twitter
    For Quick Alerts
    ALLOW NOTIFICATIONS  
    For Daily Alerts

    ಹಿಂದಿಯ ಜನಪ್ರಿಯ ರಿಯಾಲಿಟಿ ಶೋಗಳೇನು ಒರಿಜಿನಲ್ಲಾ?

    |

    ಹಿಂದಿ ಅಥವಾ ಬೇರೆ ಭಾಷೆಯ ಟಿವಿ ಶೋಗಳನ್ನು ನಮ್ಮವರು ಕನ್ನಡದ ಕಿರುತೆರೆಗೆ ತಂದರೆ ಅದನ್ನು ಕಾಪಿ ಮಾಡಿದ್ದಾರೆ ಎನ್ನಲಾಗುತ್ತೆ.

    ಆದರೆ, ಹಿಂದಿಯವರು ಪಾಶ್ಚಿಮಾತ್ಯ ದೇಶದ ಶೋಗಳನ್ನು ಕಿರುತೆರೆಗೆ ತಂದರೆ ಅದಕ್ಕೆ ಬಹುಷ inspired by ಅನ್ನಬಹುದೇನೋ?

    ರಿಯಾಲಿಟಿ ಶೋಗಳು ಕಿರುತೆರೆಯಲ್ಲಿ ಜನಪ್ರಿಯ ಪಡೆಯುತ್ತಿದ್ದಂತೆಯೇ, ಪ್ರಮುಖ ನಟರು ಅದರ ಮೇಲೆ ಹೆಚ್ಚಿನ ಒಲವು ತೋರಿಸುತ್ತಿರುವುದು ಕನ್ನಡದಲ್ಲೂ ನೋಡಿದ್ದೇವೆ.

    ಹಿಂದಿಯಲ್ಲಿ ಬಂದ ಬಹಳಷ್ಟು ಶೋಗಳು ಕನ್ನಡದಲ್ಲೂ ಬರುತ್ತಿವೆ. ಕೆಲವೊಂದು ಶೋಗಳು ಜನಪ್ರಿಯ ಉತ್ತುಂಗಕ್ಕೇರಿದ್ದರೆ, ಕೆಲವೊಂದು ಜನಮನ್ನಣೆ ಗಳಿಸುವಲ್ಲಿ ವಿಫಲವಾಗಿದೆ.

    ಹಾಗಾದರೆ, ಹಿಂದಿಯಲ್ಲಿ ಈ ಹಿಂದೆ ಬಂದ ಮತ್ತೀಗ ಬರುತ್ತಿರುವ ರಿಯಾಲಿಟಿ ಶೋಗಳು ಎಲ್ಲಿಂದ ಕಾಪಿಯಾಗಿದ್ದು. ಮುಂದೆ ಸ್ಲೈಡಿನಲ್ಲಿ ನೀಡಲಾಗಿದೆ..

    ಇಸ್ ಜಂಗಲ್ ಸೆ ಮುಜೆ ಬಜಾವೊ

    ಇಸ್ ಜಂಗಲ್ ಸೆ ಮುಜೆ ಬಜಾವೊ

    ಬ್ರಿಟನ್ನಿನ ಜನಪ್ರಿಯ ಟಿವಿಶೋ 'I'm a celebrity..Get me Out of Here' ಇದರ ಹಿಂದಿ ಕಾಪಿಯೇ 'ಇಸ್ ಜಂಗಲ್ ಸೆ ಮುಜೆ ಬಜಾವೊ'. ಜುಲೈ 2009ರಲ್ಲಿ ಈ ಶೋ ಸೋನಿ ಎಂಟರ್ಟೈನ್ಮೆಂಟ್ ವಾಹಿನಿಯಲ್ಲಿ ಆರಂಭವಾಯಿತು. ಮೋನಾ ವಾಸು ಈ ಶೋನ ವಿಜೇತರಾಗಿದ್ದರು.

    ಸಚ್ ಕಾ ಸಾಮ್ನಾ

    ಸಚ್ ಕಾ ಸಾಮ್ನಾ

    ಈ ಶೋವಿನ ಮೂಲ ಕೆನಡದ ಲೈಟ್ ಹರ್ಟೇಡ್ ಎಂಟರ್ಟೈನ್ಮೆಂಟ್ ಸಂಸ್ಥೆ ಪ್ರಾಯೋಜಕತ್ವದ 'The Moment of Truth' ಕಾರ್ಯಕ್ರಮ. ಭಾರತಕ್ಕೆ ಇದರ ರೈಟ್ಸ್ ಅನ್ನು ಬಿಗ್ ಸಿನರ್ಜಿ ಸಂಸ್ಥೆ ಪಡೆದುಕೊಂಡಿತು. ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಜುಲೈ 2009ರಿಂದ ಈ ಶೋ ಆರಂಭವಾಯಿತು.

    ಝಲಕ್ ದಿಕ್ಲಾ ಜಾ..

    ಝಲಕ್ ದಿಕ್ಲಾ ಜಾ..

