»   » Exclusive: 'ಕಾಮಿಡಿ ಕಿಲಾಡಿಗಳು' ಗೆದ್ದು ಕಿಲಕಿಲ ಎಂದ ಕಿಲಾಡಿ ಯಾರು.?

Exclusive: 'ಕಾಮಿಡಿ ಕಿಲಾಡಿಗಳು' ಗೆದ್ದು ಕಿಲಕಿಲ ಎಂದ ಕಿಲಾಡಿ ಯಾರು.?

Posted by:
Subscribe to Filmibeat Kannada

ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಅನ್ನೋದಕ್ಕಿಂತ ಹೆಚ್ಚಾಗಿ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಟಿ.ಆರ್.ಪಿ ಹೊಂದಿರುವ ಶೋ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ನಿನ್ನೆ (ಭಾನುವಾರ, ಮಾರ್ಚ್ 5) ಮಧ್ಯರಾತ್ರಿ ಮುಗಿದಿದೆ.

ಬಾಗಲಕೋಟೆಯಲ್ಲಿ ಜನರ ಸಮ್ಮುಖದಲ್ಲಿ ನಡೆದ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆಯಲ್ಲಿ ವಿಜಯ ಕಿರೀಟ ತೊಟ್ಟು ಕಿಲಕಿಲ ಎಂದ ಕಿಲಾಡಿ ಯಾರು ಗೊತ್ತೇ.?

'ಕಾಮಿಡಿ ಕಿಲಾಡಿಗಳು' ವಿಜೇತ ಶಿವರಾಜ್.ಕೆ.ಆರ್.ಪೇಟೆ

ನಿರೀಕ್ಷೆಯಂತೆಯೇ ಕೆ.ಆರ್.ಪೇಟೆಯ ಪ್ರತಿಭಾವಂತ ಶಿವರಾಜ್ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿದ್ದಾರೆ.[ಎಲ್ಲ 'ಕಾಮಿಡಿ ಕಿಲಾಡಿ'ಗಳಿಗೆ ಸಿಕ್ತು ಬಹುದೊಡ್ಡ ಸರ್ಪ್ರೈಸ್.!]

ಎರಡನೇ ಸ್ಥಾನ ಯಾರಿಗೆ.?

ಭಾನುವಾರ ಸಂಜೆ ಬಾಗಲಕೋಟೆಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಯನ ಎರಡನೇ ಸ್ಥಾನ ಪಡೆದಿದ್ದಾರೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಷ್ಟವಾದ ರಿಯಾಲಿಟಿ ಶೋ ಇದು..]

ಮೂರನೇ ಸ್ಥಾನ ಯಾರ ಮುಡಿಗೆ.?

'ಪ್ಯಾಕು ಪ್ಯಾಕು' ಖ್ಯಾತಿಯ ಹಿತೇಶ್ ಹಾಗೂ 'ಲಿಪ್ ಸ್ಟಿಕ್ ಲೈಲಾ' ಖ್ಯಾತಿಯ ಗೋವಿಂದೇ ಗೌಡ ಜಂಟಿ ಮೂರನೇ ಸ್ಥಾನ ಪಡೆದಿದ್ದಾರೆ.['ಕಾಮಿಡಿ ಕಿಲಾಡಿ' ಶಿವರಾಜ್ ಕೆ.ಆರ್.ಪೇಟೆಗೆ ಗೋಲ್ಡನ್ ಚಾನ್ಸ್! ಯಾವ ಚಿತ್ರದಲ್ಲಿ?]

ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.!

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಶಿವರಾಜ್.ಕೆ.ಆರ್.ಪೇಟೆ ಗೆದ್ದಿದ್ದಾರೆ ಅಂತ ಸ್ವತಃ ಕಾರ್ಯಕ್ರಮದ ತೀರ್ಪುಗಾರ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ

ವಿಜೇತರ ಬಗ್ಗೆ ಜೀ ಕನ್ನಡ ವಾಹಿನಿಯಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.

ಫೈನಲ್ ನಲ್ಲಿ ಯಾರ್ಯಾರಿದ್ದರು.?

ಶಿವರಾಜ್.ಕೆ.ಆರ್.ಪೇಟೆ, ನಯನ, ಲೋಕೇಶ್, ಅನೀಶ್, ದಿವ್ಯಶ್ರೀ, ಗೋವಿಂದೇ ಗೌಡ, ಸಂಜು ಬಸಯ್ಯ, ಹಿತೇಶ್, ಮುತ್ತುರಾಜ್ ಮತ್ತು ಪ್ರವೀಣ್... ಒಟ್ಟು ಹತ್ತು ಮಂದಿ ಫೈನಾಲೆಯಲ್ಲಿದ್ದರು.

'ಕಾಮಿಡಿ ಕಿಲಾಡಿಗಳು' ಕುರಿತು....

ಮಾಸ್ಟರ್ ಆನಂದ್ ನಿರೂಪಣೆ ಇದ್ದ ಪುಟಾಣಿ ಮಕ್ಕಳ ಜನಪ್ರಿಯ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮ ಮುಗಿದ ಬಳಿಕ 'ಕಾಮಿಡಿ ಕಿಲಾಡಿಗಳು' ಆರಂಭವಾಗಿತ್ತು. ಇಲ್ಲೂ ಮಾಸ್ಟರ್ ಆನಂದ್ ರವರೇ ನಿರೂಪಣೆಯ ಹೊಣೆ ಹೊತ್ತಿದ್ದರು. ತೀರ್ಪುಗಾರರ ಸ್ಥಾನದಲ್ಲಿ ನಟಿ ರಕ್ಷಿತಾ, ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟ ಜಗ್ಗೇಶ್ ಇದ್ದರು.

English summary
Shivaraj.K.R.Pet has Won Zee Kannada's Popular show 'Comedy Khiladigalu'.
Please Wait while comments are loading...

Kannada Photos

Go to : More Photos