»   » ಕೆಣಕಿದ ರವಿಗೆ ಮೊದಲೇ ವಾರ್ನಿಂಗ್ ಕೊಟ್ಟಿದ್ದ ಹುಚ್ಚ ವೆಂಕಟ್.!

ಕೆಣಕಿದ ರವಿಗೆ ಮೊದಲೇ ವಾರ್ನಿಂಗ್ ಕೊಟ್ಟಿದ್ದ ಹುಚ್ಚ ವೆಂಕಟ್.!

Posted by:
Subscribe to Filmibeat Kannada

'ನನ್ ಮಗಂದ್' ಹುಚ್ಚ ವೆಂಕಟ್ ಬಾಸ್ ಹಿಂಗೆ ಅಂತ ಎಲ್ಲರಿಗೂ ಗೊತ್ತಿದ್ದಕ್ಕೆ 'ಬಿಗ್ ಬಾಸ್-3' ಮನೆಯಲ್ಲಿ ಅವರ ತಂಟೆಗೆ ಯಾರೂ ಹೋಗ್ಲಿಲ್ಲ. ಟಾಸ್ಕ್ ಮಾಡದೇ ಇದ್ದರೂ ಅವರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ.

ಆದ್ರೆ, ಯಾವಾಗ ಹುಚ್ಚ ವೆಂಕಟ್ ರಿಂದಾಗಿ ಎರಡೆರಡು ಬಾರಿ ಇತರರಿಗೂ ಸೇರಿ ಶಿಕ್ಷೆ ಆಯ್ತೋ ಗಾಯಕ ರವಿ ಮುರೂರು ಮೊಟ್ಟ ಮೊದಲ ಬಾರಿಗೆ ಹುಚ್ಚ ವೆಂಕಟ್ ರನ್ನ ತರಾಟೆಗೆ ತೆಗೆದುಕೊಂಡರು.['ಹುಚ್ಚ ವೆಂಕಟ್'ಗೆ ಬೆಂಡೆತ್ತಿ ಬ್ರೇಕ್ ಹಾಕಿದ ರವಿ ಮುರೂರು]

ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ರಿಂದ ಮೊದಲ ವಾರದ Luxury Budget ಮಿಸ್ ಆಗಿದ್ದಕ್ಕೆ ರವಿ ಮುರೂರು ಬೆಂಡೆತ್ತಿ ಬ್ರೇಕ್ ಹಾಕಿದರು. ರವಿ ಮುರೂರು ಹಾಕಿದ ಆವಾಝ್ ಗೆ ಅವರನ್ನ ಹೊಡೆದು ಮನೆಯಿಂದ ಆಚೆ ಹೋಗುವುದಾಗಿ ಹುಚ್ಚ ವೆಂಕಟ್ ಅಂದೇ ಹೇಳಿದ್ದರು.! [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಆಡಿದ ಮಾತಿನಂತೆ ರವಿ ಮುರೂರುಗೆ ಹಿಗ್ಗಾ ಮುಗ್ಗಾ ಗೂಸಾ ಕೊಟ್ಟು ಹುಚ್ಚ ವೆಂಕಟ್ 'ಬಿಗ್ ಬಾಸ್' ಮನೆಯಿಂದ ಆಚೆ ಬಂದಿದ್ದಾರೆ. ಮುಂದೆ ಓದಿ....

ಹುಚ್ಚ ವೆಂಕಟ್ ವಿರುದ್ಧ ಗರಂ ಆಗಿದ್ದ ರವಿ ಮುರೂರು

ಹುಚ್ಚ ವೆಂಕಟ್ ವಿರುದ್ಧ ಗರಂ ಆಗಿದ್ದ ರವಿ ಮುರೂರು

ಹುಚ್ಚ ವೆಂಕಟ್ ರಿಂದಾಗಿ ಮೊದಲ ವಾರದ Luxury Budget ಮಿಸ್ ಆಗಿದ್ದಕ್ಕೆ ಹಾಗೂ ಹಾಡಿನ ಟಾಸ್ಕ್ ಸರಿಯಾಗಿ ನಿಭಾಯಿಸದೇ ಮಾಸ್ಟರ್ ಆನಂದ್ ಗೂ ಸೇರಿ ಶಿಕ್ಷೆ ಆಗಿದ್ದಕ್ಕೆ ಹುಚ್ಚ ವೆಂಕಟ್ ವಿರುದ್ಧ ರವಿ ಮುರೂರು ಗರಂ ಆಗಿದ್ದರು. [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

ರವಿ ಮುರೂರು ಹೇಳಿದ್ದೇನು?

ರವಿ ಮುರೂರು ಹೇಳಿದ್ದೇನು?

