»   » ಭಾನುವಾರ ಯಾವ ಚಾನಲ್ ನಲ್ಲಿ ಯಾವ ಸಿನಿಮಾ?

ಭಾನುವಾರ ಯಾವ ಚಾನಲ್ ನಲ್ಲಿ ಯಾವ ಸಿನಿಮಾ?

Posted by:
Subscribe to Filmibeat Kannada

ಈ ಭಾನುವಾರ (ಜೂ.15) ಕನ್ನಡ ಮನರಂಜನಾ ಲೋಕದಲ್ಲಿ ಯಾವ ಸಿನಿಮಾ ಪ್ರಸಾರವಾಗುತ್ತಿದೆ ಎಂಬ ಪಕ್ಕಾ ಮಾಹಿತಿಯನ್ನು ನಿಮ್ಮ ನೆಚ್ಚಿನ ಒನ್ಇಂಡಿಯಾ ಕನ್ನಡ ನೀಡುತ್ತಿದೆ. ನೀವು ನೋಡಿರದ, ಮತ್ತೆ ಮತ್ತೆ ನೋಡಬಹುದಾದ ಸಾಕಷ್ಟು ಸಿನಿಮಾಗಳು ಈ ವಾರ ಪ್ರಸಾರವಾಗುತ್ತಿವೆ.

ಕೆಲವು ಚಿತ್ರಗಳನ್ನು ಮನೆಮಂದಿಯಲ್ಲಾ ಕುಳಿತು ನೋಡುವಂತಿದ್ದರೆ, ಇನ್ನೂ ಕೆಲವು ಒಂಟಿಯಾಗಿ ಒಬ್ಬರೇ ಸವಿಯುವಂತಹವು. ಕೆಲವು ಜಂಟಿಯಾಗಿಯೂ ನೋಡಿ ಆನಂದಿಸುವಂತಹ ಚಿತ್ರಗಳು ಇವೆ. ಚಾನಲ್ ಬದಲಿಸಿ ನಿಮ್ಮ ನಿಮ್ಮ ಅನುಕೂಲ, ಅಭಿರುಚಿಗೆ ತಕ್ಕಂತೆ ಸಿನಿಮಾಗಳನ್ನು ಸವಿಯುವ ಸಂಪೂರ್ಣ ಸ್ವಾತಂತ್ರ್ಯ ನಿಮಗಿದೆ. [ಕನ್ನಡ ಕಿರುತೆರೆ ಸುದ್ದಿಗಳು]

ಹುಲಿಯ ಹಾಲಿನ ಮೇವು, ಹುಲಿಯಾದಂತಹ ಕೆಲವು ಎವರ್ ಗ್ರೀನ್ ಚಿತ್ರಗಳು ಭಾನುವಾರ ಪ್ರಸಾರವಾಗುತ್ತಿದೆ. ರೊಮ್ಯಾಂಟಿಕ್, ಆಕ್ಷನ್, ಕಾಮಿಡಿ, ಸಸ್ಪನ್ಸ್, ಥ್ರಿಲ್ಲರ್ ಗಳು ಪಟ್ಟಿಯಲ್ಲಿವೆ. ಆಯ್ಕೆ ನಿಮ್ಮದು, ಮಾಹಿತಿ ನಮ್ಮದು. ಸ್ಲೈಡ್ ನಲ್ಲಿ ಒಂದು ಲುಕ್ ಹಾಕಿ.

