twitter
    For Quick Alerts
    ALLOW NOTIFICATIONS  
    For Daily Alerts

    ಈಟಿವಿ ಕನ್ನಡ 'ಇಂಡಿಯನ್' ಅಮೋಘ ಆರಂಭ

    By Mahesh
    |

    ಬಿಗ್ ಬಾಸ್ ರಿಯಾಲಿಟಿ ಶೋ ಯಶಸ್ಸಿನ ಬೆನ್ನಲ್ಲೇ ಈಟಿವಿ ಕನ್ನಡ ಮತ್ತೊಂದು 'ಬಿಗ್'ರಿಯಾಲಿಟಿ ಶೋ ಆರಂಭಿಸಿದೆ. ಕಿರುತೆರೆಯ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಸಾರಥ್ಯದಲ್ಲಿ ಸೋಮವಾರ 8 ಗಂಟೆಗೆ ಶುರುವಾದ 'ಇಂಡಿಯನ್' ರಿಯಾಲಿಟಿ ಶೋ ಕುತೂಹಲ ಕೆರಳಿಸಿದೆ.

    'Incredible ಇಂಡಿಯಾದಲ್ಲೊಂದು Impossible ಜರ್ನಿ' ಹಾಗೂ ಅದರ 14 ಜನ ಸ್ಪರ್ಧಿಗಳ ಹೆಸರು ಈಗ ಎಲ್ಲರಿಗೂ ತಿಳಿಯುವಂತಾಗಿದೆ. ಸ್ಪರ್ಧಿಗಳ ವಿವರ ಮೊದಲ ಎಪಿಸೋಡ್ ನ ವಿವರಗಳು ನಿಮ್ಮ ಮುಂದಿದೆ.

    ಮೊದಲ ಬಾರಿಗೆ ದೇಶದ 7 ರಾಜ್ಯಗಳಲ್ಲಿ ಪ್ರವಾಸ ಮಾಡುವ ಹದಿನಾಲ್ಕು ಕನ್ನಡಿಗ ಸ್ಪರ್ಧಿಗಳು 'ಇಂಡಿಯನ್' ಆಗಲು ಹೊರಟ್ಟಿದ್ದಾರೆ. ಅವಿಸ್ಮರಣೀಯ ಭಾರತವನ್ನು ತೋರಿಸುವ ಅಸಾಧ್ಯವಾದ ಈ ಪ್ರಯಾಣವು ದೇಶದ ಬೇರೆ ಬೇರೆ ಭಾಗಗಳಲ್ಲಿನ ನೈಜ ಬಣ್ಣಗಳನ್ನು ತೋರಿಸುವ ಯತ್ನ ಇಲ್ಲಿ ಮಾಡಲಾಗಿದೆ.

    ಈ ಕಾರ್ಯಕ್ರಮದ ಸ್ಫರ್ಧಿಗಳು ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ವೈವಿಧ್ಯಮಯ ಜೀವನಶೈಲಿ ಸಂಸ್ಕೃತಿಗಳಿಂದ ಬಂದಿರುತ್ತಾರೆ. ತಂಡವು ಪ್ರತಿ ಸೋಮವಾರ ಹೊಸ ರಾಜ್ಯವನ್ನು ಪ್ರವೇಶಿಸುತ್ತದೆ. ಅಲ್ಲಿನ ಸ್ಥಳೀಯ ಚಟುವಟಿಕೆಗಳ ಅಥವಾ ಕೆಲಸಗಳ ಮೂಲಕ ಆ ಒಂದು ಪ್ರದೇಶವನ್ನು ಕಾಣಲು ಪ್ರಯತ್ನಿಸುತ್ತದೆ. ಕೆಲಸಗಳು ಹೇಗಿರುತ್ತವೆಯೆಂದರೆ ಗುಜರಾತಿನ ರುಚಿಕರ ತಿಂಡಿಯನ್ನು ಮಾಡುವುದು, ರಾಜಸ್ಥಾನ್ ಪೇಟ ಸುತ್ತುವುದು ಮುಂತಾದ ಆ ರಾಜ್ಯದ ವೈಶಿಷ್ಟವನ್ನು ತೋರಿಸುವಂತಿರುತ್ತವೆ.

    ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಸ್ಪರ್ಧಿಗಳು ವೈವಿಧ್ಯಮಯ ಜೀವನ ಶೈಲಿ ಹೊಂದಿದ್ದು ಸ್ಪರ್ಧಿಗಳ ಬಗ್ಗೆ ಕೂಡಾ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಿದೆ. ಸ್ಪರ್ಧಿಗಳ ವಿವರ ಇನ್ನಿತರ ಮಾಹಿತಿ ಇಲ್ಲಿದೆ ನೋಡಿ...

    ಸ್ಪರ್ಧಿಗಳು

    ಸ್ಪರ್ಧಿಗಳು

    ರೂಪಶ್ರೀ(ಬೆಂಗಳೂರು), ದಿವ್ಯಾ (ಬೆಂಗಳೂರು), ಸುನಾಮಿ ಕಿಟ್ಟಿ (ಎಚ್ ಡಿ ಕೋಟೆ), ಭುವನ್ (ಕೊಡಗು), ಸ್ಪೂರ್ತಿ(ಬೆಂಗಳೂರು), ಸುಷ್ಮಾರಾಜ್(ಉಡುಪಿ), ವಿನೋದ್(ಬೆಂಗಳೂರು), ನಿರೋಷಾ(ಬೆಂಗಳೂರು), ಪಂಕಜ್ ಉಪಾಧ್ಯಯ(ಬೆಂಗಳೂರು), ಪ್ರದೀಪ್ (ಶಿವಮೊಗ್ಗ), ಮಹೇಶ್(ಬೆಂಗಳೂರು), ಮಿಥುನ್ ಸೇಠ್(ಉಡುಪಿ) ಹಾಗೂ ಗಮ್ಯ(ಕೊಡಗು)

    ಬಿಗ್ ಬಾಸ್ ಎಂಟ್ರಿ

    ಬಿಗ್ ಬಾಸ್ ಎಂಟ್ರಿ

    ಬೆಂಗಳೂರು ವಿಮಾನ ನಿಲ್ದಾಣದಿಂದ ಎಲ್ಲಾ ಸ್ಪರ್ಧಿಗಳು ಲಢಾಕ್ ಗೆ ಹೋಗಲು ಸಿದ್ಧರಾಗುತ್ತಿದ್ದಂತೆ ಬಿಗ್ ಬಾಸ್ ವಿಜೇತ ವಿಜಯ್ ರಾಘವೇಂದ್ರ ಎಂಟ್ರಿ ಕೊಟ್ಟರು. ಕೆಲವರಿಗೆ ಶಾಕ್ ಆದರೆ, ಹಲವು ಇವರು ಸ್ಪರ್ಧಿಯಾಗಿರಲು ಸಾಧ್ಯವಿಲ್ಲ,. ವಿಶ್ ಮಾಡಲು ಬಂದಿದ್ದಾರೆ ಎಂದು ಹೇಳಿದರು.

    ಕೊನೆಗೆ ವಿಜಯ ರಾಘವೇಂದ್ರ ಅವರು ಎಲ್ಲರ ಏರ್ ಟಿಕೆಟ್ ನೀಡಿ ಶುಭ ಹಾರೈಸಿದರು. ಸುನಾಮಿ ಕಿಟ್ಟಿ ಹಾಗೂ ಮಹೇಶ್ ಮೊದಲ ಬಾರಿಗೆ ವಿಮಾನ ಹತ್ತಿದ ಹಾರಾಟ ನಡೆಸಿದ ಥ್ರಿಲ್ ಅನುಭವಿಸಿದರು.

    ಅಕುಲ್ ಹುಡುಕಾಟ

    ಅಕುಲ್ ಹುಡುಕಾಟ

    ನಂತರ, ಬೌದ್ಧ ಬಾಲ ಭಿಕ್ಷುಗಳು ಒಂದು ಪತ್ರ ನೀಡಿ ವಂದಿಸಿ ತೆರಳಿದರು. 2 ಜಿಪ್ಸಿ ವಾಹನ ಏರಿ 14 ಜನ ಸ್ಪರ್ಧಿಗಳು ಅಕುಲ್ ಬಾಲಾಜಿ ಇದ್ದ ಕಡೆಗೆ ತೆರಳಿದರು.

