»   » ಚಿತ್ರಗಳು ; ರಂಗು ರಂಗಿನ 'ಬಿಗ್ ಬಾಸ್ ಕನ್ನಡ 3' ಗ್ರ್ಯಾಂಡ್ ಫಿನಾಲೆ

ಚಿತ್ರಗಳು ; ರಂಗು ರಂಗಿನ 'ಬಿಗ್ ಬಾಸ್ ಕನ್ನಡ 3' ಗ್ರ್ಯಾಂಡ್ ಫಿನಾಲೆ

Posted by:
Subscribe to Filmibeat Kannada

ಅಂತೂ ಇಂತು ವೀಕ್ಷಕರ ಕುತೂಹಲಕ್ಕೆ ತೆರೆ ಬಿದ್ದಿದೆ. ನಟಿ ಶ್ರುತಿ 'ಬಿಗ್ ಬಾಸ್-3' ರಿಯಾಲಿಟಿ ಶೋ ವಿಜೇತರಾಗಿದ್ದಾರೆ. ನಟ ಚಂದನ್ ಎರಡನೇ ಸ್ಥಾನ ಪಡೆದಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿನ್ನೆ 'ಬಿಗ್ ಬಾಸ್-3' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಪ್ರಸಾರವಾಯ್ತು. ರಂಗು ರಂಗಿನ ಸ್ಟೇಜ್ ನಲ್ಲಿ ಕಿಚ್ಚ ಸುದೀಪ್ ಮನರಂಜನೆಯ ರಸದೌತಣ ನೀಡಿದರು.[ನಟಿ ಶ್ರುತಿ ಮುಡಿಗೆ 'ಬಿಗ್ ಬಾಸ್' ಗೆಲುವಿನ ಕಿರೀಟ]

'ಬಿಗ್ ಬಾಸ್-3' ಶೋನ ಎಲ್ಲಾ ಸ್ಪರ್ಧಿಗಳು ನೃತ್ಯ ಪ್ರದರ್ಶನ ನೀಡಿದರು. ಇದೇ ಕಾರ್ಯಕ್ರಮದಲ್ಲಿ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಮತ್ತು 'ಜಿಗರ್ ಥಂಡ' ಟೀಸರ್ ಲಾಂಚ್ ಆಗಿದ್ದು ಕೂಡ ವಿಶೇಷ.['ಬಿಗ್ ಬಾಸ್' ಮನೆಗೆ ನಟ ರವಿಚಂದ್ರನ್ ಬಂದಿದ್ಯಾಕೆ ಗೊತ್ತಾ?]

'ಬಿಗ್ ಬಾಸ್ ಸೀಸನ್ 3' ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದ ಹೈಲೈಟ್ಸ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

'ಬಿಗ್ ಬಾಸ್' ಮನೆಗೆ ಬಲಗಾಲಿಟ್ಟು ಬಂದ ರವಿಚಂದ್ರನ್

'ಬಿಗ್ ಬಾಸ್' ಮನೆಗೆ ಬಲಗಾಲಿಟ್ಟು ಬಂದ ರವಿಚಂದ್ರನ್

'ಬಿಗ್ ಬಾಸ್' ನೀಡಿದ ವಿಶೇಷ ಅಧಿಕಾರದ ಮೇರೆಗೆ ವಿಶೇಷ ಅತಿಥಿಯಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ 'ಬಿಗ್ ಬಾಸ್' ಮನೆಗೆ ಕಾಲಿಟ್ಟರು. ಫೈನಲ್ ತಲುಪಲು ನಂಬಿಕೆ ಇಲ್ಲದ ಸದಸ್ಯರು 20 ಲಕ್ಷ ರೂಪಾಯಿ ಪಡೆದು ಆಟದಿಂದ ಹೊರಗೆ ಹೋಗುವ ಚಾನ್ಸ್ 'ಬಿಗ್ ಬಾಸ್' ನೀಡಿದ್ರಿಂದ, ಎಲ್ಲಾ ಫೈನಲಿಸ್ಟ್ ಗಳ ಜೊತೆ ಮಾತನಾಡಿ ಒಬ್ಬರನ್ನ ಮನೆಯಿಂದ ಆಚೆ ಕರೆದುಕೊಂಡು ಬರುವ ಜವಾಬ್ದಾರಿ ರವಿಚಂದ್ರನ್ ರದ್ದಾಗಿತ್ತು. 24 ಲಕ್ಷ ಪಡೆದು ಆಟದಿಂದ ಔಟ್ ಆಗುವುದಕ್ಕೆ ಯಾರೂ ಇಚ್ಛಿಸದ ಕಾರಣ ರವಿಚಂದ್ರನ್ 'ಬಿಗ್ ಬಾಸ್' ಮನೆಯಿಂದ ಹೊರಬಂದರು.['ಬಿಗ್ ಬಾಸ್' ವೇದಿಕೆಯಲ್ಲಿ ಹುಚ್ಚ ವೆಂಕಟ್-ರವಿ ಮುರೂರು ಹೇಳಿದ್ದೇನು?]

