ಕೋಟ್ಯಾಧಿಪತಿಯಲ್ಲಿ ಪ್ರಭುದೇವ ಗೆದ್ದದೆಷ್ಟು? ಈ ಶೋ ನೋಡಿ

Posted by:

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸನ್ ಫೀಸ್ಟ್ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಸೆಲೆಬ್ರಿಟಿ ಗೆಸ್ಟ್ ಆಗಿ ಡ್ಯಾನ್ಸ್ ಕಿಂಗ್ ಪ್ರಭುದೇವ ಭಾಗವಹಿಸುವ ವಿಚಾರವನ್ನು ಈ ಹಿಂದೆ ತಿಳಿಸಿದ್ದೆವು. ಈ ವಿಶೇಷ ಸಂಚಿಕೆ ಇದೇ ಏಪ್ರಿಲ್ 3 ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ನೃತ್ಯಗಾರನಾಗಿ ಚಿತ್ರರಂಗ ಪ್ರವೇಶಿಸಿದ ಡ್ಯಾನ್ಸ್ ಕಿಂಗ್ ಪ್ರಭುದೇವ, ಇಂದು ಇಡೀ ದೇಶದ ತುಂಬಾ ಮನೆಮಾತಾಗಿದ್ದಾರೆ. ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಹೆಸರು ಮಾಡಿರುವ ಪ್ರಭುದೇವ ಅವರ ಈ ವರ್ಷದ ಬರ್ತಡೇಯನ್ನು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಮ್ಮುಖದಲ್ಲಿ ಆಚರಿಸಿ ಕೊಳ್ಳಲಿರುವುದು ಕಾರ್ಯಕ್ರಮದ ಇನ್ನೊಂದು ವಿಶೇಷ.

ಜೊತೆಗೆ ಪುನೀತ್ ಜೊತೆ ಪ್ರಭುದೇವಾ ಒಂದಷ್ಟು ಸ್ಟೆಪ್ಸ್ ಕೂಡಾ ಹಾಕಲಿದ್ದಾರೆ. ಅಪ್ಪುಗೆ ಪ್ರಭು ಪ್ರೀತಿಯಿಂದ ಕೊರಿಯಾಗ್ರಫಿ ಮಾಡಲಿದ್ದಾರೆ. ಈ ಇಬ್ಬರೂ ಸೇರಿ ಒಂದೇ ವೇದಿಕೆಯಲ್ಲಿ ಹೆಜ್ಜೆ ಗುರುತು ಮೂಡಿಸಲಿದ್ದಾರೆ.

ಇದೇ ಎಪ್ರಿಲ್ 3ರಂದು ಪ್ರಭುದೇವಾ ಹುಟ್ಟುಹಬ್ಬ. ಅಂದು ಕನ್ನಡದ ಕೋಟ್ಯಾಧಿಪತಿ ಗೇಮ್ ಶೋ ಆಡಲು ಪ್ರಭುದೇವಾಗೆ ಅವರ ತಂದೆ ಮೂಗೂರು ಸುಂದರಂ ಸೇರಿದಂತೆ ಅವರ ಇಡೀ ಕುಟುಂಬ ಕೋಟ್ಯಾಧಿಪತಿಯಲ್ಲಿ ಭಾಗವಹಿಸಲಿದೆ.

ಪ್ರಭುದೇವಾ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಹೇಳಿದ್ದೇನು..

ಪ್ರಭುದೇವ ಇನ್ ಕೋಟ್ಯಾಧಿಪತಿ

ಈ ಸಂಚಿಕೆಯಲ್ಲಿ ಗೆಲ್ಲುವ ಪ್ರಶಸ್ತಿ ನಗದನ್ನು ಚಾರಿಟೆಬಲ್ ಟ್ರಸ್ಟಿಗೆ ನೀಡುತ್ತೇನೆ. ವಿಕಲಚೇತನ ಮಕ್ಕಳು ಮತ್ತು ವೃದ್ಧಾಶ್ರಮಗಳಿಗೆ ಕೊಡಲಿಚ್ಛಿಸುತ್ತೇನೆ ಎಂದು ಪ್ರಭುದೇವಾ ಹೇಳಿದ್ದಾರೆ.

