twitter
    For Quick Alerts
    ALLOW NOTIFICATIONS  
    For Daily Alerts

    ಭಾವಲೋಕದ ರಾಯಭಾರಿ ಕಾಯ್ಕಿಣಿ ಪ್ರೇಮಕಥೆ ಸುಂದರ-ಸುಮಧುರ!

    By Suneel
    |

    ಜಯಂತ್ ಕಾಯ್ಕಿಣಿ ರವರು 'ಮಿಲನ', 'ಗೆಳೆಯ', 'ಮುಂಗಾರು ಮಳೆ', 'ಗಾಳಿಪಟ' ಗಳಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯರ ಬಗ್ಗೆ ಬರೆದಿರುವ ಹಾಡುಗಳು ಈಗಲು ಸಹ ಯುವಕ-ಯುವತಿಯರ ಬಾಯಲ್ಲಿ ಗುನುಗುತ್ತಿರುತ್ತವೆ. ಉದಾಹರಣೆ 'ಮಿಂಚಾಗಿ ನೀನು ಬರಲು', 'ನಿಂನಿಂದಲೇ ನಿಂನಿಂದಲೇ', 'ಈ ಸಂಜೆ ಯಾಕಾಗಿದೆ ನೀ ನಿಲ್ಲದೇ' ಎಂಬ ಹೃದಯ ಗೀತೆಗಳು.[ಕಾಯ್ಕಿಣಿ ಸಾಹಿತ್ಯವನ್ನು ಮುಕ್ತಕಂಠದಿಂದ ಹೊಗಳಿದ ಪ್ರಕಾಶ್ ರೈ, ಸೀತಾರಾಂ]

    ಈ ಹಾಡುಗಳನ್ನು ಕೇಳಿದ ಎಲ್ಲರಿಗೂ ಮೂಡುವ ಒಂದು ಕುತೂಹಲ ಅಂದ್ರೆ... ಇಷ್ಟೊಂದು ಅದ್ಭುತವಾದ ಹಾಡುಗಳನ್ನು ಬರೆಯುವ ಜಯಂತ್ ಕಾಯ್ಕಿಣಿ ಅವರದ್ದು ಲವ್ ಮ್ಯಾರೇಜ್ ಇರಬಹುದಾ ಅಥವಾ ಆರೇಂಜ್ಡ್ ಮ್ಯಾರೇಜ್ ಇರಬಹುದಾ ಎಂದು ತಿಳಿದುಕೊಳ್ಳುವುದು. ಸಾಹಿತಿ ಕಾಯ್ಕಿಣಿ ಅವರದ್ದು ಲವ್ ಕಮ್ ಆರೇಂಜ್ಡ್ ಮ್ಯಾರೇಜ್. ಹಾಗಿದ್ರೆ ಅವರ ಲವ್ ಸ್ಟೋರಿ ಹೇಗಿತ್ತು ಎಂದು ತಿಳಿದುಕೊಳ್ಳುವ ಕೂತೂಹಲ ಹೆಚ್ಚಾಗೆ ಇರುತ್ತೆ ಅಲ್ವಾ?..

    ಆ ಇಂಟ್ರೆಸ್ಟಿಂಗ್ ಸ್ಟೋರಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಿವೀಲ್ ಆಗಿದೆ. ತಮ್ಮ ಪ್ರೇಮ ಕಥೆ ಬಗ್ಗೆ ಜಯಂತ್ ಕಾಯ್ಕಿಣಿ ಮತ್ತು ಪತ್ನಿ ಸ್ಮಿತಾ ಕಾಯ್ಕಿಣಿ ಅವರು ಬಾಯಿಬಿಟ್ಟಿದ್ದಾರೆ. ಮುಂದೆ ಓದಿ..

    ಬಾಂಬೆಯಲ್ಲಿ ಶುರುವಾದ ಕಾಯ್ಕಿಣಿ ಪ್ರೇಮಕಥೆ

    ಬಾಂಬೆಯಲ್ಲಿ ಶುರುವಾದ ಕಾಯ್ಕಿಣಿ ಪ್ರೇಮಕಥೆ

    ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು ಸ್ಮಿತಾ ಕಾಯ್ಕಿಣಿ ರವರ ಪ್ರೇಮ ಶುರುವಾಗಿದ್ದು ಬಾಂಬೆಯಲ್ಲಿ ಅವರು ಬಯೋ ಕೆಮಿಸ್ಟ್ ಆಗಿ ವರ್ಕ್ ಮಾಡುವಾಗ.[ಯುವ ಬರಹಗಾರರಿಗೆ ಜಯಂತ್ ಕಾಯ್ಕಿಣಿ'ಯ ಸ್ಫೂರ್ತಿಯ ಕಿವಿಮಾತುಗಳಿವು..!]

