»   » ನಾಗತಿಹಳ್ಳಿ ಕೊಟ್ಟ ಏಟಿಗೆ ತಿರುಗೇಟು ನೀಡಿದ 'ಬಿಗ್ ಬಾಸ್' ಸುದೀಪ್

ನಾಗತಿಹಳ್ಳಿ ಕೊಟ್ಟ ಏಟಿಗೆ ತಿರುಗೇಟು ನೀಡಿದ 'ಬಿಗ್ ಬಾಸ್' ಸುದೀಪ್

Posted by:
Subscribe to Filmibeat Kannada

ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ''ಬಿಗ್ ಬಾಸ್ ಬೋರಿಂಗ್ ಆಗಿದೆ. ಎಲ್ಲ ಸ್ಪರ್ಧಿಗಳು ಸುಸ್ತಾಗಿದ್ದಾರೆ ಅನ್ಸುತ್ತೆ. ಆತ್ಮೀಯ ಸುದೀಪ್, ದಯವಿಟ್ಟು ಸ್ಪರ್ಧಿಗಳಿಗೆ ನಗುವುದನ್ನು ಕಲಿಸಿ. ಹ್ಯಾಪು ಮೋರೆಗಳನ್ನ ನೋಡಲು ಕಷ್ಟವಾಗುತ್ತಿದೆ'' ಅಂತ ಟ್ವೀಟ್ ಮಾಡಿದ್ದರು.[ಬಿಗ್ ಬಾಸ್ 'ಬೋರಿಂಗ್' ಎಂದ ನಾಗತಿಹಳ್ಳಿ ಚಂದ್ರಶೇಖರ್.!]

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ರವರ ಈ ಟ್ವೀಟ್ ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದರು. ಸಾಲದಕ್ಕೆ, ನಾಗತಿಹಳ್ಳಿ ಚಂದ್ರಶೇಖರ್ ರವರಿಗೆ ಸುದೀಪ್ ಬಹಿರಂಗ ಸವಾಲನ್ನೂ ಹಾಕಿದರು. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಓದಿರಿ....

ನಾಗತಿಹಳ್ಳಿ ಚಂದ್ರಶೇಖರ್ ರವರ ಟ್ವೀಟ್ ಬಗ್ಗೆ ಸುದೀಪ್ ಪ್ರಸ್ತಾಪ

ನಾಗತಿಹಳ್ಳಿ ಚಂದ್ರಶೇಖರ್ ರವರ ಟ್ವೀಟ್ ಬಗ್ಗೆ ಸುದೀಪ್ ಪ್ರಸ್ತಾಪ

''ನನಗೆ ನಿನ್ನೆನೋ.. ಮೊನ್ನೆನೋ ಒಂದು ಟ್ವೀಟ್ ಬಂತು. ಅದು ನಾಗತಿಹಳ್ಳಿ ಚಂದ್ರಶೇಖರ್ ರವರಿಂದ - ''ಬಿಗ್ ಬಾಸ್ ಬೋರಿಂಗ್ ಆಗಿದೆ. ಎಲ್ಲ ಸ್ಪರ್ಧಿಗಳು ಸುಸ್ತಾಗಿದ್ದಾರೆ ಅನ್ಸುತ್ತೆ. ಆತ್ಮೀಯ ಸುದೀಪ್, ದಯವಿಟ್ಟು ಸ್ಪರ್ಧಿಗಳಿಗೆ ನಗುವುದನ್ನು ಕಲಿಸಿ. ಹ್ಯಾಪು ಮೋರೆಗಳನ್ನ ನೋಡಲು ಕಷ್ಟವಾಗುತ್ತಿದೆ'' ಅಂತ ನಾಗತಿಹಳ್ಳಿ ಚಂದ್ರಶೇಖರ್ ಟ್ವೀಟ್ ಮಾಡಿದ್ದರು. ಅವರು ಹೇಳು ಅಂತ ಪಬ್ಲಿಕ್ ಫೋರಂನಲ್ಲಿ ಹೇಳಿದಕ್ಕೆ ನಾನು ಹೇಳುತ್ತಿದ್ದೇನೆ'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಹೇಳಿದರು.