    ವಿವಿಧತೆಯಲ್ಲಿ ಏಕತೆಯನ್ನು ತೋರಿಸುವ ಉದ್ದೇಶದಿಂದ ಏಳು ಯುವಕರು ಮತ್ತು ಏಳು ಯುವತಿಯರು ಕೇವಲ ಕನ್ನಡಿಗರಾಗಿ ಅಷ್ಟೇ ಅಲ್ಲ ಪರಿಪೂರ್ಣ ಭಾರತೀಯರಾಗಿ ಹಿಂದಿರುಗುವ ಕನಸು ಹೊತ್ತಿದ್ದಾರೆ.

    ಅಕುಲ್ ನಿರೂಪಣೆ

    ಅಕುಲ್ ನಿರೂಪಣೆ

    ಎಂದಿನ ಶೈಲಿಯಲ್ಲಿ ಆಟದ ನಿಯಮಗಳನ್ನು ಹೇಳಿದ ಅಕುಲ್, ಎಲ್ಲರ ಬಳಿ ಇದ್ದ ಎಲೆಕ್ಟ್ರಾನಿಕ್ ಸಾಧನಗಳನ್ನು ಹಿಂತಿರುಗಿಸುವಂತೆ ಕೇಳಿದರು. ನಂತರ ಎಲ್ಲರೂ ಲಢಾಕ್ ನ ಒಂದು ಹಿಡಿ ಮಣ್ಣನ್ನು ಪವಿತ್ರ ಜಾಡಿಯೊಳಗೆ ತುಂಬಿ ನಾವು ಸಿದ್ಧ ಎಂದು ಘೋಷಿಸಿದರು.

    98 ಎಪಿಸೋಡ್

    98 ಎಪಿಸೋಡ್

    ಲಡಾಕ್ ನಲ್ಲಿ ಆರಂಭವಾಗುವ ಈ ವಿಶಿಷ್ಟ ಪ್ರಯಾಣ ಕನ್ಯಾಕುಮಾರಿಯಲಿ ಕೊನೆಗೊಳ್ಳಲಿದೆ. 98 ಎಪಿಸೋಡ್ ಗಳ ಕಾಲ ವಿವಿಧ ರಾಜ್ಯಗಳಲ್ಲಿ ಸ್ಪರ್ಧಿಗಳು ಜೀವಿಸಬೇಕಾಗುತ್ತದೆ. 14 ವಾರಗಳ ಕಾಲ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. 10 ದಿನಗಳ ಕಾಲ ಆ ರಾಜ್ಯಗಳ ವೈವಿಧ್ಯತೆಯನ್ನು ಪ್ರದರ್ಶಿಸಲಿದ್ದಾರೆ.

    ಸೋಮವಾರದಿಂದ ಶುಕ್ರವಾರದವರೆಗೆ

    ಸೋಮವಾರದಿಂದ ಶುಕ್ರವಾರದವರೆಗೆ

    ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಕಾರ್ಯಕ್ರಮವನ್ನು ಕೊಲೊಸಿಯಮ್ ಮೀಡಿಯಾ ನಿರ್ಮಾಣ ಮಾಡಿದೆ. ಈ ಕಾರ್ಯಕ್ರಮದ ಮೊದಲ ಕಂತು ಆಗಸ್ಟ್ 12ರಂದು ಮೂಡಿಬರುತ್ತಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ ಪ್ರಸಾರವಾಗಲಿದೆ. ಸ್ಪರ್ಧಿಗಳ ಬಗ್ಗೆ ಇನ್ನಷ್ಟು ಮಾಹಿತಿ ನಿರೀಕ್ಷಿಸಿ..

    English summary
    Kannada audience have been left with no other proper alternative show after the end of Kiccha Sudeep hosted Bigg Boss. To fill the time slot between 8-9 pm, ETV has come up with yet another reality show - Indian.
    Tuesday, August 13, 2013, 18:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X