twitter
    For Quick Alerts
    ALLOW NOTIFICATIONS  
    For Daily Alerts

    ನಟಿ ಭಾರತಿ ವಿಷ್ಣುವರ್ಧನ್ ರವರಿಗೆ ನನಸಾಗದ ಒಲಿಂಪಿಕ್ಸ್ ಕನಸು

    By Harshitha
    |

    ಕನ್ನಡ ಚಿತ್ರರಂಗ ಮಾತ್ರವಲ್ಲದೇ, ಕಾಲಿವುಡ್, ಟಾಲಿವುಡ್, ಬಾಲಿವುಡ್ ಮತ್ತು ಮಾಲಿವುಡ್ ಗಳಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದ ಕನ್ನಡದ ಕಲಾ ಜ್ಯೋತಿ ನಟಿ ಭಾರತಿ ವಿಷ್ಣುವರ್ಧನ್.

    ಭಾರತೀಯ ಚಿತ್ರರಂಗದ ಪ್ರತಿಭಾವಂತರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ನಟಿ ಭಾರತಿ ವಿಷ್ಣುವರ್ಧನ್ ಗೆ ನಟನೆಗಿಂತ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ['ಗಂಧದಗುಡಿ'ಯಲ್ಲಿ ರಾಜ್-ವಿಷ್ಣು ಮಧ್ಯೆ ಆಗಿದ್ದೇನು? 'ವೀಕೆಂಡ್'ನಲ್ಲಿ ನಟಿ ಭಾರತಿ ಹೇಳಿದ ಕಥೆ!]

    ಉತ್ತಮ ಕ್ರೀಡಾಪಟು ಆಗಿದ್ದ ಭಾರತಿ ರವರಿಗೆ ಅಂದು ಸ್ವಲ್ಪ ಪ್ರೋತ್ಸಾಹ ನೀಡಿದಿದ್ರೆ, ಒಲಿಂಪಿಕ್ಸ್ ನಲ್ಲಿ ಭಾರತವನ್ನ ಪ್ರತಿನಿಧಿಸುತ್ತಿದ್ದರು. ಆದ್ರೆ, ಅಷ್ಟರೊಳಗೆ ಭಾರತಿ ರವರಿಗೆ ಕನ್ನಡ ಚಿತ್ರರಂಗ ಕೈ ಬೀಸಿ ಕರೆಯಿತು. ಚಿತ್ರರಂಗಕ್ಕೆ ಕಾಲಿಟ್ಟ ಭಾರತಿ ರವರಿಗೆ ಒಲಿಂಪಿಕ್ಸ್ ಆಸೆ ಈಡೇರಲೇ ಇಲ್ಲ. ಈ ವಿಚಾರ ಬಹಿರಂಗ ಆಗಿದ್ದು ಮೊನ್ನೆ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ....

    ನಟಿ ಭಾರತಿ ವಿಷ್ಣುವರ್ಧನ್ ಕುರಿತು....

    ನಟಿ ಭಾರತಿ ವಿಷ್ಣುವರ್ಧನ್ ಕುರಿತು....

    ಜನನ - 1950, ಆಗಸ್ಟ್ 15 (ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ)
    ತಂದೆ - ರಾಮಚಂದ್ರ ರಾವ್
    ತಾಯಿ - ಭದ್ರಾವತಿ ಬಾಯಿ
    ಸಹೋದರರು - ಮಂಜುನಾಥ್, ದಿ.ಶೇಷಾದ್ರಿ, ಶಾಮ್ ಸುಂದರ್
    ಸಹೋದರಿಯರು - ಜಯಶ್ರೀ, ವಾಸಂತಿ
    ಪತಿ - ದಿ. ಡಾ.ವಿಷ್ಣುವರ್ಧನ್
    ಪುತ್ರಿಯರು - ಕೀರ್ತಿ, ಚಂದನಾ
    ಅಳಿಯಂದಿರು - ಅನಿರುದ್ಧ, ವೇಣುಗೋಪಾಲ್

    ಭಾರತಿ ಅಂತ ಹೆಸರು ಯಾಕೆ.?

