twitter
    For Quick Alerts
    ALLOW NOTIFICATIONS  
    For Daily Alerts

    ನರ್ಸ್ ಜಯಲಕ್ಷ್ಮಿ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ!

    By ಸಾಗರ್
    |

    ಈಟಿವಿ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ಮೊದಲ ಸ್ಪರ್ಧಿ ನರ್ಸ್ ಜಯಲಕ್ಷ್ಮಿ ಅವರನ್ನು ಮತ್ತೆ ಮನೆಗೆ ಸೇರಿಸಲಾಗಿದೆ. ಈ ಬಾರಿ ಜನರಲ್ ವಾರ್ಡ್ ಬದಲು ಸ್ಪೆಷಲ್ ವಾರ್ಡ್ ಅವರ ಪಾಲಿಗೆ ಸಿಕ್ಕಿದೆ.

    ವೋಟ್ ಔಟ್ ಆಗಿ ಹೊರಗೆ ಬಂದಿರುವ ಜಯಲಕ್ಷ್ಮಿ ಅವರನ್ನು ಮತ್ತೆ ಮನೆಗೆ ಬಿಡಲು ಏನು ಕಾರಣ. ಯಾರ ಒತ್ತಡ ಇದರಲ್ಲಿ ಕೆಲಸ ಮಾಡಿದೆ. ಜಯಲಕ್ಷ್ಮಿ ಅವರು ಮನೆಯಲ್ಲಿ ಬಾಕಿ ಉಳಿಸಿಕೊಂಡಿದ್ದ ಕಾರ್ಯ ಏನು ? ಈಟಿವಿ ಹಾಗೂ ಬಿಗ್ ಬಾಸ್ ಲೆಕ್ಕಾಚಾರ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

    Nurse Jayalakshmi get re entry Kannada Bigg Boss house

    * ಜಯಲಕ್ಷ್ಮಿ ಅವರನ್ನು ಇತರೆ ಸ್ಪರ್ಧಿಗಳು ವೋಟ್ ಔಟ್ ಮಾಡಿದರೂ ಅದು ಲೆಕ್ಕಕ್ಕೆ ಬರುವುದಿಲ್ಲ
    * ಪ್ರೇಕ್ಷಕರ ಎಸ್ ಎಂಎಸ್ ಮೂಲಕ ಮಾತ್ರ ಜಯಲಕ್ಷ್ಮಿ ಅವರನ್ನು ಮನೆಯಿಂದ ಹೊರ ಹಾಕಲು ಸಾಧ್ಯ
    * ಆದರೆ, ಪ್ರೇಕ್ಷಕರು ಎಷ್ಟು ಎಸ್ ಎಂಎಸ್ ಕಳಿಸಿದ್ದಾರೆ ಯಾರ ಪರ ಎಷ್ಟು SMS ಬಂದಿದೆ ಎಂಬುದನ್ನು ನಿರೂಪಕ ಸುದೀಪ್ ಹೇಳಿಲ್ಲ
    * ಬ್ರಹ್ಮಾಂಡ ಗುರೂಜಿಗೆ ಸಮಾನ ವೋಟ್ ಔಟ್ ಮತ ಬಿದ್ದಿದೆ. ನಿಯಮಗಳನ್ನು ಮುರಿದಿದ್ದಾರೆ ಆದರೂ ಮನೆಯಲ್ಲಿ ಹೇಗೆ ಇದ್ದಾರೆ ಎಂದು ಜಯಲಕ್ಷ್ಮಿ ಪ್ರಶ್ನಿಸಿ ಆಯೋಜಕರನ್ನು ತಬ್ಬಿಬ್ಬು ಮಾಡಿದ್ದಾರೆ

    ನಿಯಮದ ಪ್ರಕಾರ ಪ್ರತಿಯೊಬ್ಬರಿಗೆ ಬಂದ ಎಸ್ ಎಂಎಸ್ ಸಂಖ್ಯೆಯನ್ನು ಹೇಳಬೇಕಾಗುತ್ತದೆ. ಇದು ಹಿಂದಿ ಬಿಗ್ ಬಾಸ್ ನಲ್ಲೂ ನಡೆದು ಬಂದ ಕ್ರಮ. ಈ ನಿಯಮ ಮುರಿದಿರುವ ಈಟಿವಿ ಕನ್ನಡ ಹಾಗೂ ಎಂಡಮೋಲ್ ಸಂಸ್ಥೆ ಈಗ ಪಶ್ಚಾತ್ತಾಪದ ಅರಿವಾಗಿ ನರ್ಸ್ ಜಯಲಕ್ಷ್ಮಿ ಅವರನ್ನು ಇನ್ನೊಂದು ವಾರದ ಮಟ್ಟಿಗೆ ಮನೆಯಲ್ಲಿ ಇರುವಂತೆ ಸೂಚಿಸಿದ್ದಾರೆ.

    ಆದರೆ, ಈಗಾಗಲ್ಲೆ ಎಲ್ಲಾ ಪ್ಯಾಕ್ ಮಾಡಿ ಬೆಂಗಳೂರಿಗೆ ಬಂದಿರುವ ಜಯಲಕ್ಷ್ಮಿ ಅವರು ಪುಣೆಗೆ ಹೋಗಲು ಮನಸ್ಸು ಮಾಡಿಲ್ಲ ಎನ್ನಲಾಗಿದೆ. ಆದರೆ ಸ್ಪರ್ಧಿಗಳ ಬೇಡಿಕೆ ಮೇರೆ ಸುದೀಪ್ ಅವರು ನರ್ಸ್ ಅವರ ಮನಸು ಒಲಿಸಿ ಮನೆಗೆ ಮತ್ತೊಮ್ಮೆ ನರ್ಸ್ ಅವರನ್ನು ಬಿಟ್ಟು ಬಂದಿದ್ದಾರಂತೆ.

    13ನೇ ಸ್ಪರ್ಧಿ ಬರುವ ತನಕ ಮನೆಯಲ್ಲಿ ನೀವೆ ಬಿಗ್ ಬಾಸ್ ಎಂದು ನರ್ಸಮ್ಮಗೆ ಹೇಳಲಾಗಿದೆಯಂತೆ. ಈಗಾಗಲೇ ತಮ್ಮ ವಿರುದ್ಧ ಕತ್ತಿ ಮಸೆದ ಸ್ಪರ್ಧಿಗಳ ವಿಡಿಯೋ ತುಣುಕು ನೋಡಿರುವ ಜಯ ಅವರು ಸರಿಯಾದ ಕ್ರಮ ಜರುಗಿಸಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ. ಯಾವುದಕ್ಕೂ ತಪ್ಪದೇ ಈ ಟಿವಿ ಕನ್ನಡ ನೋಡಿ, ಅಕಸ್ಮಾತ್ ಜಯಲಕ್ಷ್ಮಿ ಅವರು ಮನೆಯಲ್ಲಿ ಕಾಣಿಸಿಕೊಳ್ಳದಿದ್ದರೆ ಈ ಲೇಖನವನ್ನು ಬೈದುಕೊಳ್ಳಬೇಡಿ ಇದು ತಮಾಷೆಗಾಗಿ ಏಪ್ರಿಲ್ ಫೂಲ್ ದಿನಕ್ಕಾಗಿ ಬರೆದಿದ್ದು ಮಾತ್ರ

    English summary
    Nurse Jayalakshmi who was voted out from Bigg Boss house gets another chance a surprise entry into Bigg Boss house on Apr.1.
    Monday, April 1, 2013, 11:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X