twitter
    For Quick Alerts
    ALLOW NOTIFICATIONS  
    For Daily Alerts

    ರವಿ.ಡಿ.ಚನ್ನಣ್ಣನವರ್ ಮೇಲೆ ಪತ್ನಿ ತ್ರಿವೇಣಿಗೆ ಕೋಪ ಇದ್ಯಾ.?

    By Harshitha
    |

    ಕರ್ನಾಟಕದ ದಿಟ್ಟ, ನಿಷ್ಠಾವಂತ ಐಪಿಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಹೆಸರು ಕೇಳಿದ ಕೂಡಲೆ ಶಿವಮೊಗ್ಗ, ಗುಲ್ಬರ್ಗ ಸೇರಿದಂತೆ ಹಲವು ಜಿಲ್ಲೆಯ ಜನರು ಕೈಯೆತ್ತಿ ಮುಗಿಯುತ್ತಾರೆ. ಅಷ್ಟರಮಟ್ಟಿಗೆ ಸ್ನೇಹಜೀವಿ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ರವಿ.ಡಿ.ಚನ್ನಣ್ಣನವರ್ ಗುರುತಿಸಿಕೊಂಡಿದ್ದಾರೆ.

    ಇಂತಿಪ್ಪ ರವಿ.ಡಿ.ಚನ್ನಣ್ಣನವರ್ ಬಗ್ಗೆ ಪತ್ನಿ ತ್ರಿವೇಣಿ ರವರಿಗೆ ಕೋಪ ಇದ್ಯಂತೆ. ಸದಾ ಕೆಲಸದಲ್ಲಿ ಮುಳುಗಿ ಹೋಗಿರುವ ರವಿ, ಕುಟುಂಬಕ್ಕೆ ಸರಿಯಾಗಿ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪತಿ ಬಗ್ಗೆ ಪತ್ನಿಗೆ ಬೇಸರ ಇದೆ.['ಮಲೆನಾಡ ಹುಲಿ' ರವಿ ಬಗ್ಗೆ ವೀರಪ್ಪನ್ ಅಟ್ಟಹಾಸ ಅಡಗಿಸಿದ ವಿಜಯ್ ಕುಮಾರ್ ಏನಂತಾರೆ.?]

    ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಡಾ.ತ್ರಿವೇಣಿ ಪಾಟೀಲ್, ಪತಿ ರವಿ ಬಗ್ಗೆ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಮಾತನಾಡಿದಿಷ್ಟು...

    ಹೈದರಾಬಾದ್ ನಲ್ಲಿ ಲವ್ ಸ್ಟೋರಿ

    ಹೈದರಾಬಾದ್ ನಲ್ಲಿ ಲವ್ ಸ್ಟೋರಿ

    ''ನಾವಿಬ್ಬರು ಭೇಟಿ ಆಗಿದ್ದು ಹೈದರಾಬಾದ್ ನಲ್ಲಿ. ಐಎಎಸ್ ಕೋಚಿಂಗ್ ಇನ್ಸ್ಟಿಟ್ಯೂಟ್ ನಲ್ಲಿ. ಒಂದು ದಿನ ನನಗೆ 'ಸಂಬಂಧಗಳು ಅಂದ್ರೆ ಏನು?'' ಅಂತ ರವಿ ಪ್ರಶ್ನೆ ಕೇಳಿದ್ರು. ಅದಕ್ಕೆ ನಾನು 'ಸಂಬಂಧಗಳು ಅಂದ್ರೆ ಪ್ರತಿಕ್ರಿಯೆ ನೀಡುವುದು' ಅಂತ ಹೇಳಿದ್ದೆ. ಅಲ್ಲಿಂದ ನಾವು ಮೊಬೈಲ್ ನಲ್ಲಿ ಮೆಸೇಜ್ ಮಾಡಲು ಶುರು ಮಾಡಿದ್ವಿ'' - ಡಾ.ತ್ರಿವೇಣಿ ಪಾಟೀಲ್, ರವಿ.ಡಿ.ಚನ್ನಣ್ಣನವರ್ ಪತ್ನಿ [ರವಿ ಬಾಲ್ಯದ ದಿನಗಳ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿಗಳು]

    ಹಸಿವು ಆದಾಗ....

    ಹಸಿವು ಆದಾಗ....

