twitter
    For Quick Alerts
    ALLOW NOTIFICATIONS  
    For Daily Alerts

    ಬಿಗ್ ಬಾಸ್ ಅಸಹ್ಯದ ಪರಮಾವಧಿಯಾಗಿದ್ಯಾ?

    By Mahesh
    |

    ಈ ಟಿವಿ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಅಂಟಿದ ಬಾಲಗ್ರಹ ಪೀಡೆಯನ್ನು ಬಾಡಿ ಬ್ರಹ್ಮಾಂಡ ಗುರೂಜಿ ಅವರು ಪರಿಹರಿಸಿದ್ದಾರೆ. ಇತ್ತೀಚಿನ ಹುಚ್ಚಾಟದ ಎಪಿಸೋಡು ನೋಡಿದ ಪ್ರೇಕ್ಷಕರಿಗೆ ಇದಕ್ಕಿಂತ ಋಷಿ ಕುಮಾರನ ಕುಣಿತವೇ ಪಸಂದಾಗಿತ್ತು ಎಂದುಕೊಂಡಿದ್ದು ಸುಳ್ಳಲ್ಲ.

    ಆರಂಭದಿಂದಲೇ ಪುಣೆಯ ಲೋನಾವಾಲ ಮನೆಯ ವಾಸ್ತು ಬಗ್ಗೆ ಸ್ಪರ್ಧಿ ನರೇಂದ್ರ ಶರ್ಮ ತಲೆ ಕೆಡಿಸಿಕೊಂಡಿದ್ದರು. ನಂತರ ಹೆಣ್ಮಕ್ಕಳ ನಡವಳಿಕೆ, ಬಟ್ಟೆ ಬರೆ, ಪುರುಷ ಸ್ಪರ್ಧಿಗಳ ಜೊತೆಗಿನ ಸನಿಹಕ್ಕೆ ಕಿಡಿಕಾರಿದ್ದರು. ಋಷಿ ಕುಮಾರ ಬಂದ ಮೇಲೆ ಮಾಟ ಮಂತ್ರ ಎಂದರು. ಆದರೆ, ತಲೆ ಬಿಸಿಯಾದಾಗ ನಿಖಿತಾ ಕೈಲಿ ಮಾಲೀಶ್ ಮಾಡಿಸಿಕೊಂಡರು, ರೇಖಿ ಎಂದರು. ಒಟ್ಟಾರೆ ಬಾಬು ಪ್ರೇಕ್ಷಕರನ್ನು ಮಂಗ ಮಾಡಿದರು.

    ಕಿಚ್ಚ ಸುದೀಪ್ ನಿರೂಪಣೆ ಇರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒನ್ ಇಂಡಿಯಾ ಓದುಗರು ನೀಡಿರುವ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಏನಾದರೂ ಈಟಿವಿಗೆ ಕಳಿಸಿದರೆ ಕಷ್ಟ ಕಷ್ಟ. ಬಿಗ್ ಬಾಸ್ ಮನೆ ಥೇಟ್ ಹುಚ್ಚಾಸ್ಪತ್ರೆಯಂತೆ ಬದಲಾಗಿದ್ದು ಒಬ್ಬರನ್ನೊಬ್ಬರು ಕಾಲೆಳೆಯುವ ಆಟ ಮುಂದುವರಿದೆ. ಓದುಗರ ಅಭಿಪ್ರಾಯ ಮುಂದಿಡುತ್ತಿದ್ದೇವೆ.. ಒಪ್ಪಿಸಿಕೊಳ್ಳಿ.. ಅಂದ ಹಾಗೆ, ನಿಮ್ಮ ಅಭಿಪ್ರಾಯವನ್ನು ತಪ್ಪದೇ ದಾಖಲಿಸಿ..

