»   » 'ದೊಡ್ಮನೆ ಹುಡ್ಗ' ಪುನೀತ್ ದಾಖಲೆಗಳ ಪಟ್ಟಿಗೆ 'ಇದು' ಹೊಸ ಸೇರ್ಪಡೆ.!

'ದೊಡ್ಮನೆ ಹುಡ್ಗ' ಪುನೀತ್ ದಾಖಲೆಗಳ ಪಟ್ಟಿಗೆ 'ಇದು' ಹೊಸ ಸೇರ್ಪಡೆ.!

Posted by:
Subscribe to Filmibeat Kannada

''ಕನ್ನಡ ಸಿನಿಮಾಗಳನ್ನ ಮನರಂಜನಾ ವಾಹಿನಿಗಳು ಕೊಂಡುಕೊಳ್ಳುತ್ತಿಲ್ಲ. ಬಿಡುಗಡೆ ಆಗಿರುವ ನೂರಾರು ಸಿನಿಮಾಗಳ ಪ್ರಸಾರ ಹಕ್ಕುಗಳು ಸೇಲ್ ಆಗಿಲ್ಲ. ಹೀಗೇ ಆದರೆ ನಿರ್ಮಾಪಕರ ಕಥೆ ಏನು?'' ಎಂಬ ಆಕ್ರೋಶ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಳೆದ ವರ್ಷ ಭುಗಿಲೆದ್ದಿತ್ತು.

''ಚೆನ್ನಾಗಿರುವ ಸಿನಿಮಾ ಆದರೆ ಯಾರು ತಾನೆ ಕೊಂಡುಕೊಳ್ಳುವುದಿಲ್ಲ? ಕೆಲವರು ಸ್ಯಾಟೆಲೈಟ್ ರೈಟ್ಸ್ ಸಿಗುತ್ತೆ ಎಂಬ ದುರಾಸೆಯಿಂದ ಬೇಕಾಬಿಟ್ಟಿ ಸಿನಿಮಾ ಮಾಡ್ತಾರೆ. ಅಂಥವರಿಗೆ ಮಣೆ ಹಾಕಲ್ಲ'' ಎಂಬ ಜವಾಬು ಮನರಂಜನಾ ವಾಹಿನಿ ವಲಯದಿಂದ ಬಂದಿತ್ತು.


ಈ ವಿವಾದವನ್ನ ಸದ್ಯ ನಿಮ್ಮ ನೆನಪಿಗೆ ನಾವು ತರಲು ಕಾರಣ 'ದೊಡ್ಮನೆ ಹುಡ್ಗ'.! ರಿಲೀಸ್ ಆದ ಮೊದಲ ದಿನವೇ 5 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ 'ದೊಡ್ಮನೆ ಹುಡ್ಗ' ಸಿನಿಮಾದ ಪ್ರಸಾರ ಹಕ್ಕುಗಳು ದಾಖಲೆ ಬೆಲೆಗೆ ಬಿಕರಿ ಆಗಿದೆ. ಮುಂದೆ ಓದಿ.....


ಪ್ರಸಾರ ಹಕ್ಕುಗಳಲ್ಲೂ 'ದೊಡ್ಮನೆ ಹುಡ್ಗ' ದಾಖಲೆ.!

ಪ್ರಸಾರ ಹಕ್ಕುಗಳಲ್ಲೂ 'ದೊಡ್ಮನೆ ಹುಡ್ಗ' ದಾಖಲೆ.!

ದುನಿಯಾ ಸೂರಿ ನಿರ್ದೇಶನದ ಪುನೀತ್ ರಾಜ್ ಕುಮಾರ್, ಅಂಬರೀಶ್, ರಾಧಿಕಾ ಪಂಡಿತ್ ಅಭಿನಯಿಸಿರುವ 'ದೊಡ್ಮನೆ ಹುಡ್ಗ' ಚಿತ್ರದ ಪ್ರಸಾರ ಹಕ್ಕುಗಳು 6 ರಿಂದ 7 ಕೋಟಿ ಮೊತ್ತಕ್ಕೆ ಸೇಲ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಯಾವ ಚಾನೆಲ್ ಗೆ ಸ್ಯಾಟೆಲೈಟ್ ರೈಟ್ಸ್?

ಯಾವ ಚಾನೆಲ್ ಗೆ ಸ್ಯಾಟೆಲೈಟ್ ರೈಟ್ಸ್?

