»   » 'ಬಿಗ್ ಬಾಸ್ ಸೀಸನ್ 2' ಬಗ್ಗೆ ಕಿಚ್ಚ ಸುದೀಪ್ ಸುಳಿವು

'ಬಿಗ್ ಬಾಸ್ ಸೀಸನ್ 2' ಬಗ್ಗೆ ಕಿಚ್ಚ ಸುದೀಪ್ ಸುಳಿವು

Posted by:
Subscribe to Filmibeat Kannada

ಈಟಿವಿ ಕನ್ನಡದ 'ಬಿಗ್ ಬಾಸ್' ರಿಯಾಲಿಟಿ ಶೋ ಮೊದಲ ಸೀಸನ್ ನಲ್ಲೇ ಸಾಕಷ್ಟು ವಾದ ವಿವಾದ, ಚರ್ಚೆ ಮನರಂಜನೆಗೆ ಗ್ರಾಸವಾಗಿತ್ತು. ಜೊತೆಗೆ ವಾಹಿನಿಯ ಟಿಆರ್ ಪಿಯನ್ನು ಸಾಕಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲೂ ಈ ಶೋ ಮಹತ್ವದ ಪಾತ್ರವಹಿಸಿತ್ತು. ಇದೀಗ ಸೀಸನ್ 2 ಯಾವಾಗ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿದ್ದರೂ ಕಿಚ್ಚ ಸುದೀಪ್ ಮಾತ್ರ ಸಣ್ಣ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಈ ಬಗ್ಗೆ ಟ್ವೀಟಿಸಿರುವ ಸುದೀಪ್, "ಸದ್ಯಕ್ಕೆ ಬಿಗ್ ಬಾಸ್ ಕುರಿತ ಚರ್ಚೆ ನಡೆಯುತ್ತಿದೆ. ಈ ವರ್ಷದಲ್ಲಿ ಯಾವಾಗ ಆರಂಭವಾಗುತ್ತದೆ ಎಂಬುದು ನನಗೆ ಗೊತ್ತಾದ ಕೂಡಲೆ ತಿಳಿಸುತ್ತೇನೆ..." ಎಂದಿದ್ದಾರೆ. ಸದ್ಯಕ್ಕೆ ಸುದೀಪ್ ಅವರ 'ಮಾಣಿಕ್ಯ' ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ಶೀಘ್ರದಲ್ಲೇ ಆಡಿಯೋ ಬಿಡುಗಡೆಯಾಗಲಿದೆ. [ಬಿಗ್ ಬಾಸ್ ಮನೆಯಲ್ಲಿ ಬ್ರಹ್ಮಾಂಡ ಐಟಂ ಡಾನ್ಸ್]

Sudeep

ಕನ್ನಡ ಕಿರುತೆರೆ ಇತಿಹಾಸದಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಆಗಿ ಬಿಗ್ ಬಾಸ್ ಹೊರಹೊಮ್ಮಿತ್ತು. ಕನ್ನಡ ಬಿಗ್ ಬಾಸ್ ಮೊದಲ ಆವೃತ್ತಿಯ ಯಶಸ್ಸಿನಲ್ಲಿ ನಿರೂಪಕನಾಗಿ ಜನರ ಮನ್ನಣೆಗಳಿಸಿರುವ ನಟ 'ಕಿಚ್ಚ' ಸುದೀಪ್ ಅವರ ಪಾತ್ರವನ್ನು ಯಾರೂ ಅಲ್ಲಗಳೆಯುವುದಿಲ್ಲ. ಈಗ ಸೀಸನ್ 2 ಅವರೇ ನಿರೂಪಿಸುತ್ತಾರಾ? [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಸುದೀಪ್ ಅವರ ನಿರೂಪಣೆ ಇದ್ದಿದ್ದರಿಂದಲೇ ಬಿಗ್ ಬಾಸ್ ಈ ಪರಿಯ ಜನಪ್ರಿಯತೆ ಗಳಿಸಿದೆ ಅನ್ನುವವರೂ ಇದ್ದಾರೆ. ನಮ್ಮ ಒನ್ಇಂಡಿಯಾ ಓದುಗರೂ ನಿರೂಪಕರಲ್ಲಿ ಸುದೀಪ್ ಅವರೇ ಬೆಸ್ಟ್ ಎಂದು ತೀರ್ಪು ನೀಡಿದ್ದರು. ಬಿಗ್ ಬಾಸ್ ಮತ್ತು ಸುದೀಪ್ ಬಗ್ಗೆ ಅಭಿಪ್ರಾಯ ಹೀಗಿರುವಾಗ ಸುದೀಪ್ ತಮ್ಮ ಅಭಿಮಾನಿಗಳಿಗೆ, ಬಿಗ್ ಬಾಸ್ ನಿರ್ಮಾತೃಗಳಿಗೆ ಸಾಕಷ್ಟು ಹಿಂದೆಯೇ ಒಂದು ಶಾಕಿಂಗ್ ನ್ಯೂಸ್ ನೀಡಿದ್ದರು.

ಅದೇನೆಂದರೆ, ಬಿಗ್ ಬಾಸ್ ಮುಂದಿನ ಆವೃತ್ತಿಯಲ್ಲಿ ಅವರು ನಿರೂಪಣೆ ಮಾಡುವುದಿಲ್ಲ ಎಂದು. ಈ ಆಘಾತಕಾರಿ ಸಂಗತಿಯನ್ನು ಸುದೀಪ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದು, ಇನ್ನು ಮುಂದೆ ಸಿನೆಮಾಗಳಲ್ಲಿ ಹೆಚ್ಚು ತೊಡಗಿಕೊಳ್ಳುವುದಾಗಿ ಹೇಳಿದದ್ದನು ಇಲ್ಲಿ ಸ್ಮರಿಸಬಹುದು. (ಒನ್ಇಂಡಿಯಾ ಕನ್ನಡ)

English summary
The latest buzz has now cleared that the plan on second season of Kannada Bigg Boss is still on, and it is likely to be held after Sudeep completes his directorial venutre Maanikya.
Please Wait while comments are loading...

Kannada Photos

Go to : More Photos