twitter
    For Quick Alerts
    ALLOW NOTIFICATIONS  
    For Daily Alerts

    ಕಡೆಗೂ 'ವೀಕೆಂಡ್ ವಿತ್ ರಮೇಶ್-2' ನಲ್ಲಿ 'ಇವರನ್ನೆಲ್ಲ' ನೋಡಲೇ ಇಲ್ಲ.!

    By Harshitha
    |

    ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಎರಡನೇ ಸೀಸನ್ ಮುಕ್ತಾಯ ಹಂತಕ್ಕೆ ಬಂದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಜೀವನ ಚರಿತ್ರೆ ಅನಾವರಣ ಮಾಡುವ ಮೂಲಕ 'ವೀಕೆಂಡ್ ವಿತ್ ರಮೇಶ್-2'ಗೆ ಪೂರ್ಣ ವಿರಾಮ ಬೀಳಲಿದೆ.

    ಮೊದಲ ಸೀಸನ್ ನಲ್ಲಿ ಕ್ಯಾಪ್ಟನ್ ಗೋಪಿನಾಥ್, ವಿಶಿಷ್ಟ ಪ್ರತಿಭೆ ಅಶ್ವಿನಿ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನ ಪರಿಚಯ ಮಾಡಿಕೊಟ್ಟ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಎರಡನೇ ಸೀಸನ್ ಮಾತ್ರ ಸಂಪೂರ್ಣ 'ಚಿತ್ರರಂಗ'ಮಯವಾಗಿತ್ತು.

    ಸುಮಾರು ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್-2' ಕಾರ್ಯಕ್ರಮದಲ್ಲಿ ನಿರ್ದೇಶಕ 'ಜೋಗಿ' ಪ್ರೇಮ್, ನಟಿ ರಕ್ಷಿತಾ, ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ನಟರಾದ ಅಂಬರೀಶ್, ದೇವರಾಜ್, ದುನಿಯಾ ವಿಜಯ್, ದರ್ಶನ್, ಶ್ರೀನಾಥ್....ಹೀಗೆ ಚಿತ್ರರಂಗದವರಿಗೆ ಮಾತ್ರ ಸೀಮಿತವಾಯ್ತು.

    'ಎಲ್ಲಾ ಕ್ಷೇತ್ರದ ಸಾಧಕರನ್ನು ಗುರುತಿಸುವ ವಿಶಿಷ್ಟ ಪ್ರಯತ್ನ ನಮ್ಮದು' ಅಂತ ಕಾರ್ಯಕ್ರಮ ಶುರುವಾಗುವ ಮುನ್ನ ಹೆಮ್ಮೆಯಿಂದ 'ಸಾಧಕರ ಸೀಟ್' ಪರಿಚಯಿಸಿದ್ದ ಶೋ ಆಯೋಜಕರ ಕಣ್ಣಿಗೆ ಚಿತ್ರರಂಗದವರನ್ನು ಬಿಟ್ಟು ಬೇರೆ ಕ್ಷೇತ್ರದ ಸಾಧಕರು ಈ ಬಾರಿ ಕಾಣಲೇ ಇಲ್ಲ ಅನ್ನೋದು ಮಾತ್ರ ಬೇಸರದ ಸಂಗತಿ. ['ವೀಕೆಂಡ್ ವಿತ್ ರಮೇಶ್' ಬಗ್ಗೆ ವೀಕ್ಷಕರಲ್ಲಿ ಭುಗಿಲೆದ್ದ ಅಸಮಾಧಾನ.!]

    ಹಾಗ್ನೋಡಿದ್ರೆ, 'ವೀಕೆಂಡ್ ವಿತ್ ರಮೇಶ್-2' ಕಾರ್ಯಕ್ರಮ ಶುರುವಾಗುತ್ತೆ ಅಂತ ಜಗಜ್ಜಾಹೀರಾದಾಗ, ಸಾಧಕರ ಸೀಟ್ ಮೇಲೆ ಕೆಲವರನ್ನ ನೋಡಲೇ ಬೇಕು ಅಂತ ವೀಕ್ಷಕರು ಬಕ ಪಕ್ಷಿಗಳಂತೆ ಕಾಯ್ತಿದ್ರು. ಆದ್ರೇನು ಪ್ರಯೋಜನ!? ಕಡೆಗೂ ವೀಕ್ಷಕರ ಆಸೆಗೆ ಜೀ ಕನ್ನಡ ವಾಹಿನಿ ಬಕೆಟ್ ತಣ್ಣೀರೆರಚಿದೆ. ಮುಂದೆ ಓದಿ....

