»   » ಕಡೆಗೂ ಕರಾವಳಿಗರ ಕೂಗಿಗೆ ಬೆಲೆಕೊಟ್ಟು ತಲೆ ಬಾಗಿದ ಸೃಜನ್ ಲೋಕೇಶ್

ಕಡೆಗೂ ಕರಾವಳಿಗರ ಕೂಗಿಗೆ ಬೆಲೆಕೊಟ್ಟು ತಲೆ ಬಾಗಿದ ಸೃಜನ್ ಲೋಕೇಶ್

Posted by:
Subscribe to Filmibeat Kannada

ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ 'ಭೂತಾರಾಧನೆ' ಬಗ್ಗೆ 'ಮಜಾ ಟಾಕೀಸ್' ಸಂಚಿಕೆಯಲ್ಲಿ ಅಪಹಾಸ್ಯ ಮಾಡಿರುವ ಸೃಜನ್ ಲೋಕೇಶ್ ವಿರುದ್ಧ ಕರಾವಳಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಮರ ಸಾರಿದ್ದರು. ಕೂಡಲೆ ಸೃಜನ್ ಲೋಕೇಶ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಅಂತ ಪಟ್ಟು ಹಿಡಿದಿದ್ದರು. ['ಮಜಾ ಟಾಕೀಸ್'ನಲ್ಲಿ ಸೃಜನ್ ಲೋಕೇಶ್ ಮಾಡಿದ ಮಹಾ ಎಡವಟ್ಟಿದು.!]

ವೀಕ್ಷಕರ ಕೂಗಿಗೆ ತಲೆಬಾಗಿರುವ ಸೃಜನ್ ಲೋಕೇಶ್ ತಮ್ಮ ಆಫೀಶಿಯಲ್ ಫೇಸ್ ಬುಕ್ ಪುಟದಲ್ಲಿ ಕ್ಷಮೆ ಕೇಳಿದ್ದಾರೆ.

ಫೇಸ್ ಬುಕ್ ನಲ್ಲಿ ಕ್ಷಮೆ ಕೇಳಿರುವ ಸೃಜನ್ ಲೋಕೇಶ್

''ಭೂತಾರಾಧನೆ' ಬಗ್ಗೆ ನಾನು ತಮಾಷೆ ಮಾಡಿದೆ ಅಂತ ಕೆಲವು ಫೇಸ್ ಬುಕ್ ಪೋಸ್ಟ್ ಗಮನಿಸಿದೆ. ನನ್ನ ಉದ್ದೇಶ ಖಂಡಿತ ಭೂತಾರಾಧನೆಯನ್ನು ಅವಮಾನಿಸೋದಾಗಲೀ, ತಮಾಷೆ ಮಾಡೋದಾಗಲಿ ಆಗಿರಲಿಲ್ಲ'' - ಸೃಜನ್ ಲೋಕೇಶ್. [ಕರಾವಳಿ ಆಚರಣೆ ಬಗ್ಗೆ ಕೊಂಕು ಮಾತನಾಡಿದ ಸೃಜನ್ ವಿರುದ್ಧ ರೊಚ್ಚಿಗೆದ್ದ ವೀಕ್ಷಕರು.!]

ನಾನೂ ದೈವಭಕ್ತ

''ನಾನು ಸಹ ಭೂತಾರಾಧನೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ದೈವಭಕ್ತ. ನನಗೆ ಅದರ ಅರಿವಿರುವುದರಿಂದಲೇ ನಾನು 'ಭೂತಾರಾಧನೆ' ಪ್ರಸ್ತಾಪಿಸಿದ್ದು'' - ಸೃಜನ್ ಲೋಕೇಶ್

ತಪ್ಪಾಗಿದ್ದರೆ ಕ್ಷಮೆ ಇರಲಿ

''ಯಾರ ಭಾವನೆಗಳಿಗೂ ಧಕ್ಕೆಯಾಗದ ಹಾಗೆ ನಿಮ್ಮನ್ನು ನಗಿಸುವ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ನನಗರಿವಿದ್ದೋ, ಅರಿವಿಲ್ಲದೆಯೋ ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ'' - ಸೃಜನ್ ಲೋಕೇಶ್

ಅಷ್ಟಕ್ಕೂ ವಿವಾದ ಏನು.?

ಮೊನ್ನೆ ಭಾನುವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಮಜಾ ಟಾಕೀಸ್' ಸಂಚಿಕೆಯಲ್ಲಿ 'ಭೂತಾರಾಧನೆ' ಬಗ್ಗೆ ಸೃಜನ್ ಲೋಕೇಶ್ ಕಾಮೆಂಟ್ ಮಾಡಿದ್ದು ಇಷ್ಟೆಲ್ಲ ವಿವಾದಕ್ಕೆ ಕಾರಣವಾಗಿದೆ.

ಭೂತಾರಾಧನೆ ಮತ್ತು ಕಾಲ್ ಸೆಂಟರ್

''ಈ ಕಾಲ್ ಸೆಂಟರ್ ಕೆಲಸ ಭೂತಾರಾಧನೆ ಕೆಲಸ ಇದ್ದ ಹಾಗೆ. ಕಾಲ್ ಸೆಂಟರ್ ಕೆಲಸ ಮಾಡೋದು ರಾತ್ರಿ ಹೊತ್ತು. ಭೂತಾರಾಧನೆ ಕೂಡ ಮಾಡುವುದು ರಾತ್ರಿ ಹೊತ್ತು. ನೈಟ್ ಶಿಫ್ಟ್ ಒನ್ಲಿ'' ಅಂತ ಸೃಜನ್ ಲೋಕೇಶ್ ಹೇಳಿದ್ದ ಮಾತು ತುಳುನಾಡಿಗರನ್ನ ಕೆರಳಿಸಿತ್ತು.

English summary
'Majaa Star' Srujan Lokesh apologizes for his comments on 'Bhootha Aradhane' in Facebook.
Please Wait while comments are loading...

Kannada Photos

Go to : More Photos