»   » ರಮ್ಯಾ ಮೇಡಂ ನಿನ್ನೆ ಎಲ್ಲಿದ್ದರು, ಏನ್ ಮಾಡಿದ್ರು? 'ದಾಖಲೆ' ಇಲ್ಲಿದೆ.!

ರಮ್ಯಾ ಮೇಡಂ ನಿನ್ನೆ ಎಲ್ಲಿದ್ದರು, ಏನ್ ಮಾಡಿದ್ರು? 'ದಾಖಲೆ' ಇಲ್ಲಿದೆ.!

Posted by:
Subscribe to Filmibeat Kannada

ಶೀರ್ಷಿಕೆ ನೋಡಿ 'ಕಣ್ಣು ಬಾಯಿ ಬಿಟ್ಟು, ಏನೇನೋ ಕಲ್ಪನೆ' ಮಾಡಿಕೊಳ್ಳುವ ಮುನ್ನ ಇದು ಸಿನಿಮಾ ಲೋಕದ 'ರೀಲ್' ಸುದ್ದಿಗಳನ್ನ ಹೊತ್ತು ತರುವ ತಾಣ ಅನ್ನೋದನ್ನ ದಯವಿಟ್ಟು ಮರೆಯಬೇಡಿ.

ಒಂದ್ಕಾಲದಲ್ಲಿ ನಟಿ ಆಗಿ ಬೆಳ್ಳಿಪರದೆ ಮೇಲೆ ಮಿಂಚಿದ ನಂತರ ರಾಜಕಾರಣಕ್ಕೆ ಧುಮುಕಿದ ಲಕ್ಕಿ ಸ್ಟಾರ್ ರಮ್ಯಾ ಇತ್ತೀಚೆಗೆ ಗಾಂಧಿನಗರದಲ್ಲಿ ಕಾಣಿಸಿಕೊಳ್ಳುವುದೇ ಅಪರೂಪವಾಗಿಬಿಟ್ಟಿದೆ. [ಸ್ಯಾಂಡಲ್ ವುಡ್ ಗೆ ಬಾಯ್ ಬಾಯ್ ಹೇಳಿದ ಲಕ್ಕಿ ಸ್ಟಾರ್ ರಮ್ಯಾ]

ಮಂಡ್ಯದಲ್ಲಿ ಆಗಾಗ ರೌಂಡ್ ಹಾಕುವ ಮಾಜಿ ಸಂಸದೆ ನಿನ್ನೆ ಬಣ್ಣ ಹಚ್ಚಿದ್ರು. ಸೀರೆ ತೊಟ್ಟು ಲಕಲಕ ಹೊಳೆಯುತ್ತಿದ್ದರು. ಸಿಂಗಾರ ಮಾಡಿಕೊಂಡಿದ್ದ ರಮ್ಯಾ ರವರನ್ನು ನೋಡಿ ಅಭಿಮಾನಿಗಳು ಶಿಳ್ಳೆ ಹೊಡೆಯುತ್ತಿದ್ದರು.

ಅಸಲಿಗೆ ರಮ್ಯಾ ಮೇಡಂ ನಿನ್ನೆ ಎಲ್ಲಿದ್ದರು ಎಂಬುದರ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

ನಟ ದರ್ಶನ್ ಜೊತೆ ರಮ್ಯಾ ಮಿಂಚ್ತಿದ್ರು.!

ನಟ ದರ್ಶನ್ ಜೊತೆ ರಮ್ಯಾ ಮಿಂಚ್ತಿದ್ರು.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ರಮ್ಯಾ ನಿನ್ನೆ ಕಾಣಿಸಿಕೊಂಡಿದ್ದರು. ಅದಕ್ಕೆ 'ದಾಖಲೆ' ಮುಂದಿನ ಸ್ಲೈಡ್ ನಲ್ಲಿದೆ ನೋಡಿ....

'ದಾಖಲೆ' ಇಲ್ಲಿದೆ ನೋಡಿ....

'ದಾಖಲೆ' ಇಲ್ಲಿದೆ ನೋಡಿ....

'ದಾಸ' ದರ್ಶನ್, ನಟಿ ಶರ್ಮಿಳಾ ಮಾಂಡ್ರೆ ಜೊತೆಗೆ ನಟಿ ರಮ್ಯಾ ಕ್ಯಾಮರಾ ಕಂಗಳಲ್ಲಿ ದಾಖಲಾಗಿರುವ ಈ ಫೋಟೋ ನೋಡಿ...

ಸ್ಟಾರ್ ಗಳ ಸಂಗಮವಾಗಿದ್ದು ಎಲ್ಲಿ.?

ಸ್ಟಾರ್ ಗಳ ಸಂಗಮವಾಗಿದ್ದು ಎಲ್ಲಿ.?