ಸುವರ್ಣ ವಾಹಿನಿಯಲ್ಲಿ ಮೂರು ಚಿತ್ರಗಳು

ಸುವರ್ಣ ವಾಹಿನಿಯಲ್ಲಿ ಮೂರು ಚಿತ್ರಗಳು

ದರ್ಶನ್, ಮದಲಸಾ ಶರ್ಮಾ ಮುಖ್ಯಭೂಮಿಯಲ್ಲಿರುವ ಶೌರ್ಯ ಚಿತ್ರ ಬೆಳಗ್ಗೆ 9.30ಕ್ಕೆ ಪ್ರಸಾರವಾಗುತ್ತಿದೆ. ಸಂಜೆ 3 ಗಂಟೆ ಚಹಾ ಜೊತೆ ಶ್ರೀನಗರ ಕಿಟ್ಟಿ ಐಂದ್ರಿತಾ ರೇ ಮುಖ್ಯಭೂಮಿಕೆಯಲ್ಲಿರುವ ಚಿತ್ರ 'ಟೋನಿ' (ಚಿತ್ರ ವಿಮರ್ಶೆ) ನೋಡಬಹುದು. ಸಂಜೆ 6ಕ್ಕೆ ಚಾಟ್ಸ್ ಜೊತೆ ಪುನೀತ್ ರಾಜ್ ಕುಮಾರ್, ಯೋಗೇಶ್, ಕಿಟ್ಟಿ, ರಾಧಿಕಾ ಪಂಡಿತ್ ಅಭಿನಯ 'ಹುಡುಗರು' ಚಿತ್ರ ಕಣ್ತುಂಬಿಕೊಳ್ಳಬಹುದು.

ಡಿಡಿ ಚಂದನದಲ್ಲಿ ಹೆಂಡ್ತಿ ಹೇಳಿದರೆ ಕೇಳಬೇಕು

ಡಿಡಿ ಚಂದನದಲ್ಲಿ ಹೆಂಡ್ತಿ ಹೇಳಿದರೆ ಕೇಳಬೇಕು

ಹೆಂಡ್ತಿ ಹೇಳಿದರೆ ಕೇಳಬೇಕಪ್ಪಾ ಇಲ್ಲದಿದ್ದರೆ ಏನೆಲ್ಲಾ ಆಗುತ್ತದೆ ಎಂಬುದು ಎಲ್ಲ ಗಂಡಂದಿರಿಗೂ ಗೊತ್ತಿರುವ ಸಂಗತಿ. ದ್ವಾರಕೀಶ್, ಮಾಲಾಶ್ರಿ, ಶ್ರೀನಾಥ್ ಅಭಿನಯದ ಈ ಸುಂದರ ಸಾಂಸಾರಿಕ ಚಿತ್ರವನ್ನು ಮಧ್ಯಾಹ್ನ 12.15ಕ್ಕೆ ವಿವಾಹಿತರು, ಅವಿವಾಹಿತರು ನೋಡಿ ಆನಂದಿಸಬಹುದು.

ಈಟಿವಿ ಕನ್ನಡದಲ್ಲಿ ರವಿಚಂದ್ರನ್ ಚಿತ್ರ ಮೊಮ್ಮಗ

ಈಟಿವಿ ಕನ್ನಡದಲ್ಲಿ ರವಿಚಂದ್ರನ್ ಚಿತ್ರ ಮೊಮ್ಮಗ

ಕನ್ನಡದ ಮೊದಲ ಡಾಲ್ಬಿ ಧ್ವನಿಯಲ್ಲಿ ಮೂಡಿಬಂದ ಕ್ರೇಜಿಸ್ಟಾರ್ ರವಿಚಂದ್ರನ್, ಮೀನಾ ಜೋಡಿಯ ಮೊಮ್ಮಗ ಚಿತ್ರವನ್ನು ಸಂಜೆ 5ಕ್ಕೆ ನೋಡಬಹುದು.

