»   » 'ಬಿಗ್ ಬಾಸ್' ಶೋನಿಂದ ಹುಚ್ಚ ವೆಂಕಟ್ ಗೆ ಸಿಕ್ಕ ಪೇಮೆಂಟ್ ಎಷ್ಟು?

'ಬಿಗ್ ಬಾಸ್' ಶೋನಿಂದ ಹುಚ್ಚ ವೆಂಕಟ್ ಗೆ ಸಿಕ್ಕ ಪೇಮೆಂಟ್ ಎಷ್ಟು?

Posted by:
Subscribe to Filmibeat Kannada

ಕರ್ನಾಟಕದ ಮೂಲೆ ಮೂಲೆಯಲ್ಲೂ ಸದ್ಯಕ್ಕೆ ಸೆನ್ಸೇಷನ್ ಕ್ರಿಯೇಟ್ ಮಾಡಿರುವುದು 'ಬಿಗ್ ಬಾಸ್-3' ಕಾರ್ಯಕ್ರಮ ಮತ್ತು ಹುಚ್ಚ ವೆಂಕಟ್.!

'ಬಿಗ್ ಬಾಸ್' ರಿಯಾಲಿಟಿ ಶೋಗೆ ಕಾಲಿಟ್ಟಾಗಿನಿಂದಲೂ ಎಲ್ಲರ ಬಾಯಲ್ಲೂ ಹುಚ್ಚ ವೆಂಕಟ್ ರದ್ದೇ ಮಾತು. ವೀಕ್ಷಕರ ಒತ್ತಾಯದ ಮೇರೆಗೆ 'ಬಿಗ್ ಬಾಸ್' ಮನೆಗೆ ಕಾಲಿಟ್ಟ ಹುಚ್ಚ ವೆಂಕಟ್ ಗೆ ಕಲರ್ಸ್ ಕನ್ನಡ ವಾಹಿನಿಯವರು ಎಷ್ಟು ದುಡ್ಡು ಕೊಟ್ಟಿದ್ದಾರೆ ಗೊತ್ತಾ? [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

'ಬಿಗ್ ಬಾಸ್-3' ಶೋನಿಂದ ಕಿಕ್ ಔಟ್ ಆದ ನಂತರ ಪಬ್ಲಿಕ್ ಟಿವಿ ವಾಹಿನಿಗೆ ಸಂದರ್ಶನ ನೀಡಿದ ಹುಚ್ಚ ವೆಂಕಟ್ 'ಬಿಗ್ ಬಾಸ್' ಕಾರ್ಯಕ್ರಮದಿಂದ ತಮಗೆ ಸಿಕ್ಕ ಸಂಭಾವನೆ ಎಷ್ಟು ಅಂತ ಬಾಯ್ಬಿಟ್ಟಿದ್ದಾರೆ. ಮುಂದೆ ಓದಿ.....

ಆವೇಷದಲ್ಲಿ ಬಾಯ್ಬಿಟ್ಟ ಹುಚ್ಚ ವೆಂಕಟ್.!

ಆವೇಷದಲ್ಲಿ ಬಾಯ್ಬಿಟ್ಟ ಹುಚ್ಚ ವೆಂಕಟ್.!

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ತಾವು ಪಡೆಯುವ ಸಂಭಾವನೆ ಬಗ್ಗೆ ಯಾರೂ ಬಹಿರಂಗವಾಗಿ ಬಾಯ್ಬಿಡುವಂತಿಲ್ಲ. ಹೀಗಿದ್ದರೂ, ಆವೇಷದಲ್ಲಿ ಮಾತನಾಡುತ್ತಿದ್ದಾಗ ಹುಚ್ಚ ವೆಂಕಟ್ 'ಬಿಗ್ ಬಾಸ್' ನೀಡಿದ ಸಂಭಾವನೆ ಬಗ್ಗೆ ತುಟಿ ಬಿಚ್ಚಿದರು. ಸಂಭಾವನೆ ಎಷ್ಟು ಅಂತ ಹೇಳ್ತೀವಿ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.....[ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

31 ಸಾವಿರ ರೂಪಾಯಿ.!

31 ಸಾವಿರ ರೂಪಾಯಿ.!

ನೀವು ನಂಬ್ತೀರೋ, ಬಿಡ್ತೀರೋ. 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹುಚ್ಚ ವೆಂಕಟ್ಗೆ ಸಿಕ್ಕಿರುವ ಸಂಭಾವನೆ ಕೇವಲ 31 ಸಾವಿರ ರೂಪಾಯಿ.! ಅದನ್ನ ಅವರೇ ಹೇಳಿದ್ದು.! [ಹುಚ್ಚ ವೆಂಕಟ್ ರನ್ನ ಗೇಲಿ ಮಾಡಿದ 'ಬಿಗ್ ಬಾಸ್'?]

ಇಷ್ಟು ಕಮ್ಮಿನಾ?

ಇಷ್ಟು ಕಮ್ಮಿನಾ?

''ನನ್ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಗೊತ್ತಾ? ಬರೀ 31 ಸಾವಿರ ರೂಪಾಯಿ. ಅದು ಬಿಗ್ ಬಾಸ್ ಕೊಟ್ಟಿದ್ದು.!'' ಅಂತ ಹುಚ್ಚ ವೆಂಕಟ್ ಹೇಳಿದರು.! [ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಗೆ ಪೊಗರು ಎಷ್ಟಿರಬೇಕು?]

ರಿಷಿ ಜೊತೆ ಜಗಳ.!

ರಿಷಿ ಜೊತೆ ಜಗಳ.!

