»   » ಸ್ವರ್ಗ, ನರಕವಾಸಿ ಬಿಗ್ ಬಾಸ್ ಸ್ಪರ್ಧಿಗಳು

ಸ್ವರ್ಗ, ನರಕವಾಸಿ ಬಿಗ್ ಬಾಸ್ ಸ್ಪರ್ಧಿಗಳು

Posted by:
Subscribe to Filmibeat Kannada

ಕಲರ್ಸ್ ವಾಹಿನಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಇದ್ದ ಕುತೂಹಲಕ್ಕೆ ತೆರೆಬಿದ್ದಿದೆ. ಬಿಗ್ ಬಾಸ್ ಸೀಸನ್ 6 ರಲ್ಲಿ 'ಅಲಗ್ ಛೆ' ಎಂದು ವಿಭಿನ್ನವಾಗಿ ಕಾರ್ಯಕ್ರಮ ನಡೆಸಿಕೊಟ್ಟ ಸಲ್ಮಾನ್ ಸೀಸನ್ 7ನಲ್ಲಿ ಡಬ್ಬಲ್ ಧಮಾಕ ಮೂಲಕ ಎಲ್ಲರನ್ನು ರಂಜಿಸಿದ್ದಾರೆ.

ಎಲ್ಲಾ 14 ಸ್ಪರ್ಧಿಗಳ ವಿವರ ಹಾಗೂ ಸ್ವರ್ಗದಲ್ಲಿ ಯಾರೂ ನರಕದಲ್ಲಿ ಯಾರು ಎಂಬುದು ಈಗ ಸ್ಪಷ್ಟವಾಗಿದೆ. ಕಾಮ್ಯಾ ಪಂಜಾಬಿ, ಗೌಹರ್ ಖಾನ್, ಹವೆಲ್ ಕೀಚ್, ಸಂಗ್ರಾಮ್ ಸಿಂಗ್, ಅರ್ಮಾನ್, ಅಪೂರ್ವ ಅಗ್ನಿಹೋತ್ರಿ, ಶಿಲ್ಪಾ ಅಗ್ನಿ ಹೋತ್ರಿ, ಎಲ್ಲಿ ಅವ್ರಾಮ್, ವಿಜೆ ಆಂಡಿ, ಪ್ರತ್ಯೂಷಾ ಬ್ಯಾನರ್ಜಿ, ರಾಜತ್ ರವೈಲ್, ಅನಿತಾ ಅದವ್, ತನಿಶಾ, ಕುಶಾಲ್ ತಂಡನ್, ರತನ್ ರಜಪುತ್ ಈ ಬಾರಿಯ ಸ್ಪರ್ಧಿಗಳಾಗಿದ್ದಾರೆ.

ಸೆ.16ರಿಂದ ಬಿಗ್ ಬಾಸ್ ಎಪಿಸೋಡುಗಳು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಳೆದ ಆರು ಬಾರಿ ಪ್ರೇಕ್ಷಕರನ್ನು ರಂಜಿಸಿದ್ದಕ್ಕಿಂತ ಹೆಚ್ಚಿನ ರೀತಿಯ ಮಜಾ ಈ ಬಾರಿ ಸಿಗಲಿದೆ ಎಂದು ಕಲರ್ಸ್ ವಾಹಿನಿ ಹೇಳಿದೆ. ಬಿಗ್ ಬಾಸ್ ಜತೆಗೆ ವಾರ್ಡನ್ ಕೂಡಾ ಸೇರ್ಪಡೆಗೊಂಡಿರುವುದು ನಿರೂಪಕ ಸಲ್ಮಾನ್ ಗೂ ಅಚ್ಚರಿ ಮೂಡಿಸಿದೆ.

ಸಲ್ಮಾನ್ ಅವರು ಬಿಗ್ ಬಾಸ್ ನಿರೂಪಣೆ ಒಪ್ಪಿಕೊಂಡ ಮೇಲೆ ಇದು ನಾಲ್ಕನೇ ಸೀಸನ್ ಆಗಿದ್ದು, ಪ್ರತಿಬಾರಿ ಹೊಸತನದಿಂದ ಪ್ರೇಕ್ಷಕರ ಮುಂದೆ ಬರುವ ಭರವಸೆ ನೀಡಿದ್ದಾರೆ. ಸ್ಪರ್ಧಿಗಳ ವಿವರ ಇಲ್ಲಿದೆ ನೋಡಿ...