    ವೀಕ್ಷಕರ ಇಚ್ಛಾನುಸಾರವಾಗಿ.....

    ವೀಕ್ಷಕರ ಇಚ್ಛಾನುಸಾರವಾಗಿ.....

    'ವೀಕೆಂಡ್ ವಿತ್ ರಮೇಶ್-2' ಕಾರ್ಯಕ್ರಮದಲ್ಲಿ ಕೆಲವರನ್ನ ಸಾಧಕರ ಸೀಟ್ ಮೇಲೆ ನೋಡಲೇಬೇಕು ಅನ್ನೋದು ವೀಕ್ಷಕರ ಬಯಕೆ ಆಗಿತ್ತು. ಆ ಬಯಕೆ-ಬೇಡಿಕೆಯ ಪಟ್ಟಿ ನಾವು ನಿಮ್ಮ ಮುಂದೆ ಇಡ್ತಿದ್ದೀವಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

    ರಾಹುಲ್ ಡ್ರಾವಿಡ್

    ರಾಹುಲ್ ಡ್ರಾವಿಡ್

    ಮಧ್ಯ ಪ್ರದೇಶದಲ್ಲಿ ಜನಸಿದ್ರೂ, ಬೆಂಗಳೂರಿನಲ್ಲಿ ಬೆಳೆದು ನೆಲೆಸಿರುವ ರಾಹುಲ್ ಡ್ರಾವಿಡ್, ಕ್ರಿಕೆಟ್ ಲೋಕದಲ್ಲಿ 'ದಿ ವಾಲ್' ಅಂತಲೇ ಜನಪ್ರಿಯ. ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಭಾರತದ ಪ್ರತಿಷ್ಠಿತ ಪುರಸ್ಕಾರಗಳನ್ನ ಮುಡಿಗೇರಿಸಿಕೊಂಡಿರುವ ರಾಹುಲ್ ಡ್ರಾವಿಡ್ 'ಸಾಧಕರ ಸೀಟ್' ಮೇಲೆ ಕೂರ್ಬೇಕು ಅನ್ನೋ ಆಸೆ ನಿಮ್ಗೆ ಇಲ್ವಾ?

    ಅನಿಲ್ ಕುಂಬ್ಳೆ

    ಅನಿಲ್ ಕುಂಬ್ಳೆ

    ಕ್ರಿಕೆಟ್ ಆಟವನ್ನು ಆರಾಧಿಸುವ ನಮ್ಮ ದೇಶದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಮಾಡಿರುವ ಸಾಧನೆ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಭಾರತದ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು, ವಿಶ್ವದಾದ್ಯಂತ ಖ್ಯಾತಿ ಪಡೆದಿರುವ ಅನಿಲ್ ಕುಂಬ್ಳೆ ಸಾಧಕರ ಸೀಟ್ ಮೇಲೆ ಕೂರಲು ಖಂಡಿತ ಅರ್ಹ ವ್ಯಕ್ತಿ.

    ಜಾವಗಲ್ ಶ್ರೀನಾಥ್

    ಜಾವಗಲ್ ಶ್ರೀನಾಥ್

    ಏಕದಿನ ಕ್ರಿಕೆಟ್ ನಲ್ಲಿ 300ಕ್ಕೂ ಹೆಚ್ಚು ವಿಕೆಟ್ ಕಬಳಿಸಿರುವ ಭಾರತದ ಏಕೈಕ ಫಾಸ್ಟ್ ಬೌಲರ್, ನಮ್ಮ ಮೈಸೂರಿನ ಅಪ್ಪಟ ಕನ್ನಡ ಪ್ರತಿಭೆ ಜಾವಗಲ್ ಶ್ರೀನಾಥ್. ಇವರ ಸಾಧನೆ ಯಾರಿಗಿಂತ ಕಮ್ಮಿ ಹೇಳಿ.?

