twitter
    For Quick Alerts
    ALLOW NOTIFICATIONS  
    For Daily Alerts

    ನಿರ್ಮಾಪಕರ ಪ್ರತಿಭಟನೆ: 'ಬಿಗ್ ಬಾಸ್ ಕನ್ನಡ-4'ಗೆ ಆತಂಕ ಇಲ್ಲ.!

    By ಭರತ್‌ ಕುಮಾರ್‌
    |

    ಅಂತೂ ಆಡಿದ ಮಾತಿನಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಬೀದಿಗೆ ಇಳಿದಿದೆ. ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದಲ್ಲಿ ಕನ್ನಡ ಚಿತ್ರ ನಿರ್ಮಾಪಕರು ಇಂದು 'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಓಪನ್ನಿಂಗ್ ಶೂಟಿಂಗ್ ನಡೆಯುತ್ತಿರುವ ಬೆಂಗಳೂರಿನ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿ ಮುಂಭಾಗದಲ್ಲಿ ಧರಣಿ ಕೂತಿದ್ದಾರೆ.

    'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಕಿಚ್ಚ ಸುದೀಪ್ ಮತ್ತು ಇತರೆ ಕನ್ನಡ ತಾರೆಯರು ಪಾಲ್ಗೊಳ್ಳಬಾರದು, ನಿರ್ಮಾಪಕರ ಸಂಕಷ್ಟಕ್ಕೆ ಸುದೀಪ್ ಸ್ಪಂದಿಸಬೇಕು ಅಂತ ಈ ಹಿಂದೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಾ.ರಾ.ಗೋವಿಂದು ಒತ್ತಾಯಿಸಿದ್ದರು. ಆದ್ರೆ, ಸುದೀಪ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಇಂದು ನಿರ್ಮಾಪಕರು ರೋಡಿಗಿಳಿದ್ದಾರೆ. ['ಇವರು'ಗಳ ಮೇಲೆ ಮಾತ್ರ ಕನ್ನಡ ನಿರ್ಮಾಪಕರ ಸಿಡುಕು-ಮುನಿಸು.!]

    ಇನ್ನೋವೇಟಿವ್ ಫಿಲ್ಮ್ ಸಿಟಿ ಹೊರಭಾಗದಲ್ಲಿ ಪ್ರತಿಭಟನೆ ನಡೆಯುತ್ತಿದೆ ಹೊರತು ಶೂಟಿಂಗ್ ಸೆಟ್ ನಲ್ಲಲ್ಲ. ಹೀಗಾಗಿ, ನಿರ್ಮಾಪಕರ ಹೋರಾಟದಿಂದ 'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಓಪನ್ನಿಂಗ್ ಚಿತ್ರೀಕರಣಕ್ಕೆ ಯಾವುದೇ ಅಡ್ಡಿ ಆಗಿಲ್ಲ.

    ಶಾಂತಯುತವಾಗಿ ಪ್ರತಿಭಟನೆ ಮಾಡುತ್ತಿರುವ ಸಾ.ರಾ.ಗೋವಿಂದು ಮತ್ತು ತಂಡ ಕೆಲ ಬೇಡಿಕೆಗಳನ್ನ ಕನ್ನಡ ಮನರಂಜನಾ ವಾಹಿನಿಗಳ ಮುಂದೆ ಇಟ್ಟಿದೆ. ಅದೇನು ಅಂತ ನೋಡೋಣ ಬನ್ನಿ....

    'ಬಿಗ್‌ ಬಾಸ್‌' ಮನೆ ಎದುರು ಪ್ರತಿಭಟನೆ

    'ಬಿಗ್‌ ಬಾಸ್‌' ಮನೆ ಎದುರು ಪ್ರತಿಭಟನೆ

    ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದಲ್ಲಿ ಕನ್ನಡ ನಿರ್ಮಾಪಕರ ಪ್ರತಿಭಟನೆ ಶುರು ಆಯ್ತು. ನಿರ್ಮಾಪಕರಾದ ಭಾ.ಮಾ.ಹರೀಶ್‌, ಎನ್‌.ಎಂ.ಸುರೇಶ್‌, ರಾಮಮೂರ್ತಿ ಸೇರಿದಂತೆ, ಹಲವು ಮಂದಿ ವಿತರಕರು, ಪ್ರದರ್ಶಕರು ಧರಣೆಯಲ್ಲಿ ಭಾಗಿಯಾದರು.

