twitter
    For Quick Alerts
    ALLOW NOTIFICATIONS  
    For Daily Alerts

    ಐಪಿಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಮಾಡಿರುವ ಸಾಧನೆ ಏನು.?

    By Harshitha
    |

    ಸಾಧನೆಯ ಸೀಟ್ ನ ಬರೀ ಚಿತ್ರರಂಗದವರಿಗೆ ಮಾತ್ರ ಸೀಮಿತಗೊಳಿಸದೆ, ಈ ಬಾರಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಜೀ ಕನ್ನಡ ವಾಹಿನಿ ಆಹ್ವಾನಿಸಿದ್ದು ಐ.ಪಿ.ಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ರವರನ್ನ.!

    ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ 'ಮಲೆನಾಡ ಹುಲಿ', 'ಕರ್ನಾಟಕದ ಸಿಂಗಂ' ಎಂದೇ ಖ್ಯಾತಿ ಗಳಿಸಿರುವ ರವಿ.ಡಿ.ಚನ್ನಣ್ಣನವರ್ ಅಂತಹ ಸಾಧನೆ ಏನು ಮಾಡಿದ್ದಾರೆ ಅಂತ ನೀವು ಯೋಚಿಸುತ್ತಿದ್ದರೆ, ಇಲ್ಲಿದೆ ನೋಡಿ ಅವರ ಸಾಧನೆಯ ಪಟ್ಟಿ....

    ರವಿ.ಡಿ.ಚನ್ನಣ್ಣನವರ್ ಕುರಿತು...

    ರವಿ.ಡಿ.ಚನ್ನಣ್ಣನವರ್ ಕುರಿತು...

    ಹೆಸರು - ರವಿ.ಡಿ.ಚನ್ನಣ್ಣನವರ್
    ಜನ್ಮ ದಿನಾಂಕ - ಜುಲೈ 23, 1985
    ಊರು - ಗದಗ ಜಿಲ್ಲೆಯ ಕೆಳೂರ್
    ತಂದೆ - ಧ್ಯಾಮಪ್ಪ ಚೆನ್ನಣ್ಣನವರ್
    ತಾಯಿ - ರತ್ನಮ್ಮ
    ಸಹೋದರ - ರಾಘವೇಂದ್ರ
    ಪತ್ನಿ - ಡಾ.ತ್ರಿವೇಣಿ
    ಪುತ್ರಿ - ಭೂಮಿ

    ವಿದ್ಯಾಭ್ಯಾಸ

    ವಿದ್ಯಾಭ್ಯಾಸ

    'ಬಿ.ಎ' ಪದವಿ ಮುಗಿಸಿದ ಬಳಿಕ, 'ಪಬ್ಲಿಕ್ ಆಡ್ಮಿನಿಸ್ಟ್ರೇಷನ್' ನಲ್ಲಿ ಎಂ.ಎ ಪದವಿ ಪಡೆದ ರವಿ.ಡಿ.ಚನ್ನಣ್ಣನವರ್, 'ಮಾಸ್ ಕಮ್ಯೂನಿಕೇಷನ್ ಮತ್ತು ಜರ್ನಲಿಸಂ' ನಲ್ಲಿ ಪಿ.ಜಿ ಡಿಪ್ಲೊಮ ಮುಗಿಸಿದ್ದಾರೆ. [ರವಿ ಬಾಲ್ಯದ ದಿನಗಳ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿಗಳು]

    23ನೇ ವರ್ಷ ವಯಸ್ಸಿಗೆ ಐಪಿಎಸ್ ಪಾಸ್

    23ನೇ ವರ್ಷ ವಯಸ್ಸಿಗೆ ಐಪಿಎಸ್ ಪಾಸ್

    2008 ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ, ತಮ್ಮ 23ನೇ ವಯಸ್ಸಿನಲ್ಲಿಯೇ ಐಪಿಎಸ್ ಗೆ ಆಯ್ಕೆ ಆದ ರವಿ.ಡಿ.ಚನ್ನಣ್ಣನವರ್ ಗೆ 2011 ರಲ್ಲಿ ಬೆಳಗಾಂ ನಲ್ಲಿ ಪೋಸ್ಟಿಂಗ್ ಆಯ್ತು. ['ಅಭಿ ಪಿಕ್ಚರ್ ಬಾಕಿ ಹೈ' - ರವಿ ಪವರ್ ಫುಲ್ ಮಾತುಗಳು]