    ಭಾರತಿ ಅಂತ ಹೆಸರು ಯಾಕೆ.?

    ಸ್ವಾತಂತ್ರ ದಿನಾಚರಣೆಯಂದು ಹುಟ್ಟಿದ್ರಿಂದ 'ಭಾರತಿ' ಅಂತ ನಾಮಕಾರಣ ಮಾಡಿದ್ರಂತೆ ಪೋಷಕರು.['ವೀಕೆಂಡ್ ವಿತ್ ರಮೇಶ್'ನಲ್ಲಿ ನಟಿ ಭಾರತಿ: ವಿಷ್ಣು ಅಭಿಮಾನಿಗಳು ಗರಂ ಆಗಿದ್ಯಾಕೆ?]

    ಭಾರತಿ ಉತ್ತಮ ಗಾಯಕಿ ಹೌದು.!

    ಭಾರತಿ ಉತ್ತಮ ಗಾಯಕಿ ಹೌದು.!

    ನಟನೆ ಮಾತ್ರ ಅಲ್ಲ, ಭಾರತಿ ವಿಷ್ಣುವರ್ಧನ್ ಉತ್ತಮ ಗಾಯಕಿ ಕೂಡ ಹೌದು. ಆ ಕಾಲದಲ್ಲಿಯೇ ಬೆಂಗಳೂರಿನ ಆಕಾಶವಾಣಿಯಲ್ಲಿ 'ಬೆಂಗಳೂರು ಸಿಸ್ಟರ್ಸ್' ಕಾರ್ಯಕ್ರಮದಲ್ಲಿ ಭಾರತಿ ಹಾಡುತ್ತಿದ್ದರಂತೆ.

    ಭಾರತಿ ರವರಿಗೆ ಪ್ರೋತ್ಸಾಹ ಸಿಕ್ಕಿದ್ರೆ..?

    ಭಾರತಿ ರವರಿಗೆ ಪ್ರೋತ್ಸಾಹ ಸಿಕ್ಕಿದ್ರೆ..?

    ''ಭಾರತಿ ಅವರಿಗೆ ಪ್ರೋತ್ಸಾಹ ನೀಡಿದರೆ, ಒಲಿಂಪಿಕ್ಸ್ ವರೆಗೂ ಹೋಗ್ತಾರೆ'' ಅಂತ ಆಗಿನ ಕಾಲಕ್ಕೆ ಸ್ಪೋರ್ಟ್ಸ್ ಮ್ಯಾಗಝೀನ್ ನಲ್ಲಿ ಬರೆಯಲಾಗಿತ್ತು.

    ಆಸೆ ಈಡೇರಲಿಲ್ಲ.!

    ಆಸೆ ಈಡೇರಲಿಲ್ಲ.!

    ''ಒಲಿಂಪಿಕ್ಸ್ ನಲ್ಲಿ ನಾನು ಭಾರತವನ್ನ ಪ್ರತಿನಿಧಿಸಬೇಕು ಎಂದು ಬಹಳ ಆಸೆ ಇತ್ತು ನನಗೆ. ಅಷ್ಟರೊಳಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶ ಬಂದುಬಿಡ್ತು'' ಎನ್ನುತ್ತಾರೆ ನಟಿ ಭಾರತಿ ವಿಷ್ಣುವರ್ಧನ್.

    ಭಾರತಿ ವಿಷ್ಣುವರ್ಧನ್ ರವರ ಮೊದಲ ಚಿತ್ರ ಯಾವುದು.?

    ಭಾರತಿ ವಿಷ್ಣುವರ್ಧನ್ ರವರ ಮೊದಲ ಚಿತ್ರ ಯಾವುದು.?