    ನಿರ್ಮಾಪಕರನ್ನ ಉಳಿಸಿ, ಚಿತ್ರರಂಗವನ್ನ ಬೆಳೆಸಿ

    ನಿರ್ಮಾಪಕರನ್ನ ಉಳಿಸಿ, ಚಿತ್ರರಂಗವನ್ನ ಬೆಳೆಸಿ

    ''ಸಾಮಾನ್ಯ ವ್ಯಕ್ತಿಗಳನ್ನ ಹೀರೋಗಳು ಮಾಡೋದು ನಾವು, ಆದ್ರೆ ಬೆಳೆದ ಮೇಲೆ ನಮ್ಮನ್ನ ಮರೆತು ರಿಯಾಲಿಟಿ ಶೋಗಳಿಗೆ ಹೋಗ್ತಾರೆ. ಇದ್ರಿಂದ ನಮಗೆ ನಷ್ಟವಾಗ್ತಿದೆ. ನಿರ್ಮಾಪಕರನ್ನ ಉಳಿಸಿ, ಚಿತ್ರರಂಗವನ್ನ ಬೆಳೆಸಿ'' ಎನ್ನುವ ಘೋಷಣೆಗಳನ್ನ ಕೂಗಿ 'ಬಿಗ್‌ ಬಾಸ್‌'ನಲ್ಲಿ ಯಾವ ತಾರೆಯರೂ ಕೂಡ ಭಾಗವಹಿಸಿಬಾರದು ಅಂತ ಪ್ರತಿಭಟನಾ ನಿರತರು ಒತ್ತಾಯಿಸಿದ್ರು.[ಕಿಚ್ಚ ಸುದೀಪ್ ಗೂ 'ಬಿಗ್ ಬಾಸ್' ದೊಡ್ಡ ಸವಾಲು.! ಯಾಕೆ ಗೊತ್ತಾ.?]

    ಮೂರು ಬೇಡಿಕೆಗಳನ್ನಿಟ್ಟ ನಿರ್ಮಾಪಕರು

    ಮೂರು ಬೇಡಿಕೆಗಳನ್ನಿಟ್ಟ ನಿರ್ಮಾಪಕರು

    ಕನ್ನಡ ಸಿನಿಮಾ ತಾರೆಯರಿಗೆ ಹಾಗೂ ರಿಯಾಲಿಟಿ ಶೋ ಅಯೋಜಕರಿಗೆ ಕನ್ನಡ ನಿರ್ಮಾಪಕರು ಮೂರು ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ.

    ಕಾರ್ಯಕ್ರಮ ಪ್ರಸಾರ ಸಮಯ ಬದಲಾಗಬೇಕು!

    ಕಾರ್ಯಕ್ರಮ ಪ್ರಸಾರ ಸಮಯ ಬದಲಾಗಬೇಕು!

    ಬಹುತೇಕ ಎಲ್ಲಾ ರಿಯಾಲಿಟಿ ಶೋಗಳು ಪ್ರೈಮ್ ಟೈಮ್‌ನಲ್ಲಿ ಪ್ರಸಾರವಾಗುತ್ತೆ. ಹೀಗಾಗಿ ಅದಕ್ಕೆ ಕಡಿವಾಣ ಹಾಕಬೇಕು ಎಂಬುದು ನಿರ್ಮಾಪಕರ ಬೇಡಿಕೆ. ಪ್ರತಿದಿನ ರಾತ್ರಿ 9 ಗಂಟೆಗೆ 'ಬಿಗ್‌ ಬಾಸ್‌' ಕಾರ್ಯಕ್ರಮ ಪ್ರಸಾರ ಮಾಡುವ ಬದಲು ರಾತ್ರಿ 10ಕ್ಕೆ ಪ್ರಸಾರ ಮಾಡಿ, ಮತ್ತು ಯಾವುದೇ ಕಾರಣಕ್ಕೂ ಮರು ಪ್ರಸಾರ ಮಾಡಬೇಡಿ ಎನ್ನುತ್ತಾರೆ ನಿರ್ಮಾಪಕರು.[ಆರಂಭಕ್ಕೂ ಮುನ್ನವೇ 'ಬಿಗ್ ಬಾಸ್ ಕನ್ನಡ-4'ಗೆ ಎದುರಾಗಿದೆ 'ಬಿಗ್' ಸಂಕಷ್ಟ.!]

    ಇನ್ಮುಂದೆ ಸ್ಟಾರ್‌ಗಳು ರಿಯಾಲಿಟಿ ಶೋಗೆ ಹೋಗಬಾರದು

    ಇನ್ಮುಂದೆ ಸ್ಟಾರ್‌ಗಳು ರಿಯಾಲಿಟಿ ಶೋಗೆ ಹೋಗಬಾರದು

    ಇನ್ಮುಂದೆ ಯಾವ ನಟ-ನಟಿಯರು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಬಾರದು ಅಂತ ಕನ್ನಡ ನಿರ್ಮಾಪಕರು ತಾಕೀತು ಮಾಡಿದ್ದಾರೆ. ಈಗ ಯಾವೆಲ್ಲಾ ನಟ-ನಟಿಯರು ಕಾರ್ಯಕ್ರಮಗಳಿಗೆ ಸಹಿ ಹಾಕಿದ್ದಾರೋ, ಅವರು ಆ ಕಾರ್ಯಕ್ರಮವನ್ನ ಮುಗಿಸಿಕೊಡಲಿ, ಅದಾದ ನಂತರ ಯಾರೂ ಹೊಸದಾಗಿ ರಿಯಾಲಿಟಿ ಶೋಗಳಿಗೆ ಸಹಿ ಹಾಕಬಾರದು ಎಂಬುದು ನಿರ್ಮಾಪಕರ ಎರಡನೇ ಬೇಡಿಕೆ.

