»   » ಪ್ರಜಾ ಟಿವಿಯ 'ಖಾಲಿ ಕುರ್ಚಿ' ಪ್ರೋಗ್ರಾಂಗೆ ಯಶ್ ಕೊಟ್ಟ ಟ್ವಿಸ್ಟ್ ಏನು?

ಪ್ರಜಾ ಟಿವಿಯ 'ಖಾಲಿ ಕುರ್ಚಿ' ಪ್ರೋಗ್ರಾಂಗೆ ಯಶ್ ಕೊಟ್ಟ ಟ್ವಿಸ್ಟ್ ಏನು?

Posted by:
Subscribe to Filmibeat Kannada

ರೈತರ ಪರವಾಗಿ ಅಭಿಯಾನ ಮಾಡುವ ಕುರಿತು ಕನ್ನಡ ಸುದ್ದಿ ವಾಹಿನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಹಾಕಿದ ಸವಾಲನ್ನ ಸ್ವೀಕರಿಸಿ, ನಿನ್ನೆ ಸಂಜೆ 7 ಗಂಟೆಗೆ (ಪ್ರೈಮ್ ಟೈಮ್) 'ಅಣ್ತಮ್ಮ..ನಿಮಗೆ ಸ್ವಾಗತ' ಎಂಬ ಕಾರ್ಯಕ್ರಮವನ್ನ 'ಪ್ರಜಾ ಟಿವಿ' ನಿಗದಿ ಪಡಿಸಿತ್ತು.

'ಅಣ್ತಮ್ಮ..ನಿಮಗೆ ಸ್ವಾಗತ' ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶ್ 'ನುಡಿದಂತೆ ನಡೆಯುತ್ತಾರೆ' ಎಂದೇ ಎಲ್ಲರೂ ಭಾವಿಸಿದ್ದರು. [ಸವಾಲಿಗೆ ಸೈ ಎಂದ 'ಪ್ರಜಾ ಟಿವಿ': ಸಂಜೆ 7ಕ್ಕೆ 'ಯಶ್'ಗೆ ಅಗ್ನಿಪರೀಕ್ಷೆ.!]

''ಯಶ್ 'ಪಲಾಯನವಾದಿ' ಅಲ್ಲ, 'ಡ್ರಾಮಾ' ಮಾಡುವವರಲ್ಲ, ಅವರು ಬಂದೇ ಬರುತ್ತಾರೆ'' ಅಂತ ಯಶ್ ಗಾಗಿ 'ಪ್ರಜಾ ಟಿವಿ' ಒಂದು ಕುರ್ಚಿ ಕೂಡ ಮೀಸಲಿಟ್ಟಿತ್ತು. ಆದ್ರೆ, ಅಲ್ಲಿ ಆಗಿದ್ದೇ ಬೇರೆ.

'ಪ್ರಜಾ ಟಿವಿ' ಸ್ಟುಡಿಯೋಗೆ ಯಶ್ ಬರಲಿಲ್ಲ.!

'ಪ್ರಜಾ ಟಿವಿ' ಸ್ಟುಡಿಯೋಗೆ ಯಶ್ ಬರಲಿಲ್ಲ.!

ಸಂಜೆ 7 ಗಂಟೆಗೆ ಸರಿಯಾಗಿ 'ಪ್ರಜಾ ಟಿವಿ'ಯಲ್ಲಿ 'ಅಣ್ತಮ್ಮ...ನಿಮಗೆ ಸ್ವಾಗತ' ಕಾರ್ಯಕ್ರಮ ಶುರು ಆಯ್ತು. ಆದ್ರೆ, 'ಪ್ರಜಾ ಟಿವಿ' ಸ್ಟುಡಿಯೋದಲ್ಲಿ ಯಶ್ ಹಾಜರ್ ಇರಲಿಲ್ಲ. [ಯಶ್ ಸವಾಲಿಗೆ 'ಪ್ರಜಾ ಟಿವಿ' ಚೀಫ್ ಎಡಿಟರ್ ಕೊಟ್ಟ ಜವಾಬು ಏನು?]

ಖಾಲಿ ಕುರ್ಚಿ.!

ಖಾಲಿ ಕುರ್ಚಿ.!

ಯಾವ ಸಮಯದಲ್ಲಿ ಬೇಕಾದರೂ, ಯಶ್ ಹಾಜರ್ ಆಗಬಹುದು ಎಂಬ ನಂಬಿಕೆ ಮೇಲೆ ಒಂದು ಕುರ್ಚಿಯನ್ನ ಯಶ್ ಗಾಗಿ 'ಪ್ರಜಾ ಟಿವಿ' ಮೀಸಲಿಟ್ಟಿತ್ತು.

ಆಹ್ವಾನ ಇರಲಿಲ್ಲವೇ?

ಆಹ್ವಾನ ಇರಲಿಲ್ಲವೇ?