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಈ ರೀತಿ ಒಂದು ಬೋರ್ಡ್ ಹಾಕಿ.. ಸ್ಪರ್ಧಿಗಳು ಯಾರ ಮೇಲೆ ಬೇಕಾದ್ರೂ ಹರಿಹಾಯ್ದರು ಸುಮ್ಮನಿರಬಹುದು ಎಂದು ಬಿಗ್ ಬಾಸ್ ಸಾಬೀತು ಪಡಿಸಿದೆ. ಬ್ರಹ್ಮಾಂಡ ಗುರೂಜಿ ಬಾಯಲ್ಲಿ ಬರುವ ಅಸಂಬದ್ಧ ಡೈಲಾಗ್ಸ್ ತಡೆಯೋಕೆ ಆಗದ ಬಿಗ್ ಬಾಸ್ ತುಂಬಾ ವೀಕ್ ಎನಿಸುತ್ತಾರೆ : ಮಂಜುನಾಥ್, ಬೆಂಗಳೂರು

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಹಿಂದಿ ಚಾನೆಲ್ ಗಳ ಕಾರ್ಯಕ್ರಮಗಳನ್ನು ಯಥಾವತ್ ಕಾಪಿ ಮಾಡುತ್ತಿರುವುದರಿಂದ ವಾಹಿನಿಯ ಈ ಹಿಂದಿನ ನೈಜತೆ ಕಳೆದು ಹೋದಂತಾಗಿದೆ. ದಯವಿಟ್ಟು ಕನ್ನಡದ ಸಂಸ್ಕೃತಿಗೆ ಸಲ್ಲದ ಕಾರ್ಯಕ್ರಮಗಳನ್ನು ನಿಲ್ಲಿಸಿ ಈ ಟಿವಿ ತನ್ನ ಮೂಲ ಪರಂಪರೆಗೆ ಒಗ್ಗಬೇಕು.

    ಹಬ್ಬದ ಸಮಯದಲ್ಲಿ ಸೀರೆ ಉಡಿಸಿ, ಪ್ಯಾಂಟ್ ಧರಿಸಿದ್ದು ಬಿಟ್ಟರೆ ಮಿಕ್ಕಂತೆ ತುಂಡು ಬಟ್ಟೆ ಧರಿಸಿ ನೈಜವಾಗಿ ಹೇಗೆ ಇರುತ್ತೇವೆ ಎಂಬುದನ್ನು ಸ್ಪರ್ಧಿಗಳು ತೋರಿದ್ದಾರೆ. ಇದು ಅವರ ತಪ್ಪಲ್ಲ. ಮಕ್ಕಳು, ಸಂಪ್ರದಾಯ ಪಾಲಿಸುವವರು ಕಾರ್ಯಕ್ರಮ ವೀಕ್ಷಣೆಗೆ ಮುನ್ನ ಪೋಷಕರ ಸಲಹೆ(PG) ಪಡೆಯಿರಿ ಎಂದು ಬಿಗ್ ಬಾಸ್ ಸೂಚಿಸಿದೆ. : ನಾರಾಯಣ ಶಾಸ್ತ್ರಿ

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಅರುಣ್ ವೈವಿಧ್ಯತೆಗೆ ಬಹು ಪರಾಕ್: ಅರುಣ್ ಸಾಗರ್ ನಿಜವಾಗಿಯೂ ಅತ್ಯುತ್ತಮ ಅಭಿನಯ ನೀಡುತ್ತಿದ್ದಾರೆ, ಅಪರ್ಣ, ತಿಲಕ್, ವಿಜಯ್ ಖಂಡಿತ ಇವರನ್ನು ನಿಭಾಯಿಸಲು ಒದ್ದಾಡುತ್ತಿದ್ದಾರೆ ...ತುಂಟತನದಲ್ಲಿ ನರೇಂದ್ರ ಶರ್ಮ ಕೂಡ ಹಿಂದೆ ಬಿದ್ದಿಲ್ಲ, ಪಾಪ ನರ್ಸ್ ಜಯಲಕ್ಷ್ಮಿ ಅವಸ್ಥೆ ನೋಡಲು ಆಗುತ್ತಿಲ್ಲ, ಜೋಷಿ ಕೂಡ ಚೆನ್ನಾಗಿ ಪ್ರದರ್ಶನ ನೀಡುತ್ತಿದ್ದಾರೆ, ಸೂಪರ್ ಬಿಗ್ ಬಾಸ್ ! : ರಾಘವ್ ಹೆಗಡೆ, ಶಿರಸಿ

