»   » 'ಬಿಗ್ ಬಾಸ್'ಗೆ ಪ್ರಥಮ್ ಆಯ್ಕೆ ಆಗಿದ್ದೇಗೆ? ಪರಮೇಶ್ವರ ಗುಂಡ್ಕಲ್ ಹೇಳಿದ ಸತ್ಯ ಕಥೆ

'ಬಿಗ್ ಬಾಸ್'ಗೆ ಪ್ರಥಮ್ ಆಯ್ಕೆ ಆಗಿದ್ದೇಗೆ? ಪರಮೇಶ್ವರ ಗುಂಡ್ಕಲ್ ಹೇಳಿದ ಸತ್ಯ ಕಥೆ

Posted by:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ಗೆದ್ದು ವೀಕ್ಷಕರ ಪಾಲಿಗೆ ರಿಯಲ್ ಹೀರೋ ಆದ ಪ್ರಥಮ್ 'ಬಿಗ್ ಬಾಸ್'ಗೆ ಹೇಗೆ ಆಯ್ಕೆ ಆದ್ರು ಎಂಬ ಕುತೂಹಲಕ್ಕೆ 'ಬಿಗ್ ಬಾಸ್' ನಿರ್ದೇಶಕ ಪರಮೇಶ್ವರ ಗುಂಡ್ಕಲ್ ತೆರೆ ಎಳೆದಿದ್ದಾರೆ.

ಕಾಮನ್ ಮ್ಯಾನ್ ಆಗಿ 'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಟ್ಟು, ಕೋಟ್ಯಾಂತರ ಜನರ ಮನಸ್ಸುನ್ನ ಗೆದ್ದ ಪ್ರಥಮ್ ಆಯ್ಕೆ ಬಗ್ಗೆ ಸಾಕಷ್ಟು ಕಥೆಗಳು, ಉಪಕಥೆಗಳು ಹುಟ್ಟಿಕೊಂಡಿದ್ದವು. ಯಾಕಂದ್ರೆ, ಪ್ರಥಮ್ 'ಬಿಗ್' ಮನೆಗೆ ಪ್ರವೇಶ ಮಾಡುವ ಮುನ್ನಾ ರಾಜಕಾರಣಿಗಳ ಬಳಿ ವಿಡಿಯೋ ಬೈಟ್ ತಂದ್ದಿದ್ದು ಸಖತ್ ಸೆನ್ಸೇಷನಲ್ ಹುಟ್ಟುಹಾಕಿತ್ತು.['ಬಿಗ್ ಬಾಸ್'ಗೆ 'ಹ್ಯಾಟ್ಸ್ ಆಫ್' ಎಂದ ಕನ್ನಡ ಕುಲಕೋಟಿ ವೀಕ್ಷಕರು.!]

ಆದ್ರೆ, ಈ ಅಂತೆ ಕಂತೆಗಳಿಗೆಲ್ಲಾ ಬ್ರೇಕ್ ಹಾಕಿರುವ 'ಬಿಗ್ ಬಾಸ್' ನಿರ್ದೇಶಕ ಪರಮೇಶ್ವರ ಗುಂಡ್ಕಲ್, ಪ್ರಥಮ್ ಆಯ್ಕೆ ಆಗಿದ್ದು ಹೇಗೆ ಅಂತಾ ಬಹಿರಂಗ ಪಡಿಸಿದ್ದಾರೆ.

ಒಂದೂವರೆ ವರ್ಷದ ಹಿಂದೆ ಪ್ರಥಮ್ ಭೇಟಿ!

ಒಂದೂವರೆ ವರ್ಷದ ಹಿಂದೆ ಪ್ರಥಮ್ ಭೇಟಿ!

ಪರಮೇಶ್ವರ ಗುಂಡ್ಕಲ್ ಅವರನ್ನ ಪ್ರಥಮ್ ಒಂದೂವರೆ ವರ್ಷದ ಹಿಂದೆಯೇ ಭೇಟಿ ಮಾಡಿದ್ದರು. 'ಸೂಪರ್ ಮಿನಿಟ್' ಕಾರ್ಯಕ್ರಮ ಚಿತ್ರೀಕರಣ ವೇಳೆ ಗುಂಡ್ಕಲ್ ಅವರನ್ನ ಭೇಟಿ ಮಾಡಿದ್ದರಂತೆ.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

'ಬಿಗ್ ಬಾಸ್'ಗೆ ಅವಕಾಶ ಕೊಡಿ ಎಂದಿದ್ದ ಪ್ರಥಮ್!

'ಬಿಗ್ ಬಾಸ್'ಗೆ ಅವಕಾಶ ಕೊಡಿ ಎಂದಿದ್ದ ಪ್ರಥಮ್!