ಬರೋಬ್ಬರಿ 6 ರಿಂದ 7 ಕೋಟಿ ರೂಪಾಯಿ ನೀಡಿ 'ದೊಡ್ಮನೆ ಹುಡ್ಗ' ಚಿತ್ರದ ಪ್ರಸಾರ ಹಕ್ಕುಗಳನ್ನ ತನ್ನದಾಗಿಸಿಕೊಂಡಿರುವುದು ಜೀ ಕನ್ನಡ ವಾಹಿನಿ.!


ರಿಯಾಲಿಟಿ ಶೋಗಳ ಮಧ್ಯೆ ಸಿನಿಮಾ.!

ರಿಯಾಲಿಟಿ ಶೋಗಳ ಮಧ್ಯೆ ಸಿನಿಮಾ.!

'ವೀಕೆಂಡ್ ವಿತ್ ರಮೇಶ್', 'ಡ್ರಾಮಾ ಜ್ಯೂನಿಯರ್ಸ್', ಸರಿಗಮಪ' ಸೇರಿದಂತೆ ಅನೇಕ ಜನಪ್ರಿಯ ರಿಯಾಲಿಟಿ ಶೋಗಳನ್ನ ಕನ್ನಡ ಕಿರುತೆರೆಗೆ ನೀಡಿರುವ ಜೀ ಕನ್ನಡ ವಾಹಿನಿ ಇದೀಗ ಯಶಸ್ವಿ ಕನ್ನಡ ಚಿತ್ರಗಳ ಪ್ರಸಾರ ಹಕ್ಕುಗಳ ಮೇಲೂ ಕಣ್ಣಿಟ್ಟಿದೆ.


ಇಲ್ಲಿಯವರೆಗೂ ಇದೇ ಹೆಚ್ಚು.!

ಇಲ್ಲಿಯವರೆಗೂ ಇದೇ ಹೆಚ್ಚು.!

ಕನ್ನಡ ಚಿತ್ರಗಳ ಪ್ರಸಾರ ಹಕ್ಕುಗಳನ್ನ ಕೇಳುವವರೇ ಇಲ್ಲದ ಈಗಿನ ಜಮಾನದಲ್ಲಿ 6 ರಿಂದ 7 ಕೋಟಿ ರೂಪಾಯಿ ವರೆಗೂ ಕನ್ನಡ ಚಿತ್ರವೊಂದರ (ದೊಡ್ಮನೆ ಹುಡ್ಗ) ಸ್ಯಾಟೆಲೈಟ್ ರೈಟ್ಸ್ ಸೇಲ್ ಆಗಿರುವುದು ಇದೇ ಮೊದಲು.


ಕಲೆಕ್ಷನ್ ನಲ್ಲೂ 'ದೊಡ್ಮನೆ ಹುಡ್ಗ' ದಾಖಲೆ

ಕಲೆಕ್ಷನ್ ನಲ್ಲೂ 'ದೊಡ್ಮನೆ ಹುಡ್ಗ' ದಾಖಲೆ

ಬಿಡುಗಡೆ ಆದ ಮೊದಲ ದಿನವೇ 4.5 ರಿಂದ 5.5 ಕೋಟಿ ಕಲೆಕ್ಷನ್ (ಅಂದಾಜು) ಮಾಡುವ ಮೂಲಕ 'ದೊಡ್ಮನೆ ಹುಡ್ಗ' ಮತ್ತೊಂದು ದಾಖಲೆ ನಿರ್ಮಿಸಿದೆ.


'ದೊಡ್ಮನೆ ಹುಡ್ಗ' ವಿಮರ್ಶೆ ಇಲ್ಲಿದೆ.!

'ದೊಡ್ಮನೆ ಹುಡ್ಗ' ವಿಮರ್ಶೆ ಇಲ್ಲಿದೆ.!

'ದೊಡ್ಮನೆ ಹುಡ್ಗ' ಚಿತ್ರದ ವಿಮರ್ಶೆ ನೀವು ಓದಿಲ್ಲ ಅಂದ್ರೆ ಈ ಲಿಂಕ್ ಕ್ಲಿಕ್ ಮಾಡಿ....[ವಿಮರ್ಶೆ: 'ದೊಡ್ಮನೆ' ಬಿರಿಯಾನಿ ರುಚಿ ಓಕೆ, 'ಪೀಸ್'ಗಳು ಕಮ್ಮಿ]


English summary
According to the latest Buzz, Puneeth Rajkumar, Ambareesh starrer Duniya Suri Directorial 'Doddmane Huduga' satellite rights is purchased by Zee Kannada Channel for whooping amount of 6-7 Crore.
Please Wait while comments are loading...

Kannada Photos

Go to : More Photos