ತಮ್ಮ ಚರ್ಚಾ ಕಾರ್ಯಕ್ರಮದ ವೇಳೆ ನಿರ್ದೇಶಕ ರಿಷಿ ಪಬ್ಲಿಕ್ ಟಿವಿ ಸ್ಟುಡಿಯೋಗೆ ಎಂಟ್ರಿಕೊಟ್ಟಿದ್ದು ಹುಚ್ಚ ವೆಂಕಟ್ ರನ್ನ ಕೆರಳಿಸಿತು. ಲೈವ್ ಪ್ರೋಗ್ರಾಂನಲ್ಲಿ ರಿಷಿಗೆ ಏಟು ಕೊಡಲು ಹುಚ್ಚ ವೆಂಕಟ್ ಮುಂದಾದರು. [ಹುಚ್ಚ ವೆಂಕಟ್ ಔಟ್ ; ನಮ್ಮ ಓದುಗರು ಏನಂತಾರೆ?]

ಹುಚ್ಚ ವೆಂಕಟ್ ವಿರುದ್ಧ ದೂರು ಕೊಟ್ಟಿದ್ದ ರಿಷಿ.!

ಹುಚ್ಚ ವೆಂಕಟ್ ವಿರುದ್ಧ ದೂರು ಕೊಟ್ಟಿದ್ದ ರಿಷಿ.!

''ನನ್ ಮಗಂದ್...ನನ್ ಎಕ್ಕಡ...ಬೆಂಡೆತ್ಬಿಡ್ತೀನಿ...ಸಾಯಿಸ್ಬಿಡ್ತೀನಿ'' ಅನ್ನುವ ಮಾತುಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಅಂತ ನಿರ್ದೇಶಕ ರಿಷಿ ದೂರು ನೀಡಿದರು. ಇದೇ ವಿಚಾರವಾಗಿ ಹುಚ್ಚ ವೆಂಕಟ್ ರವರ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ರಿಷಿ ಪಬ್ಲಿಕ್ ಟಿವಿ ಸ್ಟುಡಿಯೋಗೆ ಬಂದಿದ್ದರು.

ರಿಷಿಗೆ ಆವಾಝ್ ಹಾಕುವಾಗ ಪೇಮೆಂಟ್ ಮಾತು.!

ರಿಷಿಗೆ ಆವಾಝ್ ಹಾಕುವಾಗ ಪೇಮೆಂಟ್ ಮಾತು.!

ರಿಷಿಯನ್ನ ಸ್ಟುಡಿಯೋದಿಂದ ಹೊರಗಟ್ಟಬೇಕು ಅಂತ ಕೂಗಾಡುತ್ತಿದ್ದ ಸಂದರ್ಭದಲ್ಲಿ ಹುಚ್ಚ ವೆಂಕಟ್ ತಮ್ಮ 'ಬಿಗ್ ಬಾಸ್' ಕಾರ್ಯಕ್ರಮದಿಂದ ತಾವು ಪಡೆದ ಸಂಭಾವನೆ ಬಗ್ಗೆ ಬಾಯ್ಬಿಟ್ಟರು.!

ಇತರರಿಗೆಲ್ಲಾ ಲಕ್ಷ.! ಇವರಿಗೆ ಸಾವಿರ.?

ಇತರರಿಗೆಲ್ಲಾ ಲಕ್ಷ.! ಇವರಿಗೆ ಸಾವಿರ.?

ಈಗಾಗಲೇ ಹಲವು ಪತ್ರಿಕೆ-ಮಾಧ್ಯಮಗಳು ವರದಿ ಮಾಡಿದಂತೆ, ನಟಿ ಶ್ರುತಿ, ನಟಿ ಪೂಜಾ ಗಾಂಧಿ, ನಟ ಚಂದನ್ ಸೇರಿದಂತೆ 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರಿಗೂ ಸಂಭಾವನೆ ವಾರಕ್ಕೆ ಲಕ್ಷಕ್ಕೂ ಹೆಚ್ಚು! ಅಂಥದ್ರಲ್ಲಿ, ಎಲ್ಲರಿಗಿಂತ ಹೆಚ್ಚು ಮನರಂಜನೆ ನೀಡಿ ಮೂರು ವಾರಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿದ್ದ ಹುಚ್ಚ ವೆಂಕಟ್ ಗೆ ಕೇವಲ 31 ಸಾವಿರ ಅಷ್ಟೇನಾ? ಇಲ್ಲಾ ಹುಚ್ಚ ವೆಂಕಟ್ ರೈಲ್ ಬಿಟ್ರಾ?

1 ರೂಪಾಯಿ ಕಾಯಿನಲ್ಲಿರುವ ಕೈ ಯಾರದ್ದು ಗೊತ್ತಾ?

1 ರೂಪಾಯಿ ಕಾಯಿನಲ್ಲಿರುವ ಕೈ ಯಾರದ್ದು ಗೊತ್ತಾ?

1 ರೂಪಾಯಿ ಕಾಯಿನ್ ನಲ್ಲಿರುವ ಕೈ ಬೇರಾರದ್ದೂ ಅಲ್ಲ.! ಖುದ್ದು ಹುಚ್ಚ ವೆಂಕಟ್ ಕೈ.! ಹಾಗಂತ ಅವರೇ ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಹೇಳಿದ್ದು.!

ವಿಡಿಯೋ ನೋಡಿ....

ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಹುಚ್ಚ ವೆಂಕಟ್ ಮತ್ತು ರಿಷಿ ನಡುವೆ ಆದ ಗದ್ದಲದ ವಿಡಿಯೋ ಇಲ್ಲಿದೆ ನೋಡಿ.....

English summary
Do you know how much did Huccha Venkat get from Bigg Boss Kannada 3 as remuneration? Huccha Venkat has revealed his payment of Bigg Boss show in Public TV Live program.
Please Wait while comments are loading...

Kannada Photos

Go to : More Photos