»   » ನಿರೂಪಕಿಯರ ರಾಣಿ 'ಡಿಡಿ' ಕಲ್ಯಾಣ ಚಿತ್ರಗಳು

ನಿರೂಪಕಿಯರ ರಾಣಿ 'ಡಿಡಿ' ಕಲ್ಯಾಣ ಚಿತ್ರಗಳು

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಆಕೆಯನ್ನು 'ಕಿಂಗ್ ಆಫ್ ಆಂಕರಿಂಗ್' ಎಂದೇ ಅಭಿಮಾನಿಗಳು ಹೆಮ್ಮೆಯಿಂದ ಕರೆಯುತ್ತಾರೆ. 'ನಿರೂಪಕಿಯರ ರಾಣಿ' ಎಂದು ಕರೆಸಿಕೊಳ್ಳಬೇಕಾದ ಸ್ಟಾರ್ ನಿರೂಪಕಿಯನ್ನು 'ಕಿಂಗ್' ಎಂದು ಕರೆಯಲು ಆಕೆಯ ಗತ್ತು ಗಮ್ಮತ್ತು, ತಾರೆಯರನ್ನು ಕಿಚಾಯಿಸುವ ಪರಿಯೆ ಕಾರಣ ಫ್ಯಾನ್ಸ್ ತಮ್ಮ ನೆಚ್ಚಿನ ತಾರೆಯ ಫೇಸ್ ಬುಕ್ ಪುಟಗಳಲ್ಲಿ ಹೇಳಿಕೊಂಡಿದ್ದಾರೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಟಿವಿ ನಿರೂಪಕಿ ದಿವ್ಯದರ್ಶಿನಿ ನೀಲಕಂಠನ್ ಅಲಿಯಾಸ್ 'ಡಿಡಿ' ಗೆ ಈಗ ಕಲ್ಯಾಣ ಯೋಗ.

ಚೆನ್ನೈನಲ್ಲಿ ಭಾನುವಾರ(ಜೂ.29) ತನ್ನ ಬಾಲ್ಯದ ಗೆಳೆಯ ಶ್ರೀಕಾಂತ್ ರವಿಚಂದ್ರನ್ ಜತೆ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾದ ಈಕೆಗೆ ಸೂಪರ್ ಸ್ಟಾರ್ ರಜನಿಕಾಂತ್, ಧನುಷ್, ವಿಜಯ್ ಸೇರಿದಂತೆ ತಮಿಳು ಚಿತ್ರರಂಗದ ಗಣ್ಯಾತಿಗಣ್ಯರು ಶುಭ ಹಾರೈಸಿದ್ದಾರೆ. [ನಿರೂಪಕಿಯರ ರಾಣಿ 'ಡಿಡಿ' ಕಲ್ಯಾಣ ಚಿತ್ರಗಳು]

ರಜನಿ, ಕಮಲ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಾರೆಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಹಿರಿಯ ನಿರ್ದೇಶಕ ಕೆ ಬಾಲಚಂದರ್ ಅವರ ಗರಡಿಯಿಂದ ಹೊರ ಬಂದ ಪ್ರತಿಭೆ ದಿವ್ಯದರ್ಶಿನಿ. ರೆಕ್ಕೈಕಟ್ಟಿಯ ಮನಸು ಮೂಲಕ ಕಲಾರಸಿಕರಿಗೆ ಡಿಡಿ ಪರಿಚಯವಾದರು. ದಿವ್ಯ ದರ್ಶಿನಿ ಹಾಗೂ ಶ್ರೀಕಾಂತ್ ರವಿಚಂದ್ರನ್ ಮದುವೆ ಚಿತ್ರಗಳು ಇಲ್ಲಿವೆ ನೋಡಿ..

