twitter
    For Quick Alerts
    ALLOW NOTIFICATIONS  
    For Daily Alerts

    ಈಟಿವಿ ಕನ್ನಡ ವಾಹಿನಿಯಲ್ಲಿ ಶ್ರೀನಿವಾಸ ಕಲ್ಯಾಣ

    By Mahesh
    |

    ರಿಯಾಲಿಟಿ ಶೋಗಳ ಬೆನ್ನು ಬಿದ್ದು, ಬಿಗ್ ಬಾಸ್, ತಕಧಿಮಿತ ಡ್ಯಾನ್ಸಿಂಗ್ ಸ್ಟಾರ್ ಯಶಸ್ವಿಯಾಗಿ ಪ್ರಸಾರ ಮಾಡಿದ ಈ ಟಿವಿ ಕನ್ನಡ ವಾಹಿನಿ ಈಗ ಹೊಸ ಸಾಹಸಕ್ಕೆ ಮುಂದಾಗಿದೆ. ಪುಟ್ಟಗೌರಿ ಮದುವೆ ಹಾಗೂ ಅಶ್ವಿನಿ ನಕ್ಷತ್ರ ರಿಮೇಕ್ ಸೀರಿಯಲ್ ಗಳ ಜನಪ್ರಿಯತೆ ನಡುವೆ ಚರಣದಾಸಿ, ಲಕ್ಷ್ಮಿ ಬಾರಮ್ಮ, ಅಗ್ನಿ ಸಾಕ್ಷಿ ಕೂಡಾ ಟಾಪ್ ಸ್ಥಾನ ಕಾಯ್ದುಕೊಂಡಿವೆ. ಇವೆಲ್ಲಕ್ಕಿಂತ ಭಿನ್ನವಾಗಿ ಪೌರಾಣಿಕ ಕಥಾ ಸರಣಿಯನ್ನು ಕನ್ನಡ ಪ್ರೇಕ್ಷಕರ ಮುಂದಿಡಲು ಈಟಿವಿ ಕನ್ನಡ ಸಿದ್ದವಾಗಿದೆ.

    ತಿರುಪತಿ ವೆಂಕಟೇಶ್ವರ ಸ್ವಾಮಿಯ ಕಥೆಯುಳ್ಳ 'ಶ್ರೀನಿವಾಸ ಕಲ್ಯಾಣ' ಧಾರಾವಾಹಿ ಮೇ 24 ರಿಂದ ಪ್ರತಿ ಶನಿವಾರ-ಭಾನುವಾರ-ಈ ಟೀವಿ ಕನ್ನಡದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ತುಗ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾ ನಿರ್ದೇಶಿಸಿರುವ ಅರವಿಂದ್ ಕೌಶಿಕ್ ಅವರು ವಿಭಿನ್ನ ರೀತಿಯ ನಿರೂಪಣೆ ಮೂಲಕ ಶ್ರೀನಿವಾಸ ಕಲ್ಯಾಣ ಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

    ತಾಂತ್ರಿಕ ವರ್ಗದಲ್ಲಿ ಮನು ಯಾಪ್ಲರ್ ಅವರ ಛಾಯಾಗ್ರಹಣ, ಶ್ರೀನಿಧಿ.ಡಿ.ಎಸ್ ಅವರ ಚಿತ್ರಕತೆ ಸಂಭಾಷಣೆ ಈ ಸಿರಿಯಲ್ ಗೆ ಇದೆ. ವೆಂಕಟೇಶ್ವರ ಮಹಾತ್ಮೆ ಆಧರಿಸಿದ ಧಾರಾವಾಹಿ ಇದಾಗಿದ್ದು ಹಲವು ಪುರಾಣಗಳನ್ನ ಅಧ್ಯಯನ ಮಾಡಿ- ಚಿತ್ರಕತೆ ಹೆಣೆಯಲಾಗಿದೆ. ಸುಮಾರು ಒಂದು ವರ್ಷದಿಂದ ಕಥೆಯ ಬಗ್ಗೆ ಅಧ್ಯಯನ ನಡೆಸಲಾಗಿದೆ.

    ಬಹಳ ದಿನಗಳ ನಂತರ ಕನ್ನಡ ಕಿರುತೆರೆಯಲ್ಲಿ ಪೌರಾಣಿಕ ಧಾರಾವಾಹಿ ಪ್ರಸಾರವಾಗುತ್ತಿದ್ದು, ಕನ್ನಡ ಕಿರುತೆರೆಯಲ್ಲೂ ಅದ್ದೂರಿ ನಿರ್ಮಾಣವನ್ನು ಕಾಣಬಹುದಾಗಿದೆ. ಶ್ರೀನಿವಾಸ ಕಲ್ಯಾಣ ಧಾರಾವಾಹಿಯ ತುಣುಕು, ಚಿತ್ರಗಳನ್ನು ಇಲ್ಲಿ ಕಾಣಿರಿ...

