»   » ಗಣೇಶ ಚತುರ್ಥಿಗೆ "ದೇವರ ದೇವ ಮಹಾದೇವ ಚರಿತ್ರೆ"ಯ ರಸದೌತಣ

ಗಣೇಶ ಚತುರ್ಥಿಗೆ "ದೇವರ ದೇವ ಮಹಾದೇವ ಚರಿತ್ರೆ"ಯ ರಸದೌತಣ

Posted by:
Subscribe to Filmibeat Kannada

ಕೈಲಾಸ ಪರ್ವತದಲ್ಲಿ ತಪೋಮಗ್ನನಾಗಿರುವ ಮಹಾದೇವನ ಸಂಪೂರ್ಣ ಚರಿತ್ರಾ ವೈಭವವನ್ನು ಬಿಚ್ಚಿಡುವ, 'ಹರ ಹರ ಮಹಾದೇವ' ಧಾರಾವಾಹಿಯ ಮುಖ್ಯ ಅಂಶಗಳನ್ನು ಒಳಗೊಂಡ ದೃಶ್ಯಗಳನ್ನು, ಚಲನಚಿತ್ರ ರೂಪದಲ್ಲಿ ಪ್ರಸಾರಿಸಲು ಸಿಧ್ದವಾಗಿದೆ, ನಿಮ್ಮೆಲ್ಲರ ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿ.

ಈ ರೀತಿಯ ಪ್ರಯತ್ನ ಇದೆ ಮೊದಲ ಬಾರಿಗೆ ಕಿರುತೆರೆಯಲ್ಲಿ ನಡೆಯುತ್ತಿದ್ದು, ಒಂದು ಧಾರಾವಾಹಿಯನ್ನು ಚಲನಚಿತ್ರ ರೂಪದಲ್ಲಿ ಬಿತ್ತರಿಸುವುದು ಕನ್ನಡದ ಮಟ್ಟಿಗೆ ಒಂದು ಹೊಸ ಪರಿಕಲ್ಪನೆಯೆ ಆಗಿದೆ.['ಹರ ಹರ ಮಹಾದೇವ' ಪಾತ್ರಧಾರಿಗಳ ಪರಿಚಯ]

ಶಿವಲಿಂಗವಿಲ್ಲದ ಅಪೂರ್ಣ ವಿಷ್ಣು ಮೂರ್ತಿಯನ್ನು ಪ್ರತಿಷ್ಠಾಪಿಸಲು ಮುಂದಾದ ದಕ್ಷನ ದರ್ಪದಿಂದ ಶುರುವಾಗುವ ಈ ಕಥೆಯಲ್ಲಿ, ಸತಿ-ಮಹಾದೇವರ ಪ್ರೇಮ, ದಕ್ಷನಿಗೆ ಮಹಾದೇವನ ಮೇಲಿನ ದ್ವೇಷ, ಮಹಾ ಮಂಡಲದಲ್ಲಿ ಶಿವನಿಗಾಗುವ ಅವಮಾನ.

ವಸಂತೋತ್ಸವದಲ್ಲಿ ಮಹಾದೇವನನ್ನು ಪ್ರೇಮಿಸುವಂತೆ ಪ್ರೇರೇಪಿಸುವ ಮದನಿಕೆ, ಚಂದ್ರನಿಗೆ ಶಾಪಕೊಡುವ ದಕ್ಷ, ನಂತರದಲ್ಲಿ ಚಂದ್ರ ಶೇಖರನಾಗುವ ಮಹಾದೇವ. ಹೀಗೆ ಅನೇಕ ರೋಚಕಭರಿತ ಸನ್ನಿವೇಷಗಳನ್ನು ಒಳಗೊಂಡ ಚಲನಚಿತ್ರವನ್ನು ಭಕ್ತರಿಗೆ ಅರ್ಪಿಸುತ್ತಿದೆ.

ಮೊದಲ ಇಪ್ಪತ್ತು ಕಂತುಗಳ ಸಾರಾಂಶ ಈ ಮಹಾ ಎಪಿಸೋಡ್ ನಲ್ಲಿ ಅಡಗಿದ್ದು, ವೀಕ್ಷಕರಿಗೆ ಗಣೇಶ ಚತುರ್ಥಿ ಹಬ್ಬಕ್ಕೆ ಭಕ್ತಿ-ಭಾವನೆಯುಳ್ಳ ಅನುಭವ ‌ಕೊಡಲಿದೆ.[ಶಿವ-ಸತಿಯ ಪ್ರೇಮಕಥೆಗೆ ತಿರುವು ನೀಡಲಿರುವ ಸುರ-ಸುಂದರಿ]

ಈ ಗಣೇಶ ಚತುರ್ಥಿಯನ್ನು 'ಹರ ಹರ ಮಹಾದೇವ ಮಹಿಮೆ'ಯನ್ನು ನೋಡುವ ಮೂಲಕ ಸಾರ್ಥಕಗೊಳಿಸಿ. 'ಹರ ಹರ ಮಹಾದೇವ ಮಹಿಮೆ' ಇದೇ ಸೋಮವಾರದಿಂದ (05.09.2016) ಮಧ್ಯಾಹ್ನ 1.30ಕ್ಕೆ. ತಪ್ಪದೇ ವೀಕ್ಷಿಸಿ

English summary
For the first time in the history of Serial industry, Star Suvarna has planned a to telecast a movie consolidating the key tracks of its pride serial 'Hara Hara Mahadeva' which has become the most popular mythology show because of its visual treatment and glory. On Monday (5th sept 2016) at 1.30 PM.
Please Wait while comments are loading...

Kannada Photos

Go to : More Photos