'ಡಿಡಿ' ಗಿದ್ದಾರೆ ಲಕ್ಷಾಂತರ ಅಭಿಮಾನಿಗಳು
  

'ಡಿಡಿ' ಗಿದ್ದಾರೆ ಲಕ್ಷಾಂತರ ಅಭಿಮಾನಿಗಳು

ದಿವ್ಯದರ್ಶಿನಿಯ ಅಧಿಕೃತ ಫೇಸ್ ಬುಕ್ ಪುಟದ ಲೈಕ್ಸ್ ಗಳು 478,272 ನಷ್ಟಿದ್ದು ಇದು ಆಕೆ ಕಾರ್ಯಕ್ರಮ ನಿರೂಪಣೆ ಮಾಡುವ ವಿಜಯ್ ಟಿವಿ ಹೊಂದಿರುವ ಲೈಕ್ಸ್ ಗಳಿಗಿಂತಲೂ ಅಧಿಕ(ವಿಜಯ್ ಟಿವಿ 2,037,106 ಲೈಕ್ಸ್ ಹೊಂದಿದೆ೦

 ಮದುವೆ ಫೋಟೋಗೆ ಲೈಕ್ಸ್ ಸುರಿಮಳೆ
  

ಮದುವೆ ಫೋಟೋಗೆ ಲೈಕ್ಸ್ ಸುರಿಮಳೆ

ದಿವ್ಯದರ್ಶಿನಿ ಹಾಗೂ ಶ್ರೀಕಾಂತ್ ರವಿಚಂದ್ರನ್ ಮದುವೆ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಆದ ಕೆಲ ಗಂಟೆಗಳಲ್ಲೇ 1 ಲಕ್ಷಕ್ಕೂ ಮೀರಿದ ಲೈಕ್ಸ್ ಸಿಕ್ಕಿದೆ. (ಈ ಸಮಯಕ್ಕೆ 102,897 ) 4,455 ಬಾರಿ ಹಂಚಲ್ಪಟ್ಟಿದೆ. 6,762 ಜನ ಕಾಮೆಂಟ್ ಮಾಡಿದ್ದಾರೆ.

ಸಾಂಪ್ರದಾಯವಾದಿ ದಿವ್ಯ ದರ್ಶಿನಿ
  

ಸಾಂಪ್ರದಾಯವಾದಿ ದಿವ್ಯ ದರ್ಶಿನಿ

ವಿಜಯ್ ಟಿವಿಯ ತನ್ನ ಶೋಗಳಲ್ಲಿ ತಾರೆಯರನ್ನು ಕಿಚಾಯಿಸುತ್ತಾ, ಮಾರ್ಡನ್ ಡ್ರೆಸ್ ನಲ್ಲಿ ಮಿಂಚುವ ದಿವ್ಯ ದರ್ಶಿನಿ ತಮಿಳುನಾಡ್ವು ಸೇರಿದಂತೆ ದಕ್ಷಿಣ ಭಾರತೀಯದೆಲ್ಲೆಡೆ ಅಭಿಮಾನಿಗಳಲ್ಲೂ ಹೊಂದಲು ಕಾರಣ ಆಕೆ ಹಿಂದೂ ಸಂಪ್ರದಾಯವಾದಿ ಮೌಲ್ಯಗಳನ್ನು ಎತ್ತಿಹಿಡಿಯುವ ಬಗೆ ಕಂಡು.

ದಿವ್ಯ ದರ್ಶಿನಿ ಶೋಗಳು ಜನಪ್ರಿಯ
  

ದಿವ್ಯ ದರ್ಶಿನಿ ಶೋಗಳು ಜನಪ್ರಿಯ

14ನೇ ವಯಸ್ಸಿಗೆ ನಿರೂಪಕಿಯಾಗಿ ನ್ಯೂಟ್ರೀನ್ ಮಚಾಲ್ಯಾಕ್ಟೋ ಉಂಗಲ್ ತೀರ್ಪು ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದರು. ವಿಜಯ್ ಟಿವಿ ಟಿಆರ್ ಪಿ ಏರಿಸಿದ್ದರಲ್ಲಿ ಡಿಡಿ ಪಾತ್ರವೂ ಇದೆ. ಜೋಡಿ ನಂಬರ್ ಒನ್, ಬಾಯ್ಸ್ vs ಗರ್ಲ್ಸ್, ಸೂಪರ್ ಸಿಂಗರ್ ಟಿ20, ಡಿಡಿ ಟಾಕ್ ಶೋ ಎಲ್ಲವೂ ಜನ ಕಾದು ನೋಡುವ ಕಾರ್ಯಕ್ರಮ ಎನಿಸಿದೆ.

