»   » 'ದಾರಿ ತಪ್ಪಿದ ಮಗ' ಜಗ್ಗೇಶ್ ಗೆ ಅಮ್ಮ ನಂಜಮ್ಮ ಬುದ್ಧಿ ಕಲಿಸಿದ್ದು ಹೇಗೆ?

'ದಾರಿ ತಪ್ಪಿದ ಮಗ' ಜಗ್ಗೇಶ್ ಗೆ ಅಮ್ಮ ನಂಜಮ್ಮ ಬುದ್ಧಿ ಕಲಿಸಿದ್ದು ಹೇಗೆ?

Posted by:
Subscribe to Filmibeat Kannada

ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದವರಾದರೂ ನಟ ಜಗ್ಗೇಶ್ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನ ಶ್ರೀರಾಂಪುರದಲ್ಲಿ.

ಶ್ರೀರಾಂಪುರದಲ್ಲಿ ನಟ ಜಗ್ಗೇಶ್ ತರ್ಲೆ ಹುಡುಗರ ಸಹವಾಸ ಮಾಡಿದ್ದರಿಂದ ಮನೆಯವರ ನಿದ್ದೆಗೆಟ್ಟಿತ್ತು. ಕಾಲೇಜು ಓದುವಾಗಲೇ ಮಗ ಎಲ್ಲೋ ಒಂದು ಕಡೆ ದಾರಿ ತಪ್ಪುತ್ತಿದ್ದಾರೆ ಅಂದಾಗ, ಮಗನನ್ನ (ಜಗ್ಗೇಶ್) ಸರಿ ದಾರಿಗೆ ತರಲು ರೇಲ್ವೆ ಕಂಬಿ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ ಜಗ್ಗೇಶ್ ತಾಯಿ ನಂಜಮ್ಮ.['ವೀಕೆಂಡ್ ವಿತ್ ರಮೇಶ್' ಮೊದಲೆರಡು ಸೀಸನ್ ಗಳತ್ತ ಜಗ್ಗೇಶ್ ಮುಖ ಮಾಡ್ಲಿಲ್ಲ.! ಯಾಕೆ.?]

ಈ ಸಂಗತಿ ಬೆಳಕಿಗೆ ಬಂದಿದ್ದು 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ. ತಮ್ಮ ತಾಯಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ಬಗ್ಗೆ ನಟ ಜಗ್ಗೇಶ್ ಹೇಳಿದ ಮಾತುಗಳಿವು....

ರೇಲ್ವೆ ಕಂಬಿ ಮೇಲೆ ಮಲಗಿದ್ದ ನಂಜಮ್ಮ

ರೇಲ್ವೆ ಕಂಬಿ ಮೇಲೆ ಮಲಗಿದ್ದ ನಂಜಮ್ಮ

''ಇಂತಹ ಕೆಟ್ಟ ಮಗನಿಗೆ ನಾನು ತಾಯಿ ಎನಿಸಿಕೊಳ್ಳುವುದು ಒಂದೇ... ಸಾಯುವುದು ಒಂದೇ.. ಅಂತ ಹೋಗಿ ರೇಲ್ವೆ ಕಂಬಿ ಮೇಲೆ ಮಲ್ಕೊಂಡಿದ್ದರು ನನ್ನ ತಾಯಿ. ಆಗ ಟ್ರೇನ್ ಕೂಡ ಬಂದುಬಿಡ್ತು'' - ಜಗ್ಗೇಶ್, ನಟ [ಕಲಾಕುಂಚದಲ್ಲಿ ಅರಳಿತ್ತು ಜಗ್ಗೇಶ್ ತಾಯಿಯ ಬಹುದೊಡ್ಡ ಕನಸು]

ಅಮ್ಮನ ಮೇಲೆ ಆಣೆ ಮಾಡಿದೆ

ಅಮ್ಮನ ಮೇಲೆ ಆಣೆ ಮಾಡಿದೆ

''ನಾನು ನಮ್ಮಮ್ಮ ಮೇಲೆ ಆಣೆ ಮಾಡಿ, ಇನ್ಮೇಲೆ ಯಾವ ತಪ್ಪು ಮಾಡಲ್ಲ ಅಂತ ಹೇಳ್ದೆ. ದೊಡ್ಡ ಗಲಾಟೆ ಆಗ್ಹೋಯ್ತು'' - ಜಗ್ಗೇಶ್, ನಟ

ದೇವಸ್ಥಾನಕ್ಕೆ ಕರ್ಕೊಂಡು ಹೋದರು

ದೇವಸ್ಥಾನಕ್ಕೆ ಕರ್ಕೊಂಡು ಹೋದರು

''ನಮ್ಮ ಮನೆ ಹತ್ತಿರ ಚೌಡೇಶ್ವರಿ ದೇವಸ್ಥಾನ ಇದೆ. ನಾನು ಮಾತಿಗೆ ತಪ್ಪುತ್ತೇನೆ ಎಂಬ ಕಾರಣಕ್ಕೆ, ಜೀವನದಲ್ಲಿ ಏನೇನು ತಪ್ಪು ಮಾಡಿದ್ದೇನೋ... ಅದೆಲ್ಲವನ್ನೂ ಪೇಪರ್ ನಲ್ಲಿ ಬರೆಸಿದ್ರು'' - ಜಗ್ಗೇಶ್, ನಟ

'ನೀನು ಉದ್ಧಾರ ಆಗಲ್ಲ!'

'ನೀನು ಉದ್ಧಾರ ಆಗಲ್ಲ!'

''ಬಿಡಿ, ಸಿಗರೇಟ್ ಸೇದಬಾರದು... ಗುಂಡು ಹಾಕಬಾರದು ಅಂತೆಲ್ಲ ಬರೆಸಿದ್ರು. ಎಲ್ಲವನ್ನೂ ಬರೆದ ಮೇಲೆ... ನಾನು ದುಡಿಯಲು ಶುರು ಮಾಡಿದ ಮೇಲೆ ಇವೆಲ್ಲವನ್ನೂ ಮಾಡಬಹುದಾ.? ಅಂತ ಕೇಳ್ದೆ. ಆಗ 'ನೀನು ಉದ್ಧಾರ ಆಗಲ್ಲ ಕಣೋ'' ಅಂತ ಅಮ್ಮ ಹೇಳಿದ್ದರು'' - ಜಗ್ಗೇಶ್, ನಟ

ನಾನು ಪುಣ್ಯವಂತ ಎಂದ ಜಗ್ಗೇಶ್

ನಾನು ಪುಣ್ಯವಂತ ಎಂದ ಜಗ್ಗೇಶ್

''ಒಂದು ಮಗುವನ್ನ ಬದಲಾಯಿಸಬೇಕು ಅಂದ್ರೆ ತಾಯಿಗೆ ಎಷ್ಟು ಜವಾಬ್ದಾರಿ ಇರುತ್ತೆ ಅಂತ ಈಗ ಯೋಚನೆ ಮಾಡಿದರೆ ನನಗೆ ಗೊತ್ತಾಗುತ್ತೆ. ಅಂತ ತಾಯಿ ಪಡೆಯೋಕೆ ನಾನು ಪುಣ್ಯ ಮಾಡಿದ್ದೇನೆ'' - ಜಗ್ಗೇಶ್, ನಟ

English summary
Kannada Actor Jaggesh spoke about his mother Nanjamma in Zee Kannada Channel's popular show 'Weekend with Ramesh-3'.
Please Wait while comments are loading...

Kannada Photos

Go to : More Photos