ಮೋಹನ್ ಪ್ರತಿಕ್ರಿಯೆ

ಮೋಹನ್ ಪ್ರತಿಕ್ರಿಯೆ

ಈ ಬಗ್ಗೆ ಮೋಹನ್ ಪ್ರತಿಕ್ರಿಯೆ ನೀಡಿದ್ದು ಹೀಗೆ - ''ನಗು ಕಡಿಮೆ ಆಗಿದೆ ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ. ನಗು ಕಳೆದುಹೋಗಿದೆ ಅಂತ ಒಪ್ಪಿಕೊಳ್ಳುವುದಕ್ಕೆ ನಾನು ರೆಡಿ ಇಲ್ಲ. ನಕ್ಕಿರೋದು ಉಂಟು. ನಗ್ತಾಯಿರೋದೂ ಉಂಟು. ಆದ್ರೆ, ತಾವೇ ಹೇಳಿದ ಹಾಗೆ ಹಲವಾರು ವಿಷಯಗಳನ್ನು ಮಿಸ್ ಮಾಡಿಕೊಳ್ಳುತ್ತಿರುತ್ತೇವೆ. ಎಲ್ಲೋ ಒಂದು ಕಡೆ ಅದು ಕಂಟ್ರೋಲ್ ನಲ್ಲಿ ಇರುತ್ತದೆ. ಹಂತ ಹಂತವಾಗಿ ಹಿಡಿತ ಲೂಸ್ ಆಗುತ್ತಾ ಹೋಗುತ್ತೆ. ಹೀಗೆ ಆದಾಗ ಎಂಟರ್ ಟೇನ್ಮೆಂಟ್ ಪ್ರಮಾಣ ಕಡಿಮೆ ಆಗುತ್ತದೆ ಹೊರತು, ನಗು ಖಂಡಿತವಾಗಲೂ ಸತ್ತಿಲ್ಲ'' ಎಂದು ಮೋಹನ್ ಹೇಳಿದರು.

ಕ್ಷಮೆ ಕೇಳಿದ ಮೋಹನ್

ಕ್ಷಮೆ ಕೇಳಿದ ಮೋಹನ್

''ಇಲ್ಲಿ ಇರೋ ಅಷ್ಟೂ ಸ್ಪರ್ಧಿಗಳು ಎಂಟರ್ ಟೇನರ್ಸ್. ಮನರಂಜನೆ ನೀಡುತ್ತಲೇ ಬಂದಿದ್ದೇವೆ. ಆದ್ರೆ, ಬೋರಿಂಗ್ ಅಂತ ಅನಿಸಿದ್ದರೆ, ಕ್ಷಮೆ ಇರಲಿ. ಇನ್ಮುಂದೆ ನಗಿಸುವ ಪ್ರಯತ್ನ ಮಾಡುತ್ತೇವೆ. ಎಲ್ಲೋ ಒಂದು ಕಡೆ ನಾವು ಮನುಷ್ಯರು ಆಗಿರುವುದರಿಂದ ಭಾವನೆಗಳಿಗೆ ವಾಲುವುದು ಜಾಸ್ತಿ'' - ಮೋಹನ್

ಮಾಳವಿಕಾ ಅವಿನಾಶ್ ಏನಂದರು.?

ಮಾಳವಿಕಾ ಅವಿನಾಶ್ ಏನಂದರು.?

''ಕಳೆದ ವಾರ ನೀವು ಒಂದು ಹುಳ ಬಿಟ್ಟು ಹೋಗಿದ್ರಿ - 'ನಿರೀಕ್ಷೆ ಮಾಡುವಂಥದ್ದನ್ನ ನಿರೀಕ್ಷೆ ಮಾಡಿ' ಅಂತ. ಮನೆಯವರ ಜೊತೆ ಸಂಭಾಷಣೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆ ನಿರೀಕ್ಷೆಯಿಂದ ನಗು ಸ್ವಲ್ಪ ಕಡಿಮೆ ಆಗಿರಬಹುದು'' ಎಂದರು ಮಾಳವಿಕಾ ಅವಿನಾಶ್

ಸುದೀಪ್ ಹೇಳಿದ್ದೇನು.?

