ಅಂದ ಎಚ್.ಆರ್.ರಂಗನಾಥ್

    By ಒನ್ಇಂಡಿಯಾ ಕನ್ನಡ ಸಿಬ್ಬಂದಿ
    |

    ಪ್ರೈಮ್ ಟೈಮ್ ನಲ್ಲಿ ರೈತರ ಪರ ನಿರಂತರ ಅಭಿಯಾನ ಮಾಡುವ ಕುರಿತು ಮಾಧ್ಯಮಗಳಿಗೆ ಯಶ್ ಚಾಲೆಂಜ್ ಹಾಕಿದ್ದು, ಅದನ್ನ ಪಬ್ಲಿಕ್ ಟಿವಿ ಮತ್ತು ಪ್ರಜಾ ಟಿವಿ ಸ್ವೀಕರಿಸಿ, ಯಶ್ ಗೆ ಆಹ್ವಾನ ಕೊಟ್ಟಿದ್ದು ಹಳೇ ವಿಷಯ. ಈಗ ಎಲ್ಲಾ ಕನ್ನಡ ವಾಹಿನಿಯ ಮುಖ್ಯಸ್ಥರಿಗೆ ರಾಕಿಂಗ್ ಸ್ಟಾರ್ ಯಶ್ 'ಆಹ್ವಾನ' ನೀಡಲು ಮುಂದಾಗಿದ್ದಾರೆ.

    ಹೌದು, ಮೊದಲು ಹಾಕಿದ್ದ ಸವಾಲನ್ನು ಪಕ್ಕಕ್ಕೆ ಸರಿಸಿ, ಹೊಸ ಪ್ಲಾನ್ ಮಾಡಿದ್ದಾರೆ ಯಶ್. ಅದರ ಪ್ರಕಾರ, ತಾವೇ ಒಂದು ವೇದಿಕೆ ಕಲ್ಪಿಸಿ, ಅಲ್ಲಿಗೆ ಎಲ್ಲಾ ಸುದ್ದಿ ವಾಹಿನಿಗಳ ಮುಖ್ಯಸ್ಥರನ್ನು ಆಹ್ವಾನಿಸಿ, ಬಹಿರಂಗ ಚರ್ಚೆ ನಡೆಸಲು ಯಶ್ ಸಿದ್ಧವಾಗಿದ್ದಾರೆ. [ಸವಾಲು ಸೈಡಿಗಿಟ್ಟ ಯಶ್: ಎಲ್ಲಾ ಚಾನೆಲ್ ಗಳಿಗೂ ಹೊಸ ಆಫರ್.!]

    ಈಗಾಗಲೇ ಈ ಆಹ್ವಾನಕ್ಕೆ 'ಪ್ರಜಾ ಟಿವಿ' ಇಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ ಯಶ್, ಪಬ್ಲಿಕ್ ಟಿವಿ ಕ್ಯಾಪ್ಟನ್ ಎಚ್.ಆರ್.ರಂಗನಾಥ್ ಜೊತೆ ನಿನ್ನೆ (ಅಕ್ಟೋಬರ್ 21) ರಾತ್ರಿ 9 ಗಂಟೆಗೆ ನೇರ ಪ್ರಸಾರವಾದ 'ಬಿಗ್ ಬುಲೆಟಿನ್' ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದೆ ಓದಿ....

    ಚಾನೆಲ್ ಗೆ ಬನ್ನಿ ಎಂದ 'ಪಬ್ಲಿಕ್ ಟಿವಿ' ಕ್ಯಾಪ್ಟನ್

    ಚಾನೆಲ್ ಗೆ ಬನ್ನಿ ಎಂದ 'ಪಬ್ಲಿಕ್ ಟಿವಿ' ಕ್ಯಾಪ್ಟನ್

    ''ಎಲ್ಲಾ ಚಾನೆಲ್ ಗಳಿಗೂ ಬರ್ತೀನಿ' ಅಂತ ಹೇಳಿದ್ರಿ, ಬನ್ನಿ. ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಒಟ್ಟಿಗೆ ಇಲ್ಲೇ ಉತ್ತರ ಕೊಡುತ್ತೀವಿ'' ಅಂತ 'ಪಬ್ಲಿಕ್ ಟಿವಿ' ವಾಹಿನಿಯ ಮುಖ್ಯಸ್ಥ ಎಚ್.ಆರ್.ರಂಗನಾಥ್, ನಟ ಯಶ್ ರವರಿಗೆ ಆಹ್ವಾನ ನೀಡುವ ಮೂಲಕ ಮಾತು ಆರಂಭಿಸಿದರು. ['ಪಬ್ಲಿಕ್ ಟಿವಿ' ಮತ್ತು ಎಚ್.ಆರ್.ರಂಗನಾಥ್ ಬಗ್ಗೆ ಯಶ್ ಬಾಯಿಂದ ಬಂದ ಮಾತುಗಳಿವು]

