»   » 'ಬಿಟಿವಿ' ನಿರೂಪಕ ಚಂದನ್ ಶರ್ಮಾ 'ಹೀರೋ' ಆಗಿರೋ ಸಿನಿಮಾ ಯಾವ್ದು?

'ಬಿಟಿವಿ' ನಿರೂಪಕ ಚಂದನ್ ಶರ್ಮಾ 'ಹೀರೋ' ಆಗಿರೋ ಸಿನಿಮಾ ಯಾವ್ದು?

Posted by:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್...ಹೀಗೆ ಕಿರುತೆರೆ ಇಂದ ಬೆಳ್ಳಿತೆರೆಗೆ ಜಿಗಿದು, ಸ್ಯಾಂಡಲ್ ವುಡ್ ನಲ್ಲಿ ಅಪ್ರತಿಮ ಸಾಧನೆ ಮಾಡಿರುವ ಪ್ರತಿಭೆಗಳ ಹೆಸರನ್ನು ಹೇಳುತ್ತಾ ಹೋದರೆ ಪಟ್ಟಿ ಉದ್ದ ಬೆಳೆಯುತ್ತೆ.

ಈಗ ಇದೇ ಪಟ್ಟಿಗೆ ಹೊಸ ಸೇರ್ಪಡೆ ಆಗುತ್ತಿರುವುದು 'ಬಿಟಿವಿ' ವಾಹಿನಿಯ ನಿರೂಪಕ ಚಂದನ್ ಶರ್ಮಾ. [ಇಡೀ ದೇಶ ಕೇಳುತ್ತಿದೆ, ಬಿಟಿವಿ ನಿರೂಪಕ ಚಂದನ್ ಶರ್ಮಾ ಎಲ್ಲಿ?]

ನಂಬಿದ್ರೆ ನಂಬಿ, ನ್ಯೂಸ್ ಆಂಕರ್ ಚಂದನ್ ಶರ್ಮಾ ಸದ್ಯದಲ್ಲೇ 'ಹೀರೋ' ಆಗಿ ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಲಿದ್ದಾರೆ.!

ಕೆಲ ದಿನ 'ಬಿಟಿವಿ' ವಾಹಿನಿಯಿಂದ ಕಾಣೆ ಆಗಿದ್ದು ನೆನಪಿದ್ಯಾ?

ಕೆಲ ದಿನ 'ಬಿಟಿವಿ' ವಾಹಿನಿಯಿಂದ ಕಾಣೆ ಆಗಿದ್ದು ನೆನಪಿದ್ಯಾ?

ಕಳೆದ ತಿಂಗಳಲ್ಲಿ ಕೆಲ ದಿನ 'ಬಿಟಿವಿ' ವಾಹಿನಿಯ ಪರದೆ ಮೇಲೆ ಚಂದನ್ ಶರ್ಮಾ ಕಾಣಿಸಿಕೊಳ್ಳುತ್ತಿರಲಿಲ್ಲ. ಕಾರಣ - ದೀರ್ಘ ರಜೆ. ಅಸಲಿಗೆ ಚಂದನ್ ಶರ್ಮಾ ದೀರ್ಘ ರಜೆ ಹಾಕಿದ್ದು 'ಸಿನಿಮಾ'ಗಾಗಿ.

ಯಾವುದು 'ಆ' ಸಿನಿಮಾ?

ಯಾವುದು 'ಆ' ಸಿನಿಮಾ?

'ಧ್ವನಿ' ಎಂಬ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಚಂದನ್ ಶರ್ಮಾ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ. ಈಗಾಗಲೇ 'ಧ್ವನಿ' ಚಿತ್ರದ ಶೂಟಿಂಗ್ ಮುಗಿದಿದೆ.

'ಧ್ವನಿ' ಒಪ್ಪಲು ಕಾರಣ?

'ಧ್ವನಿ' ಒಪ್ಪಲು ಕಾರಣ?

'ಧ್ವನಿ' ಚಿತ್ರಕಥೆಯಲ್ಲಿದ್ದ ಆಳ, ಭಾವ ತೀವ್ರತೆ ನೋಡಿ ಗ್ರೀನ್ ಸಿಗ್ನಲ್ ಕೊಟ್ಟರಂತೆ ಚಂದನ್ ಶರ್ಮಾ.

'ಧ್ವನಿ' ಕುರಿತು...

'ಧ್ವನಿ' ಕುರಿತು...

ಚಂದನ್ ಶರ್ಮಾ ಪ್ರಕಾರ, ತೀರಾ ಅಪರೂಪವೆನಿಸುವ, ಸಾಧಾರಣವಲ್ಲದ, ಅದ್ಭುತ ಕಥಾಹಂದರ ಹೊಂದಿರುವ ಚಿತ್ರ 'ಧ್ವನಿ'. ಅಷ್ಟು ಬಿಟ್ಟರೆ, 'ಧ್ವನಿ' ತಾರಾಬಳಗದಲ್ಲಿ ಯಾರ್ಯಾರು ಇರಲಿದ್ದಾರೆ, 'ಧ್ವನಿ' ನಿರ್ದೇಶಕರು ಯಾರು ಎಂಬ ಗುಟ್ಟನ್ನ ಚಂದನ್ ಶರ್ಮಾ ಬಿಟ್ಟುಕೊಟ್ಟಿಲ್ಲ.

ಪತ್ರಿಕೋದ್ಯಮದಿಂದ ದೂರ?

ಪತ್ರಿಕೋದ್ಯಮದಿಂದ ದೂರ?

ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ ಎಂದ ಮಾತ್ರಕ್ಕೆ, ಪತ್ರಿಕೋದ್ಯಮದಿಂದ ಚಂದನ್ ಶರ್ಮಾ ದೂರ ಉಳಿಯುತ್ತಾರೆ ಅಂತಲ್ಲ. ಸಿನಿಮಾ ನಂತರ ಕೂಡ ಪತ್ರಿಕೋದ್ಯಮದಲ್ಲಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಚಂದನ್ ಶರ್ಮಾ.

ನಟನೆ ಹೊಸದಲ್ಲ

ನಟನೆ ಹೊಸದಲ್ಲ

ಚಂದನ್ ಶರ್ಮಾ ರವರಿಗೆ ನಟನೆ ಹೊಸದಲ್ಲ. ಟಿ.ಎನ್.ಸೀತಾರಾಂ ನಿರ್ದೇಶನದ 'ಮಹಾ ಪರ್ವ' ಧಾರಾವಾಹಿಯ ವಿದ್ಯಾಧರ ಸಿದ್ದಾರ್ಥ ಪಾತ್ರಧಾರಿ ಇದೇ ಚಂದನ್ ಶರ್ಮಾ.

English summary
BTV News Anchor Chandan Sharma to make Sandalwood Debut with the Movie called 'Dhwani'. More details are awaited.
Please Wait while comments are loading...

Kannada Photos

Go to : More Photos