»   » ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಪಬ್ಲಿಕ್ ಟಿವಿ ರಂಗನಾಥ್

ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಪಬ್ಲಿಕ್ ಟಿವಿ ರಂಗನಾಥ್

Posted by:
Subscribe to Filmibeat Kannada

ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ನಡೆಸಿಕೊಡುವ ಟಾಕ್ ಶೋ 'ವೀಕೆಂಡ್ ವಿಥ್ ರಮೇಶ್' ನಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್ .ಆರ್ ರಂಗನಾಥ್ ಈ ವಾರದ ಅತಿಥಿಯಾಗಿದ್ದಾರೆ.

ಕಳೆದ ಎರಡು ವಾರಗಳಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ರವಿಚಂದ್ರನ್ ಈ ಶೋನಲ್ಲಿ ಭಾಗವಹಿಸಿದ್ದು, ಜನಮೆಚ್ಚುಗೆ ಪಡೆದಿದ್ದು, ರಮೇಶ್ ಅವರ ನಿರೂಪಣೆ, ಅತಿಥಿಗಳ ಬದುಕಿನ ಕಥೆ ಎಲ್ಲವೂ ಪ್ರೇಕ್ಷಕರಿಗೆ ಸಕತ್ ಇಷ್ಟವಾಗಿದೆ. [ರಮೇಶ್-ಕಮಲ್ 'ಉತ್ತಮ ವಿಲನ್' ಫಿನಿಷ್]

ಸಿನಿಮಾ ಮಂದಿ ಅಲ್ಲದೆ ಹೆಸರಾಂತ ಕಲಾವಿದರು, ಪತ್ರಕರ್ತರು, ರಾಜಕೀಯ ವ್ಯಕ್ತಿಗಳು ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಕಸ್ತೂರಿ ವಾಹಿನಿಯಲ್ಲಿ 'ಪ್ರೀತಿಯಿಂದ ರಮೇಶ್', ಈಟಿವಿ ಕನ್ನಡದಲ್ಲಿ ರಾಜ ರಾಣಿ ರಮೇಶ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದ ರಮೇಶ್ ಅವರು. ಇದೀಗ ಈ ವಿಭಿನ್ನ ಟಾಕ್ ಶೋ ಮೂಲಕ ಮತ್ತೊಮ್ಮೆ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ರಿಂದ 10ಕ್ಕೆ ಮೂಡಿಬರಲಿದೆ.

ಪಬ್ಲಿಕ್ ಟಿವಿ ರಂಗ ಅವರ ಬಗ್ಗೆ
  

ಪಬ್ಲಿಕ್ ಟಿವಿ ರಂಗ ಅವರ ಬಗ್ಗೆ

ಮೈಸೂರು ಮೂಲದ ಎಚ್,ಆರ್ ರಂಗನಾಥ್ ಅವರು ತನ್ನ ನೇರ ನಿಷ್ಠುರ ಮಾತುಗಾರಿಕೆಗೆ ಹೆಸರುವಾಸಿ. ವರದಿಗಾರ, ಕ್ರೈಂ ರಿಪೋರ್ಟರ್ ಆಗಿ ಕನ್ನಡಪ್ರಭ ಸಂಪಾದಕರಾದವರು.

ನಂತರ ಮುದ್ರಣ ಮಾಧ್ಯಮ ಬಿಟ್ಟು ಟಿವಿ ಮಾಧ್ಯಮಕ್ಕೆ ಜಿಗಿದು ಸುವರ್ಣ ವಾಹಿನಿ ಮುಖ್ಯಸ್ಥರಾಗಿದ್ದವರು. ಈಗ ಪಬ್ಲಿಕ್ ಟಿವಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಶಿಷ್ಟ ಮ್ಯಾನರಿಸಂ, ಸ್ಟೈಲ್ ಹೊಂದಿರುವ ರಂಗ
  

ವಿಶಿಷ್ಟ ಮ್ಯಾನರಿಸಂ, ಸ್ಟೈಲ್ ಹೊಂದಿರುವ ರಂಗ

ವಿಶಿಷ್ಟ ಮ್ಯಾನರಿಸಂ, ಸ್ಟೈಲ್ ಹೊಂದಿರುವ ರಂಗನಾಥ್ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ಒಂದು ಮಾತು ಆಗಾಗ ಹರಿದಾಡುತ್ತಿರುತ್ತದೆ. 'You Love him, You Hate him, But You can't ignore him' ಇದು ರಂಗ ಅವರ ಸ್ಪೆಷಾಲಿಟಿ.

ಕುರುಚಲು ಗಡ್ಡ, ಎರಡು ಜೇಬುಳ್ಳ ಬುಷ್ ಶರ್ಟ್, ಟೀ ಶರ್ಟ್ ಧರಿಸಿ ಟಿವಿ ಮುಂದೆ ಕಾಣಿಸಿಕೊಳ್ಳುವ ರಂಗ ಅವರ ಮಾತು, ವಿಶ್ಲೇಷಣೆ, ಬೈಗುಳ ಕೇಳಲು ಚೆಂದ.