    ರವಿ.ಡಿ.ಚನ್ನಣ್ಣನವರ್ ಇಟ್ಟ ದಿಟ್ಟ ಹೆಜ್ಜೆ ಪ್ರಶಂಸನೀಯ

    ರವಿ.ಡಿ.ಚನ್ನಣ್ಣನವರ್ ಇಟ್ಟ ದಿಟ್ಟ ಹೆಜ್ಜೆ ಪ್ರಶಂಸನೀಯ

    ಹೊಸಪೇಟೆ, ಬೆಂಗಳೂರು, ದಾವಣೆಗೆರೆ, ಹಾಸನ, ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಮೈಸೂರಿನಲ್ಲಿ ರವಿ.ಡಿ.ಚನ್ನಣ್ಣನವರ್ ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲ ಜಿಲ್ಲೆಗಳಲ್ಲೂ ಎಸ್.ಪಿ ಆಗಿ ರವಿ.ಡಿ.ಚನ್ನಣ್ಣನವರ್ ಇಟ್ಟ ದಿಟ್ಟ ಹೆಜ್ಜೆಗಳು ಪ್ರಶಂಸನೀಯ.

    ಚಾಣಾಕ್ಷ ಪೊಲೀಸ್

    ಚಾಣಾಕ್ಷ ಪೊಲೀಸ್

    2015 ರಲ್ಲಿ ಶಿವಮೊಗ್ಗದಲ್ಲಿ ಗಣೇಶ ಹಬ್ಬದ ಬಂದೋಬಸ್ತ್ ನ ಚಾಣಾಕ್ಷತನದಿಂದ ನಿರ್ವಹಿಸಿ ಕರ್ನಾಟಕದ ಗಮನ ಸೆಳೆದವರು ರವಿ.ಡಿ.ಚನ್ನಣ್ಣನವರ್.

    ಹಲವಾರು ಜನಪರ ಕಾರ್ಯಕ್ರಮಗಳು

    ಹಲವಾರು ಜನಪರ ಕಾರ್ಯಕ್ರಮಗಳು

    ಹೆಣ್ಣುಮಕ್ಕಳ ರಕ್ಷಣೆಗೆ 'ಓಬವ್ವ ಪಡೆ', 'ಸ್ವಯಂ ರಕ್ಷಣಾ ತರಬೇತಿ' ಕಾರ್ಯಕ್ರಮ, 'ಜನ ಸ್ನೇಹಿ ಪೊಲೀಸ್', 'ಗ್ರಾಮ ವಾಸ್ತವ್ಯ', ಪೊಲೀಸ್ ಸಿಬ್ಬಂದಿ ಸಹಾಯಕ್ಕೆ 'ಪೊಲೀಸ್ ಕ್ಯಾಂಟೀನ್' ಹಾಗೂ 'ಪೊಲೀಸ್ ಮೆಡಿಕಲ್', ರೈತರಿಗೆ ಸಹಕಾರಿಯಾಗಲು 'ನಮ್ಮೂರಲ್ಲೊಬ್ಬ ಸಾಧಕ', ಯುವಕರಿಗೆ ಸಹಕಾರಿ ಆಗಲು ಉಚಿತ 'ಯು.ಪಿ.ಎಸ್.ಸಿ ಕಾರ್ಯಗಾರ'... ಹೀಗೆ ಹಲವಾರು ಜನಪರ ಕಾರ್ಯಕ್ರಮಗಳನ್ನ ಜಾರಿಗೆ ತಂದಿದ್ದಾರೆ ರವಿ.ಡಿ.ಚನ್ನಣ್ಣನವರ್.

    ನಾನಾ ಕೇಸ್ ಗಳು

    ನಾನಾ ಕೇಸ್ ಗಳು

    ಎಂಟು ವರ್ಷಗಳ ವೃತ್ತಿ ಜೀವನದಲ್ಲಿ 1300 ಜೂಜು ದಂಧೆ ಕೇಸ್, 1400 ಕ್ಕೂ ಹೆಚ್ಚು ಅಬಕಾರಿ ರೇಡ್, 35ಕ್ಕೂ ಹೆಚ್ಚು ಗಾಂಜಾ ಕೇಸ್, 50 ವೇಶ್ಯಾವಾಟಿಕೆ ಅಡ್ಡಗಳ ಮೇಲೆ ದಾಳಿ, ಸುಮಾರು 950 ಅಪರಾಧ ಪತ್ತೆ ಮತ್ತು ಸ್ವತ್ತು ಕಳವು ಕೇಸ್, 715 ಅಕ್ರಮ ಮರಳು ಸಾಗಾಣಿಕೆ ಕೇಸ್ ಗಳನ್ನ ರವಿ ಹಾಗೂ ಅವರ ತಂಡ ಯಶಸ್ವಿ ಆಗಿ ನಿರ್ವಹಿಸಿದೆ.

    English summary
    IPS Officer Ravi.D.Channannavar had taken part in Zee Kannada Channel's popular show Weekend with Ramesh-3. This article gives you an insight on Ravi.D.Channannavar's achievements.
    Tuesday, May 2, 2017, 16:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X