    ನಾನೇ ಮಾತನಾಡುತ್ತೇನೆ ಎಂದ ಎಚ್.ಆರ್.ರಂಗನಾಥ್

    ನಾನೇ ಮಾತನಾಡುತ್ತೇನೆ ಎಂದ ಎಚ್.ಆರ್.ರಂಗನಾಥ್

    ''ಮಂಡ್ಯದಲ್ಲಿ ಆದ ಕಾವೇರಿ ಗಲಾಟೆಯಲ್ಲಿ ನೀವು ಭಾಗವಹಿಸಿಲ್ಲ ಅಂತ ಮಾಧ್ಯಮಗಳಲ್ಲಿ ಟಿಪಿಕಲ್ ಸ್ಟೈಲ್ ನಲ್ಲಿ 'ಎಲ್ಲಿ ಹೋದರು ಯಶ್' ಅಂತ ವರದಿ ಆಗಿರುತ್ತದೆ. ಅದಾದ ಮೇಲೆ ನಿಮಗೆ ಸಹಜವಾಗಿ ಬೇಸರ ಆಗಿರಬಹುದು. ಈಗ ಅದನ್ನ ಮುಂದುವರಿಸುವುದು ಯಾಕೆ? ಟೈಮ್ ಮಾಡಿಕೊಂಡು, ಮಾನಸಿಕವಾಗಿ ನೀವು ಸಿದ್ಧವಾಗಿದ್ದರೆ ನಮ್ಮ ಚಾನೆಲ್ ಗೆ ಬನ್ನಿ. ನಾನೇ ನಿಮ್ಮ ಜೊತೆ ಕೂತು ಮಾತನಾಡುತ್ತೇನೆ'' ಅಂತ ಎಚ್.ಆರ್.ರಂಗನಾಥ್ ಹೇಳಿದರು. [ಯಶ್ ಹಾಕಿದ ಸವಾಲಿಗೆ ಪಬ್ಲಿಕ್ ಟಿವಿಯ ಎಚ್.ಆರ್.ರಂಗನಾಥ್ ಏನಂತಾರೆ.?]

    ಹೊಸ ಆಫರ್ ಮುಂದಿಟ್ಟ ಯಶ್

    ಹೊಸ ಆಫರ್ ಮುಂದಿಟ್ಟ ಯಶ್

    ''ಮಾಧ್ಯಮಗಳು ಹೋಗುತ್ತಿರುವ ದಿಕ್ಕಿನ ಬಗ್ಗೆ ಜನ ಸಾಮಾನ್ಯರಿಗೂ ಪ್ರಶ್ನೆ ಮಾಡುವ ಅಧಿಕಾರ ಇದೆ. ಇದನ್ನ ನಾನು ಕೇಳಬೇಕು ಅಂದ್ರೆ ಎಲ್ಲಾ ಚಾನೆಲ್ ಗಳಿಗೂ ಹೋಗಬೇಕಾಗುತ್ತದೆ. ಅದಕ್ಕೆ ನಾನು ಹೇಳುತ್ತಿರುವುದು ಎಲ್ಲಾ ಚಾನೆಲ್ ನವರೂ ಒಂದು ಕಡೆ ಸೇರಲಿ, ನಾನೇ ವೇದಿಕೆ ಕಲ್ಪಿಸುತ್ತೇನೆ. ಅಲ್ಲೇ ಎಲ್ಲರೂ ಚರ್ಚೆ ಮಾಡೋಣ'' ಅಂತ ತಮ್ಮ ಹೊಸ ಆಫರ್ ನ ಯಶ್ ಮುಂದಿಟ್ಟರು. [ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ತೊಡೆ ತಟ್ಟಿ ನಿಂತ ಯಶ್]