ಕಸ್ತೂರಿ ವಾಹಿನಿಯಲ್ಲಿ ಪುನೀತ್ ರಾಜ್ ಮೌರ್ಯ

ಕಸ್ತೂರಿ ವಾಹಿನಿಯಲ್ಲಿ ಪುನೀತ್ ರಾಜ್ ಮೌರ್ಯ

ಎಸ್.ನಾರಾಯಣ್ ನಿರ್ದೇಶನದ ಪುನೀತ್ ರಾಜ್ ಕುಮಾರ್, ಮೀರಾ ಜಾಸ್ಮಿನ್ ಅಭಿನಯದ ಮೌರ್ಯ ಚಿತ್ರ ಸಂಜೆ 3ಕ್ಕೆ ಕಸ್ತೂರಿ ವಾಹಿನಿಯಲ್ಲಿ ಮೂಡಿಬರುತ್ತಿದೆ.

ಉದಯ ಮೂವೀಸ್ ನಲ್ಲಿ ಆರು ಚಿತ್ರಗಳು

ಉದಯ ಮೂವೀಸ್ ನಲ್ಲಿ ಆರು ಚಿತ್ರಗಳು

ಬೆಳಗ್ಗೆ 7 ಗಂಟೆಗೆ ರಾಯರ ಮಗ, ಬೆಳಗ್ಗೆ 10ಕ್ಕೆ ದಿಗ್ಗಜರು, ಮಧ್ಯಾಹ್ನ 1ಕ್ಕೆ ಮನೆದೇವ್ರು, ಸಂಜೆ 4ಕ್ಕೆ ದೇವರ ಮಗ, ರಾತ್ರಿ 7ಕ್ಕೆ ಹುಲಿಯ ಹಾಲಿನ ಮೇವು, ರಾತ್ರಿ 10ಕ್ಕೆ ಹುಲಿಯಾ ಚಿತ್ರಗಳನ್ನು ನೋಡಿ ಆನಂದಿಸಬಹುದು. ಇವೆಲ್ಲವೂ ಉದಯ ಮೂವೀಸ್ ಚಾನಲ್ ನಲ್ಲಿ ಮೂಡಿಬರುತ್ತಿವೆ.

ಉದಯ ಟಿವಿಯಲ್ಲಿ ಚಲಿಸುವ ಮೋಡಗಳು

ಉದಯ ಟಿವಿಯಲ್ಲಿ ಚಲಿಸುವ ಮೋಡಗಳು

ಬೆಳಗ್ಗೆ 11ಕ್ಕೆ ರಾಜ್ ಕುಮಾರ್, ಅಂಬಿಕಾ ಅಭಿನಯದ ಚಲಿಸುವ ಮೋಡಗಳು ಹಾಗೂ ರಾತ್ರಿ 10ಕ್ಕೆ ಉಪೇಂದ್ರ ಅವರ ಗಾಡ್ ಫಾದರ್ ಚಿತ್ರ ನೋಡಬಹುದು.

ಜೀ ಕನ್ನಡದಲ್ಲಿ ಕೂಲ್ ಚಿತ್ರಗಳು

ಜೀ ಕನ್ನಡದಲ್ಲಿ ಕೂಲ್ ಚಿತ್ರಗಳು

ಬೆಳಗ್ಗೆ 9.30ಕ್ಕೆ ಸ್ನೇಹನಾ ಪ್ರೀತಿನಾ ಚಿತ್ರ, ಸಂಜೆ 3ಕ್ಕೆ ಮಾಲಾಶ್ರೀ, ರವಿಶಂಕರ್, ಆಶಿಶ್ ವಿದ್ಯಾರ್ಥಿ ಅಭಿಅನ್ಯಯದ 'ಶಕ್ತಿ' ಚಿತ್ರವನ್ನು ನೋಡಬಹುದು. ಸಂಜೆ 6ಕ್ಕೆ 'ಕೂಲ್ ಗಣೇಶ' ಚಿತ್ರ ಪ್ರಸಾರವಾಗಲಿದೆ.

English summary
Here is details about Kannada tv channels to air movies on 15th June Sunday. Udaya TV, Udaya movies, Zee Kannada, Kasthuri, Etv Kannada, Suvarna, DD Chandana TV channels movies time schedule.
Please Wait while comments are loading...

Kannada Photos

Go to : More Photos