twitter
    For Quick Alerts
    ALLOW NOTIFICATIONS  
    For Daily Alerts

    ಭೇಷ್ ಅನ್ನಿಸಿಕೊಂಡ ಮಂಗಳಮುಖಿ ಪದ್ಮಿನಿ ಪ್ರಕಾಶ್

    By Rajendra
    |

    ಸಾಮಾನ್ಯವಾಗಿ ಮಂಗಳಮುಖಿಯರೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮಂಗಳಮುಖಿಯೊಬ್ಬರು ಮಾಡಿದ ಸಾಧನೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

    ಪದ್ಮಿನಿ ಪ್ರಕಾಶ್ (34) ಅವರು ಟಿವಿ ವಾರ್ತಾ ವಾಚಕಿಯಾಗಿ ಕೆಲಸ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಮಂಗಳಮುಖಿಯರು ಮಾತನಾಡಿದರೇನೇ ಎದ್ದುಬಿದ್ದು ನಗುವವರಿದ್ದಾರೆ. ಇದನ್ನೆಲ್ಲಾ ಲೆಕ್ಕಿಸದೆ ಪದ್ಮಿನಿ ವಾರ್ತಾ ವಾಚಕಿಯಾಗಿ ಎಲ್ಲರ ಗಮನಸೆಳೆದು ಉಳಿದವರಿಗೂ ಸ್ಫೂರ್ತಿಯಾಗಿದ್ದಾರೆ.

    Padmini Prakash
    ತಮಿಳಿನ ಲೋಟಸ್ ವಾಹಿನಿಯಲ್ಲಿ ಸಂಜೆ 7ರಿಂದ 7.30 ಗಂಟೆಯವರೆಗೆ ಪದ್ಮಿನಿ ಪ್ರಕಾಶ್ ಅವರು ಲೈವ್ ವಾರ್ತೆಗಳನ್ನು ವೀಕ್ಷಿಸಲು ಸಾಕಷ್ಟು ಮಂದಿ ಈಗ ಕಾಯುವಂತಾಗಿದೆ. ತಮ್ಮ ಜೀವನದಲ್ಲಿ ದೊರಕಿದ ಅತ್ಯಂತ ಗೌರವಾನ್ವಿತ ಕೆಲಸ ಇದು ಎನ್ನುತ್ತಾರೆ ಪದ್ಮಿನಿ.

    ಅವರು ವಾರ್ತಾ ವಾಚಕಿಯಾಗಿ ಎರಡು ತಿಂಗಳು ಕಳೆಯುತ್ತಿದೆ. ಅಮೆರಿಕಾದ ಲಾಸ್ ಏಂಜಲೀಸ್ ನ ಲಿಪ್ ಟಿವಿಯಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಎಲ್ಲರೂ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಇದುವರೆಗೂ 250ಕ್ಕೂ ಹೆಚ್ಚು ವೆಬ್ ಸೈಟ್ ಗಳಲ್ಲಿ ಪದ್ಮಿನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರೆಯಲಾಗಿದೆ.

    ಇನ್ನು ಸಾಮಾಜಿಕ ಜಾಲತಾಣಗಳಲ್ಲೂ ಪದ್ಮಿನಿ ಬಗ್ಗೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ತಾನು ವಾರ್ತಾ ವಾಚಕಿಯಾಗುತ್ತೇನೆ ಎಂದು ಕನಸಿನಲ್ಲೂ ಬಯಸಿರಲಿಲ್ಲ. ಕೆಲ ತಿಂಗಳ ಹಿಂದೆ ಇಬ್ಬರು ಯುವಕರು ನಮ್ಮ ಮನೆಗೆ ಬಂದು ಟಿವಿಯಲ್ಲಿ ವಾರ್ತಾ ವಾಚಕಿಯಾಗಲು ಕರೆದಾಗ ನನಗೆ ನಂಬಲು ಸಾಧ್ಯವೇ ಆಗಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.

    ನನ್ನನ್ನು ಹೀಯಾಳಿಸಲೆಂದೇ ಇವರು ಟಿವಿಗೆ ಕರೆಯುತ್ತಿದ್ದಾರೆ ಎಂದೇ ಭಾವಿಸಿದೆ. ಆದರೆ ತಮ್ಮ ಊಹೆ ಬಳಿಕ ಸುಳ್ಳಾಯಿತು ಎನ್ನುವ ಪದ್ಮಿನಿಗೆ ಈಗ ಚಿತ್ರಗಳಲ್ಲೂ ಅವಕಾಶಗಳು ಬರುತ್ತಿವೆಯಂತೆ. ತಮಿಳಿನ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ. ಮಂಗಳಮುಖಿಯ ದಯನೀಯ ಸಮಸ್ಯೆಗಳ ಬಗ್ಗೆಯೂ ಆರು ಸಾಕಷ್ಟು ವೇದಿಕೆಗಳಲ್ಲಿ ಧ್ವನಿಯೆತ್ತಿದ್ದಾರೆ.

    English summary
    Padmini Prakash, India's first transgender TV News anchor. The 34 year old presents a prime time show on Lotus News.
    Thursday, October 16, 2014, 16:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X