»   » ಕರಣ್ ಶೋನಲ್ಲಿ ಮದುವೆ ರಹಸ್ಯ ಬಿಚ್ಚಿಟ್ಟ ಸಲ್ಮಾನ್

ಕರಣ್ ಶೋನಲ್ಲಿ ಮದುವೆ ರಹಸ್ಯ ಬಿಚ್ಚಿಟ್ಟ ಸಲ್ಮಾನ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸ್ಟಾರ್ ವರ್ಲ್ಡ್ ನ ಬಹು ನಿರೀಕ್ಷಿತ ಟಾಕ್ ಶೋ 'ಕಾಫಿ ವಿಥ್ ಕರಣ್' ನಾಲ್ಕನೇ ಸೀಸನ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಚಿತಕರ್ಮಿ ಕರಣ್ ಜೋಹರ್ ಅವರ ನಿರೂಪಣೆ ಇರುವ ಬಹುಜನಪ್ರಿಯ ಟಾಕ್ ಶೋನಲ್ಲಿ ಗ್ಲಾಮರ್ ಜಗತ್ತಿನ ಆಗು ಹೋಗುಗಳ ಜತೆಗೆ ಸ್ಟಾರ್ ಗಳು ತಮ್ಮ ವೈಯಕ್ತಿಕ ಬದುಕಿನ ಕೆಲ ರಹಸ್ಯಗಳನ್ನು ಬಿಚ್ಚಿಡುವುದು ಮಾಮೂಲಿ.

ಈಗ ಇದೇ ಶೋನಲ್ಲಿ ಬಾಲಿವುಡ್ ನ ಸ್ಟೈಲಿಶ್ ನಟ ಸಲ್ಮಾನ್ ಖಾನ್ ರನ್ನು ತಮ್ಮ ಪ್ರಶ್ನೆಗಳ ಮೂಲಕ ಕರಣ್ ಜೋಹರ್ ಕಟ್ಟಿ ಹಾಕಿ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದಾರಂತೆ. ಸಲ್ಮಾನ್ ಖಾನ್ ತನ್ನ ಮಾಜಿ ಗೆಳತಿಯರು ಮದುವೆ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ನಾಲ್ಕು ಸೀಸನ್ ಆದರೂ ಸಲ್ಮಾನ್ ಖಾನ್ ಮಾತ್ರ ಈ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ. ಶಾರುಖ್ ಖಾನ್ ಆಪ್ತ ಬಳಗದಲ್ಲಿ ಕಾಣಿಸಿಕೊಳ್ಳುವುದರಿಂದ ಕರಣ್ ಶೋಗೆ ಸಲ್ಲೂ ಎಂಟ್ರಿ ಕೊಟ್ಟಿರಲಿಲ್ಲ. ಇದುವರೆವಿಗೂ ಶೋಗೆ ಬಂದಿಲ್ಲ ಏಕೆ? ಬೆಳಗ್ಗೆ ಏಳುವಾಗ ಪಕ್ಕದಲ್ಲಿ ಕತ್ರೀನಾ ಕೈಫ್ ಪಕ್ಕದಲ್ಲಿ ಇದ್ದರೆ ಯಾವ ಪ್ರತಿಕ್ರಿಯೆ ನಿರೀಕ್ಷಿಸಬಹುದು? ಮುಂತಾದ ಪ್ರಶ್ನೆಗಳನ್ನು ಎಸೆದು ಕರಣ್ ನಗುತ್ತಿದ್ದರು.

ನಾನು ನನ್ನ ಮಾಜಿ ಗೆಳತಿಯರಿಂದ ಮೈಲಿ ದೂರ ಓಡುತ್ತಿದ್ದೇನೆ. ಕೆಲವರನ್ನು ನಿರ್ಲಕ್ಷಿಸುತ್ತೇನೆ. ಆದರೆ, ನಾನು ಕೂಡಾ ಸಂಬಂಧಗಳ ಜತೆ ಬೆಳೆದವರು, ಕುಟುಂಬದ ಮಹತ್ವದ ಅರಿವಿದೆ. ಆದರೆ, ಯಾಕೋ ಮದುವೆಗೆ ಕಾಲ ಕೂಡಿ ಬಂದಿಲ್ಲ. ಇದರಲ್ಲಿ ನನ್ನ ತಪ್ಪೇನು ಇಲ್ಲ ಎಂದು ಸಲ್ಮಾನ್ ಹೇಳಿದ್ದಾರೆ.

