»   » ಟಿವಿ ವಾಹಿನಿಗಳಿಗೆ ಬೇಡವಾದ ' ಪ್ರೇಮ್ ಅಡ್ಡ '

ಟಿವಿ ವಾಹಿನಿಗಳಿಗೆ ಬೇಡವಾದ ' ಪ್ರೇಮ್ ಅಡ್ಡ '

Posted by:
Subscribe to Filmibeat Kannada

Movie Prem Adda yet to sold to TV channels
ಪ್ರೇಮ್ ಅಡ್ಡ ಸಿನಿಮಾ ಟಿವಿ ರೈಟ್ಸ್ ಇನ್ನೂ ಮಾರಾಟವಾಗಿಲ್ಲ. ಇದೇ ಪ್ರೇಮ್ ಅಭಿನಯದ ಪ್ರೀತಿ ಏಕೆ ಭೂಮಿ ಮೇಲಿದೆ ಎಂಬ ಸಿನಿಮಾವನ್ನು ಕೊಂಡ ಖಾಸಗಿ ವಾಹಿನಿಯೊಂದು ಅದಕ್ಕೆ ಸಿಕ್ಕ ಟಿವಿ ವೀಕ್ಷಕರ ಪ್ರತಿಕ್ರಿಯೆ ನೋಡಿ ದಂಗಾಗಿಬಿಟ್ಟಿತ್ತು.

ಆ ಶಾಕ್ ನಿಂದ ಆ ವಾಹಿನಿ ಇನ್ನೂ ಹೊರಬಂದ ಹಾಗೆ ಕಾಣುತ್ತಿಲ್ಲ. ಆ ಸಿನಿಮಾದ ಭವಿಷ್ಯ 'ವ್ಯಥೆ' ಆಗಿದ್ದೇ ತಡ, ಈಗ ಪ್ರೇಮ್ ಅಡ್ಡ ಚಿತ್ರದ ಟೀವಿ ರೈಟ್ಸ್ ಮೂಸುವವರೇ ಇಲ್ಲ ಎನ್ನುವುದು ಗಾಂಧಿನಗರದಿಂದ ಬೀಸುತ್ತಿರುವ ಬಲವಾದ ದೀಪಾವಳಿ ಸುದ್ದಿ.

ಇನ್ನೊಂದು ಕಡೆ ಸ್ವತಃ ಪ್ರೇಮ್ ಅವರೇ ಒಂದಷ್ಟು ಮೇನ್ ಮೇನ್ ವಾಹಿನಿಗಳಿಗೆ ದಂಡೆತ್ತಿ ಹೋಗುತ್ತಿದ್ದಾರಂತೆ. ಆದರೆ ಅದರಿಂದ ಕೂಡಾ ಯಾವುದೇ ಪ್ರಯೋಚನವಾಗುತ್ತಿಲ್ಲ. ಎಲ್ಲರೂ ನೋಡೋಣಾ, ಮಾಡೋಣಾ, ರಿಲೀಸ್ ಆದ್ಮೇಲೆ ಮಾತಾಡೋಣಾ ಎಂದು ಹೇಳಿ ಮನೆಗೆ ಕಳಿಸುತ್ತಿದ್ದಾರಂತೆ.

ಅದಕ್ಕಿಂತ ಹೆಚ್ಚಾಗಿ ಪ್ರೇಮ್ ಅಡ್ಡ ಚಿತ್ರ ಸುಬ್ರಹ್ಮಣ್ಯಪುರಂ ಚಿತ್ರದ ರಿಮೇಕು. ನಿರ್ದೇಶಕ ಮಹೇಶ್ ಬಾಬು ಈ ಹಿಂದೆ ಮಾಡಿದ ಒಂದಷ್ಟು ಚಿತ್ರಗಳು ನೆಲಕಚ್ಚಿವೆ. ಜೊತೆಗೆ ನಿರ್ಮಾಪಕರಿಂದ ಹಿಡಿದು, ಸಹ ನಿರ್ಮಾಪಕರ ವರೆಗೂ ಈ ಚಿತ್ರದಲ್ಲಿ ಪಾತ್ರ ಮಾಡುತ್ತೇನೆ ಎಂದು ಎಲ್ಲರೂ ಬಣ್ಣ ಹಚ್ಚಿ ಬಿಟ್ಟಿದ್ದಾರೆನ್ನುವುದು ಸುದ್ದಿ.

ಇನ್ನೊಂದು ಕಡೆ ಮಹೇಶ್ ಬಾಬು ಖಾಸಗಿ ವಾಹಿನಿಯೊಂದಕ್ಕೆ ಸೀರಿಯಲ್ ಮಾಡುತ್ತೇನೆ ಎಂದು ಹೋಗಿ, ಅಲ್ಲಿಯೂ ಕೈ ಸುಟ್ಟುಕೊಂಡು ಬಂದಿದ್ದಾರೆ. ವಾಹಿನಿಯಿಂದ ಹೊರಬಂದಿದ್ದಷ್ಟೇ ಅಲ್ಲ, ಆ ಚಾನೆಲ್ ಹೆಡ್ ಬಗ್ಗೆ ಬಾಯಿಗೆ ಬಂದಂತೇ ಮಾತನಾಡಿಕೊಂಡು ಓಡಾಡುತ್ತಿದ್ದಾರಂತೆ.

ಮಹೇಶ್ ಬಾಬು ಈ ರೀತಿ ಮಾತನಾಡುತ್ತಿರುವುದು ಆ ಸುದ್ದಿ ವಾಹಿನಿಯ ಮುಖ್ಯಸ್ಥರ ಕಿವಿಗೆ ಬಿದ್ದಿದೆ. ಚೆನ್ನಾಗಿ ಆಗಲಿ ಎಂದು ಪ್ರೋತ್ಸಾಹ ಕೊಟ್ಟರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದವರ ಮಾತಿಗೆಲ್ಲಾ ನಾವು ಕಿವಿಗೊವುಡುವುದಿಲ್ಲ ಎಂದು ಅವರು ಹೆಗಲು ಕುಡುಗಿ ಸುಮ್ಮನಾಗಿದ್ದಾರೆ.

ಜೊತೆಗೆ ಪ್ರೇಮ್ ಅಡ್ಡ ಚಿತ್ರದ ವಿಚಾರದಲ್ಲೂ ಅಡ್ಡಡ್ಡ ತಲೆ ಆಡಿಸಿದ್ದಾರಂತೆ. ಪ್ರೇಮ್ ಅಡ್ಡ ಯಾವ ವಾಹಿನಿಯ ಪಾಲಾಗುತ್ತೋ? ಸಿನಿಮಾ ಗೆಲ್ಲುತ್ತೋ? ಸೋಲುತ್ತೋ, ಅಥವಾ ಇನ್ನೊಂದು ಪ್ರೀತಿ ಏಕೆ ಭೂಮಿ ಮೇಲಿದೆ ಆಗುತ್ತೋ?

ಕನ್ನಡದಲ್ಲಿ ಒಟ್ಟು 7 ಮನೋರಂಜನಾ ಚಾನಲ್ ಗಳಿವೆ (ನ್ಯೂಸ್, ಮ್ಯೂಸಿಕ್, ಮಕ್ಕಳ ಚಾನೆಲ್ ಹೊರತು ಪಡಿಸಿ)

ಪ್ರೇಮ್ ಅಡ್ಡ ಚಿತ್ರದ ಲೇಟೆಸ್ಟ್ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

English summary
Kannada movie Prem Adda yet to sold to TV channels.
Please Wait while comments are loading...

Kannada Photos

Go to : More Photos