ಅನಿತಾ ಅಡ್ವಾಣಿ

ಅನಿತಾ ಅಡ್ವಾಣಿ

ಹಿಂದಿ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರ ಜತೆ ನಾನು ಲಿವ್ ಇನ್ ಸಂಬಂಧದಲ್ಲಿದೆ ಎಂದಿರುವ ಅನಿತಾ ಅಡ್ವಾಣಿ ಅವರು ಖನ್ನಾ ಅವರ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಸ್ಟಾರ್ ದಂಪತಿ

ಸ್ಟಾರ್ ದಂಪತಿ

ನಟ ಅಪೂರ್ವ ಅಗ್ನಿಹೋತ್ರಿ ಹಾಗೂ ಪತ್ನಿ ಶಿಲ್ಪಾ ಅಗ್ನಿಹೋತ್ರಿ ಇಬ್ಬರು ಬಿಗ್ ಬಾಸ್ ನ ಸ್ಪರ್ಧಿಗಳಾಗಿರುವುದು ವಿಶೇಷ. ಈ ಹಿಂದೆ ಇಂಥ ಪ್ರಯೋಗ ನಡೆದಿದ್ದರೂ ಮಾಜಿ ಲವರ್, ವಿಚ್ಛೇದಿತ ಪತಿ ಕರೆ ತರಲಾಗಿತ್ತು.

ಅರ್ಮಾನ್ ಕೊಹ್ಲಿ

ಅರ್ಮಾನ್ ಕೊಹ್ಲಿ

ನಿರ್ಮಾಪಕ, ನಿರ್ದೇಶಕ ರಾಜಕುಮಾರ್ ಕೊಹ್ಲಿ ಅವರ ಮಗ ಅರ್ಮಾನ್ ಕೊಹ್ಲಿ 2003ರಲ್ಲಿ LOC ಕಾರ್ಗಿಲ್ ಚಿತ್ರದಲ್ಲಿ ಕಡೆ ಬಾರಿಗೆ ಕಾಣಿಸಿಕೊಂಡಿದ್ದರು.

ಎಲ್ಲಿ ಅವ್ರಾಮ್

ಎಲ್ಲಿ ಅವ್ರಾಮ್

ಸ್ವೀಡನ್ ಮೂಲದ ಚೆಲುವೆ ಎಲ್ಲಿ ಅವ್ರಾಮ್ ಅವರ ಹಿಂದಿ ಚಿತ್ರ ಮಿಕ್ಕಿ ವೈರಸ್ ತೆರೆಗೆ ಸಿದ್ಧವಾಗಿದೆ.

ಗೌಹರ್ ಖಾನ್

ಗೌಹರ್ ಖಾನ್

ಕಳೆದ ಸೀಸನ್ ನಲ್ಲಿ ಸ್ಪರ್ಧಿಯಾಗಬೇಕಿದ್ದ ಗೌಹರ್ ಈ ಬಾರಿ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.

ಹಜೇಲ್ ಕೀಚ್

ಹಜೇಲ್ ಕೀಚ್

ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಚಿತ್ರದಲ್ಲಿ ನಟಿಸಿದ್ದ ಹಜೇಲ್ ಕೀಚ್ ಅವರು ಈ ಬಾರಿ ಬಿಗ್ ಬಾಸ್ ನಲ್ಲಿದ್ದಾರೆ.

ಕಾಮ್ಯಾ ಪಂಜಾಬಿ

ಕಾಮ್ಯಾ ಪಂಜಾಬಿ

ಕೊನೆ ಗಳಿಗೆ ತನಕ ನಾನು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ ಎನ್ನುತ್ತಿದ್ದ ಕಾಮ್ಯಾ ಕೂಡಾ ಸ್ಪರ್ಧಿಯಾಗಿ ಮನೆ ಹೊಕ್ಕಿದ್ದಾರೆ.

ಕುಶಾಲ್ ತಂಡನ್

ಕುಶಾಲ್ ತಂಡನ್

ಸ್ಟಾರ್ ಪ್ಲಸ್ ನ ಎಕ್ ಹಜಾರೊಮೇ ಮೇರಿ ಬೆಹ್ನಾ ಹೇ ಮೂಲಕ ಜನಪ್ರಿಯಗೊಂಡ ರೂಪದರ್ಶಿ ಕಮ್ ನಟ ಕುಶಾಲ್ ಮದ್ಯವ್ಯಸನಿಯಾಗಿದ್ದು, ಮೂರು ತಿಂಗಳು ಚಟದಿಂದ ಮುಕ್ತಿ ಹೊಂದಲು ಬಿಗ್ ಬಾಸ್ ಮನೆ ಹೊಕ್ಕಿದ್ದಾರೆ ಎನ್ನಲಾಗಿದೆ.