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಕಾರ್ಯಕ್ರಮದಲ್ಲಿ ವಿವಾದಿತ ದೃಶ್ಯಗಳಿದ್ದರೂ ಹಾಗೂ ಹೀಗೂ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಪ್ರೇಕ್ಷಕರ ಕೃಪೆ ಕಳೆದುಕೊಂಡ ಕಾವಿ ಕಮ್ ಋಷಿ ಆಗಿರುವ ಋಷಿ ಕುಮಾರ ಅವರನ್ನು ಜಾಣತನದಿಂದ ಮನೆಯಿಂದ ಹೊರ ಹಾಕಲಾಗಿದೆ. ಮನೆಯಲ್ಲಿರುವವರ ಪೈಕಿ ಯಾರು ಹೆಚ್ಚು ಟಿಆರ್ ಪಿ ತರಬಲ್ಲರು ಎಂಬ ಲೆಕ್ಕಾಚಾರ ಹಾಗೂ ಮನೆಯಲ್ಲಿದ್ದರೆ ಯಾರಿಗೆ ಹೆಚ್ಚು ಅನುಕೂಲ ಎಂಬುದರ ಮೇಲೆ ವೋಟ್ ಔಟ್ ನಡೆಯುತ್ತಿದೆ.

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಫ್ಲರ್ಟ್, ಕಿತ್ತಾಟ, ಎಕ್ಸ್ ಪೋಸ್, ಕಣ್ಣೀರು, ಕಾವಿಧಾರಿಗಳ ಐಟಂ ಡ್ಯಾನ್ಸ್ ಎಲ್ಲದರ ಮಿಶ್ರಣವಾಗಿರುವ ಬಿಗ್ ಬಾಸ್ ಪ್ರೇಕ್ಷಕರನ್ನು ಉಳಿಸಿಕೊಂಡರೂ ಟಾಸ್ಕ್ ಮಟ್ಟಿಗೆ ಟುಸ್ ಆಗಿದೆ. ಒಂದೇ ಟಾಸ್ಕ್ ಹಲವು ಎಪಿಸೋಡ್ ಎಳೆಯುವುದು. ಟಾಸ್ಕ್ ಸರಿಯಾಗಿ ಆಡಲು ಬರದ ಸ್ಪರ್ಧಿಗಳ ಒದ್ದಾಡದ ನಡುವೆ ಬಿಗ್ ಬಾಸ್ ಬೋರ್ ಹೊಡೆಸಿದ್ದು ನಿಜ: ರಾಘವೇಂದ, ಮೈಸೂರು

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಅಪ್ಪ ಅಮ್ಮನನ್ನು ನೆನೆದು ಕಣ್ಣೀರಿಟ್ಟ ಬ್ರಹ್ಮಾಂಡ ಗುರೂಜಿ ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ತತ್ವಕ್ಕೆ ಅಂಟಿಕೊಂಡು ಬಿಗ್ ಬಾಸ್ ಗೂ ಸವಾಲು ಹಾಕಿದ್ದಾರೆ. ಬ್ರಹ್ಮಾಂಡ ಇದ್ದರೆ ಟಿಆರ್ ಪಿ ಇರುತ್ತದೆ ಎಂಬ ಕಾರಣಕ್ಕೆ ಅವರನ್ನು ಕೊನೆವರೆಗೂ ಉಳಿಸಿಕೊಳ್ಳುವ ತಂತ್ರ ಹೆಣೆಯಲಾಗಿದೆ.

