»   » 'ಫೇಸ್ ಬುಕ್'ನಲ್ಲಿ ಕೀರ್ತಿ, ರೇಖಾಗೆ ಗೆಲುವಿನಾರ್ಪಣೆ ಮಾಡಿದ 'ಬಿಗ್ ಬಾಸ್' ಪ್ರಥಮ್!

'ಫೇಸ್ ಬುಕ್'ನಲ್ಲಿ ಕೀರ್ತಿ, ರೇಖಾಗೆ ಗೆಲುವಿನಾರ್ಪಣೆ ಮಾಡಿದ 'ಬಿಗ್ ಬಾಸ್' ಪ್ರಥಮ್!

Posted by:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ವಿನ್ನರ್ ಆಗಿ ಹೊರಹೊಮ್ಮಿದ ಒಳ್ಳೆ ಹುಡುಗ ಪ್ರಥಮ್, ತಮ್ಮ ಗೆಲುವನ್ನ ವೇದಿಕೆ ಮೇಲೆ ವಿಭಿನ್ನವಾಗಿ ಆಚರಸಿಕೊಂಡಿದ್ದನ್ನ ಎಲ್ಲರೂ ನೋಡಿದ್ದೇವೆ.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

ಇದೀಗ, ತಮ್ಮ ಗೆಲುವನ್ನ ಮತ್ತಷ್ಟು ಅರ್ಥಪೂರ್ಣವಾಗಿಸಿಕೊಂಡಿದ್ದಾರೆ. ತಮ್ಮ ಗೆಲುವಿನಲ್ಲಿ 114 ದಿನ ಜೊತೆಯಾಗಿದ್ದ ಸ್ನೇಹಿತರಿಗೆ ಈ ಗೆಲುವನ್ನ ಅರ್ಪಿಸಿದ್ದಾರೆ. ರೇಖಾ, ಕೀರ್ತಿ, ಶಾಲಿನಿ, ಮಾಳವಿಕಾ ಅವರು ನನ್ನ ಗೆಲುವಿನಲ್ಲಿ ಸಮಭಾಗಿಗಳು ಎಂದಿದ್ದಾರೆ. ಈ ಬಗ್ಗೆ 'ಬಿಗ್ ಬಾಸ್' ಗೆದ್ದ ನಂತರ, ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ ಪ್ರಥಮ್ ಪದಗಳನ್ನು ನೀವೆ ನೋಡಿ....

ಇದು ನನ್ನ ಗೆಲುವಲ್ಲ, ಮೂವರ ಗೆಲುವು!

ಇದು ನನ್ನ ಗೆಲುವಲ್ಲ, ಮೂವರ ಗೆಲುವು!

''ಇದು ನನ್ನ ಗೆಲುವಲ್ಲ.... ನನ್ನ ಹಾಗು ಕೀರ್ತಿ, ರೇಖಾ ಮೇಡಂ ಮೂವರ ಗೆಲುವು... ಮುಖ್ಯವಾಗಿ ಕನ್ನಡಿಗರ ಪ್ರೀತಿಯ ಗೆಲುವು....''['ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!]

ಮಾಳವಿಕಾ, ಶಾಲಿನಿ ನನ್ನ ಗೆಲುವಿನ ಸಮಭಾಗಿಗಳು!

ಮಾಳವಿಕಾ, ಶಾಲಿನಿ ನನ್ನ ಗೆಲುವಿನ ಸಮಭಾಗಿಗಳು!

''ಕೀರ್ತಿ, ರೇಖಾ, ಶಾಲಿನಿ, ಮಾಳವಿಕ ಮೇಡಂ ನನ್ನ ಗೆಲುವಿನ ಸಡಗರದಲ್ಲಿ ಸಮಭಾಗಿಗಳು.... ಗೆಲುವು ನನ್ನದಾಗಿರಬಹುದು.... ವೀಕ್ಷಕರ ಮನದಲ್ಲಿ ಸಂತಸ ಮೂಡಿಸಿದವರಲ್ಲಿ ಮನೆಯ ಎಲ್ಲರೂ ಗೆದ್ದಿದ್ದೀರಿ.....''['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ಬಿಗ್ ಬಾಸ್ ಸದಸ್ಯರಿಗೂ ಶುಭವಾಗಲಿ!

ಬಿಗ್ ಬಾಸ್ ಸದಸ್ಯರಿಗೂ ಶುಭವಾಗಲಿ!

''ನಿಮಗೆ ಸಿಗದ ದುಡ್ಡು ನನಗೆ ಬೇಡ.... ಕನ್ನಡಿಗರ ಪ್ರೀತಿಯ ಗೆಲುವು ಕಷ್ಟದಲ್ಲಿರುವ ಎಲ್ಲರಿಗೂ ಉಪಯೋಗವಾಗಲಿ....ಹೊಸ ಭರವಸೆಯೊಂದಿಗೆ ಹೊರ ಬಂದಿದ್ದೇನೆ. ನಮ್ಮೆಲ್ಲ ಬಿಗ್ ಬಾಸ್ ಮನೆಯ ಸದಸ್ಯರಿಗೂ ಶುಭವಾಗಲಿ...''

'ಬಿಗ್ ಬಾಸ್ ಕನ್ನಡ 4' ವಿನ್ನರ್ ಪ್ರಥಮ್!

'ಬಿಗ್ ಬಾಸ್ ಕನ್ನಡ 4' ವಿನ್ನರ್ ಪ್ರಥಮ್!

'ಬಿಗ್ ಬಾಸ್ ಕನ್ನಡ 4' ಗ್ರ್ಯಾಂಡ್ ಫಿನಾಲೆಯಲ್ಲಿ ರೇಖಾ, ಕೀರ್ತಿ ಮತ್ತು ಪ್ರಥಮ್ ಕೊನೆಯ ಹಂತಕ್ಕೆ ಪ್ರವೇಶ ಪಡೆದಿದ್ದರು. ಅಂತಿಮವಾಗಿ, ರೇಖಾ ಅವರು ಮೂರನೇ ಸ್ಥಾನಕ್ಕೆ, ಕೀರ್ತಿ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೇ, ಪ್ರಥಮ್ ಮೊದಲ ಸ್ಥಾನಗಳಿಸಿಕೊಂಡಿದ್ದರು.

English summary
After Winning 'Bigg Boss Kannada 4' Title, Olle Huduga Pratham Gives Winning Credit to Rekha, Keerthi and Malavika Along With Him..
Please Wait while comments are loading...

Kannada Photos

Go to : More Photos