    ''ಲೈಬ್ರರಿಯಲ್ಲಿ ಕೂತು ಓದಬೇಕಾದ್ರೆ, ಹಸಿವು ಆದ್ರೆ ಎದುರುಗಡೆ ಐದು ರೂಪಾಯಿಗೆ ಜಿಲೇಬಿ ತಗೊಂಡು ತಿಂತಿದ್ವಿ. ಪಿಜಿ ಇಂದ ನಾನು ಟಿಫಿನ್ ಬಾಕ್ಸ್ ತರುತ್ತಿದ್ದೆ. ಅದನ್ನ ಇಬ್ಬರೂ ಶೇರ್ ಮಾಡಿಕೊಂಡು ತಿಂತಿದ್ವಿ'' - ಡಾ.ತ್ರಿವೇಣಿ ಪಾಟೀಲ್, ರವಿ.ಡಿ.ಚನ್ನಣ್ಣನವರ್ ಪತ್ನಿ [ಐಪಿಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಮಾಡಿರುವ ಸಾಧನೆ ಏನು.?]

    ಚಾಲೆಂಜ್ ಆಗಿ ಸ್ವೀಕರಿಸಿದ್ರು

    ಚಾಲೆಂಜ್ ಆಗಿ ಸ್ವೀಕರಿಸಿದ್ರು

    ''ನನಗೆ ಟೈಟಾನಿಕ್ ಪೋಸ್ ಇರುವ ಸ್ಟ್ಯಾಚೂ ಉಡುಗೊರೆಯಾಗಿ ನೀಡಿದ್ದರು. ಮದುವೆ ವಿಚಾರಕ್ಕೆ ಬಂದಾಗ, ಕೆಲಸ ಇದ್ದರೆ ತಂದೆ-ತಾಯಿ ಒಪ್ಪುತ್ತಾರೆ ಅಂತ ಹೇಳಿದ್ದೆ. ಅದನ್ನ ಚಾಲೆಂಜ್ ಅಗಿ ತೆಗೆದುಕೊಂಡು, ಎಕ್ಸಾಂ ಕ್ಲಿಯರ್ ಮಾಡಿದ್ರು'' - ಡಾ.ತ್ರಿವೇಣಿ ಪಾಟೀಲ್, ರವಿ.ಡಿ.ಚನ್ನಣ್ಣನವರ್ ಪತ್ನಿ ['ಅಭಿ ಪಿಕ್ಚರ್ ಬಾಕಿ ಹೈ' - ರವಿ ಪವರ್ ಫುಲ್ ಮಾತುಗಳು]

    ರವಿ ಮ್ಯಾರೇಜ್ ಸ್ಟೋರಿ

    ರವಿ ಮ್ಯಾರೇಜ್ ಸ್ಟೋರಿ

    ''ಟ್ರೇನಿಂಗ್ ನಲ್ಲಿ ಇರುವಾಗಲೇ ನನ್ನ ತಂದೆ-ತಾಯಿ ಹತ್ತಿರ ಬಂದು ಮಾತನಾಡಿದರು. ಎರಡು ಫ್ಯಾಮಿಲಿಯಲ್ಲೂ ಭಿನ್ನಾಭಿಪ್ರಾಯ ಬಂದಿತ್ತು. ಅದೆಲ್ಲವನ್ನೂ ಬಗೆಹರಿಸಿಕೊಂಡು ಮದುವೆ ಅದ್ವಿ'' - ಡಾ.ತ್ರಿವೇಣಿ ಪಾಟೀಲ್, ರವಿ.ಡಿ.ಚನ್ನಣ್ಣನವರ್ ಪತ್ನಿ [ಕೂಲಿ ಕೆಲಸ ಮಾಡುತ್ತಿದ್ದ ರವಿ ಐ.ಪಿ.ಎಸ್ ಅಧಿಕಾರಿ ಆದ ರೋಚಕ ಕಥೆ]

    ಕಾಕತಾಳೀಯ ಅಂದ್ರೆ...

    ಕಾಕತಾಳೀಯ ಅಂದ್ರೆ...