ರಂಗ ಅವರ ಬಗ್ಗೆ ಕುತೂಹಲ ಇದ್ದೇ ಇದೆ
  

ರಂಗ ಅವರ ಬಗ್ಗೆ ಕುತೂಹಲ ಇದ್ದೇ ಇದೆ

ಪ್ರತಿದಿನ ನ್ಯೂಸ್ ಕೆಫೆಯಿಂದ ರಾತ್ರಿ ತನಕ ರಂಗ ಅವರನ್ನು ಕಣ್ತುಂಬಿಸಿಕೊಂಡು ತಲೆಗಿಷ್ಟು ಬುದ್ಧಿ ತುಂಬಿಸಿಕೊಂಡ ಪ್ರೇಕ್ಷಕರಿಗೆ ಇಂದಿಗೂ ಅವರ ಕುಟುಂಬ ಪರಿವಾರ ಹಾಗೂ ಹವ್ಯಾಸದ ಬಗ್ಗೆ ಕುತೂಹಲವಿದ್ದೇ ಇದೆ.

ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚಾಗಿ ಮಾತನಾಡದ ರಂಗ ಅವರು ಶಾಸ್ತ್ರೀಯ ಸಂಗೀಯ ಬಲ್ಲವರು. ಅಚ್ಚುಕಟ್ಟಾಗಿ ಹಾಡಬಲ್ಲರು. ಅದರೆ, ಇತ್ತೀಚೆಗೆ ಸಿಗರೇಟು ಸೇವನೆ ಇದಕ್ಕೆ ಆಸ್ಪದ ನೀಡಿಲ್ಲವಂತೆ. ರಮೇಶ್ ಶೋ ನಲ್ಲಿ ರಂಗ ಅವರು ಹಸನ್ಮುಖದೊಂದಿಗೆ ತಮ್ಮ ಪರಿವಾರ, ಆಪ್ತೇಷ್ಟರ ಜತೆ ಕಲೆತು ಬೆರೆಯುವುದನ್ನು ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ.

ಎಚ್ ಆರ್ ರಂಗನಾಥ್ ಅವರು ಅತಿಥಿಯಾಗಿ ಬರುವ ಶೋನ ಟೀಸರ್ ಇಲ್ಲಿದೆ ನೋಡಿ

ಶೋನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್
  

ಶೋನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್

ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ರವಿಚಂದ್ರನ್ ಅವರು ಅತಿಥಿಯಾಗಿದ್ದ ಕಾರ್ಯಕ್ರಮ ಆಗಸ್ಟ್ 9-10ರಂದು ಈ ಪ್ರಸಾರವಾಗಿತ್ತು.

ನಾನು ಮತ್ತು ಹಂಸಲೇಖ ಪರಮ ಸ್ನೇಹಿತರಂತೆ ಇದ್ದೆವು. ಅವರ ಮೇಲೆ ನಾನು ಬಹಳಷ್ಟು ವಿಶ್ವಾಸ ಇಟ್ಟುಕೊಂಡಿದ್ದೆ. ಆದರೆ 'ಯಾರೇ ನೀನು ಚೆಲುವೆ' ಚಿತ್ರದ ಸಮಯದಲ್ಲಿ ಹಂಸಲೇಖ ನನ್ನ ಮೇಲೆ ವಿಶ್ವಾಸವಿಡಲಿಲ್ಲ ಎಂದು ರವಿಚಂದ್ರನ್ ಕಾರ್ಯಕ್ರಮದಲ್ಲಿ ಬೇಸರದ ಮಾತನ್ನಾಡಿದ್ದಾರೆ. ಹಂಸಲೇಖ ಜೊತೆ ವಿರಸಕ್ಕೆ ಕಾರಣವನ್ನು ರವಿ ಬಿಚ್ಚಿಟ್ಟಿದ್ದರು[ಪೂರ್ಣ ವರದಿ ಇಲ್ಲಿ ಓದಿ]

ರಮೇಶ್ ಶೋನಲ್ಲಿ ಪುನೀತ್
  

ರಮೇಶ್ ಶೋನಲ್ಲಿ ಪುನೀತ್

ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ರವಿಚಂದ್ರನ್ ಅವರು ಅತಿಥಿಯಾಗಿದ್ದ ಕಾರ್ಯಕ್ರಮ ಆಗಸ್ಟ್ 2-3ರಂದು ಈ ಪ್ರಸಾರವಾಗಿತ್ತು.

ರಾಜಕುಮಾರ್ ಮಗನಾಗಿ ಮೇಲೆ ಬಂದವನು ನಾನು, ಹಾಗೆಯೇ ಮುಂದುವರಿಯಲು ಇಷ್ಟ ಪಡುತ್ತೇನೆ. ಕನ್ನಡ ಚಿತ್ರರಂಗ ಆಳುವವರು ನಾವಲ್ಲ ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀಟಿವಿ ಶೋನಲ್ಲಿ ಹೇಳಿದ್ದು ಭಾರಿ ಚರ್ಚೆಗೊಳಲ್ಪಟ್ಟಿದೆ[ಅಪ್ಪು ಕಥೆ ಇಲ್ಲಿ ಓದಿ]

English summary
Kannada Journalist, Public TV chief HR Ranganath will appear as guest in Zee TV Kannada's popular show Weekend with Ramesh. The Show will be telecasted on Saturday and Sunday 9 PM.
Please Wait while comments are loading...

Kannada Photos

Go to : More Photos