ಕನ್ನಡದ ಬಿಗ್ ಬಾಸ್ ನಿರೂಪಕನಾಗಿ ಕಿಚ್ಚ ಸುದೀಪ್

Posted by:
Give your rating:

ಬಾಲಿವುಡ್ಡಿನ ಬಾಕ್ಸ್ ಆಫೀಸ್ ಕಿಂಗ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ 'ಬಿಗ್ ಬಾಸ್' ರಿಯಾಲಿಟಿ ಶೋ ಕನ್ನಡದಲ್ಲೂ ಆರಂಭವಾಗಲಿದೆ ಎನ್ನುವ ಸುದ್ದಿಯನ್ನು ಈ ಹಿಂದೆ ಪ್ರಕಟಿಸಿದ್ದೆವು.

ಈ ರಿಯಾಲಿಟಿ ಶೋವಿನ ನಿರೂಪಕರು ಯಾರು ಎನ್ನುವ ಪ್ರಶ್ನೆಗೆ ಒಂದು ಮೂಲಗಳ ಪ್ರಕಾರ 'ಕಿಚ್ಚ ಸುದೀಪ್' ಎನ್ನಲಾಗುತ್ತಿದೆ.

ಈಟಿವಿ ಕನ್ನಡ ವಾಹಿನಿ ಸುದೀಪ್ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು, ಸುದೀಪ್ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ ಎನ್ನುವ ಸುದ್ದಿ ಕೂಡಾ ಹರಿದು ಬರುತ್ತಿದೆ.

ಈಗ ಚಿತ್ರದ ಪ್ರಚಂಡ ಯಶಸ್ಸಿನಿಂದ ಸುದೀಪ್ ಪಕ್ಕದ ಆಂಧ್ರಪ್ರದೇಶದಲ್ಲೂ ವರ್ಲ್ಡ್ ಫೇಮಸ್.

ಹಾಗಾಗಿ ವಾಹಿನಿಯವರು ಈ ರಿಯಾಲಿಟಿ ಶೋ ಅನ್ನು ಕನ್ನಡದ ಜೊತೆಗೆ ತೆಲುಗಿನಲ್ಲೂ ಪ್ರಸಾರ ಮಾಡಿದರೆ ಹೇಗೆ ಎನ್ನುವ ಗಂಭೀರ ಚಿಂತನೆ ನಡೆಸುತ್ತಿದ್ದಾರೆನ್ನಲಾಗಿದೆ.

ಈ ರಿಯಾಲಿಟಿ ಶೋಗೆ ಸುದೀಪ್ ಉತ್ತಮ ಸಂಭಾವನೆ ಪಡೆಯಲಿದ್ದಾರೆ. ಶೋ ಗಳಿಸುವ TRP ಆಧಾರದ ಮೇಲೆ ಇವರ ಸಂಭಾವನೆ ಮತ್ತಷ್ಟು ಹೆಚ್ಚಲಿವೆ ಮತ್ತು ಸದ್ಯದಲ್ಲೇ ಸುದೀಪ್ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅನ್ನು ಭೇಟಿ ಮಾಡಿ ಟಿಪ್ಸ್ ಪಡೆಯಲಿದ್ದಾರೆ ಎನ್ನುವ ಸುದ್ದಿ ಕೂಡಾ ಇದೆ.

ಈ ಹಿಂದೆ 'ಪ್ಯಾಟೆ ಹುಡ್ಗೀರಾ ಹಳ್ಳಿ ಲೈಫು' ಎನ್ನುವ ಜನಪ್ರಿಯ ರಿಯಾಲಿಟಿ ಶೋವನ್ನು ಕಿರುತೆರೆಯಲ್ಲಿ ಸುದೀಪ್ ನಡೆಸಿಕೊಟ್ಟಿದ್ದರು.

Read more about: ಸುದೀಪ್, ಈಟಿವಿ ಕನ್ನಡ, ಬಿಗ್ ಬಾಸ್, ರಿಯಾಲಿಟಿ ಶೋ, ಟಿವಿ, ಕಿರುತೆರೆ, ಸಲ್ಮಾನ್ ಖಾನ್, salman khan, etv kannada, reality show, tv, small screen, big boss, sudeep

English summary
Kiccha Sudeep will be reportedly anchoring the Kannada version of Hindi reality show Bigg Boss, which is currently hosted by Bollywood superstar Salman Khan.
Please Wait while comments are loading...

Kannada Photos

Go to : More Photos
 
X

X
Skip Ad
Please wait for seconds

Bringing you the best live coverage @ Auto Expo 2016! Click here to get the latest updates from the show floor. And Don't forget to Bookmark the page — #2016AutoExpoLive