ಡಿಂಪಲ್ ದಿವ್ಯದರ್ಶಿನಿ ಪ್ರಶಸ್ತಿಗಳು ಸಂದಿವೆ.
  

ಡಿಂಪಲ್ ದಿವ್ಯದರ್ಶಿನಿ ಪ್ರಶಸ್ತಿಗಳು ಸಂದಿವೆ.

ವಿಕಟನ್ ನಿಂದ ಬೆಸ್ಟ್ ಮಹಿಳಾ ನಿರೂಪಕಿ ಎಂದು ಎರಡು ಬಾರಿ ಪ್ರಶಸ್ತಿ. ಟಿವಿ ಜಗತ್ತಿನಲ್ಲೇ ಹೀರೋಯಿನ್ ಮಟ್ಟಕ್ಕೆ ಸಂಭಾವನೆ ಪಡೆಯುವ ನಿರೂಪಕಿಯಾಗಿ ದಿವ್ಯ ದರ್ಶಿನಿ ಬೆಳೆದಿದ್ದಾರೆ.

 ದಿವ್ಯದರ್ಶಿನಿ ಪತಿ ಶ್ರೀಕಾಂತ್ ಫ್ಯಾಮಿಲಿ
  

ದಿವ್ಯದರ್ಶಿನಿ ಪತಿ ಶ್ರೀಕಾಂತ್ ಫ್ಯಾಮಿಲಿ

ಮದುವೆ ಸಂದರ್ಭದಲ್ಲಿ ದಿವ್ಯದರ್ಶಿನಿ ಪತಿ ಶ್ರೀಕಾಂತ್ ಫ್ಯಾಮಿಲಿ ಫೋಟೋ

ಸಾಮಾಜಿಕ ಜಾಲ ತಾಣಗಳಲ್ಲಿ ಶುಭ ಹಾರೈಕೆ
  

ಸಾಮಾಜಿಕ ಜಾಲ ತಾಣಗಳಲ್ಲಿ ಶುಭ ಹಾರೈಕೆ

ಸಾಮಾಜಿಕ ಜಾಲ ತಾಣಗಳಾದ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಅಭಿಮಾನಿಗಳು ದಿವ್ಯದರ್ಶಿನಿ ಹಾಗೂ ಅಶೋಕ್ ದಂಪರಿಗೆ ಶುಭ ಹಾರೈಸಿದ್ದಾರೆ.

ಡಿಡಿ ಸ್ಮೈಲ್ ಗೆ ಎಲ್ಲರೂ ಫಿದಾ
  

ಡಿಡಿ ಸ್ಮೈಲ್ ಗೆ ಎಲ್ಲರೂ ಫಿದಾ

ಡಿಡಿ ಸ್ಮೈಲ್ ಗೆ ಎಲ್ಲರೂ ಫಿದಾ ಆಗದವರೇ ಇಲ್ಲ. ಕಾಫಿವಿಥ್ ಡಿಡಿ ಕಾರ್ಯಕ್ರಮದಲ್ಲಿ ಎದುರಿಗೆ ಯಾವ ಸೂಪರ್ ಸ್ಟಾರ್ ಇದ್ದರೂ ತನ್ನ ವೃತ್ತಿ ಪರತೆ ಬಿಡದೆ ಶೋ ನಡೆಸಿದ ಜಾಣ್ಮೆ ದಿವ್ಯ ಅವರಿಗಿದೆ.

English summary
VJ Divyadarshini, who is popularly known as DD, tied the knot on Sunday (June 29). She married her childhood friend Srikanth Ravichandran.Here, we bring you their marriage pics. Find the photos on the slideshow...
Please Wait while comments are loading...

Kannada Photos

Go to : More Photos