twitter
    For Quick Alerts
    ALLOW NOTIFICATIONS  
    For Daily Alerts

    ಕರಾವಳಿ ಆಚರಣೆ ಬಗ್ಗೆ ಕೊಂಕು ಮಾತನಾಡಿದ ಸೃಜನ್ ವಿರುದ್ಧ ರೊಚ್ಚಿಗೆದ್ದ ವೀಕ್ಷಕರು.!

    By Harshitha
    |

    ತುಳು ನಾಡಿನ ಸಂಸ್ಕೃತಿಯ ಭಾಗವಾಗಿರುವ 'ಭೂತಾರಾಧನೆ' ಬಗ್ಗೆ ಅಪಹಾಸ್ಯ ಮಾಡಿರುವ 'ಮಜಾ ಸ್ಟಾರ್' ಸೃಜನ್ ಲೋಕೇಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತುಳುನಾಡಿಗರು ರೊಚ್ಚಿಗೆದ್ದಿದ್ದಾರೆ.['ಮಜಾ ಟಾಕೀಸ್'ನಲ್ಲಿ ಸೃಜನ್ ಲೋಕೇಶ್ ಮಾಡಿದ ಮಹಾ ಎಡವಟ್ಟಿದು.!]

    'ಭೂತಾರಾಧನೆ' ಬಗ್ಗೆ ಕೇವಲವಾಗಿ ಮಾತನಾಡಿರುವ ಸೃಜನ್ ಲೋಕೇಶ್ ರವರ ಬಗ್ಗೆ ವೀಕ್ಷಕರು ಕಲರ್ಸ್ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿಯೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಖಂಡಿಸುತ್ತೇವೆ... ಖಂಡಿಸುತ್ತೇವೆ.!

    ಖಂಡಿಸುತ್ತೇವೆ... ಖಂಡಿಸುತ್ತೇವೆ.!

    ಮಾರ್ಚ್ 19 ರಂದು ಪ್ರಸಾರವಾದ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ 'ಭೂತಾರಾಧನೆ'ಯನ್ನು ಕಾಲ್ ಸೆಂಟರ್ ಕೆಲಸಕ್ಕೆ ಹೋಲಿಸಿರುವ 'ಮಜಾ ಸ್ಟಾರ್' ಸೃಜನ್ ಲೋಕೇಶ್ ಹೇಳಿಕೆಯನ್ನು ತುಳುನಾಡಿಗರು ಫೇಸ್ ಬುಕ್ ನಲ್ಲಿ ಖಂಡಿಸುತ್ತಿರುವುದು ಹೀಗೆ...

    ಅತಿರೇಕದ ಅಭಿಮಾನ ತೋರಿಸುವುದಿಲ್ಲ.!

    ಅತಿರೇಕದ ಅಭಿಮಾನ ತೋರಿಸುವುದಿಲ್ಲ.!

    ''ನಿಮ್ಮ ತಂಡದಲ್ಲಿ ಮಂಗಳೂರಿನ ಕಲಾವಿದರು ಇದ್ದ ಮಾತ್ರಕ್ಕೆ ನೀವು ಹೇಳಿದ ಹೇಳಿಕೆಗೆ ಸುಮ್ಮನಿರುತ್ತಾರೆಂದು ತಿಳಿಯಬೇಡಿ. ನಾವು ಕಲೆಯ ಆರಾಧಕರು, ನಟ-ನಟಿಯರನ್ನ ಗೌರವಿಸುತ್ತೇವೆ ಹೊರತು ಅತಿರೇಕದ ಅಭಿಮಾನ ಎಂದಿಗೂ ತೋರಿಸುವುದಿಲ್ಲ'' ಅಂತ ವೀಕ್ಷಕರೊಬ್ಬರು ಸೃಜನ್ ಲೋಕೇಶ್ ಗೆ ಎಚ್ಚರಿಸಿರುವ ಪರಿ ಇದು.

    ಹೋಲಿಕೆ ಮಾಡಿದ್ದು ತಪ್ಪು.!

    ಹೋಲಿಕೆ ಮಾಡಿದ್ದು ತಪ್ಪು.!

    ''ಭೂತಾರಾಧನೆ'ಯನ್ನ ಕಾಲ್ ಸೆಂಟರ್ ಗೆ ಹೋಲಿಕೆ ಮಾಡಿದ್ದೇ ತಪ್ಪು. ಮಂಗಳೂರು ಜನತೆಯನ್ನ ಸೃಜನ್ ಕ್ಷಮೆ ಕೇಳಲೇಬೇಕು'' ಅಂತ ವೀಕ್ಷಕರು ಒತ್ತಾಯಿಸಿದ್ದಾರೆ.

    ಹಾಸ್ಯ ಅಪಹಾಸ್ಯವಾಗದಿರಲಿ...

    ಹಾಸ್ಯ ಅಪಹಾಸ್ಯವಾಗದಿರಲಿ...

    'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಹಾಸ್ಯವಿರಲಿ. ಆದ್ರೆ ಅದು ಅಪಹಾಸ್ಯವಾಗದಿರಲಿ ಅಂತ ಕೆಲವರು ಸೃಜನ್ ಲೋಕೇಶ್ ಗೆ ಸಲಹೆ ನೀಡಿದ್ದಾರೆ.

    ಉರಿದು ಬೀಳುತ್ತಿರುವ ವೀಕ್ಷಕರು

    ಉರಿದು ಬೀಳುತ್ತಿರುವ ವೀಕ್ಷಕರು

    ಸೃಜನ್ ಲೋಕೇಶ್ ಬಗ್ಗೆ ವೀಕ್ಷಕರಿಗೆ ತುಂಬಾ ಬೇಸರವಾಗಿದೆ. ಅದಕ್ಕೆ ಈ ಸಾಲು ಸಾಲು ಕಾಮೆಂಟ್ ಗಳೇ ಸಾಕ್ಷಿ.

