»   » ಚಿತ್ರಗಳು: 'ಜೀ ಕನ್ನಡ' ದಶಕದ ಸಂಭ್ರಮದ ವರ್ಣರಂಜಿತ ಸಮಾರಂಭ

ಚಿತ್ರಗಳು: 'ಜೀ ಕನ್ನಡ' ದಶಕದ ಸಂಭ್ರಮದ ವರ್ಣರಂಜಿತ ಸಮಾರಂಭ

Posted by:
Subscribe to Filmibeat Kannada

ಕನ್ನಡದ ಜನಪ್ರಿಯ 'ಜೀ ಕನ್ನಡ' ವಾಹಿನಿಗೆ ದಶಕ ತುಂಬಿದ ಸಂಭ್ರಮ. ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗಷ್ಟೇ ವರ್ಣರಂಜಿತ ಕಾರ್ಯಕ್ರಮ ಆಯೋಜಿಸಿತ್ತು.

ದಶಕದ ಸವಿ ನೆನಪುಗಳನ್ನೆಲ್ಲಾ ಮೆಲುಕು ಹಾಕಿ, ಕನ್ನಡಿಗರು ಮೆಚ್ಚಿದ ಮಹಾನ್ ಸಾಧಕರನ್ನು ಗೌರವಿಸಿ, ಸನ್ಮಾನಿಸುವ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ತಾರೆಯರು ಭಾಗವಹಿಸಿದ್ದು ವಿಶೇಷ. [ಜೀ ಕನ್ನಡ ದಶಕದ ಸಂಭ್ರಮದಲ್ಲಿ ತಾರೆಯರ ರಂಗು]

ಸದಾ ಹೊಸತನದಿಂದ ವೀಕ್ಷಕರನ್ನು ರಂಜಿಸುತ್ತಾ ಬಂದಿರುವ ಜೀ ಕನ್ನಡ ವಾಹಿನಿಯ ದಶಕದ ಸಂಭ್ರಮದ ಸಮಾರಂಭ ಆಗಸ್ಟ್ 27 ಶನಿವಾರ ಮತ್ತು ಆಗಸ್ಟ್ 28 ಭಾನುವಾರ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ಮುಂದೆ ಓದಿ....

ರಮೇಶ್ ಅರವಿಂದ್ ಸಾರಥ್ಯ

ರಮೇಶ್ ಅರವಿಂದ್ ಸಾರಥ್ಯ

ಜೀ ಕನ್ನಡ ವಾಹಿನಿಯ ದಶಕದ ಸಂಭ್ರಮ ಕಾರ್ಯಕ್ರಮದ ಸಾರಥ್ಯ ವಹಿಸಿದವರು ನಟ, ನಿರ್ದೇಶಕ ರಮೇಶ್ ಅರವಿಂದ್.

ಸಾಧಕರಿಗೆ ಗೌರವ

ಸಾಧಕರಿಗೆ ಗೌರವ

ಕನ್ನಡ ನಾಡು ಹೆಮ್ಮೆ ಪಡುವಂತಹ ಮಹಾನ್ ಸಾಧಕರಾದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಉದ್ಯಮಿ ಇನ್ಫೋಸಿಸ್ ನಾರಾಯಣ ಮೂರ್ತಿ, ಚಂದ್ರಶೇಖರ ಕಂಬಾರ ಮತ್ತು ಅನಿಲ್ ಕುಂಬ್ಳೆ ರವರನ್ನ ಇದೇ ಸಮಾರಂಭದಲ್ಲಿ ಗೌರವಿಸಲಾಯಿತು.

ಸುದೀಪ್ ಗೆ ಪ್ರಶಸ್ತಿ

ಸುದೀಪ್ ಗೆ ಪ್ರಶಸ್ತಿ

ದಶಕದ ಎಂಟರ್ ಟೇನರ್ ಪ್ರಶಸ್ತಿಯನ್ನ ನಟ ಸುದೀಪ್ ಸ್ವೀಕರಿಸಿದರು. ಜೊತೆಗೆ, ತಮ್ಮ ಪ್ರಶಸ್ತಿಯನ್ನ ಪುನೀತ್ ರಾಜ್ ಕುಮಾರ್ ಹಾಗೂ ದರ್ಶನ್ ಗೆ ಅರ್ಪಿಸಿದರು.

ದಶಕದ ನಟ ಯಾರು?

ದಶಕದ ನಟ ಯಾರು?

ದಶಕದ ನಟ ಪ್ರಶಸ್ತಿಯನ್ನ ರಾಕಿಂಗ್ ಸ್ಟಾರ್ ಯಶ್ ಮುಡಿಗೇರಿಸಿಕೊಂಡರು.

ದಶಕದ ನಟಿ ರಾಧಿಕಾ ಪಂಡಿತ್

ದಶಕದ ನಟಿ ರಾಧಿಕಾ ಪಂಡಿತ್

ನಟಿ ರಾಧಿಕಾ ಪಂಡಿತ್ ದಶಕದ ನಟಿ ಪ್ರಶಸ್ತಿ ಪಡೆದರು.

ಡ್ರಾಮಾ ಜ್ಯೂನಿಯರ್ಸ್ ಮಕ್ಕಳು ಬಂದಿದ್ದರು

ಡ್ರಾಮಾ ಜ್ಯೂನಿಯರ್ಸ್ ಮಕ್ಕಳು ಬಂದಿದ್ದರು

ವಿಜೇತರೆಲ್ಲರಿಗೂ ರೆಬೆಲ್ ಸ್ಟಾರ್ ಅಂಬರೀಶ್ ಪ್ರಶಸ್ತಿ ನೀಡಿದರೆ, ಅಂಬರೀಶ್ ರವರಿಗೆ ಡ್ರಾಮಾ ಜ್ಯೂನಿಯರ್ಸ್ ನ ಮಕ್ಕಳು ಗೌರವಿಸಿ ಸನ್ಮಾನಿಸಿದರು. ನಟಿ ಪ್ರಿಯಾಮಣಿ, ಸುಮಲತಾ ಅಂಬರೀಶ್ ಹಾಗೂ ಪ್ರಿಯಾಂಕಾ ಉಪೇಂದ್ರ ಉಪಸ್ಥಿತರಿದ್ದರು.

ಲವಲವಿಕೆಯ ಕಾರ್ಯಕ್ರಮ

ಲವಲವಿಕೆಯ ಕಾರ್ಯಕ್ರಮ

ಗೋಲ್ಡನ್ ಸ್ಟಾರ್ ಗಣೇಶ್ ರವರ ಅತ್ಯಾಕರ್ಷಕ ನೃತ್ಯ, ಕಿರುತೆರೆ ಕಲಾವಿದರ ಅದ್ಭುತವಾದ ಡ್ಯಾನ್ಸ್ ಜೊತೆಗೆ ಮಾಸ್ಟರ್ ಆನಂದ್ ಹಾಗೂ ಅನುಶ್ರೀ ನಿರೂಪಣೆ ಕಾರ್ಯಕ್ರಮಕ್ಕಿದೆ.

English summary
Kannada Actor Sudeep, Yash, Actress Radhika Pandit were awarded at Zee Kannada Channel's 10 years celebration event. Check out the pics.
Please Wait while comments are loading...

Kannada Photos

Go to : More Photos