    ''ನಾವು ಮದುವೆ ಅಗಿದ್ದು ಮಾರ್ಚ್ 28, 2012 ರಲ್ಲಿ. 2008 ರಲ್ಲಿ ಅದೇ ಮಾರ್ಚ್ 28 ರಂದೇ ರವಿ ನನಗೆ ಪ್ರಪೋಸ್ ಮಾಡಿದ್ದರು. ಕಾಕತಾಳೀಯ ಅಂದ್ರೆ ಇದೇ'' - ಡಾ.ತ್ರಿವೇಣಿ ಪಾಟೀಲ್, ರವಿ.ಡಿ.ಚನ್ನಣ್ಣನವರ್ ಪತ್ನಿ

    ನಿಷ್ಟಾವಂತ ಅಧಿಕಾರಿ...

    ನಿಷ್ಟಾವಂತ ಅಧಿಕಾರಿ...

    ''ಮದುವೆ ಆದ್ಮೇಲೆ ನಾನು ಅವರನ್ನ ಪೊಲೀಸ್ ಆಫೀಸರ್ ಆಗಿ ನೋಡಿದ್ದು. ಯಾವಾಗಲ್ಲೂ ಯೂನಿಫಾರ್ಮ್ ಗೆ ಕೈಮುಗಿದು ಹಾಕಿಕೊಳ್ತಾರೆ'' - ಡಾ.ತ್ರಿವೇಣಿ ಪಾಟೀಲ್, ರವಿ.ಡಿ.ಚನ್ನಣ್ಣನವರ್ ಪತ್ನಿ

    ಕೋಪ ಬರುತ್ತದೆ!

    ಕೋಪ ಬರುತ್ತದೆ!

    ''ಕೆಲಸದಲ್ಲಿ ಎಷ್ಟು ಇನ್ವಾಲ್ವ್ ಆಗಿರುತ್ತಾರೆ ಅಂದ್ರೆ ಕೆಲವೊಂದು ಬಾರಿ ನನಗೆ ಕೋಪ ಬರುತ್ತೆ. ರಾತ್ರಿ ಮಲಗಿದ್ಮೇಲೂ ನಿದ್ದೆಯಲ್ಲಿ ಕೆಲಸದ ಬಗ್ಗೆ ಮಾತನಾಡುತ್ತಿರುತ್ತಾರೆ'' - ಡಾ.ತ್ರಿವೇಣಿ ಪಾಟೀಲ್, ರವಿ.ಡಿ.ಚನ್ನಣ್ಣನವರ್ ಪತ್ನಿ

    ಮಗಳಿಗೆ ಟೈಮ್ ಕೊಡಬೇಕು

    ಮಗಳಿಗೆ ಟೈಮ್ ಕೊಡಬೇಕು

    ''ನಮ್ಮ ಮಗಳು ಭೂಮಿಗೆ ಅಪ್ಪ ಅಂದ್ರೆ ಪಂಚಪ್ರಾಣ. ಮಗಳಿಗೆ ಅವರು ಟೈಮ್ ಕೊಡಬೇಕು. ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಲೆಟ್ಸ್ ಹ್ಯಾವ್ ಎ ಗುಡ್ ಟೈಮ್.!'' - ಡಾ.ತ್ರಿವೇಣಿ ಪಾಟೀಲ್, ರವಿ.ಡಿ.ಚನ್ನಣ್ಣನವರ್ ಪತ್ನಿ

    ಮನೆಗೆ ಹೋದ್ಮೇಲೆ ಕುಟುಂಬವೇ ಜಗತ್ತು

    ಮನೆಗೆ ಹೋದ್ಮೇಲೆ ಕುಟುಂಬವೇ ಜಗತ್ತು

    ''ನನ್ನ ಪತ್ನಿ ನನಗೆ ಶಕ್ತಿ. ನನ್ನ ಮಗಳು ಭೂಮಿಗೆ ಈಗ ನಾಲ್ಕು ವರ್ಷ. ಮನೆ ಬಂದ ಕೂಡಲೆ ಅವರಿಬ್ಬರೇ ನನಗೆ ಜಗತ್ತು'' - ರವಿ.ಡಿ.ಚನ್ನಣ್ಣನವರ್, ಐಪಿಎಸ್ ಆಫೀಸರ್

    English summary
    Dr.Triveni Patil speaks about her husband Ravi.D.Channannavar in Zee Kannada Channel's popular show 'Weekend With Ramesh-3'
    Wednesday, May 3, 2017, 14:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X