    ನಿಮ್ಮ ಇಷ್ಟ

    ನಿಮ್ಮ ಇಷ್ಟ

    ''ನೀವು ಪ್ರಶ್ನೆ ಮಾಡಬೇಕು ಅಂತ ಎಲ್ಲರನ್ನೂ ಸೇರಿಸುತ್ತೇನೆ ಅಂದ್ರೆ ಅದು ನಿಮ್ಮ ಇಷ್ಟ. ನೀವು ಏನು ಬೇಕಾದರೂ ಮಾಡಿಕೊಳ್ಳಿ'' -ಎಚ್.ಆರ್.ರಂಗನಾಥ್, ಪಬ್ಲಿಕ್ ಟಿವಿ ಮುಖ್ಯಸ್ಥ [ಯಶ್ ವರ್ಸಸ್ ಕನ್ನಡ ಮಾಧ್ಯಮ: ಕಥೆ ಶುರು ಆಗಿದ್ದು ಎಲ್ಲಿಂದ?]

    ಆಹ್ವಾನ ಕೊಟ್ಟ ಮೇಲೆ 'ಬರ್ತೀನಿ' ಅಂದೆ

    ಆಹ್ವಾನ ಕೊಟ್ಟ ಮೇಲೆ 'ಬರ್ತೀನಿ' ಅಂದೆ

    ''ನಾನು 'ಪಬ್ಲಿಕ್ ಟಿವಿ'ಗೆ ಬರ್ತೀನಿ ಅಂತ ಹೇಳಿರಲಿಲ್ಲ. ಎಲ್ಲಾ ಮಾಧ್ಯಮಕ್ಕೂ ಬರ್ತೀನಿ ಅಂತ ಹೇಳಿದ್ದೆ. ನಟರ ಜವಾಬ್ದಾರಿಯಲ್ಲಿ ತಪ್ಪಿದೆ ಅಂದ್ರೆ ನನಗೆ ಅರ್ಥ ಮಾಡಿಸಿ ಅಂತ ನಾನು ಹೇಳಿದಾಗ, ನೀವೇ (ಪಬ್ಲಿಕ್ ಟಿವಿ) ಮೊದಲು ರಿಯಾಕ್ಟ್ ಮಾಡಿದ್ದು. ನನಗೆ ಅದು ಖುಷಿ ಆಯ್ತು. 'ಸೇರಿಗೆ ಸವ್ವಾ ಸೇರು' ಅಂತ ಪ್ರೋಗ್ರಾಂ ಮಾಡಿದ್ರಿ. ನನಗೆ ಆಹ್ವಾನ ಕೊಟ್ರಿ. ಆಗ ನಾನು ಬರ್ತಿನಿ ಅಂತ ಹೇಳ್ದೆ'' - ಯಶ್, ನಟ

    'ಪಬ್ಲಿಕ್ ಟಿವಿ' ಕ್ಯಾಪ್ಟನ್ ಗೆ ಯಶ್ ನೇರ ಪ್ರಶ್ನೆ

    'ಪಬ್ಲಿಕ್ ಟಿವಿ' ಕ್ಯಾಪ್ಟನ್ ಗೆ ಯಶ್ ನೇರ ಪ್ರಶ್ನೆ

    ''ರೈತರ ಸಮಸ್ಯೆ ಪರಿಹಾರ ಆಗಬೇಕು ಎಂಬುದು ನನ್ನ ಉದ್ದೇಶ ಅಷ್ಟೆ. ನೀವೆಲ್ಲ ಒಂದು ವೇದಿಕೆ ಮೇಲೆ ಬಂದು ಯಾಕೆ ನನಗೆ ಗೈಡ್ ಮಾಡಬಾರದು ಅಂತ ಎಕ್ಸ್ ಪ್ಲೇನ್ ಮಾಡಿ ನನಗೆ'' ಅಂತ ಎಚ್.ಆರ್.ರಂಗನಾಥ್ ಗೆ ಯಶ್ ನೇರವಾಗಿ ಪ್ರಶ್ನೆ ಕೇಳಿದರು.

    ಚಾನೆಲ್ ಗೆ ಬರಬೇಕು!

    ಚಾನೆಲ್ ಗೆ ಬರಬೇಕು!

