»   » ಕನ್ನಡದ ಪ್ರಪ್ರಥಮ ಇನ್ಫೋಟೈನ್ಮೆಂಟ್ ವಾಹಿನಿ ಲೋಕಾರ್ಪಣೆ

ಕನ್ನಡದ ಪ್ರಪ್ರಥಮ ಇನ್ಫೋಟೈನ್ಮೆಂಟ್ ವಾಹಿನಿ ಲೋಕಾರ್ಪಣೆ

Posted by:
Subscribe to Filmibeat Kannada

ಸುದ್ದಿಮನೆ, ಧಾರವಾಹಿ, ಮನೋರಂಜನೆಯಿಂದ ಹೊರತಾಗಿ ವಿಭಿನ್ನ ರೀತಿಯ ಕಾರ್ಯಕ್ರಮ ವೀಕ್ಷಿಸಲು ಬಯಸುವ ಕನ್ನಡ ಟಿವಿ ವೀಕ್ಷಕರ ಆಶೋತ್ತರ ಈಡೇರಿಸುವ ಉದ್ದೇಶದಿಂದ ಹೊಸ ವಾಹಿನಿಯೊಂದು ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ.

ರಾಜ್ಯದ ಪ್ರಪ್ರಥಮ ಇನ್ಫೋಟೈನ್ಮೆಂಟ್ ವಾಹಿನಿ "ಸರಳ ಜೀವನ" ಎನ್ನುವ ಹೆಸರಿನಲ್ಲಿ ಇದೇ ಬರುವ ಶುಕ್ರವಾರ(ಫೆಬ್ರವರಿ 19ರಂದು) ಕನ್ನಡ ಟಿವಿ ವೀಕ್ಷಕರ ಮುಂದೆ ಬರಲಿದೆ.

First ever infotainment channel in Kannada launching on Feb 19th

ಭಾರತೀಯ ಸಂಸ್ಕೃತಿ, ನಮ್ಮ ಪರಂಪರೆಗಳನ್ನು ಪ್ರತಿಬಿಂಬಿಸುವ, ಸದಭಿರುಚಿಯ ಮತ್ತು ಸಕಾರಾತ್ಮಕ ಚಿಂತನೆಗಳನ್ನೊಳಗೊಂಡ ಹಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸದುದ್ದೇಶದಿಂದ ಈ ವಾಹಿನಿ ಆರಂಭಿಸುತ್ತಿದ್ದೇವೆ ಎನ್ನುವುದು ವಾಹಿನಿಯ ಕಮಿಟ್ಮೆಂಟ್.

ದೈನಂದಿನ ಸುದ್ಧಿ, ಧಾರವಾಹಿ ನೋಡಿ.. ನೋಡಿ 'ಜನ ಚೇಂಜ್ ಕೇಳ್ತಾ ಇದ್ದಾರೆ' ಎನ್ನುವ ವರ್ಗದ ಟಿವಿ ವೀಕ್ಷಕರಿಗೆ ಭರಪೂರ ಮನೋರಂಜನೆ ನೀಡುತ್ತೇವೆ ಎನ್ನುವ ಭರವಸೆಯ ಮಾತಿನೊಂದಿಗೆ ವಾಹಿನಿ ಸದ್ಯದಲ್ಲೇ ಆರಂಭವಾಗಲಿದೆ.

ಹಿರಿಯರು, ಮಕ್ಕಳು, ಯುವಕ, ಯುವತಿಯರು ಹೀಗೆ ಪ್ರತಿಯೊಬ್ಬರಿಗೂ ಉಪಯುಕ್ತವೆನಿಸುವ ಮಾಹಿತಿಯನ್ನು ಮನೋನರಂಜನೆಯ ಮೂಲಕ ನೀಡುವ ಪ್ರಾಮಾಣಿಕ ಪ್ರಯತ್ನ ನಮ್ಮದು ಎನ್ನುತ್ತಾರೆ ವಾಹಿನಿಯ ಬಳಗದವರು.

ನಮ್ಮ ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಮೆರೆಸುವ ನಿಟ್ಟಿನಲ್ಲಿ, ಸರಳ ವಾಸ್ತು ಸಂಸ್ಥಾಪಕ ಡಾ.ಚಂದ್ರಶೇಖರ ಗುರೂಜಿಯವರ ಮಾರ್ಗದರ್ಶನದಲ್ಲಿ, ಮನುಕುಲದ ಒಳಿತಿಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಕನ್ನಡದ ಮೊಟ್ಟಮೊದಲ ನ್ಫೋಟೈನ್ಮೆಂಟ್ ಚಾನೆಲ್ 'ಸರಳ ಜೀವನ' ಇದೇ ಫೆಬ್ರವರಿ 19ರಿಂದ ನಿಮ್ಮ ಮನೆ ಮತ್ತು ಮನಗಳನ್ನು ತಲುಪಲಿದೆ.

English summary
First ever infotainment channel in Kannada "Sarala Jeevana" headed by Dr. Chandrasekhar Guruji launching on Feb 19th.
Please Wait while comments are loading...

Kannada Photos

Go to : More Photos