»   » ಶಿವ-ಪಾರ್ವತಿ ಕಲ್ಯಾಣ: ಅದ್ಭುತ ದೃಶ್ಯಕಾವ್ಯ ನೋಡಲು ಮರೆಯದಿರಿ

ಶಿವ-ಪಾರ್ವತಿ ಕಲ್ಯಾಣ: ಅದ್ಭುತ ದೃಶ್ಯಕಾವ್ಯ ನೋಡಲು ಮರೆಯದಿರಿ

Posted by:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯ ಹೆಮ್ಮೆಯ 'ಹರ ಹರ ಮಹಾದೇವ' ಇದೀಗ ಯಶಸ್ವಿ 80 ಕಂತುಗಳನ್ನು ಪೂರೈಸಿ, ಪ್ರಮುಖ ಘಟ್ಟ ತಲುಪಿದೆ. [ಪಾರ್ವತಿ ಅವತಾರದ ಕಥೆ ಕಣ್ತುಂಬಿಕೊಳ್ಳಿ, ಪುಣ್ಯ ಕಟ್ಟಿಕೊಳ್ಳಿ.!]

ಸತಿಯ ದಹನದ ನಂತರ ವಿರಾಗಿಯಾಗಿದ್ದ ಮಹಾದೇವನನ್ನು ಪ್ರೇಮಪಾಶದಲ್ಲಿ ಆದಿಶಕ್ತಿಯ ಮತ್ತೊಂದು ಅವತಾರ ಪಾರ್ವತಿ ಬಂಧಿಸಿದ್ದಾಗಿದೆ. ಮಹಾದೇವ ಮತ್ತು ಪಾರ್ವತಿ ವಿವಾಹದ ವೈಭವೋಪೇತ ವಿಶೇಷ ಸಂಚಿಕೆಗಳು ಕೂಡ ಆರಂಭವಾಗಿದೆ.

ವಾರವಿಡೀ ಮದುವೆಯ ಶಾಸ್ತ್ರಗಳ ಕಲರವ

ವಾರವಿಡೀ ಮದುವೆಯ ಶಾಸ್ತ್ರಗಳ ಕಲರವ

ಅರಿಶಿನ ಶಾಸ್ತ್ರ, ತಿಲಕ ಶಾಸ್ತ್ರ, ವರಯಾತ್ರೆ, ಮಾಂಗಲ್ಯ ಧಾರಣ ಶಾಸ್ತ್ರ, ಸಪ್ತ ಪದಿ ಶಾಸ್ತ್ರ, ಉಂಗುರ ಶಾಸ್ತ್ರ ಮತ್ತು ವಿದಾಯ... ಹೀಗೆ ಮಹಾದೇವ-ಪಾರ್ವತಿ ಮದುವೆಯ ಸಂಪೂರ್ಣ ಚಿತ್ರಣವನ್ನು 'ಹರ ಹರ ಮಹಾದೇವ' ಧಾರಾವಾಹಿ ಮೂಲಕ ಸ್ಟಾರ್ ಸುವರ್ಣ ವಾಹಿನಿ ನಿಮ್ಮ ಮುಂದೆ ತಂದಿದೆ. [ಯಾರೀ 'ಶಿವ'ನ ಪಾತ್ರಧಾರಿ ವಿನಯ್ ಗೌಡ.? ಅವರ ಹಿನ್ನಲೆ ಏನು.?]

ಮಾಂಗಲ್ಯ ಧಾರಣೆ

ಮಾಂಗಲ್ಯ ಧಾರಣೆ

ಶಿವ-ಪಾರ್ವತಿ ವಿವಾಹದ ಅದ್ಭುತ ದೃಶ್ಯಕಾವ್ಯ ಕಣ್ತುಂಬಿಕೊಳ್ಳಲು ಮರೆಯದಿರಿ...

ಮುಂದಿನ ಸಂಚಿಕೆಗಳು....

ಮುಂದಿನ ಸಂಚಿಕೆಗಳು....

ಮದುವೆಯ ನಂತರದ ಕಂತುಗಳಲ್ಲಿ ಪಾರ್ವತಿ ಮತ್ತೆ ಬೆಸ್ತಳಾಗಿ ಹುಟ್ಟುವುದು, ಭದ್ರಕಾಳಿಯ ಅವತಾರ ತಾಳುವುದು...ಹೀಗೆ ನಾನಾ ಕಥೆಗಳು ತೆರೆದುಕೊಳ್ಳುತ್ತದೆ.

ಮಹಾದೇವ-ಪಾರ್ವತಿ ವಿವಾಹ ಮಹೋತ್ಸವ

ಮಹಾದೇವ-ಪಾರ್ವತಿ ವಿವಾಹ ಮಹೋತ್ಸವ

ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಹದೇವ-ಪಾರ್ವತಿ ವಿವಾಹ ಮಹೋತ್ಸವ ಸಂಚಿಕೆಗಳು ಪ್ರಸಾರವಾಗಲಿವೆ. ತಪ್ಪದೇ ವೀಕ್ಷಿಸಿ....

English summary
Episodes of Mahadeva-Parvathi Wedding Celebration will be aired in Star Suvarna Channel's 'Hara Hara Mahadeva' from Monday to Friday at 7.30 PM.
Please Wait while comments are loading...

Kannada Photos

Go to : More Photos