''Luxury Budget ನಿಮ್ಮಿಂದ ತಪ್ಪಿ ಹೋಯ್ತು. ಎರಡೆರಡು ಬಾರಿ ಶಿಕ್ಷೆ ಆಗಿದೆ. ಇನ್ಮೇಲಾದರೂ ಟಾಸ್ಕ್ ಸರಿಯಾಗಿ ಮಾಡಿ. ತಪ್ಪು ಮಾಡಿದ್ದೀರಾ. ಅದಕ್ಕೆ ನಾನು ನೇರವಾಗಿ ಹೇಳ್ತಿದ್ದೀನಿ'' ಅಂತ ಹುಚ್ಚ ವೆಂಕಟ್ ಗೆ ರವಿ ಮುರೂರು ಹೇಳಿದರು. [ಕೆರಳಿದ ಕಿಚ್ಚ ಸುದೀಪ್ ಗೆ ಓಪನ್ ಚಾಲೆಂಜ್ ಹಾಕಿದ ಹುಚ್ಚ ವೆಂಕಟ್.!]

ಸೇನೆ ಬಗ್ಗೆ ಅಂದೇ ಟಾಂಗ್.!

ಸೇನೆ ಬಗ್ಗೆ ಅಂದೇ ಟಾಂಗ್.!

''ದೊಡ್ಡವರಾಗಲಿ, ಸಣ್ಣವರಾಗಲಿ ತಪ್ಪು ಮಾಡಿದಾಗ ತಿದ್ದಿ ನಡೀಬೇಕು. ನೀವು ತಪ್ಪು ಮಾಡಿದ್ದೀರಾ. ಹೊರಗಡೆ ನೀವು ಲಾರ್ಡ್ ಲಬಕ್ ದಾಸ್ ಇರಬಹುದು. ಮನೆಯಲ್ಲಿ ಎಲ್ಲರೂ ಒಂದೇ. ಎಲ್ಲರಿಗೂ ಆರ್ಡರ್ ಮಾಡೋದಲ್ಲ. ಟೀ ಮಾಡ್ಕೊಂಡು ಬಾ ಅಂತ. ನಿಮ್ಮ ಹುಡುಗರಿಗೆ ಹೇಳ್ಸಿ. ಹೊರಗಡೆ ಮಚ್ಚು ಎತ್ತಿಕೊಳ್ಳಲಿ'' ಅಂತ ಹುಚ್ಚ ವೆಂಕಟ್ ಗೆ ರವಿ ಮುರೂರು ಆವಾಜ್ ಹಾಕಿದರು. ['ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಹುಚ್ಚ ವೆಂಕಟ್ ಹೇಳಿದ್ದೇನು?]

ಆರ್ಡರ್ ಬಗ್ಗೆ ಅಂದಿನಿಂದ ಜಟಾಪಟಿ.!

ಆರ್ಡರ್ ಬಗ್ಗೆ ಅಂದಿನಿಂದ ಜಟಾಪಟಿ.!

''ನಾನು ಯಾರಿಗೂ ಆರ್ಡರ್ ಮಾಡಿಲ್ಲ. ಟಾಸ್ಕ್ ಮಾಡಿಲ್ಲ ಹೌದು. ನನ್ನಿಂದ ತಪ್ಪಾಗಿದೆ. ಅದನ್ನ ಹೇಳಿದ್ದೀನಿ. ನೀವು ಯಾಕ್ ಮಾತನಾಡ್ತೀರಾ'' ಅಂತ ಹುಚ್ಚ ವೆಂಕಟ್ ರವಿ ಮುರೂರುಗೆ ಕೇಳಿದರು. ''ಹೆಣ್ಮಕ್ಕಳಿಗೆ ನಾನು ಆರ್ಡರ್ ಮಾಡಿಲ್ಲ. ರಿಕ್ಷೆಸ್ಟ್ ಮಾಡಿದ್ದೀನಿ'' ಅಂತ ಇಂದಿಗೂ ಹುಚ್ಚ ವೆಂಕಟ್ ಸ್ಪಷ್ಟನೆ ನೀಡುತ್ತಿದ್ದಾರೆ. [ಹುಚ್ಚ ವೆಂಕಟ್ ಅಭಿಮಾನಿಯಿಂದ ಸುದೀಪ್ ಗೆ ಖಡಕ್ ಪ್ರಶ್ನೆ]

ಅಂದೇ ಹೊಡೀತೀನಿ ಅಂದಿದ್ದ ಹುಚ್ಚ ವೆಂಕಟ್.!

ಅಂದೇ ಹೊಡೀತೀನಿ ಅಂದಿದ್ದ ಹುಚ್ಚ ವೆಂಕಟ್.!