ಸುದೀಪ್ ಗ್ರ್ಯಾಂಡ್ ಎಂಟ್ರಿ

ಸುದೀಪ್ ಗ್ರ್ಯಾಂಡ್ ಎಂಟ್ರಿ

'ಬಚ್ಚನ್' ಮತ್ತು 'ಬೈಟೆ..ಬೈಟೆ..' ಹಾಡುಗಳಿಗೆ ಸೂಪರ್ ಸ್ಟೆಪ್ ಹಾಕುವ ಮೂಲಕ ಕಿಚ್ಚ ಸುದೀಪ್ 'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆ ಸ್ಟೇಜ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟರು.

ಎಲ್ಲಾ ಸ್ಪರ್ಧಿಗಳು ಎಂಟ್ರಿ

ಎಲ್ಲಾ ಸ್ಪರ್ಧಿಗಳು ಎಂಟ್ರಿ

ಕಳೆದ 13 ವಾರಗಳಲ್ಲಿ 'ಬಿಗ್ ಬಾಸ್' ಮನೆಯಿಂದ ಔಟ್ ಆಗಿದ್ದ ಎಲ್ಲಾ ಸ್ಪರ್ಧಿಗಳು ಫಿನಾಲೆಯಲ್ಲಿ ಭಾಗವಹಿಸಿದರು.

ಕುಣಿದು ಕುಪ್ಪಳಿಸಿದ ಜಯಶ್ರೀ-ನೇಹಾ

ಕುಣಿದು ಕುಪ್ಪಳಿಸಿದ ಜಯಶ್ರೀ-ನೇಹಾ

''ನನಗೂ ಒಬ್ಬ ಗೆಳೆಯ ಬೇಕು...'' ಹಾಡಿಗೆ ಜಯಶ್ರೀ ಮತ್ತು ನೇಹಾ ಗೌಡ ಡ್ಯಾನ್ಸ್ ಮಾಡಿದರು.

ಹುಚ್ಚ ವೆಂಕಟ್ ಸ್ಟೆಪ್

ಹುಚ್ಚ ವೆಂಕಟ್ ಸ್ಟೆಪ್

''ನುಗ್ಗಿ ನಡಿವೆಯೆಂದು..ನಾನು ಕನ್ನಡದ ಗಂಡು..'' ಹಾಡಿಗೆ ಹುಚ್ಚ ವೆಂಕಟ್ ಸ್ಟೆಪ್ ಹಾಕಿದರು.

ಸುಷ್ಮಾ ವೀರ್ ನೃತ್ಯ

ಸುಷ್ಮಾ ವೀರ್ ನೃತ್ಯ

'ಎಲ್ಲೋ ಜೋಗಪ್ಪ ನಿನ್ನ ಅರಮನೆ' ಹಾಡಿಗೆ ಸುಷ್ಮಾ ವೀರ್ ನೃತ್ಯ ಮಾಡಿದರು.

ಪೂಜಾ ಗಾಂಧಿ ಔಟ್

ಪೂಜಾ ಗಾಂಧಿ ಔಟ್

5 ಫೈನಲಿಸ್ಟ್ ಗಳ ಪೈಕಿ ನಟಿ ಪೂಜಾ ಗಾಂಧಿ ಮೊದಲು ಔಟ್ ಆದರು.

ಬರ್ತಿದೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ'

ಬರ್ತಿದೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ'

'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಚಿತ್ರದ ಟ್ರೇಲರ್ ಅನಾವರಣವಾಯ್ತು. ಜೊತೆಗೆ ಚಿತ್ರದ ನಾಯಕ ಪ್ರವೀಣ್ ಮತ್ತು ನಾಯಕಿ ಮೇಘನಾ ಗಾಂವ್ಕರ್ ನೃತ್ಯ ಪ್ರದರ್ಶನ ಕೂಡ ನೀಡಿದರು.

ಕ್ಯಾಮರಾ ಭೂತ ಅವಾರ್ಡ್!

ಕ್ಯಾಮರಾ ಭೂತ ಅವಾರ್ಡ್!