'ಸೂಪರ್ ಮಿನಿಟ್'ಗೆ ಬಂದಾಗಲೇ, 'ಬಿಗ್ ಬಾಸ್' ಮನೆಗೆ ನನ್ನನ್ನು ಕಳುಹಿಸಿ ಎಂದು ಕೇಳಿಕೊಂಡಿದ್ದರು. ಅಷ್ಟೇ ಅಲ್ಲದೇ, ನೀವು ನಿರೀಕ್ಷೆ ಮಾಡುವುದನ್ನ ನಾನು ಖಂಡಿತ ಮಾಡುತ್ತೇನೆ ಅಂತಾನೂ ಹೇಳಿದ್ದರು.['ಬಿಗ್ ಬಾಸ್' ಗೆದ್ದ ಪ್ರಥಮ್: ವೀಕ್ಷಕರ ಸಂಭ್ರಮಕ್ಕೆ ಪಾರವೇ ಇಲ್ಲ.!]

ಕಳೆದ ಸೀಸನ್ ನಲ್ಲೂ ಪ್ರಥಮ್ ಹೆಸರು ಇತ್ತು!

ಕಳೆದ ಸೀಸನ್ ನಲ್ಲೂ ಪ್ರಥಮ್ ಹೆಸರು ಇತ್ತು!

''ಬಿಗ್ ಬಾಸ್ ಕನ್ನಡ-3' ರ ಸಮಯದಲ್ಲೇ ಪ್ರಥಮ್ ಹೆಸರು ಚಾಲ್ತಿಯಿಲ್ಲಿತ್ತು. ಆದ್ರೆ, ಆಗಿನ ಸ್ವರ್ಧಿಗಳ ಮಧ್ಯೆ ಪ್ರಥಮ್ ಬೇಕಾಗಿರಲಿಲ್ಲ ಎಂದು ಸುಮ್ಮನೆ ಆಗಿದ್ದೆ''['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

'ವಿಐಪಿ'ಗಳಿಂದ ಫೋನ್ ಮಾಡಿಸುತ್ತಿದ್ದ ಪ್ರಥಮ್!

'ವಿಐಪಿ'ಗಳಿಂದ ಫೋನ್ ಮಾಡಿಸುತ್ತಿದ್ದ ಪ್ರಥಮ್!

''ಪ್ರತಿನಿತ್ಯವೂ ನನಗೆ ಒಬ್ಬೊಬ್ಬರಿಂದ ಫೋನ್ ಮಾಡಿಸುತ್ತಿದ್ದರು ಪ್ರಥಮ್. ನಮ್ಮ ಹುಡುಗ, 'ಬಿಗ್ ಬಾಸ್'ಗೆ ಕಳುಹಿಸಿ ಅಂತ ಫೋನ್ ಮಾಡಿಸುತ್ತಿದ್ದರು. ನಾನು ಪ್ರಥಮ್ ಗೆ ಕರೆದು ಹೇಳಿದೆ, ನನಗೆ ಅವರಿಂದ, ಇವರಿಂದ ಫೋನ್ ಮಾಡಿಸುವುದು ಇಷ್ಟ ಆಗಲ್ಲ ಅಂತ. ಅಮೇಲೆ ಅವತ್ತೆ ಕೊನೆ, ಮತ್ಯಾರೂ ಫೋನ್ ಮಾಡೇ ಇಲ್ಲ''.

ಪ್ರಥಮ್ ಆಯ್ಕೆ ಹಿಂದೆ ಒಂದು ರೋಚಕ ಕಥೆ!

ಪ್ರಥಮ್ ಆಯ್ಕೆ ಹಿಂದೆ ಒಂದು ರೋಚಕ ಕಥೆ!

'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಾವು ಕೆಲವು ಬೇರೆ ಕಾರ್ಯಕ್ರಮಗಳನ್ನ ನೋಡುತ್ತಿರುತ್ತೇವೆ. ಹೀಗೆ ಒಮ್ಮೆ ಆಸ್ಟ್ರೇಲಿಯಾದ 'ಬಿಗ್ ಬ್ರದರ್' ಕಾರ್ಯಕ್ರಮ ನೋಡುವಾಗ, ಒಬ್ಬ ವ್ಯಕ್ತಿಯ ಕ್ಯಾರೆಕ್ಟರ್ ಗಮನ ಸೆಳೆಯುತ್ತೆ. ಅವರ ಹೆಸ್ರು 'ಟಿಮ್''['ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!]

'ಟಿಮ್'ನಿಂದ ಸ್ಪೂರ್ತಿ ಆದ್ರು ಪ್ರಥಮ್

'ಟಿಮ್'ನಿಂದ ಸ್ಪೂರ್ತಿ ಆದ್ರು ಪ್ರಥಮ್

'ಬಿಗ್ ಬ್ರದರ್' ಶೋ ನಲ್ಲಿ 'ಟಿಮ್', ಮನೆಯ ಎಲ್ಲ ಸದಸ್ಯರೊಂದಿಗೆ ಹೊಂದಿಕೊಳ್ಳುವುದಿಲ್ಲ. ಆದ್ರೂ ಹೋಗ್ತಾ ಹೋಗ್ತಾ ಜನರಿಗೆ ಇಷ್ಟವಾಗಿ 'ಟಿಮ್' ವಿನ್ನರ್ ಆಗ್ಬಿಡ್ತಾರೆ. ಆಗ ಯೋಚನೆ ಮಾಡಿದೆ, 'ಟಿಮ್' ಅಂತಹ ಒಬ್ಬ ವ್ಯಕ್ತಿ ಕನ್ನಡದ 'ಬಿಗ್ ಬಾಸ್'ನಲ್ಲಿದ್ರೆ ಎಷ್ಟು ಚೆನ್ನಾಗಿರುತ್ತೆ ಅಂತ. ಅದೇ ಟೈಮ್ ನಲ್ಲಿ ಪ್ರಥಮ್ ಅವರು ಕೂಡ ಬರ್ತಿದ್ರು.['ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ಹೈಲೈಟ್ಸ್ ಪಾರ್ಟ್-2]