ಅಂದು ಇಬ್ಬರ ನಡುವೆ ವಾಕ್ಸಮರ ಶುರುವಾಗ್ತಿದ್ದಂತೆ, ಹುಚ್ಚ ವೆಂಕಟ್ ರನ್ನ ಮನೆ ಒಳಗೆ ಕರೆದುಕೊಂಡು ಬರಲಾಯ್ತು. ''ಅವರು ಹಾಗೆ ಮಾತನಾಡಿದ್ದು ತಪ್ಪು. ಒಂದೆರಡು ವಾರ ಇಲ್ಲಿರೋಕೆ ನಾನು ಬಂದಿರೋದು. ಹೋಗ್ಬೇಕಾದ್ರೆ, ಅವನಿಗೆ ಹೇಗೆ ಹೊಡಿತೀನಿ ನೋಡ್ತಿರಿ. ಪಿತ್ತ ನೆತ್ತಿಗೇರಿದ್ರೆ, ಅವನು ಬಾಯಲ್ಲಿ ಮಾತನಾಡ್ತಾನೆ, ನಾನು ಕೈಯಲ್ಲಿ ಮಾತನಾಡ್ತೀನಿ'' ಅಂತ ಹುಚ್ಚ ವೆಂಕಟ್ ಅವತ್ತೇ ಹೇಳಿದ್ರು.

ಎತ್ತಿಕಟ್ಟಿದ್ದರು ಕಿಟ್ಟಿ.!

ಎತ್ತಿಕಟ್ಟಿದ್ದರು ಕಿಟ್ಟಿ.!

''ಹೊಡಿತೀನಿ ಹೊಡಿತೀನಿ ಅಂತೀರಾ. ಒಂದಿನಾ ಹೊಡೆದಿಲ್ಲ. ನನಗೆ ಹೊಡೆದು ಬಿಡಿ ಹೋಗ್ಲಿ, ಹೇಗೆ ಹೊಡೀತೀರಾ ನೋಡೋಣ. ಯಾವಾಗ್ಲೂ ನನ್ ಎಕ್ಕಡ ಅಂತೀರಾ, ನೀವೊಬ್ಬರೇನಾ ಎಕ್ಕಡ ಹಾಕೋದು, ನಾವೆಲ್ಲಾ ಎಕ್ಕಡ ಹಾಕಲ್ವಾ'' ಅಂತ ಸುನಾಮಿ ಕಿಟ್ಟಿ ಮೊದಲ ವಾರವೇ ಹುಚ್ಚ ವೆಂಕಟ್ ರನ್ನ ರವಿ ಮುರೂರು ವಿರುದ್ಧ ಎತ್ತಿಕಟ್ಟಿದ್ರು. ['ಹುಚ್ಚ ವೆಂಕಟ್'ಗೆ ಬೆಂಡೆತ್ತಿ ಬ್ರೇಕ್ ಹಾಕಿದ ರವಿ ಮುರೂರು]

ಸುಮ್ಮನಿರದ ರವಿ ಮುರೂರು

ಸುಮ್ಮನಿರದ ರವಿ ಮುರೂರು

ಇಷ್ಟೆಲ್ಲಾ ಗಲಾಟೆ ಆದರೂ ಸುಮ್ಮನಿರದ ರವಿ ಮುರೂರು ಆಗಾಗ ಹುಚ್ಚ ವೆಂಕಟ್ ಬಳಿ ಅವರ ಸೇನೆ ಬಗ್ಗೆ ಕೆಣಕುತ್ತಿದ್ದರು. 'ಆಳು-ಅರಸ' ಟಾಸ್ಕ್ ಮಾಡುವಾಗ ಆಗಿದ್ದು ಇದೇ. ಟಾಸ್ಕ್ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದ ಹುಚ್ಚ ವೆಂಕಟ್, ಸುದೀಪ್ ಮುಂದೆ ರೌದ್ರಾವತಾರ ತಾಳಿಬಿಟ್ಟರು.

ಹೇಳಿದಂತೆ ಹೊಡೆದು ಹೋದರು.!

ಹೇಳಿದಂತೆ ಹೊಡೆದು ಹೋದರು.!

''ಬಿಗ್ ಬಾಸ್-3' ಕಾರ್ಯಕ್ರಮವನ್ನ ನಾನು ಗೆದ್ದು ಬರ್ತೀನಿ'' ಅಂತ ಹುಚ್ಚ ವೆಂಕಟ್ ಎಲ್ಲೂ ಹೇಳಿಕೊಂಡಿರ್ಲಿಲ್ಲ. ಎರಡು-ಮೂರು ವಾರ ಇದ್ದು ಬರ್ತೀನಿ ಅಂತಷ್ಟೆ ಹೇಳುತ್ತಿದ್ದರು. ಅದ್ರಲ್ಲೂ ರವಿ ಮುರೂರು ಆವಾಝ್ ಹಾಕಿದ್ಮೇಲೆ ಅವರನ್ನ ಹೊಡೆದು ಹೊರಗೆ ಹೋಗ್ತೀನಿ ಅಂದಿದ್ದ ಹುಚ್ಚ ವೆಂಕಟ್, ತಮ್ಮ ಹುಚ್ಚಾಟವನ್ನ ಪ್ರದರ್ಶಿಸಿ ಆಚೆ ಬಂದಿದ್ದಾರೆ.

English summary
Singer Ravi Muroor and YouTube Star Huccha Venkat had clash right from the 1st week of Bigg Boss Kannada 3. Read the article for the detailed argument between Huccha Venkat and Ravi Muroor.
Please Wait while comments are loading...

Kannada Photos

Go to : More Photos