    ''ನಮ್ಮ ಕಡೆಯಿಂದ ಏನು ರೆಪ್ರೆಸೆಂಟೇಷನ್ ಮಾಡಿಸಬೇಕು ಅದನ್ನ ಮಾಡಿಸುತ್ತೇವೆ. ನೀವು ಮಾಡುವ ಒಳ್ಳೆ ಕೆಲಸವನ್ನು ಗುರುತಿಸಲು ಆಗದ ಮನುಷ್ಯತ್ವ ಇಲ್ಲದ ವ್ಯಕ್ತಿ ನಾನಲ್ಲ. ನಾನೇ ಬರಬೇಕು ಅಂತಿದ್ರೆ, ಇನ್ನೊಂದು ಕಾರ್ಯಕ್ರಮಕ್ಕೆ ಬರ್ತೀನಿ. ನನ್ನ ಜೊತೆ ಮಾತನಾಡಬೇಕು ಅಂತಿದ್ರೆ, ನೀವು ಇಲ್ಲಿಗೆ (ವಾಹಿನಿ) ಬರಬೇಕು'' - ಎಚ್.ಆರ್.ರಂಗನಾಥ್, ಪಬ್ಲಿಕ್ ಟಿವಿ ಮುಖ್ಯಸ್ಥ

    ಎಚ್.ಆರ್.ರಂಗನಾಥ್ - ಯಶ್ ನಡುವಿನ ಸಂಭಾಷಣೆ

    ಎಚ್.ಆರ್.ರಂಗನಾಥ್ - ಯಶ್ ನಡುವಿನ ಸಂಭಾಷಣೆ

    ''ನಾನು ಆಫೀಸ್ ಗೆ ಬರಬೇಕಾ'' ಅಂತ ಯಶ್ ಕೇಳಿದ್ದಕ್ಕೆ, ''ನೀವು ವೇದಿಕೆ ಮಾಡಿ ಅದರಲ್ಲಿ ನಾನು ಬರಬೇಕು ಅಂತ ನೀವು ಹೇಗೆ ಎಕ್ಸ್ ಪೆಕ್ಟ್ ಮಾಡ್ತೀರಾ?'' ಅಂತ ಎಚ್.ಆರ್.ರಂಗನಾಥ್ ಮರುಪ್ರಶ್ನೆ ಮಾಡಿದರು.

    'ಕರೆದ ಜಾಗಕ್ಕೆ ನಾನು ಬರಲ್ಲ'

    'ಕರೆದ ಜಾಗಕ್ಕೆ ನಾನು ಬರಲ್ಲ'

    ''ನನಗೆ ಜಾಗ ಇರುವ ಜಾಗದಲ್ಲಿ ನಾನು ಕರೆಯಬಹುದೇ ಹೊರತು ನೀವು ಕರೆದ ಜಾಗಕ್ಕೆ ನಾನು ಬರಲು ಆಗಲ್ಲ'' ಅಂತ ಎಚ್.ಆರ್.ರಂಗನಾಥ್ ಹೇಳಿದರು.

    'ಮಾತನಾಡಲು ಬಿಡುತ್ತಿಲ್ಲ'

    'ಮಾತನಾಡಲು ಬಿಡುತ್ತಿಲ್ಲ'

    ''ನೀವು ಮಾತನಾಡಲು ಬಿಡುತ್ತಿಲ್ಲ. ನೀವು ಬರಲ್ಲ ಅಂತ ಹೇಳುತ್ತಿರುವುದು ನಿಮ್ಮ ವೈಯುಕ್ತಿಕ ವಿಚಾರ ಅಂತಾದರೆ ಒಬ್ಬ ನಟನನ್ನ ಹೇಗೆ ಕರೆಯುತ್ತೀರಾ ನೀವು'' ಅಂತ ಯಶ್ ಪ್ರಶ್ನೆ ಮಾಡುವ ಹೊತ್ತಿಗೆ ದೂರವಾಣಿ ಕರೆ ಕಟ್ ಆಯ್ತು.

    English summary
    Public TV H.R.Ranganath has rejected the invitation from Kannada Actor Yash. Here is the Conversation between Yash and HR Ranganath which took place in yesterday's (October 21st) Big Bulletin.
    Saturday, October 22, 2016, 13:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X