ಸುದೀಪ್ ಹೇಳಿದ್ದೇನು.?

''Frankly, I don't agree with the tweet. ನನಗೆ 'ಬಿಗ್ ಬಾಸ್' ಬೋರಿಂಗ್ ಅಲ್ಲ ನಾಗತಿಹಳ್ಳಿ ಸರ್'' ಎಂದುಬಿಟ್ಟರು ಕಿಚ್ಚ ಸುದೀಪ್

ಇದೆಲ್ಲ ತುಂಬಾ ಕಷ್ಟ.!

ಇದೆಲ್ಲ ತುಂಬಾ ಕಷ್ಟ.!

''ನೀವು ವೈಯುಕ್ತಿಕವಾಗಿ ನನಗೆ ಟೆಕ್ಸ್ಟ್ ಮಾಡಿದ್ರೆ, ಬಹುಶಃ ನಾನು ಖುಷಿ ಪಡುತ್ತಿದ್ದೆ. ಹಿರಿಯ ನಿರ್ದೇಶಕರಿಂದ ನನ್ನಂಥಹ ಒಬ್ಬ ಪುಟ್ಟ ಕಲಾವಿದನಿಗೆ ಒಂದು ಟೆಕ್ಸ್ಟ್ ಬಂದಿರೋ ಖುಷಿ ಇರೋದು. ಆದ್ರೆ, ಪಬ್ಲಿಕ್ ಫೋರಂನಲ್ಲಿ ಹೇಳಿದಾಗ... ಒಳಗಡೆ ಮಕ್ಕಳನ್ನು ಬಿಟ್ಟಿರೋ ತಾಯಂದಿರು ಇದ್ದಾರೆ, ಹೆಂಡತಿ-ಮಕ್ಕಳನ್ನು ಬಿಟ್ಟಿರೋ ಗಂಡಂದಿರು ಇದ್ದಾರೆ, ತಂದೆ-ತಾಯಿಯನ್ನು ಬಿಟ್ಟಿರೋ ಮಕ್ಕಳು ಇದ್ದಾರೆ. 85 ದಿನ ಸ್ವಾತಂತ್ರ್ಯ ಕಳ್ಕೊಂಡು ಒಳಗೆ ಇದ್ದಾರೆ. ಅವರಿಗೆ ಬೇಕಾದ ಊಟ ಇಲ್ಲ. ಮಾತಿಲ್ಲ. ಅವರ ಜೀವನದಲ್ಲಿ ಮಾಡಿರುವ ಟಾಸ್ಕ್ ಇಲ್ಲ. ಒದ್ದಾಡುತ್ತಿದ್ದಾರೆ. ಆರೋಗ್ಯ ಸರಿ ಇಲ್ಲ. 85 ದಿನ ನಮ್ಮ ಜೀವನದಿಂದ ದೂರ ಇರುವುದು ಬಹಳ ಕಷ್ಟ ಸರ್'' - ಕಿಚ್ಚ ಸುದೀಪ್

ಅಹಂನಿಂದ ಮಾತನಾಡುತ್ತಿಲ್ಲ

ಅಹಂನಿಂದ ಮಾತನಾಡುತ್ತಿಲ್ಲ

''ನಿಮ್ಮ ಟ್ವಿಟ್ಟರ್ ಗೆ ಗೌರವ ಇದೆ ನನಗೆ. ನಿಮ್ಮ ಮೇಲೆ ಬಹಳ ಹೆಮ್ಮೆ ಇದೆ ನನಗೆ. ನಾನು ಈ ಮಾತನ್ನ ಅಹಂನಿಂದ ಹೇಳುತ್ತಿಲ್ಲ. ಆದ್ರೆ, ನಾವು ಸ್ಪರ್ಧಿಗಳಿಗೆ ನಗುತ್ತಾಯಿರಿ ಅಂತ ಹೇಳಿದ್ರೆ, ಫೇಕ್ ಮಾಡಿ ಅಂತ ಹೇಳಿಕೊಟ್ಟಂಗೆ ಆಗುತ್ತದೆ ಸರ್. ಅವರ ಭಾವನೆಗಳನ್ನ ಅವರು ತೋರಿಸಿಕೊಳ್ಳಲಿ ಬಿಡಿ. ಅವರೂ ಮನುಷ್ಯರು'' - ಕಿಚ್ಚ ಸುದೀಪ್