    ಪ್ರಾಡಕ್ಟ್ ಕ್ವಾಲಿಟಿ ಓಕೆ ಮಾಡುತ್ತಿದ್ದ ಸ್ಮಿತಾ, ಒಮ್ಮೆ ಕಾಯ್ಕಿಣಿಯನ್ನೇ ಓಕೆ ಮಾಡಿದ್ರು

    ಪ್ರಾಡಕ್ಟ್ ಕ್ವಾಲಿಟಿ ಓಕೆ ಮಾಡುತ್ತಿದ್ದ ಸ್ಮಿತಾ, ಒಮ್ಮೆ ಕಾಯ್ಕಿಣಿಯನ್ನೇ ಓಕೆ ಮಾಡಿದ್ರು

    ಕಾಯ್ಕಿಣಿ ರವರು ಬಾಂಬೆಯಲ್ಲಿ ಬಯೋ ಕೆಮಿಸ್ಟ್ ಆಗಿ ಕ್ವಾಲಿಟಿ ಕಂಟ್ರೋಲ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಸ್ಮಿತಾ ರವರು ಕ್ವಾಲಿಟಿ ಕಂಟ್ರೋಲ್ ಇಂಜಿನಿಯರ್ ಆಗಿದ್ದರು. ಕಾಯ್ಕಿಣಿ ರೆಡಿ ಮಾಡುತ್ತಿದ್ದ ವಿಕ್ಸ್ ಪೇಪರ್ ಹಬ್ ಪ್ರಾಡಕ್ಟ್ ಗಳನ್ನು ತೆಗೆದುಕೊಂಡು ಹೋಗಿ ಸ್ಮಿತಾ ರವರಿಗೆ ಕೊಡುತ್ತಿದ್ದರು. ಅವರು ವಸ್ತುಗಳ ಗುಣಮಟ್ಟ ಚೆಕ್ ಮಾಡಿ ಓಕೆ ಮಾಡಿದ ನಂತರ ಪಬ್ಲಿಕ್ ಗೆ ಪ್ರಾಡಕ್ಟ್ ಹೋಗುತ್ತಿತ್ತು. ಕೆಲವೊಮ್ಮೆ ರಿಜೆಕ್ಟ್ ಮಾಡ್ತಿದ್ರು. ಆದ್ರೆ ಒಂದು ದಿವಸ ಸ್ಮಿತಾ ಅವರು ಕಾಯ್ಕಿಣಿ ಅವರನ್ನೇ ಓಕೆ ಮಾಡಿದ್ದರು.[ಮುಂಬೈ ಎಂಬ ಮಹಾನಗರ ಕಾಯ್ಕಿಣಿ ಕಣ್ಣಿಗೆ ಕಂಡಿದ್ದು ಹೀಗೆ..!]

    ಮೊದಲ ನೋಟದಲ್ಲೇ ಹ್ಯಾಡ್ಸಮ್ ಆಗಿ ಕಾಣಿಸಿದ್ದ ಕಾಯ್ಕಿಣಿ

    ಮೊದಲ ನೋಟದಲ್ಲೇ ಹ್ಯಾಡ್ಸಮ್ ಆಗಿ ಕಾಣಿಸಿದ್ದ ಕಾಯ್ಕಿಣಿ

    "ನನ್ನ ಭಾಷೆ ಮತ್ತು ಜಯಂತ್ ಭಾಷೆ ಸ್ವಲ್ಪ ಡಿಫರೆನ್ಸ್ ಆಗಿತ್ತು. ಎಷ್ಟು ಅಂದ್ರೆ ಅರ್ಥ ಆಗೋದೆ ಇಲ್ಲ. ನಾನು ಫಸ್ಟ್ ಟೈಮ್ ಅವರನ್ನು( ಜಯಂತ್ ಕಾಯ್ಕಿಣಿ) ನೋಡಿದಾಗ ತುಂಬಾ ಹ್ಯಾಂಡ್ಸಮ್ ಆಗಿದ್ದರು. ಆದ್ರೆ ಸ್ವಲ್ಪ ಭಯ ಆಗಿತ್ತು. ಯಾಕಂದ್ರೆ ಅಷ್ಟೊಂದು ಜೋಕ್ ಕ್ರ್ಯಾಕ್ ಮಾಡ್ತಿದ್ರು" - ಸ್ಮಿತಾ ಕಾಯ್ಕಿಣಿ, ಜಯಂತ್ ಕಾಯ್ಕಿಣಿ ಪತ್ನಿ

