ಕನ್ನಡದ 'ಬಿಗ್ ಬಾಸ್'ಗೆ ಸಿದ್ದರಾಮಯ್ಯ, ರಾಧಿಕಾ!

Posted by:

ಈಟಿವಿ ಕನ್ನಡ ವಾಹಿನಿ 'ಬಿಗ್' ರಿಯಾಲಿಟಿ ಶೋಗೆ ಕೈಹಾಕಿರುವ ಸುದ್ದಿ ಕಿರುತೆರೆ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಕಲರ್ಸ್ ವಾಹಿನಿ ನಡೆಸಿಕೊಡುತ್ತಿರುವ 'ಬಿಗ್ ಬಾಸ್' ರಿಯಾಲಿಟಿ ಶೋ ಈಗ ಕನ್ನಡದಲ್ಲೂ ಪ್ರಸಾರವಾಗಲು ವೇದಿಕೆ ಸಿದ್ಧವಾಗುತ್ತಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ 'ಬಿಗ್ ಬಾಸ್ ಶೋ' ನಿರೂಪಕರು ಎಂಬುದು ಈಗಾಗಲೆ ಎಲ್ಲೆಡೆ ಸುದ್ದಿಯಾಗಿದೆ. ಈಗಾಗಲೆ ಕಾರ್ಯಕ್ರಮದ ರೂಪರೇಷಗಳು ಆರಂಭವಾಗಿದ್ದು ಚಿತ್ರೀಕರಣ ಮುಂಬೈನಲ್ಲೇ ನಡೆಸಲು ತೀರ್ಮಾನಿಸಲಾಗಿದೆ. ಮುಂಬೈನ ಲೋನಾವಾನಾದಲ್ಲಿರುವ ಬಿಗ್ ಬಾಸ್ ಸೆಟ್ಸ್ ನಲ್ಲೇ ಕನ್ನಡ ಕಾರ್ಯಕ್ರಮ ಚಿತ್ರೀಕರಿಸಲಾಗುತ್ತದಂತೆ.

ಬಿಗ್ ಬಾಸ್ ಸ್ಪರ್ಧೆಗೆ ಸಿದ್ದರಾಮಯ್ಯ?

ನೇರ ನಡೆ ನುಡಿಗೆ ಹೆಸರುವಾಸಿಯಾಗಿರುವ ರಾಜಕಾರಣಿ ಸಿದ್ದರಾಮಯ್ಯ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರಂತೆಯೇ ಬಿಳಿ ಪಂಚೆ, ಜುಬ್ಬಾ ಧರಿಸಿ ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಸಿದ್ದರಾಮಯ್ಯ ಪ್ರಬಲ ರಾಜಕಾರಣಿ.

ಬಿಗ್ ಬಾಸ್ ಮನೆಗೆ ಪ್ರಿಯಾಮಣಿ ಬರುತ್ತಾರಾ?

ಸದ್ಯಕ್ಕೆ ಕನ್ನಡ, ತೆಲುಗು ಚಿತ್ರಗಳಲ್ಲಿ ಬಿಜಿಯಾಗಿರುವ ತಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗಿನ ಲಕ್ಷ್ಮಿ ಚಿತ್ರ ಬಿಡುಗಡೆಯಾಗಬೇಕಿದೆ. ಬಿಗ್ ಬಾಸ್ ಶೋಗೆ ಪ್ರಿಯಾಮಣಿ ಬಂದರೆ ಏನೇನಾಗುತ್ತದೋ ಎಂಬ ಕುತೂಹಲ ಇದ್ದೇ ಇದೆ.

ಕೊಡಗಿನ ವೀರ ಕ್ರಿಕೆಟರ್ ರಾಬಿನ್ ಉತ್ತಪ್ಪ

ತನ್ನದೇ ಆದಂತಹ ವಿಶಿಷ್ಟ ಶೈಲಿಯ ಬ್ಯಾಟಿಂಗ್ ಗೆ ಹೆಸರಾದವರು ರಾಬಿನ್ ಉತ್ತಪ್ಪ. ಬಹುಶಃ ಅವರೇನಾದರೂ ಬಿಗ್ ಬಾಸ್ ರಿಯಾಲಿಟಿ ಶೋಗೆ ಅಡಿಯಿಟ್ಟರೆ ಕ್ರಿಕೆಟ್ ಅಭಿಮಾನಿಗಳನ್ನು ಖಂಡಿತ ಸೆಳೆಯುತ್ತದೆ.