    ವೆಂಕಟೇಶ್ ಪ್ರಸಾದ್

    ವೆಂಕಟೇಶ್ ಪ್ರಸಾದ್

    ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವೆಂಕಟೇಶ್ ಪ್ರಸಾದ್, ಭಾರತ ಕ್ರಿಕೆಟ್ ತಂಡದಲ್ಲಿ ಪ್ರಮುಖ ಬೌಲರ್ ಆಗಿದ್ದವರು. ಟೀಮ್ ಇಂಡಿಯಾಗೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿರುವ ವೆಂಕಟೇಶ್ ಪ್ರಸಾದ್, ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಬೌಲಿಂಗ್ ಕೋಚ್. ಇವರ ಜೀವನ ಚರಿತ್ರೆ ತಿಳಿದುಕೊಳ್ಳುವ ಆಸಕ್ತಿ ಯಾರಿಗೆ ಇಲ್ಲ ಹೇಳಿ?

    ಸುನೀಲ್ ಜೋಶಿ

    ಸುನೀಲ್ ಜೋಶಿ

    ಕ್ರಿಕೆಟ್ ಅಭ್ಯಾಸಕ್ಕಾಗಿ ಹುಬ್ಬಳ್ಳಿಗೆ ಪ್ರತಿ ದಿನ 40 ಕಿ.ಮಿ ಪ್ರಯಾಣ ಮಾಡುತ್ತಾ, ರಣಜಿ ಪಂದ್ಯದಲ್ಲಿ ಆಡಿ ಭೇಷ್ ಅನಿಸಿಕೊಂಡು, ಭಾರತದ ಕ್ರಿಕೆಟ್ ತಂಡದಲ್ಲಿ ಆಲ್ ರೌಂಡರ್ ಆಗಿ ಮಿಂಚಿದ ಸಾಧನೆ ಗದಗ ಜಿಲ್ಲೆಯ ಸುನೀಲ್ ಜೋಶಿರದ್ದು.

    ಎನ್.ಆರ್.ನಾರಾಯಣ ಮೂರ್ತಿ

    ಎನ್.ಆರ್.ನಾರಾಯಣ ಮೂರ್ತಿ

    ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರ ಸಾಧನೆಯ ಗುಟ್ಟು ತಿಳಿದುಕೊಳ್ಳಬೇಕು ಎನ್ನುವ ಆಸೆ ಯಾರಿಗ್ತಾನೆ ಇಲ್ಲ?

    ಎಚ್.ಡಿ.ದೇವೇಗೌಡ

    ಎಚ್.ಡಿ.ದೇವೇಗೌಡ

    ಮಾಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ, ಭಾರತದ ದೇಶದ ಪ್ರಧಾನ ಮಂತ್ರಿಯಾಗಿ, ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಎಚ್.ಡಿ.ದೇವೇಗೌಡ ರವರ ಸಾಧನೆ ಅನೇಕರಿಗೆ ಸ್ಫೂರ್ತಿ ಆಗುವುದಿಲ್ವೇ?

    ರಾಜಕೀಯ ರಂಗದಲ್ಲಿ ಸಾಕಷ್ಟು ಮಂದಿ ಇದ್ದಾರೆ.!

    ರಾಜಕೀಯ ರಂಗದಲ್ಲಿ ಸಾಕಷ್ಟು ಮಂದಿ ಇದ್ದಾರೆ.!

    ಪ್ರಸಕ್ತ ರಾಜಕೀಯ ಸನ್ನಿವೇಶ ಏನೇ ಇರಬಹುದು, ಆದ್ರೆ ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ, ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅವರ ಸಾಧನೆಯ ಹಾದಿ ತಿಳಿಯುವ ಕುತೂಹಲ ಯಾರಿಗಿಲ್ಲ?

    ಹಂಸಲೇಖ ಎಲ್ಲಿ?

    ಹಂಸಲೇಖ ಎಲ್ಲಿ?