'ಅಣ್ತಮ್ಮ..ನಿಮಗೆ ಸ್ವಾಗತ' ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಯಶ್ ಗೆ 'ಪ್ರಜಾ ಟಿವಿ' ಕಡೆಯಿಂದ ಆಹ್ವಾನವಿತ್ತು. 'ವಾಟ್ಸ್ ಆಪ್' ಮೂಲಕ ಬಹಿರಂಗ ಪತ್ರದ ಪ್ರೋಮೋ ಕೂಡ ಕಳುಹಿಸಿಕೊಡಲಾಗಿತ್ತು. ಅದನ್ನ ವೀಕ್ಷಿಸಿ ನಟ ಯಶ್ ಕೂಡ 'ಥಂಬ್ಸ್ ಅಪ್' ಚಿಹ್ನೆಯನ್ನ 'ಪ್ರಜಾ ಟಿವಿ'ಯವರಿಗೆ ರಿಪ್ಲೈ ಮಾಡಿದ್ದರು.

ದೂರವಾಣಿ ಕರೆ ಮಾಡಿದರು

ದೂರವಾಣಿ ಕರೆ ಮಾಡಿದರು

'ಅಣ್ತಮ್ಮ..ನಿಮಗೆ ಸ್ವಾಗತ' ಕಾರ್ಯಕ್ರಮ ಶುರುವಾಗಿ ಸುಮಾರು 40 ನಿಮಿಷ ಕಳೆದ ಬಳಿಕ 'ಪ್ರಜಾ ಟಿವಿ'ಗೆ ನಟ ಯಶ್ ದೂರವಾಣಿ ಕರೆ ಮಾಡಿ ಮಾತನಾಡಲು ಆರಂಭಿಸಿದರು.

'ಪ್ರಜಾ ಟಿವಿ'ಗೆ ಪ್ರಶ್ನೆ ಹಾಕಿದ ಯಶ್

'ಪ್ರಜಾ ಟಿವಿ'ಗೆ ಪ್ರಶ್ನೆ ಹಾಕಿದ ಯಶ್

''ಚರ್ಚಾ ಕಾರ್ಯಕ್ರಮದಿಂದ ಹಿಡಿದು ಆಡ್ ಗಳ ವರೆಗೂ ನಾನು ಹಾಕಿರುವ ಎಲ್ಲಾ ಸವಾಲುಗಳಿಗೆ ನಿಮ್ಮ ಒಪ್ಪಿಗೆ ಇದ್ಯಾ? ನೀವು ರೆಡಿ ಇದ್ದೀರಾ'' ಅಂತ 'ಪ್ರಜಾ ಟಿವಿ'ಗೆ ನಟ ಯಶ್ ನೇರವಾಗಿ ಪ್ರಶ್ನೆ ಕೇಳಿದರು.

ಎಲ್ಲದಕ್ಕೂ 'ಪ್ರಜಾ ಟಿವಿ' ಸಿದ್ಧ

ಎಲ್ಲದಕ್ಕೂ 'ಪ್ರಜಾ ಟಿವಿ' ಸಿದ್ಧ

ಯಶ್ ಹಾಕಿರುವ ಅಷ್ಟೂ ಸವಾಲುಗಳಿಗೆ 'ಪ್ರಜಾ ಟಿವಿ' ಸಿದ್ಧವಿದೆ ಅಂತ ನಿರೂಪಕ ಗಜಾನನ ಹೆಗಡೆ ಸ್ಪಷ್ಟವಾಗಿ ಹೇಳಿದರು. ಅದಕ್ಕೆ ಶಹಬ್ಬಾಸ್ ಎಂದ ಬಳಿಕ ನಟ ಯಶ್ ಹೊಸ ಟ್ವಿಸ್ಟ್ ನೀಡಿದರು. [ಸವಾಲು ಸೈಡಿಗಿಟ್ಟ ಯಶ್: ಎಲ್ಲಾ ಚಾನೆಲ್ ಗಳಿಗೂ ಹೊಸ ಆಫರ್.!]

ಏನು ಆ ಟ್ವಿಸ್ಟ್?

ಏನು ಆ ಟ್ವಿಸ್ಟ್?

''ಎಲ್ಲಾ ಚಾನೆಲ್ ನಲ್ಲೂ ನನಗೆ ಚೇರ್ ಹಾಕಿ ಕರೆಯುತ್ತಿದ್ದಾರೆ. ಅದಕ್ಕೆ ನಾನೇ ಎಲ್ಲರಿಗೂ ಚೇರ್ ಹಾಕಿ ಕರೆಯುತ್ತಿದ್ದೇನೆ. ಎಲ್ಲಾ ವಾಹಿನಿಯ ಮುಖ್ಯಸ್ಥರು ಬನ್ನಿ. ರೈತರು ಮತ್ತು ಜನರೂ ಕೂಡ ಬರಲಿ. ನಿರಂತರವಾದ ಚರ್ಚೆ ನಡೆಯಲಿ. ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇನೆ. ರೈತರ ಪರವಾಗಿ ಹೋರಾಟ ಮಾಡೋಣ'' ಎಂದುಬಿಟ್ಟರು ಯಶ್.