ಪ್ರಭುದೇವ ಇನ್ ಕೋಟ್ಯಾಧಿಪತಿ

ಕಾರ್ಯಕ್ರಮದಲ್ಲಿ ತನ್ನ ಬಾಲ್ಯದ ನೆನಪುಗಳನ್ನು, ಮೈಸೂರಿನಲ್ಲಿ ತನ್ನ ಅಜ್ಜಿ, ತಾತನ ಜೊತೆ ಕಳೆದ ದಿನಗಳನ್ನು ಮೆಲುಕು ಹಾಕಿದ ಪ್ರಭುದೇವಾಗೆ ಅಮ್ಮ ಮಾಡಿದ ಪಾಯಸ ಎಂದರೆ ಬಲು ಪ್ರೀತಿಯಾಗಿತ್ತಂತೆ. ಈಗಲೂ ಆ ಪಾಯಸದ ಬಗ್ಗೆ ಹೇಳಿದಾಗ ಅವರ ಬಾಯಲ್ಲಿ ನೀರು ಚಿಮ್ಮುತ್ತದಂತೆ.

ಪ್ರಭುದೇವ ಇನ್ ಕೋಟ್ಯಾಧಿಪತಿ

ಪ್ರಭುದೇವ ಇನ್ ಕೋಟ್ಯಾಧಿಪತಿ
ಪ್ರಭುದೇವಾ ತಂದೆ ಸುಂದರಂ ಮೈಸೂರಿನಲ್ಲಿ ತಮ್ಮ ಕುಲಕಸುಬಾದ ಕೃಷಿಯನ್ನೇ ಇಂದಿಗೂ ಮುಂದುವರೆಸಿಕೊಂಡು ಹೋಗಿದ್ದಾರೆ. ಇನ್ನೊಂದು ವಿಷಯ ಏನೆಂದರೆ, ಇಂದಿಗೂ ಅದು ಪ್ರಭುದೇವಾ ಗಮನಕ್ಕೆ ಬಂದಿರಲಿಲ್ಲ. ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಈ ವಿಷಯ ಅವರಿಗೆ ತಿಳಿದಾಗ ಪ್ರಭುದೇವಾ ಫುಲ್ suprise.

ಪ್ರಭುದೇವ ಇನ್ ಕೋಟ್ಯಾಧಿಪತಿ

ಈ ಕಾರ್ಯಕ್ರಮದಲ್ಲಿ ಮೂಗುರು ಸುಂದರಂ ಅವರೂ ತಮ್ಮ ಜೀವನ ಅನುಭವ ಹಂಚಿಕೊಂಡಿದ್ದಾರೆ. ಡಾ.ರಾಜ್‍ರ ಮೆಗಾಹಿಟ್ ಸಾಂಗ್ 'ನನ್ನ ನೀನು ಗೆಲ್ಲಲಾರೆ' ಹಾಡಿಗೆ ಕೊರಿಯಾಗ್ರಫಿ ಮಾಡಿದ್ದೇ ಮೂಗುರು ಸುಂದರಂ.

ಪ್ರಭುದೇವ ಇನ್ ಕೋಟ್ಯಾಧಿಪತಿ

ಅಂದು ರಾಜ್ ಜೊತೆ ಕಳೆದ ರೋಚಕ ಸಂದರ್ಭಗಳನ್ನು ಮೂಗೂರು ಕೋಟ್ಯಾಧಿಪತಿ ವೇದಿಕೆಯಲ್ಲಿ ಬಿತ್ತರಿಸಿದ್ದಾರೆ. ನೃತ್ಯಲೋಕದ ದಂತಕತೆ ಎನ್ನಬಹುದಾದ ಪ್ರಭುದೇವಾ ಎಷ್ಟು ಲಕ್ಷ ಗೆಲ್ಲುತ್ತಾರೆ? ಕೋಟಿ ಪ್ರಶ್ನೆಗೆ ಉತ್ತರಿಸುತ್ತಾರಾ? ಎಂಬ ನಿಮ್ಮ ಕಾತರಕ್ಕೆ ಉತ್ತರ ಇದೇ ಎಪ್ರಿಲ್ 3ರ ಸಂಚಿಕೆ ನೋಡಿ.

Read more about: kannadada kotyadhipati, punith rajkumar, prabhudeva, suvarna channel, tv, reality show, ಕನ್ನಡ ಕೋಟ್ಯಾಧಿಪತಿ, ಸುವರ್ಣ ವಾಹಿನಿ, ಟಿವಿ, ರಿಯಾಲಿಟಿ ಶೋ, ಪ್ರಭುದೇವ, ಪುನೀತ್ ರಾಜ್ ಕುಮಾರ್

English summary
Dance King Prabhudeva in Kannadada Kotyahdipati reality show with Power Star Puneet Rajkumar. This programme will be aired on April 3rd.

Kannada Photos

Go to : More Photos