ನಟಿ ರಮ್ಯಾ ಹಾಗೂ ದರ್ಶನ್ ಒಟ್ಟಾಗಿ ಕಾಣಿಸಿಕೊಂಡಿದ್ದು ಸುವರ್ಣ ವಾಹಿನಿಯ ರಿಯಾಲಿಟಿ ಶೋ 'ಡ್ಯಾನ್ಸ್ ಡ್ಯಾನ್ಸ್' ವೇದಿಕೆ ಮೇಲೆ. [ಬ್ಯಾಂಕಾಕ್ ನಲ್ಲಿ ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್' ವೇದಿಕೆ]

ಗ್ರ್ಯಾಂಡ್ ಫಿನಾಲೆಗೆ ಇವರೇ ವಿಶೇಷ ಅತಿಥಿಗಳು.!

ಗ್ರ್ಯಾಂಡ್ ಫಿನಾಲೆಗೆ ಇವರೇ ವಿಶೇಷ ಅತಿಥಿಗಳು.!

ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಡ್ಯಾನ್ಸ್ ಡ್ಯಾನ್ಸ್' ಗ್ರ್ಯಾಂಡ್ ಫಿನಾಲೆಗೆ ವಿಶೇಷ ಅತಿಥಿಗಳಾಗಿ ದರ್ಶನ್, ರಮ್ಯಾ ಭಾಗವಹಿಸಿದ್ರು. [ಚಿತ್ರಪುಟ; ತಾಜ್ ಮಹಲ್ ಮುಂದೆ ಹೆಜ್ಜೆ ಹಾಕಿದ 'ಸುವರ್ಣ' ಸ್ಪರ್ಧಿಗಳು]

ಹತ್ತು ವರ್ಷಗಳ ನಂತರ 'ದತ್ತ' ಜೊತೆ ರಮ್ಯಾ

ಹತ್ತು ವರ್ಷಗಳ ನಂತರ 'ದತ್ತ' ಜೊತೆ ರಮ್ಯಾ

2006ರಲ್ಲಿ ನಟಿ ರಮ್ಯಾ, ದರ್ಶನ್ ಜೊತೆ 'ದತ್ತ' ಸಿನಿಮಾದಲ್ಲಿ ಮಿಂಚಿದ್ರು. ನಂತರ ದರ್ಶನ್ ಮತ್ತು ರಮ್ಯಾ ಭೇಟಿ ಆಗಿರುವುದು ಇದೇ 'ಡ್ಯಾನ್ಸ್ ಡ್ಯಾನ್ಸ್' ವೇದಿಕೆ ಮೇಲೆ ಅಂದ್ರೆ ನೀವು ನಂಬಲೇಬೇಕು.

ಐದು ವರ್ಷಗಳ ಬಳಿಕ ಭೇಟಿ ಆದ ಶರ್ಮಿಳಾ-ರಮ್ಯಾ

ಐದು ವರ್ಷಗಳ ಬಳಿಕ ಭೇಟಿ ಆದ ಶರ್ಮಿಳಾ-ರಮ್ಯಾ

ಐದು ವರ್ಷಗಳ ಹಿಂದೆ ಶರ್ಮಿಳಾ ಹಾಗೂ ರಮ್ಯಾ ಕೆನಡಾದಲ್ಲಿ ಭೇಟಿ ಆಗಿದ್ರಂತೆ. ಅದಾದ ಬಳಿಕ ಇಬ್ಬರ ಸಂಗಮ ಆಗಿರುವುದು 'ಡ್ಯಾನ್ಸ್ ಡ್ಯಾನ್ಸ್' ವೇದಿಕೆ ಮೇಲೆ.

ಕಾರ್ಯಕ್ರಮ ಪ್ರಸಾರ ಯಾವಾಗ.?

ಕಾರ್ಯಕ್ರಮ ಪ್ರಸಾರ ಯಾವಾಗ.?

'ಡ್ಯಾನ್ಸ್ ಡ್ಯಾನ್ಸ್' ಗ್ರ್ಯಾಂಡ್ ಫಿನಾಲೆ ಚಿತ್ರೀಕರಣ ನಿನ್ನೆಯಷ್ಟೇ ಪೂರ್ಣಗೊಂಡಿದೆ. ಪ್ರಸಾರ ಯಾವಾಗ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕ ತಕ್ಷಣ ನಿಮಗೆ ಅಪ್ ಡೇಟ್ ಮಾಡ್ತೀವಿ.

English summary
Kannada Actress, EX MP, Congress Politician Ramya and Kannada Actor Darshan came as a Special Guest for Suvarna Channel's 'Dance Dance' Grand Finale episode.
Please Wait while comments are loading...

Kannada Photos

Go to : More Photos