    'ದುಡ್ಡೇ ದೊಡ್ಡಪ್ಪ' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡ ಭಾರತಿ ರವರು ಮೊದಲ ಬಾರಿಗೆ ನಾಯಕಿ ಆಗಿ ಬಣ್ಣ ಹಚ್ಚಿದ್ದು 1964 ರಲ್ಲಿ ಬಿಡುಗಡೆ ಆದ 'ಲವ್ ಇನ್ ಬ್ಯಾಂಗಲೋರ್' ಚಿತ್ರದಲ್ಲಿ.

    ಎಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.?

    ಎಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.?

    ಕನ್ನಡದಲ್ಲಿ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಭಾರತಿ ವಿಷ್ಣುವರ್ಧನ್, ತಮಿಳಿನಲ್ಲಿ 30, ತೆಲುಗಿನಲ್ಲಿ 30, ಮಲೆಯಾಳಂನಲ್ಲಿ 17, ಹಿಂದಿಯಲ್ಲಿ 17ಕ್ಕೂ ಹೆಚ್ಚಿನ ಚಿತ್ರಗಳು ಸೇರಿ ಸರಿಸುಮಾರು 200 ಚಿತ್ರಗಳಲ್ಲಿ ಮಿಂಚಿದ್ದಾರೆ.

    ಎಲ್ಲಾ ಸೂಪರ್ ಸ್ಟಾರ್ಸ್ ಜೊತೆ ನಟನೆ

    ಎಲ್ಲಾ ಸೂಪರ್ ಸ್ಟಾರ್ಸ್ ಜೊತೆ ನಟನೆ

    ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಎಂ.ಜಿ.ಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ಎನ್.ಟಿ.ಆರ್, ಮೋಹನ್ ಲಾಲ್, ದಿಲೀಪ್ ಕುಮಾರ್, ವಿನೋದ್ ಖನ್ನಾ... ಹೀಗೆ ಪಂಚಭಾಷೆಗಳಲ್ಲಿ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆ ನಟಿ ಭಾರತಿ ವಿಷ್ಣುವರ್ಧನ್ ನಟಿಸಿದ್ದಾರೆ.

    ರಾಷ್ಟ್ರ ಪ್ರಶಸ್ತಿ ಪುರಸ್ಕೃತರು

    ರಾಷ್ಟ್ರ ಪ್ರಶಸ್ತಿ ಪುರಸ್ಕೃತರು

    1966-67 ಸಾಲಿನ 'ಸಂಧ್ಯಾರಾಗ' ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ ನಟಿ ಭಾರತಿ ವಿಷ್ಣುವರ್ಧನ್. 1970 ರಲ್ಲಿ 'ಶ್ರೀಕೃಷ್ಣದೇವರಾಯ' ಚಿತ್ರದ ನಟನೆಗಾಗಿ ರಾಜ್ಯ ಪ್ರಶಸ್ತಿ ಸೇರಿದಂತೆ ರಾಜ್ಯೋತ್ಸವ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಹಾಗೂ ಹಂಸರತ್ನ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ. 2017 ನೇ ಸಾಲಿನ ಪದ್ಮಶ್ರೀ ಪುರಸ್ಕೃತರ ಸಾಲಿನಲ್ಲಿ ನಟಿ ಭಾರತಿ ವಿಷ್ಣುವರ್ಧನ್ ಕೂಡ ಒಬ್ಬರು.

    ಡಾ.ಭಾರತಿ ವಿಷ್ಣುವರ್ಧನ್

    ಡಾ.ಭಾರತಿ ವಿಷ್ಣುವರ್ಧನ್

    2010 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನಟಿ ಭಾರತಿ ವಿಷ್ಣುವರ್ಧನ್ ರವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

    English summary
    Kannada Actress Bharathi Vishnuvardhan had dreamt of participating in Olympics.
    Monday, April 24, 2017, 16:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X