ಇದೇ ಸಂದರ್ಭದಲ್ಲಿ 'ಚೋಟಾ ಬಾಸ್' ಅವಾರ್ಡ್ ಗಳನ್ನೂ ನೀಡಲಾಯ್ತು. ಅದರಲ್ಲಿ ಕೃತಿಕಾ ರವೀಂದ್ರಗೆ 'ಕ್ಯಾಮರಾ ಭೂತ' ಅವಾರ್ಡ್ ಲಭಿಸ್ತು.

ಅಳುಮುಂಜಿ ಪಾಪಾ ಯಾರು?

ಅಳುಮುಂಜಿ ಪಾಪಾ ಯಾರು?

ನಟಿ ಪೂಜಾ ಗಾಂಧಿ ಅಳುಮುಂಜಿ ಪಾಪಾ ಅವಾರ್ಡ್ ಪಡೆದರು.

ಡಂಕಣಕ ಕಿಟ್ಟಿ

ಡಂಕಣಕ ಕಿಟ್ಟಿ

'ಬಿಗ್ ಬಾಸ್' ಮನೆಯಲ್ಲಿ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದ ಸುನಾಮಿ ಕಿಟ್ಟಿ 'ಡಂಕಣಕ' ಅವಾರ್ಡ್ ಪಡೆದರು.

ಮಿತ್ರ-ನೇತ್ರ ಡ್ಯಾನ್ಸ್

ಮಿತ್ರ-ನೇತ್ರ ಡ್ಯಾನ್ಸ್

'ವಜ್ರಕಾಯ' ಚಿತ್ರದ 'ನೋ ಪ್ರಾಬ್ಲಂ...' ಹಾಡಿಗೆ ಮಿತ್ರ ಮತ್ತು ನೇತ್ರ ಡ್ಯಾನ್ಸ್ ಮಾಡಿದರು.

ರೆಹಮಾನ್ ಔಟ್

ರೆಹಮಾನ್ ಔಟ್

ನಟಿ ಶ್ರುತಿ, ಆನಂದ್ ಮತ್ತು ಚಂದನ್ ಸೇಫ್ ಆಗಿದ್ರಿಂದ ರೆಹಮಾನ್ 'ಬಿಗ್ ಬಾಸ್' ಮನೆಯಿಂದ ಹೊರಬಂದರು.

ವೇದಿಕೆ ಮೇಲೆ ಕುಸಿದು ಬಿದ್ದ ರೆಹಮಾನ್

ವೇದಿಕೆ ಮೇಲೆ ಕುಸಿದು ಬಿದ್ದ ರೆಹಮಾನ್

ಕುಟುಂಬದಿಂದ ಬಂದ ಸ್ಯಾಡ್ ನ್ಯೂಸ್ ಕೇಳಿ ರೆಹಮಾನ್ ವೇದಿಕೆ ಮೇಲೆ ಕುಸಿದು ಬಿದ್ದರು.

ಕಿಟ್ಟಿ ಡ್ಯಾನ್ಸ್

ಕಿಟ್ಟಿ ಡ್ಯಾನ್ಸ್

'ಅಣ್ಣಂಗೆ ಲವ್ ಆಗಿದೆ..' ಹಾಡಿಗೆ ಕಿಟ್ಟಿ ಡ್ಯಾನ್ಸ್ ಮಾಡಿದರು.

ಸುದೀಪ್ ಜರ್ನಿ

ಸುದೀಪ್ ಜರ್ನಿ

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸುದೀಪ್ ರವರ ಜರ್ನಿ ಕೂಡ ತೋರಿಸಲಾಯ್ತು. ಕನ್ನಡ ಚಿತ್ರರಂಗದಲ್ಲಿ 20 ವರ್ಷ ಪೂರೈಸಿರುವ ಕಿಚ್ಚ ಸುದೀಪ್ ರವರಿಗೆ ಇದೇ ಸಂದರ್ಭದಲ್ಲಿ ಯುವ ಪ್ರತಿಭೆಗಳು ಶುಭಾಶಯ ಕೋರಿದರು. ಇದಕ್ಕಾಗಿ ನಟಿ ರಕ್ಷಿತಾ ಪ್ರೇಮ್ ಆಂಕರಿಂಗ್ ಮಾಡಿದ್ದು ವಿಶೇಷ.

ಸುನೀಲ್ ಕುಮಾರ್ ದೇಸಾಯಿ ನೆನೆದ ಸುದೀಪ್

ಸುನೀಲ್ ಕುಮಾರ್ ದೇಸಾಯಿ ನೆನೆದ ಸುದೀಪ್

ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ತಮ್ಮ ಗುರುಗಳಾದ ಸುನೀಲ್ ಕುಮಾರ್ ದೇಸಾಯಿ ರವರನ್ನ ನೆನೆದು, ಹೆಮ್ಮೆಯ ಮಾತುಗಳನ್ನಾಡಿದರು.