'ಪ್ರಜಾ ಟಿವಿ' ನಿಲುವು ಏನು?

'ಪ್ರಜಾ ಟಿವಿ' ನಿಲುವು ಏನು?

'ಮಾತಿಗೆ ಬದ್ಧ'ವಾಗಿರುವ 'ಪ್ರಜಾ ಟಿವಿ', ನಟ ಯಶ್ ಕಡೆಯಿಂದ ಬಂದ ಹೊಸ ಆಹ್ವಾನಕ್ಕೂ ಒಪ್ಪಿಗೆ ಸೂಚಿಸಿದೆ. ರೈತರ ಹಿತ ಕಾಪಾಡಲು ಸದಾ ಸಿದ್ಧವಿರುವುದಾಗಿ 'ಪ್ರಜಾ ಟಿವಿ' ತಿಳಿಸಿದೆ.

ಯಶ್ ಗೆ ಬದ್ಧತೆ ಎಷ್ಟಿದೆ?

ಯಶ್ ಗೆ ಬದ್ಧತೆ ಎಷ್ಟಿದೆ?

'ಪ್ರಜಾ ಟಿವಿ' ಕಡೆಯಿಂದ ಸಮ್ಮತಿ ಪಡೆದ ಬಳಿಕ, ನಟ ಯಶ್ ಮಾತ್ರ ಯಾವುದೇ ಮಾತಿಗೂ 'ಕಮಿಟ್' ಆಗಲಿಲ್ಲ. ''ಸಮಯ ಮತ್ತು ದಿನಾಂಕ ನಿಗದಿ ಆದ ನಂತರ ಬಾಕಿ ಮಾತು'' ಅಂತ್ಹೇಳಿ ಫೋನ್ ಕಾಲ್ ಕಟ್ ಮಾಡಿದರು ಯಶ್.

ಮಾಧ್ಯಮಗಳ ಬಗ್ಗೆ ಸ್ಪಷ್ಟನೆ

ಮಾಧ್ಯಮಗಳ ಬಗ್ಗೆ ಸ್ಪಷ್ಟನೆ

''ಮಾಧ್ಯಮ ವಿರುದ್ಧ ಮಾತನಾಡುವ ಅವಿವೇಕಿ ನಾನಲ್ಲ. ಮಾಧ್ಯಮಗಳ ಮೇಲೆ ಗೂಬೆ ಕೂರಿಸುತ್ತಿಲ್ಲ. ಹಾಗೂ ಸಿನಿಮಾ ಪಬ್ಲಿಸಿಟಿ ಗಾಗಿ ಇದೆಲ್ಲ ಮಾಡುತ್ತಿಲ್ಲ. ಮಹಾದಾಯಿ ಸೇರಿದಂತೆ ಎಲ್ಲಾ ಹೋರಾಟಗಳಲ್ಲೂ ಭಾಗಿಯಾಗಿದ್ದೇನೆ. ನನಗೂ ಸಾಮಾಜಿಕ ಕಳಕಳಿ ಇದೆ'' ಅಂತ ಇದೇ ಕಾರ್ಯಕ್ರಮದಲ್ಲಿ ಯಶ್ ಸ್ಪಷ್ಟಪಡಿಸಿದರು.

ಚರ್ಚಾ ಕಾರ್ಯಕ್ರಮದಲ್ಲಿ ಯಾರ್ಯಾರು ಇದ್ದರು?

ಚರ್ಚಾ ಕಾರ್ಯಕ್ರಮದಲ್ಲಿ ಯಾರ್ಯಾರು ಇದ್ದರು?

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಾಧ್ಯಕ್ಷರಾದ ವೀರೇಶ್ ಗೌಡರು, ನಟ, ಸಿನಿಮಾ ಪತ್ರಕರ್ತರಾದ ಯತಿರಾಜ್, ಚಿತ್ರ ನಿರ್ಮಾಪಕರಾದ ಪಾರ್ಥ ಸಾರಥಿ ಹಾಗೂ ಜೆ.ಡಿ.ಎಸ್ ಮುಖಂಡರಾದ ಕೋನ ರೆಡ್ಡಿ 'ಅಣ್ತಮ್ಮ...ನಿಮಗೆ ಸ್ವಾಗತ' ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

English summary
Kannada Actor Yash has reacted to Popular Kannada News Channel Prajaa TV's live discussion 'Anthamma Nimage Swagatha' via Phone.
Please Wait while comments are loading...

Kannada Photos

Go to : More Photos