    ದೇಶದಲ್ಲಿ ಭಾರೀ ಜನಪ್ರಿಯ ಪಡೆದ ರಿಯಾಲಿಟಿ ಶೋ ಝಲಕ್ ದಿಕ್ಲಾಜಾವೋ. ಇದು ಬ್ರಿಟಿಷ್ ಟಿವಿ ಸೀರೀಸ್, ಬಿಬಿಸಿ ಹಂಚಿಕೆಯ ಮುಖಾಂತರ ಬಂದ 'Strictly Come Dancing' ಎನ್ನುವ ಕಾರ್ಯಕ್ರಮದ ಕಾಪಿ. 2006ರಲ್ಲಿ ಸೋನಿ ಎಂಟರ್ಟೈನ್ಮೆಂಟ್ ವಾಹಿನಿಯಲ್ಲಿ ಈ ಕಾರ್ಯಕ್ರಮ ಆರಂಭವಾಗಿತ್ತು.

    ಇಂಡಿಯನ್ ಐಡಲ್

    ಇಂಡಿಯನ್ ಐಡಲ್

    ಅಮೆರಿಕನ್ ಐಡಲ್ ಈ ಶೋವಿನ ಮೂಲ. ಹಿಂದಿಯ ಇಂಡಿಯನ್ ಐಡಲ್ ಶೋ ಇದುವರೆಗೆ ಆರು ಸರಣಿಯನ್ನು ಮುಗಿಸಿದೆ. ಸೋನಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಈ ಶೋ, ಭಾರತದ ಟಿವಿ ಲೋಕದಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿತ್ತು.

    ಕೌನ್ ಬನೇಗ ಕರೋಡ್ ಪತಿ

    ಕೌನ್ ಬನೇಗ ಕರೋಡ್ ಪತಿ

    ಬ್ರಿಟನ್ನಿನ ಜನಪ್ರಿಯ ರಿಯಾಲಿಟಿ ಶೋನ ' Who Wants to be a Millionaire' ಹಿಂದಿ ಕಾಪಿಯೇ ಕೌನ್ ಬನೇಗ ಕರೋಡ್ ಪತಿ. ಇದು ಕನ್ನಡದಲ್ಲೂ ಕಾಪಿಯಾಗಿ 'ಕನ್ನಡದ ಕೋಟ್ಯಾಧಿಪತಿ' ಎಂದು ಪ್ರಸಾರವಾಗಿ ಜನಪ್ರಿಯವಾಯಿತು.

    ಕ್ಯಾ ಆಪ್ ಪಾಂಚ್ವಿ ಪಾಸ್

    ಕ್ಯಾ ಆಪ್ ಪಾಂಚ್ವಿ ಪಾಸ್

    ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾದ 'ಕ್ಯಾ ಆಪ್ ಪಾಂಚ್ವಿ ಪಾಸ್' ಹಿಂದಿ ಟಿವಿಶೋವನ್ನು ಶಾರೂಖ್ ಖಾನ್ ನಡೆಸಿಕೊಟ್ಟಿದ್ದರು. ಇದು ಅಮೆರಿಕಾದ 'Are you Smarter than a 5th Grader' ಟಿವಿ ಶೋನ ಕಾಪಿಯಾಗಿದೆ.

    ಬಿಗ್ ಬಾಸ್

    ಬಿಗ್ ಬಾಸ್

    ಈ ರಿಯಾಲಿಟಿ ಶೋನ ಮೂಲ ನೆದರ್ಲ್ಯಾಂಡಿನ ಟಿವಿ ವಾಹಿನಿಯ 'Big Brother' ಕಾರ್ಯಕ್ರಮ. ಇದು 1999 ಮೊದಲು ಪ್ರಸಾರವಾಗಿತ್ತು. ನಂತರ ಹಿಂದಿಯಲ್ಲಿ ಪ್ರಸಾರವಾಗಿ ತದನಂತರ ಕನ್ನಡದಲ್ಲೂ ಬಿಗ್ ಬಾಸ್ ಎರಡು ಸೀಸನ್ ನಲ್ಲಿ ಪ್ರಸಾರವಾಯಿತು.

    ಕಮ್ ಜೋರ್ ಕಡಿ ಕೌನ್

    ಕಮ್ ಜೋರ್ ಕಡಿ ಕೌನ್

    ಕಮ್ ಜೋರ್ ಕಡಿ ಕೌನ್ ಹಿಂದಿ ಟಿವಿಶೋ, ಇಂಗ್ಲೆಡ್ ನ ಬಿಬಿಸಿ ವಾಹಿಯಲ್ಲಿ ಆಗಸ್ಟ್ 2000ರಲ್ಲಿ ಮೊದಲು ಪ್ರಸಾರವಾಯಿತು. ಅಮೆರಿಕಾದ ಜನಪ್ರಿಯ ಶೋ 'ವೀಕೆಸ್ಟ್ ಲಿಂಕ್ 'ನ ಕಾಪಿ. ಹಿಂದಿಯಲ್ಲಿ ನೀನಾ ಗುಪ್ತಾ ನಡೆಸಿಕೊಟ್ಟ ಈ ಶೋ ಜನಮನ್ನಣೆ ಪಡೆಯುವಲ್ಲಿ ವಿಫಲವಾಯಿತು.

    English summary
    Popular Indian TV shows especially Hindi Reality shows copied from other countries TV shows. Here is the list of eight such Hindi TV shows.
    Monday, January 5, 2015, 15:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X