ಗೌತಮಿ-ಕೃತಿಕಾ ನೃತ್ಯ

ಗೌತಮಿ-ಕೃತಿಕಾ ನೃತ್ಯ

''ಹೂವಿನ ಬಾಣದಂತೆ ಯಾರಿಗೂ ಕಾಣದಂತೆ..'' ಹಾಡಿಗೆ ಗೌತಮಿ ಗೌಡ ಮತ್ತು ಕೃತಿಕಾ ನೃತ್ಯ ಮಾಡಿದರು.

'ಜಿಗರ್ ಥಂಡ' ಪ್ರಮೋಷನ್

'ಜಿಗರ್ ಥಂಡ' ಪ್ರಮೋಷನ್

'ಕಿಚ್ಚ ಕ್ರಿಯೇಷನ್ಸ್' ಮೂಲಕ ರೆಡಿ ಆಗುತ್ತಿರುವ 'ಜಿಗರ್ ಥಂಡ' ಚಿತ್ರದ ಪ್ರಮೋಷನ್ ಕೂಡ ಇದೇ ವೇದಿಕೆಯಲ್ಲಿ ನಡೆಯಿತು. ಇದರ ಪ್ರಯುಕ್ತ ರವಿಶಂಕರ್, ಚಿಕ್ಕಣ್ಣ ಕೂಡ ಭಾಗವಹಿಸಿದರು.

ಗಾಂಧಾರಿ ಟೀಮ್

ಗಾಂಧಾರಿ ಟೀಮ್

ಇದೇ ವೇದಿಕೆಯಲ್ಲಿ ಗಾಂಧಾರಿ ಧಾರಾವಾಹಿ ತಂಡ ಕೂಡ ''ಹಲ್ಲೋ...ಹಲ್ಲೋ...'' ಹಾಡಿಗೆ ನೃತ್ಯ ಮಾಡಿದರು

ಆನಂದ್ ಔಟ್

ಆನಂದ್ ಔಟ್

ವೀಕ್ಷಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದ ಮಾಸ್ಟರ್ ಆನಂದ್ ಔಟ್ ಆದರು.

ಹೆಲ್ತಿ ಪೂಜಾ ಗಾಂಧಿ

ಹೆಲ್ತಿ ಪೂಜಾ ಗಾಂಧಿ

ಜೆಮಿನಿ ಕುಕ್ಕಿಂಗ್ ಸಂಸ್ಥೆ ನೀಡಿದ 'ಬಿಗ್ ಬಾಸ್' ಮನೆಯ ಹೆಲ್ತಿ ಕನ್ಟೆಸ್ಟೆಂಟ್ ಅವಾರ್ಡ್ ನ ಪೂಜಾ ಗಾಂಧಿ ಪಡೆದರು. ಬಹುಮಾನದ ಮೊತ್ತ ಒಂದು ಲಕ್ಷ ರೂಪಾಯಿ.

ಮನೆ ಒಳಗೆ ಹೋದ ಸುದೀಪ್

ಮನೆ ಒಳಗೆ ಹೋದ ಸುದೀಪ್

ಇಬ್ಬರು ಫೈನಲಿಸ್ಟ್ ಗಳನ್ನ ವೇದಿಕೆ ಮೇಲೆ ಕರೆತರಲು ಕಿಚ್ಚ ಸುದೀಪ್ ಒಳಗೆ ಹೋದರು.

ಶ್ರುತಿ ವಿನ್ನರ್, ಚಂದನ್ ರನ್ನರ್!

ಶ್ರುತಿ ವಿನ್ನರ್, ಚಂದನ್ ರನ್ನರ್!

ವೀಕ್ಷಕರು ಮಾಡಿದ ಎಸ್.ಎಂ.ಎಸ್ ಆಧಾರದ ಮೇಲೆ ನಟಿ ಶ್ರುತಿ 'ಬಿಗ್ ಬಾಸ್-3' ವಿನ್ನರ್ ಆದರು. ಎರಡನೇ ಸ್ಥಾನ ಪಡೆದರು ನಟ ಚಂದನ್.

English summary
Kannada Actress Shruthi is the winner of 'Bigg Boss Kannada 3' reality show. Check out the highlights of the show in the article.
Please Wait while comments are loading...

Kannada Photos

Go to : More Photos