    1 ವರ್ಷಕ್ಕೆ 50 ಸಿನಿಮಾಗಳನ್ನ ಖರೀದಿಸಬೇಕು

    1 ವರ್ಷಕ್ಕೆ 50 ಸಿನಿಮಾಗಳನ್ನ ಖರೀದಿಸಬೇಕು

    ಒಂದು ವರ್ಷಕ್ಕೆ ಒಂದು ಚಾನಲ್‌ ನವರು 50 ಸಿನಿಮಾಗಳ ಪ್ರಸಾರ ಹಕ್ಕುಗಳನ್ನ ಖರೀದಿಸಿ, ನಿರ್ಮಾಪಕರಿಗೆ ಸಹಕಾರಿಯಾಗಬೇಕು ಎಂಬುದು ಕೊನೆಯ ಬೇಡಿಕೆ.

    'ಬಿಗ್‌ ಬಾಸ್‌' ಡೈರೆಕ್ಟರ್‌ ಜೊತೆ ಮಾತುಕತೆ

    'ಬಿಗ್‌ ಬಾಸ್‌' ಡೈರೆಕ್ಟರ್‌ ಜೊತೆ ಮಾತುಕತೆ

    ಈ ಎಲ್ಲಾ ಬೇಡಿಕೆಗಳ ವಿಚಾರವಾಗಿ ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್‌ ಹಾಗೂ 'ಬಿಗ್‌ ಬಾಸ್‌' ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಅವರೊಂದಿಗೆ ಚರ್ಚೆ ಮಾಡಲಾಗಿದೆ. ನಿನ್ನೆ ವಾಣಿಜ್ಯ ಮಂಡಳಿಗೆ ಅವರನ್ನ ಕರೆಯಿಸಿ ನಿರ್ಮಾಪಕರ ಸಮಸ್ಯೆಗಳನ್ನ ಮನವರಿಕೆ ಮಾಡಿಕೊಡಲಾಗಿದೆ. ಹೀಗಾಗಿ ಅವರ ನಿರ್ಧಾರದ ಮೇಲೆ ಮುಂದಿನ ನಡೆ ನಿರ್ಧಾರವಾಗಲಿದೆ.[ಎಕ್ಸ್ ಕ್ಲೂಸಿವ್: 'ಬಿಗ್ ಬಾಸ್ ಕನ್ನಡ-4' ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಸಂದರ್ಶನ]

    'ಬಿಗ್‌ ಬಾಸ್‌' ಚಿತ್ರೀಕರಣಕ್ಕೆ ಅಡ್ಡಿಯಿಲ್ಲ

    'ಬಿಗ್‌ ಬಾಸ್‌' ಚಿತ್ರೀಕರಣಕ್ಕೆ ಅಡ್ಡಿಯಿಲ್ಲ

    ನಿರ್ಮಾಪಕರ ಪ್ರತಿಭಟನೆಯಿಂದ 'ಬಿಗ್‌ ಬಾಸ್‌' ಚಿತ್ರೀಕರಣಕ್ಕೆ ಅಡ್ಡಿಯಾಗ್ಬಹುದು ಎಂಬ ಆತಂಕವಿತ್ತು. ಆದ್ರೆ, ನಿರ್ಮಾಪಕರ ಧರಣೆ ಕೇವಲ ಇನ್ನೋವೆಟೀವ್ ಫಿಲ್ಮ್ ಸಿಟಿಯ ಹೊರಭಾಗದಲ್ಲಿ ಮಾತ್ರ ನಡೆಯುತ್ತಿರುವುದರಿಂದ 'ಬಿಗ್‌ ಬಾಸ್‌' ಚಿತ್ರೀಕರಣಕ್ಕೆ ಯಾವುದೇ ರೀತಿಯ ಅಡ್ಡಿಯಾಗಿಲ್ಲ.

    English summary
    Sandalwood producers are protesting today (October 8th) in front of 'Bigg Boss' house, in Innovative Film City, near Bidadi against Kannada Stars taking part in Reality Shows.
    Saturday, October 8, 2016, 15:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X