ಶ್ರೀಮುರಳಿ ಅದೃಷ್ಟ ಬದಲಾಗುತ್ತಾ?

ಸದ್ಯಕ್ಕೆ ಸೋಲಿನ ಬಳಿಕ ಸೋಲುಣ್ಣುತ್ತಿರುವ ನಟ ಶ್ರೀಮುರಳಿ ಸಹ ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಈ ಶೋ ಮೂಲಕವಾದರೂ ಶ್ರೀಮುರಳಿ ಅವರ ಅದೃಷ್ಟ ಬದಲಾಗುತ್ತದೇನೋ ಕಾದು ನೋಡೋಣ.

ರಾಧಿಕಾ ಪಂಡಿತ್ ಮತ್ತೆ ಕಿರುತೆರೆಗೆ?

ಕಿರುತೆರೆ ಮೂಲಕ ಬೆಳ್ಳಿಪರದೆ ಬಂದು ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ತಾರೆ ರಾಧಿಕಾ ಪಂಡಿತ್. ಇವರೇನಾದರೂ ಮತ್ತೆ ಬಿಗ್ ಬಾಸ್ ಮೂಲಕ ಕಿರುತೆರೆಗೆ ಅಡಿಯಿಟ್ಟರೆ ಅಭಿಮಾನಿಗಳ, ಕಿರುತೆರೆ ವೀಕ್ಷಕರಿಗೆ ಹಬ್ಬ. ನೋಡೋಣ ಏನಾಗುತ್ತದೋ ಏನೋ?


ಸರಿ ಸುಮಾರು ಮೂರು ತಿಂಗಳುಗಳ ಕಾಲ ಅಲ್ಲಿದ್ದು ಬಿಗ್ ಬಾಸ್ ಸ್ಪರ್ಧಿಗಳಿಗಾಗಿ ಬಲೆ ಬೀಸಲಾಗಿದೆ. ಸಿನಿಮಾ ತಾರೆಯರು, ಕ್ರೀಡಾಪಟುಗಳು, ಫ್ಯಾಷನ್ ಲೋಕದವರು, ಜನಪ್ರಿಯ ವ್ಯಕ್ತಿಗಳನ್ನು ಕಣಕ್ಕಿಳಿಸಲಿದೆ ಈಟಿವಿ ಕನ್ನಡ ವಾಹಿನಿ.

ವಿಭಿನ್ನ ಕ್ಷೇತ್ರದ, ಮನೋಭಾವದ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ ವಿವಿಧ ಸ್ಪರ್ಧೆಗಳನ್ನು ಒಡ್ಡಲಾಗುತ್ತದೆ. ಕಡೆಗೆ 'ಬಿಗ್ ಬಾಸ್' ಮನೆಯಲ್ಲಿ ಉಳಿದವರೇ ಗೆದ್ದಂತೆ. ಮೂಲಗಳ ಪ್ರಕಾರ ಈಟಿವಿ ಕನ್ನಡ ವಾಹಿನಿ ಈಗಾಗಲೆ ಹಲವಾರು ಜನಪ್ರಿಯ ವ್ಯಕ್ತಿಗಳನ್ನು ಬಿಗ್ ಬಾಸ್ ಕಣಕ್ಕೆ ಇಳಿಸಲು ಮಾತುಕತೆ ನಡೆಸಿದೆ.

Read more about: ಈಟಿವಿ ಕನ್ನಡ, ಸುದೀಪ್, ಬಿಗ್ ಬಾಸ್, ರಿಯಾಲಿಟಿ ಶೋ, ಟಿವಿ, ಫೋಟೋ ಫೀಚರ್, etv kannada, sudeep, bigg boss, reality show, tv, photo feature
English summary
Sudeeep's Bigg Boss Kannada will be no less than the Salman Khan hosted Hindi version, as the show seems to be getting bigger and better in Sandalwood.
Please Wait while comments are loading...

Kannada Photos

Go to : More Photos