ಪ್ರತ್ಯೂಷಾ ಬ್ಯಾನರ್ಜಿ

ಪ್ರತ್ಯೂಷಾ ಬ್ಯಾನರ್ಜಿ

ಕಲರ್ಸ್ ವಾಹಿನಿಯ ಬಾಲಿಕಾ ವಧು ಸೀರಿಯಲ್ ನಲ್ಲಿ ಅನಂದಿಯಾಗಿ ಕಾಣಿಸಿಕೊಂಡ ಜಾರ್ಖಂಡ್ ಮೂಲಕ ಪ್ರತ್ಯೂಷಾ ಇತ್ತೀಚೆಗೆ ಬಾಯ್ ಫ್ರಂಡ್ ಜತೆ ಕಿತ್ತಾಟದಿಂದ ಕೆಟ್ಟ ಜನಪ್ರಿಯತೆ ಪಡೆದಿದ್ದರು.

ರಜತ್ ರವೈಲ್

ರಜತ್ ರವೈಲ್

ಬಾಲಿವುಡ್ ನಿರ್ಮಾಪಕ ರಜತ್ ರವೈಲ್ ಅವರು ಸ್ಪರ್ಧಿಯಾಗಿದ್ದಾರೆ.

ರತನ್ ರಜಪುಟ್

ರತನ್ ರಜಪುಟ್

ಆಗ್ಲೆ ಜನಂ ಮೊಹೆ ಬಿಟಿಯಾ ಹಿ ಕಿಜೋ ಧಾರಾವಾಹಿಯಲ್ಲಿ ಲಾಲಿ ಪಾತ್ರದ ಮೂಲ ಜನಪ್ರಿಯರಾಗಿರುವ ರತನ್ ಕೂಡಾ ಸ್ಪರ್ಧಿಯಾಗಿದ್ದಾರೆ.

ಸಂಗ್ರಾಮ್ ಸಿಂಗ್

ಸಂಗ್ರಾಮ್ ಸಿಂಗ್

ಸಚ್ ಕಾ ಸಾಮ್ನಾ, ಸರ್ವೈವರ್ ಇಂಡಿಯಾ ಮುಂತಾದ ರಿಯಾಲಿಟಿಶೋ ಗಳಲ್ಲಿ ಕಾಣಿಸಿಕೊಂಡಿರುವ ಕುಸ್ತಿ ಪಟು ಸಂಜಿತ್ ಕುಮಾರ್ ಅಲಿಯಾಸ್ ಸಂಗ್ರಾಮ್ ಸಿಂಗ್

ತನಿಶಾ ಬ್ಯಾನರ್ಜಿ

ತನಿಶಾ ಬ್ಯಾನರ್ಜಿ

ಕಸಿನ್ ಕಾಜೋಲ್ ಸೇರಿದಂತೆ ಕುಟುಂಬ ಸದಸ್ಯರು ನೀನ್ಯಾಕೆ ಹೋಗುತ್ತೀಯಾ ಎಂದರೂ ಕೇಳದೆ ನಟಿ ತನಿಶಾ ಬಿಗ್ ಬಾಸ್ ಮನೆ ಹೊಕ್ಕಿದ್ದಾರೆ. ಸ್ಪರ್ಧಿಗಳನ್ನು ಸ್ವರ್ಗ ಅಥವಾ ನರಕಕ್ಕೆ ಕಳಿಸಬೇಕಾ ಎಂಬುದನ್ನು ವಿಜೆ ಆಂಡಿ ಜತೆ ಕುಳಿತು ನಿರ್ಧರಿಸುವ ಅಧಿಕಾರ ತನಿಶಾಗೆ ನೀಡಲಾಗಿತ್ತು.

ವಿಜೆ ಆಂಡಿ

ವಿಜೆ ಆಂಡಿ

ವಿಜೆ Andy ಎಂದೇ ಖ್ಯಾತಿ ಗಳಿಸಿರುವ ಆನಂದ್ ಕುಮಾರ್ ಅವರು ಚಾನೆಲ್ 'ವಿ' ಕಾರ್ಯಕ್ರಮ ಡೇರ್ 2 ಡೇಟ್ ಎಂಬ ಡೇಟಿಂಗ್ ರಿಯಾಲಿಟಿ ಶೋನ ನಿರೂಪಕರಾಗಿ ಜನಪ್ರಿಯತೆ ಗಳಿಸಿದ್ದಾರೆ.

English summary
The confirmed list of all the contestants of Bigg Boss Saath 7 is out and here is the names of all the 14 contestants who will be entering the Bigg Boss house this season.
Please Wait while comments are loading...

Kannada Photos

Go to : More Photos