ನಾವು ಬಿಟ್ಟುಕೊಡಲು ಆಗಲ್ಲ

ನಾವು ಬಿಟ್ಟುಕೊಡಲು ಆಗಲ್ಲ

''ಆದ್ರೆ, ಒಂದಂತೂ ಸತ್ಯ ಸರ್. ಒಳಗಡೆ ಇರೋರು ಜೀವನದಲ್ಲಿ ಬಹಳ ದೊಡ್ಡ ದೊಡ್ಡ ಕೆಲಸಗಳನ್ನ ಮಾಡಿ ಒಳಗಡೆ ಇದ್ದಾರೆ ಸರ್. ಸೋ, ಜೀವನವನ್ನ ಬಿಟ್ಟು ಅವರೆಲ್ಲ ಒಳಗಡೆ ಇದ್ದಾರೆ ಅಂದ್ರೆ ಅವರೆಲ್ಲ ನಮ್ಮ ಆಸ್ತಿ ಸರ್. ಆ ಆಸ್ತಿಯನ್ನು ನಾವು ಬಿಟ್ಟುಕೊಡಲು ಆಗುವುದಿಲ್ಲ'' - ಕಿಚ್ಚ ಸುದೀಪ್

'ಪಬ್ಲಿಕ್'ನಲ್ಲೇ ಉತ್ತರ.!

'ಪಬ್ಲಿಕ್'ನಲ್ಲೇ ಉತ್ತರ.!

''ಆದ್ರೆ ಪಬ್ಲಿಕ್ ಫೋರಂನಲ್ಲಿ ತಾವು ಪ್ರಶ್ನೆ ಕೇಳಿದಕ್ಕೆ ನಾನು ಪಬ್ಲಿಕ್ ಫೋರಂನಲ್ಲಿ ಉತ್ತರ ಕೊಡುತ್ತಿದ್ದೇನೆ. ಇಲ್ಲ ಅಂದ್ರೆ ನಾನು ವೈಯುಕ್ತಿಕವಾಗಿ ಟೆಕ್ಸ್ಟ್ ಮಾಡುತ್ತಿದ್ದೆ'' - ಕಿಚ್ಚ ಸುದೀಪ್

ಮುಂದಿನ ಸೀಸನ್ ಗೆ ಒಳಗಡೆ ಬನ್ನಿ

ಮುಂದಿನ ಸೀಸನ್ ಗೆ ಒಳಗಡೆ ಬನ್ನಿ

''ಇದರ ಮೇಲೂ ಸಾಧ್ಯ ಇದೆ ಅಂದ್ರೆ ತಾವು ದಯವಿಟ್ಟು ಮುಂದಿನ ಸೀಸನ್ ನಲ್ಲಿ ಒಳಗಡೆ ಬಂದು ನನಗೆ, ಬಿಗ್ ಬಾಸ್ ಗೆ, ಇತರೆ ಸ್ಪರ್ಧಿಗಳಿಗೆ ಮಾರ್ಗದರ್ಶನವಾಗಬೇಕು ಅಂತ ನಾನು ಕೇಳಿಕೊಳ್ತಾಯಿದ್ದೇನೆ. ಥ್ಯಾಂಕ್ಯು ಸರ್'' - ಕಿಚ್ಚ ಸುದೀಪ್

ಸಲಾಂ ಮಾಡಿದ ಮೋಹನ್

ಸಲಾಂ ಮಾಡಿದ ಮೋಹನ್

''ಯು ಆರ್ ಅಬೌವ್ ಅಮೇಝಿಂಗ್ ಸರ್'' ಎಂದು ಮೋಹನ್ ಹೇಳಿದರು.

English summary
Kiccha Sudeep has reacted to Kannada Director Nagathihalli Chandrashekar's tweet during 'Varada Kathe Kicchana Jote' show.
Please Wait while comments are loading...

Kannada Photos

Go to : More Photos