    ತುಳು ನಾಡಿನ ಸಂಸ್ಕೃತಿ ಅವಹೇಳನ

    ತುಳು ನಾಡಿನ ಸಂಸ್ಕೃತಿ ಅವಹೇಳನ

    ತುಳುನಾಡಿನ ಸಂಸ್ಕೃತಿ ಅವಹೇಳನ ಮಾಡಿರುವ ಸೃಜನ್ ಕ್ಷಮೆ ಕೇಳಬೇಕು ಎನ್ನುವುದೇ ಎಲ್ಲರ ಒತ್ತಾಯವಾಗಿದೆ.

    ದೈವಾರಾಧನೆ ಮನರಂಜನೆ ಅಲ್ಲ

    ದೈವಾರಾಧನೆ ಮನರಂಜನೆ ಅಲ್ಲ

    ''ದೈವಾರಾಧನೆ ಎಂಬುದು ಮನರಂಜನೆ ಅಲ್ಲ. ದುಡಿಮೆಯೂ ಅಲ್ಲ. ಅದು ನಂಬಿಕೆ. ದೈವಾರಾಧನೆ ಯಾವ ಹೊತ್ತಲ್ಲಿ ಬೇಕಾದರೂ ನಡೆಯಲಿ. ನಾವು ಆರಾಧನೆ ಮಾಡುವುದು ನಂಬಿಕೆಯಿಂದಲೇ ಹೊರತು ಮನರಂಜನೆ ಅಂತಲ್ಲ'' ಅಂತ ವೀಕ್ಷಕರೊಬ್ಬರು ಸೃಜನ್ ಲೋಕೇಶ್ ಗೆ ತಿರುಗೇಟು ನೀಡಿದ್ದಾರೆ.

    ಬ್ಯಾನ್ ಮಾಡಿ

    ಬ್ಯಾನ್ ಮಾಡಿ

    ಡಬಲ್ ಮೀನಿಂಗ್ ಇರುವ 'ಮಜಾ ಟಾಕೀಸ್' ಕಾರ್ಯಕ್ರಮವನ್ನ ಮೊದಲು ಬ್ಯಾನ್ ಮಾಡಿ ಅಂತಲೂ ಕೆಲವರು ಕಾಮೆಂಟ್ ಮಾಡಿದ್ದಾರೆ.

    ಒಳ್ಳೆ ಮರ್ಯಾದೆ ಕೊಟ್ಟಿರಿ

    ಒಳ್ಳೆ ಮರ್ಯಾದೆ ಕೊಟ್ಟಿರಿ

    #ಸೃಜನ್_ಒಳ್ಳೆಯವ_ಅಂತ_ತಿಳ್ಕೊಡ್ಡಿದಕ್ಕೆ_ಒಳ್ಳೆ_ಮರ್ಯಾದೆ_ಕೊಟ್ಟಿರಿ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಕೆಲವರು ಕಾಮೆಂಟ್ ಮಾಡಿ ತಮ್ಮ ಬೇಸರ ಹೊರಹಾಕಿದ್ದಾರೆ.

    ಒಂದೇ ಸೆಕೆಂಡ್ ಗೆ ಹಾಳಾಗಿ ಹೋಗುತ್ತೆ.!

    ಒಂದೇ ಸೆಕೆಂಡ್ ಗೆ ಹಾಳಾಗಿ ಹೋಗುತ್ತೆ.!

    ''ಬಾಯಿಗೆ ಬಂದ ಹಾಗೆ ಡೈಲಾಗ್ ಹೊಡೆಯುವುದರಿಂದ, ನಾವು ನಿಮ್ಮ ಮೇಲೆ ಇಟ್ಟಿರುವ ಪ್ರೀತಿ ಒಂದೇ ಸೆಕೆಂಡ್ ಗೆ ಹಾಳಾಗಿ ಹೋಗುತ್ತೆ'' ಅಂತ ಕೆಲವರು ಸೃಜನ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

    ಹುಚ್ಚರ ಸಂತೆ

    ಹುಚ್ಚರ ಸಂತೆ

    ಸೃಜನ್ ಲೋಕೇಶ್ ಬಗ್ಗೆ ಸಿಕ್ಕಾಪಟ್ಟೆ ಗರಂ ಆಗಿರುವ ವೀಕ್ಷಕರೊಬ್ಬರು 'ಮಜಾ ಟಾಕೀಸ್' ಹುಚ್ಚರ ಸಂತೆ ಅಂತಲೇ ಕಾಮೆಂಟ್ ಮಾಡಿದ್ದಾರೆ.

    ಕಾರ್ಯಕ್ರಮದಲ್ಲಿಯೇ ಕ್ಷಮೆ ಕೇಳಬೇಕು.!

    ಕಾರ್ಯಕ್ರಮದಲ್ಲಿಯೇ ಕ್ಷಮೆ ಕೇಳಬೇಕು.!

    'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಮಾತನಾಡಿ ಫೇಸ್ ಬುಕ್ ನಲ್ಲಿ ಕ್ಷಮೆ ಕೇಳಿದರೆ ಪ್ರಯೋಜನ ಇಲ್ಲ. ಶೋ ನಡೆಯುವಾಗಲೇ ಸೃಜನ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಅಂತ ಕೆಲವರು ಒತ್ತಾಯಿಸಿದ್ದಾರೆ.

    English summary
    'Maja Talkies' Viewers have taken Colors Kannada Official Facebook page to express their anger on Srujan Lokesh's comments on 'Bhootha Aradhane'.
    Monday, March 20, 2017, 19:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X