ಪ್ರಥಮ್ ಗೆ ನೀಡಿದ್ರು ಟಾಸ್ಕ್!

ಪ್ರಥಮ್ ಗೆ ನೀಡಿದ್ರು ಟಾಸ್ಕ್!

ಪ್ರಥಮ್ ಅವರನ್ನ ಈ ಬಾರಿಯ 'ಬಿಗ್ ಬಾಸ್'ಗೆ ಆಯ್ಕೆ ಮಾಡುವುದು ಖಚಿತವಾಗಿತ್ತು. ಆದ್ರೂ, ಅವರಿಗೆ ಅದನ್ನ ಹೇಳಿರಲಿಲ್ಲ. ಅಮೇಲೆ ಅವರಿಗೊಂದು ಟಾಸ್ಕ್ ಕೊಟ್ಟೆ. ವಿಐಪಿಗಳ ಜೊತೆಯಲ್ಲಿ ಫೋಟೊ ತೆಗಿಸಿಕೊಂಡಿದ್ದರು. ಹಾಗಾಗಿ, ಪ್ರಥಮ್ ನಿಮ್ಮ ಬಗ್ಗೆ ವಿಐಪಿಗಳ ಬಳಿ ವಿಡಿಯೋ ಬೈಟ್ ತಗೊಂಡು ಬರಬಹುದಾ? ಅಂತ ಸುಮ್ಮನೆ ಹೇಳಿದೆ. ಅವರು ತರಲ್ಲ, ಆದ್ರೂ, ಅವರಿಗೊಂದು ಸಣ್ಣ ಮಟ್ಟದ ಕನ್ ಫ್ಯೂಷನ್ ಇರಲಿ ಅಂತ ಹೇಳಿದ್ದು. ಆದ್ರೆ, ಪ್ರಥಮ್ ಹೇಳಿದ್ದಕ್ಕಿಂತ ಹೆಚ್ಚು ಜನರ ಬಳಿ ಬೈಟ್ ತಂದಿದ್ದರು''['ಬಿಗ್ ಬಾಸ್ ಫಿನಾಲೆ' ಬಗ್ಗೆ ಒನ್ ಇಂಡಿಯಾ 'POLL' ಹೇಳಿದ್ದು ನಿಜವಾಯ್ತು!]

'ಬಿಗ್ ಬಾಸ್ 4'ರ ಕೊನೆ ಕ್ಷಣದಲ್ಲಿ ಆಯ್ಕೆ!

'ಬಿಗ್ ಬಾಸ್ 4'ರ ಕೊನೆ ಕ್ಷಣದಲ್ಲಿ ಆಯ್ಕೆ!

ಹೀಗೆ, 'ಬಿಗ್ ಬಾಸ್ ಕನ್ನಡ-4' ಕೊನೆ ಕ್ಷಣದಲ್ಲಿ ಪ್ರಥಮ್ ಆಯ್ಕೆಯಾದರು. ಆರಂಭದಲ್ಲಿ ಅವರಿಗೆ, ನೋಡೋಣ ಕಳುಹಿಸುವ ಸಾಧ್ಯತೆ ಇದೆ ಅಂತ ಮಾತ್ರ ಹೇಳೀದ್ವಿ. ಅಂತಿಮವಾಗಿ ಅಕ್ಟೋಬರ್ 7 ರಂದು ಪ್ರಥಮ್ ಗೆ ಖಚಿತ ಮಾಡಿದ್ವಿ. ಆದ್ರೆ, ನಮ್ಮ ನಿರೀಕ್ಷೆಯನ್ನ ಹಾಗೂ ಜನರ ನಿರೀಕ್ಷೆಯನ್ನ ಹುಸಿ ಮಾಡಲಿಲ್ಲ.[ಪ್ರಥಮ್ ಆಯ್ಕೆ ಬಗ್ಗೆ ಪರಮೇಶ್ವರ ಗುಂಡ್ಕಲ್ ಹೇಳಿದ ಸತ್ಯ ಕಥೆ ವಿಡಿಯೋ ಇಲ್ಲಿದೆ ನೋಡಿ]

English summary
BiggBoss Kannada Director and Colours Kannada and Colours Super Business Head Parameshwar Gundkal Has shared the story Behind of olle huduga Pratham,s selection
Please Wait while comments are loading...

Kannada Photos

Go to : More Photos