    ಇಲ್ಲಿ ಎಲ್ಲವೂ ಫಿಕ್ಸ್ ಎಂಬ ಕೂಗು ಎದ್ದಿದೆ. ಜೋಶಿ ನಂತರ ಮತ್ತೊಬ್ಬ ಮಹಿಳಾ ಸ್ಪರ್ಧಿ ಔಟ್ ಆಗುತ್ತಾರೆ ಆಮೇಲೆ ಈ ಹಿಂದಿನ ಸರಣಿ ಪುನರಾವರ್ತನೆ ಆಗಲಿದೆ ನೋಡುತ್ತಿರಿ : ರಾಕೇಶ್ ಹುಬ್ಬಳ್ಳಿ
    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಬೇಡ ಬೇಡವೆಂದರೂ ನರ್ಸ್ ಜಯಲಕ್ಷ್ಮಿ ಅವರನ್ನು ಬಾಡಿ ಬ್ರಹ್ಮಾಂಡ ಬಳಿ ಬಿಡಲಾಗುತ್ತಿದೆ. ಇಬ್ಬರು ನೇರ ನುಡಿಗೆ ಹೆಸರಾಗಿದ್ದು, ಪರಸ್ಪರ ಉತ್ತಮ ಸಂವಹನ ಕಲೆ ಹೊಂದಿದ್ದಾರೆ ಎಂಬ ಕಾರಣಕ್ಕೆ ಸುಮ್ಮನೆ ಏನೋ ಗುಸು ಗುಸು ಹಬ್ಬಿಸಲಾಗುತ್ತಿದೆ. ಕಾವಿ ಹಾಕಿಕೊಂಡಿರುವ ಅದ್ಭುತ ನಟ ಗುರೂಜಿ, ಕಾವಿ ಕಳಚುವುದು ಒಳ್ಳೆಯದು. ಇಂಥದ್ದೆಲ್ಲ ಬೇಕಾ ಕನ್ನಡ ಜನಕ್ಕೆ : ಮಧುರಾ ಬೆಂಗಳೂರು

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಬಿಗ್ ಬಾಸ್ ನಲ್ಲಿ ಮಜಾ ಮಾಯ

    ಇಂಥ ಜನರನ್ನು ನಾನೆಲ್ಲೂ ಕಾಣೆನು ಎಂದು ಜಯಲಕ್ಷ್ಮಿ ಮೇಡಂ ಕೊಟ್ಟಿರುವ ಪೋಸ್ ಕನ್ನಡ ಪ್ರೇಕ್ಷಕರ ಸ್ಥಿತಿಯನ್ನು ತೋರಿಸುತ್ತದೆ. ಕಾರ್ಯಕ್ರಮ ಆಮದಾದರೂ ಒಳಗಿನ ಸತ್ವ ಇಲ್ಲಿನ ನೇಟಿವಿಟಿಗೆ ಹೊಂದುವಂತೆ ಮಾಡುವಲ್ಲಿ ಈ ಟಿವಿ ವಿಫಲವಾಗಿದೆ ಎಂಬ ಕೂಗಿದೆ.

    ಅಲ್ಲದೆ, ಬಂದಿರುವ ಎಸ್ ಎಂಎಸ್ ಸಂಖ್ಯೆಯನ್ನು ಗುಪ್ತವಾಗಿ ಇಡಲಾಗುತ್ತಿದೆ. ವೋಟಿಂಗ್ ಪ್ರಕಾರ ನಿಜಕ್ಕೂ ನಡೆಯುತ್ತಿದೆಯೇ ಅಥವಾ ಅಶರೀರವಾಣಿ ಬಿಗ್ ಬಾಸ್ ನಂತೆ ಕಾಣದ ಕೈ ಕೈವಾಡವೇ ಉತ್ತರ ಸಿಕ್ಕಿಲ್ಲ.

    English summary
    Here is few reaction by Oneindia Kannada readers on reality show ETV Kannada version of Bigg Boss. Many readers reacted still program is not adaptable to Kannada culture and environment. Contestants are not behaving naturally and spoiling the game with irritating acts.
    Friday, April 26, 2013, 14:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X