ಸಲ್ಮಾನ್ ಖಾನ್ ಜತೆ ಅವರ ಅಪ್ಪ ಸಾಹಿತಿ ಸಲೀಂ ಖಾನ್ ಕೂಡಾ ಕಾಣಿಸಿಕೊಳ್ಳುವುದು ವಿಶೇಷ. ಅಪ್ಪ ಮಗ ಒಂದೇ ಚಾಟ್ ಶೋ ನಲ್ಲಿ ಕುಳಿತುಕೊಳ್ಳುತ್ತಿರುವುದು ಕರಣ್ ಮಹಿಮೆಯಿಂದ ಎನ್ನಬಹುದು.ಕಾಫಿ ವಿಥ್ ಕರಣ್ ಶೋ ಮೊದಲ ಎಪಿಸೋಡ್ ಝಲಕ್ ಇಲ್ಲಿದೆ...

ಜನಪ್ರಿಯ ಸಿನಿ ಟಾಕ್ ಶೋ

ಜನಪ್ರಿಯ ಸಿನಿ ಟಾಕ್ ಶೋ

ಸ್ಟಾರ್ ವರ್ಲ್ಡ್ ವಾಹಿನಿಯ ಬಹು ಜನಪ್ರಿಯ ಸಿನಿ ಟಾಕ್ ಶೋ ಕಾಫಿ ವಿಥ್ ಕರಣ್ ಹೊಸ ಸೀಸನ್(4) ಡಿಸೆಂಬರ್ 1 ರಿಂದ ಆರಂಭವಾಗಲಿದೆ

ಮೊದಲ ಬಾರಿಗೆ ಸಲ್ಮಾನ್

ಮೊದಲ ಬಾರಿಗೆ ಸಲ್ಮಾನ್

ನಾಲ್ಕು ಸೀಸನ್ ಆದರೂ ಸಲ್ಮಾನ್ ಖಾನ್ ಮಾತ್ರ ಈ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ. ಶಾರುಖ್ ಖಾನ್ ಆಪ್ತ ಬಳಗದಲ್ಲಿ ಕಾಣಿಸಿಕೊಳ್ಳುವುದರಿಂದ ಕರಣ್ ಶೋಗೆ ಸಲ್ಲೂ ಎಂಟ್ರಿ ಕೊಟ್ಟಿರಲಿಲ್ಲ.

ಗುಟ್ಟು ಗುಟ್ಟು

ಗುಟ್ಟು ಗುಟ್ಟು

ಬಿಗ್ ಬಾಸ್ ನಿರೂಪಣೆ ಮಾಡುತ್ತಿರುವ ಸಲ್ಮಾನ್ ಖಾನ್ ಅನೇಕ ಬಾರಿ ತನ್ನ ಮಾಜಿ ಗೆಳತಿಯರ ಬಗ್ಗೆ ಬಂದ ಪ್ರಶ್ನೆಗಳಿಗೆ ಸರಿ ಉತ್ತರ ನೀಡದೆ ನುಣುಚಿಕೊಳ್ಳುವುದು ಮಾಮೂಲಿ

ಕರಣ್ ಬಗ್ಗೆ ಸಲ್ಲೂ

ಕರಣ್ ಬಗ್ಗೆ ಸಲ್ಲೂ

ಕರಣ್ ಬಗ್ಗೆ "Kuch bhi bolta hai yaar, yeh aadmi."ಎಂದ ಸಲ್ಲೂ

ಖಾನ್ ಜತೆ ಅಪ್ಪ

ಖಾನ್ ಜತೆ ಅಪ್ಪ

ಸಲ್ಮಾನ್ ಖಾನ್ ಜತೆ ಅವರ ಅಪ್ಪ ಸಾಹಿತಿ ಸಲೀಂ ಖಾನ್ ಕೂಡಾ ಕಾಣಿಸಿಕೊಳ್ಳುವುದು ವಿಶೇಷ.

ಕುಟುಂಬದ ಮಹತ್ವದ ಅರಿವಿದೆ

ಕುಟುಂಬದ ಮಹತ್ವದ ಅರಿವಿದೆ

ಕುಟುಂಬದ ಮಹತ್ವದ ಅರಿವಿದೆ. ಆದರೆ, ಯಾಕೋ ಮದುವೆಗೆ ಕಾಲ ಕೂಡಿ ಬಂದಿಲ್ಲ. ಇದರಲ್ಲಿ ನನ್ನ ತಪ್ಪೇನು ಇಲ್ಲ ಎಂದ ಸಲ್ಮಾನ್

English summary
Star World's most awaited talk show Koffee with Karan is back with season 4. Karan Johar had his first guest as Salman Khan who willingly or unwillingly had to answer all questions related to his marriage plans and his ex-girlfriends.
Please Wait while comments are loading...

Kannada Photos

Go to : More Photos