    ಸೃಜನ್ ಲೋಕೇಶ್, ರಂಗಾಯಣ ರಘು, ದೊಡ್ಡಣ್ಣ ಸಾಧನೆ ಬಗ್ಗೆ ವಿವರಿಸಿದ 'ವೀಕೆಂಡ್ ವಿತ್ ರಮೇಶ್-2' ಕಾರ್ಯಕ್ರಮದ ಆಯೋಜಕರಿಗೆ ಕನ್ನಡ ಚಿತ್ರರಂಗದ ಸಂಗೀತಕ್ಕೆ ಹೊಸ ಭಾಷ್ಯ ಬರೆದ ನಾದಬ್ರಹ್ಮ ಹಂಸಲೇಖ ನೆನಪಿಗೆ ಬರ್ಲಿಲ್ವಾ? ಅನ್ನೋದು ವೀಕ್ಷಕರ ಪ್ರಶ್ನೆ

    ಚಿತ್ರರಂಗದವರ ಪಟ್ಟಿಯೂ ಇದೆ!

    ಚಿತ್ರರಂಗದವರ ಪಟ್ಟಿಯೂ ಇದೆ!

    ಇತರೆ ಕ್ಷೇತ್ರಗಳಿಗಿಂತ ಚಿತ್ರರಂಗದವರಿಗೆ ಹೆಚ್ಚು ಮಣೆ ಹಾಕುವ ಹಾಗಿದ್ರೆ, ನಟಿ ಆರತಿ, ಭಾರತಿ ವಿಷ್ಣುವರ್ಧನ್, 'ಅಭಿನಯ ಶಾರದೆ' ಜಯಂತಿ, ಮಾಲಾಶ್ರೀ, ರಮ್ಯಾ, ಪ್ರೇಮ, ಜಗ್ಗೇಶ್ ಕೂಡ ತಮ್ಮದೇ ರೀತಿಯಲ್ಲಿ ಸಾಧನೆ ಮಾಡಿದ್ದಾರೆ ಅಲ್ವೇ?

    ಕನ್ನಡ ಚಿತ್ರರಂಗದ ದಿಗ್ಗಜರು?

    ಕನ್ನಡ ಚಿತ್ರರಂಗದ ದಿಗ್ಗಜರು?

    ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡಿರುವ ನಿರ್ದೇಶಕರಾದ ಎಸ್.ಭಗವಾನ್, ನಿರ್ಮಾಪಕಿ ಆಗಿ ಸದಭಿರುಚಿಯ ಚಿತ್ರಗಳನ್ನ ನೀಡಿರುವ ಪಾರ್ವತಮ್ಮ ರಾಜ್ ಕುಮಾರ್, ಸುಮಧುರ ಗೀತೆಗಳಿಗೆ ಹೆಸರಾದ ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಕನ್ನಡ ಚಿತ್ರರಂಗದ ನಿಜವಾದ ಸಾಧಕರು. ಇವರೆಲ್ಲರ ಜೀವನ ಪರಿಚಯ ಯಾರಿಗಿದೆ?

    ನಾಟಕ ರಂಗ

    ನಾಟಕ ರಂಗ

    'ಆಟೋ ರಾಜ' ಶಂಕರ್ ನಾಗ್ ಪತ್ನಿ ಅರುಂಧತಿ ನಾಗ್ ನಾಟಕ ರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಮಾಡಿರುವ ಸಾಧನೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ.

    'ವೀಕೆಂಡ್ ವಿತ್ ರಮೇಶ್-3' ನಿರೀಕ್ಷಿಸಬಹುದಾ?

    'ವೀಕೆಂಡ್ ವಿತ್ ರಮೇಶ್-3' ನಿರೀಕ್ಷಿಸಬಹುದಾ?

    ಈ ಎಲ್ಲರ ಸಾಧನೆ ತಿಳಿದುಕೊಳ್ಳಬೇಕು ಎಂದು ಕಾಯುತ್ತಿದ್ದ ಜನರಿಗೆ 'ವೀಕೆಂಡ್ ವಿತ್ ರಮೇಶ್-2' ನಿರಾಸೆ ಮಾಡ್ತು. ಕಡೆ ಪಕ್ಷ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ 'ಇವರೆಲ್ಲರನ್ನೂ' ನಿರೀಕ್ಷಿಸಿಬಹುದಾ? ಎಂಬ ಪ್ರಶ್ನೆಗೆ ಉತ್ತರ 'ಕಾದು ನೋಡಬೇಕಷ್ಟೆ'.

    English summary
    Zee Kannada Channel's popular show Weekend With Ramesh season 2 is about to end. Here is the list of Achievers, whom viewers missed in the show. Take a look.
    Thursday, April 21, 2016, 13:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X