    ಪರಿಚಯ ಆಗಿದ್ದು ಲೇಟ್

    ಪರಿಚಯ ಆಗಿದ್ದು ಲೇಟ್

    "ಆರು ತಿಂಗಳ ನಂತರ ಹೆಚ್ಚು ಪರಿಚಯವಾಗಿ ಮಾತಾಡೋಕೆ ಆರಂಭಿಸಿದ್ವಿ. ನನಗೆ ಹೊಟ್ಟೆ ನೋವು ಬರುವಷ್ಟು ಜೋಕ್ ಮಾಡ್ತಿದ್ರು. ನನ್ನ ಎದುರು "ಆಸೂ ಸಮಜ್ ಕೆ ಕ್ಯೂ ಮುಜೇ" ಸಾಂಗ್ ಹಾಡ್ತಿದ್ರು. ಅಲ್ಲದೇ ತುಂಬಾ ಚೆನ್ನಾಗಿ ಹಾರ್ಮೋನಿಯಂ ಪ್ಲೇ ಮಾಡ್ತಿದ್ರು. ನನಗೆ ಇಷ್ಟವಾಗುವ ಎಲ್ಲ ಗುಣಗಳು ಇದ್ದವು. ಅದಿಕ್ಕೆ ನಾನು ಅವರನ್ನು ಇಷ್ಟಪಡಲು ಸ್ಟಾರ್ಟ್ ಮಾಡಿದೆ. ಅವರು ಇಷ್ಟಪಟ್ರು. ಹಾಗೆ ಶುರುವಾಯಿತು ಲವ್" - ಸ್ಮಿತಾ ಕಾಯ್ಕಿಣಿ, ಜಯಂತ್ ಕಾಯ್ಕಿಣಿ ಪತ್ನಿ

    ಕಾಯ್ಕಿಣಿಗೆ ಸ್ವಲ್ಪವು ಸಿಟ್ಟು ಬರೊಲ್ಲ!

    ಕಾಯ್ಕಿಣಿಗೆ ಸ್ವಲ್ಪವು ಸಿಟ್ಟು ಬರೊಲ್ಲ!

    "ನನಗೆ ಮದುವೆ ಆದಾಗ ಅಡುಗೆ ಮಾಡೋಕೆ ಬರುತ್ತಿರಲಿಲ್ಲ. ಆದ್ರೆ ಕಾಯ್ಕಿಣಿ ಅವರೇ ಎಲ್ಲಾ ಹೇಳಿಕೊಡ್ತಿದ್ರು. ಹೋಗ್ತಾ ಹೋಗ್ತಾ ಕಲಿತೆ. ಆದ್ರೆ ಒಂದು ದಿನವು ಅಡಿಗೆ ಬಗ್ಗೆ ಏನು ಕಾಮೆಂಟ್ ಮಾಡ್ಲಿಲ್ಲ. ಡಾಮಿನೇಟ್ ಸಹ ಮಾಡ್ಲಿಲ್ಲ. ಈಗಲೂ ಮಾಡೊಲ್ಲ. ಅಡಿಗೆಯಲ್ಲಿ ಉಪ್ಪು ಕಡಿಮೆ-ಹೆಚ್ಚಾದಾಗಲು ಅವರಿಗೆ ಸಿಟ್ಟು ಕೂಡ ಬರ್ತಿರ್ ಲಿಲ್ಲ" - ಸ್ಮಿತಾ ಕಾಯ್ಕಿಣಿ, ಜಯಂತ್ ಕಾಯ್ಕಿಣಿ ಪತ್ನಿ

    ಸ್ಮಿತಾ ಕಾಯ್ಕಿಣಿಗೆ ಮರೆಯಲಾಗದ ಸಂಗತಿ

    ಸ್ಮಿತಾ ಕಾಯ್ಕಿಣಿಗೆ ಮರೆಯಲಾಗದ ಸಂಗತಿ

    " ಕಾಯ್ಕಿಣಿ ರವರು 'ಸೇವಂತಿ ಪ್ರಸಂಗ' ನಾಟಕ ಬರೆಯುತಿದ್ರು. ಆಗ ನಮ್ಮ ಮಗುಗೆ ಕೇವಲ ಮೂರು ತಿಂಗಳಾಗಿತ್ತು. ಆ ಸಮಯದಲ್ಲಿ ನಮ್ಮ ಮನೆ ತುಂಬಾ ಸಣ್ಣದಿತ್ತು. ಕೇವಲ 500 ಸ್ಕ್ವೇರ್ ಫೀಟ್ ಇತ್ತು. ಅಷ್ಟರಲ್ಲಿ ಮ್ಯಾನೇಜ್ ಮಾಡಬೇಕಿತ್ತು. ಆಗ ಅವರು ನಮಗೆ ತೊಂದರೆ ಆಗಬಾರದು ಎಂದು ಕಿಚನ್ ನಲ್ಲಿ ಕುಳಿತು ಇಡೀ ರಾತ್ರಿ ನಾಟಕ ಬರೆಯುತ್ತಿದ್ದರು. ಆ ಒಂದು ಸಂದರ್ಭವನ್ನು ನಾನು ಎಂದೂ ಮರೆಯಲು ಸಾಧ್ಯವಿಲ್ಲ" -ಸ್ಮಿತಾ ಕಾಯ್ಕಿಣಿ, ಜಯಂತ್ ಕಾಯ್ಕಿಣಿ ಪತ್ನಿ

    English summary
    Indian Poet, Short Stories Author and a Lyricist Jayant Kaikini's Love Story revealed in 'Weekend With Ramesh'.
    Wednesday, April 26, 2017, 18:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X