    ನಿರ್ದೇಶಕ ಅರವಿಂದ್ ಕೌಶಿಕ್ ಹೇಳಿಕೆ

    ನಿರ್ದೇಶಕ ಅರವಿಂದ್ ಕೌಶಿಕ್ ಹೇಳಿಕೆ

    ಶ್ರೀನಿವಾಸ-ಪದ್ಮಾವತಿ-ಲಕ್ಷ್ಮಿಯರ ಕತೆ. ಭೃಗು ಶಾಪದಿಂದ ಆರಂಭವಾಗುವ ಕತೆ, ಲಕ್ಷ್ಮಿ ವಿಷ್ಣುವನ್ನು ತೊರೆದು ಹೋಗುವುದರೊಂದಿಗೆ ಮುಂದುವರಿಯುತ್ತದೆ ಎಂದು ನಿರ್ದೇಶಕ ಅರವಿಂದ್ ಕೌಶಿಕ್ ಹೇಳಿದ್ದಾರೆ.

    ಪಾತ್ರವರ್ಗದಲ್ಲಿ ಸುರೇಶ್ ರೈ- ಭವ್ಯಶ್ರೀ ರೈ

    ಪಾತ್ರವರ್ಗದಲ್ಲಿ ಸುರೇಶ್ ರೈ- ಭವ್ಯಶ್ರೀ ರೈ

    ಪಾತ್ರವರ್ಗದಲ್ಲಿ ಶ್ರೀನಿವಾಸನಾಗಿ ಅರ್ಜುನ್, ಪದ್ಮಾವತಿಯಾಗಿ ದಿವ್ಯ, ಆಕಾಶರಾಜನಾಗಿ ಸುರೇಶ್ ರೈ, ಧಾರಿಣೀದೇವಿಯಾಗಿ ಭವ್ಯಶ್ರೀ ರೈ, ಬಕುಲಾದೇವಿಯಾಗಿ ಪದ್ಮಜಾರಾವ್, ಚೋಳರಾಜನಾಗಿ ರವಿ ಭಟ್ ಮೊದಲಾದವರು ನಟಿಸುತ್ತಿದ್ದಾರೆ.

    ಅದ್ದೂರಿ ನಿರ್ಮಾಣವನ್ನು ಕಾಣಬಹುದಾಗಿದೆ

    ಅದ್ದೂರಿ ನಿರ್ಮಾಣವನ್ನು ಕಾಣಬಹುದಾಗಿದೆ

    ಅದ್ದೂರಿ ನಿರ್ಮಾಣ, ಅದ್ಭುತ ಸೆಟ್ ಹಾಗೂ ಸುಶ್ರಾವ್ಯ ಸಂಗೀತ ಈ ಧಾರಾವಾಹಿಗೆ ಇಂಬು ನೀಡಲಿದೆ.ಯಾಣ, ಉಡುಪಿ ಸೇರಿದಂತೆ ಕರ್ನಾಟಕ ವಿಭಿನ್ನ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

    ಕನ್ನಡ ಕಿರುತೆರೆಯಲ್ಲಿ ಪೌರಾಣಿಕ ಧಾರಾವಾಹಿ

    ಕನ್ನಡ ಕಿರುತೆರೆಯಲ್ಲಿ ಪೌರಾಣಿಕ ಧಾರಾವಾಹಿ

    ಬಹಳ ದಿನಗಳ ನಂತರ ಕನ್ನಡ ಕಿರುತೆರೆಯಲ್ಲಿ ಪೌರಾಣಿಕ ಧಾರಾವಾಹಿ ಪ್ರಸಾರವಾಗುತ್ತಿದ್ದು, ಕನ್ನಡ ಕಿರುತೆರೆಯಲ್ಲೂ ಅದ್ದೂರಿ ನಿರ್ಮಾಣವನ್ನು ಕಾಣಬಹುದಾಗಿದೆ.

    ಶ್ರೀನಿವಾಸ ಕಲ್ಯಾಣ ಧಾರಾವಾಹಿಯ ತುಣುಕು

    ಶ್ರೀನಿವಾಸ ಕಲ್ಯಾಣ ಧಾರಾವಾಹಿಯ ವಿಡಿಯೋ ತುಣುಕು ಇಲ್ಲಿ ನೋಡಿ

    'ಶ್ರೀನಿವಾಸ ಕಲ್ಯಾಣ' ಧಾರಾವಾಹಿ

    'ಶ್ರೀನಿವಾಸ ಕಲ್ಯಾಣ' ಧಾರಾವಾಹಿ

    ತಿರುಪತಿ ವೆಂಕಟೇಶ್ವರ ಸ್ವಾಮಿಯ ಕಥೆಯುಳ್ಳ 'ಶ್ರೀನಿವಾಸ ಕಲ್ಯಾಣ' ಧಾರಾವಾಹಿ ಮೇ 24 ರಿಂದ ಪ್ರತಿ ಶನಿವಾರ-ಭಾನುವಾರ-ಈ ಟೀವಿ ಕನ್ನಡದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

    English summary
    ETV Kannada telecasting new mega serial 'Srinivasa Kalyana’, a mythological series based on Lord Venkateswara. Srinivasa Kalyana will be telecasted every Saturday and Sunday at 8 PM starting from May.24.
    Thursday, May 22, 2014, 15:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X