»   » 'ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್! ವೀಕ್ಷಕರ ಅಭಿಪ್ರಾಯವೇನು?

'ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್! ವೀಕ್ಷಕರ ಅಭಿಪ್ರಾಯವೇನು?

Posted by:
Subscribe to Filmibeat Kannada

ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣ ಮೊಮ್ಮಗಳು, ಗಾಯಕಿ ಬಿ.ಜಯಶ್ರೀ ಪುತ್ರಿ ಸುಷ್ಮಾ ವೀರ್ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿದ್ದಾರೆ.

'ಬಿಗ್ ಬಾಸ್' ಮನೆಗೆ ಅಂದರ್ ಆಗುತ್ತಿದ್ದಂತೆ 'ನಾನೊಂಥರಾ ಖರಾಬ್ ದೆವ್ವ ಇದ್ಹಂಗೆ' ಅಂತ ಹೇಳಿದ್ದ ಸುಷ್ಮಾ ವೀರ್ ಕಂಡು 'ಬಿಗ್ ಬಾಸ್' ಮನೆಯ ಅನೇಕರಿಗೆ ಒಳಗೊಳಗೆ ಆತಂಕ ಶುರುವಾಗಿರುವುದು ಖಚಿತ.

'ಬಿಗ್ ಬಾಸ್' ಮನೆ ಸದಸ್ಯರಿಗೆ ಸುಷ್ಮಾ ವೀರ್ ಎಂಟ್ರಿ ಭಯ ನೀಡಿರಬಹುದು. ಆದ್ರೆ, 'ಬಿಗ್ ಬಾಸ್-3' ಕಾರ್ಯಕ್ರಮ ನೋಡುತ್ತಿರುವ ವೀಕ್ಷಕರಿಗೆ ಮಾತ್ರ ಸಖತ್ ಕಿಕ್ ನೀಡಿದೆ. ['ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್.! ನಟಿ ಶ್ರುತಿಗೆ ಕಷ್ಟಕಷ್ಟ!]

ಈ ಬಗ್ಗೆ ಕಲರ್ಸ್ ಕನ್ನಡ ಫೇಸ್ ಬುಕ್ ನಲ್ಲಿ ವೀಕ್ಷಕರು ಹಾಕಿರುವ ಕಾಮೆಂಟ್ ಗಳ ಸಂಗ್ರಹ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಓವರ್ ಆಕ್ಟಿಂಗ್ ಗೆ ಬ್ರೇಕ್ ಹಾಕೋ ಸುಷ್ಮಾ

ಓವರ್ ಆಕ್ಟಿಂಗ್ ಗೆ ಬ್ರೇಕ್ ಹಾಕೋ ಸುಷ್ಮಾ

'ಶ್ರುತಿ ಓವರ್ ಆಕ್ಟಿಂಗ್ ಮಾಡ್ತಿದ್ದಾರೆ. ಅದನ್ನ ಬ್ರೇಕ್ ಹಾಕೋಕೆ ಬೆಸ್ಟ್ ಕನ್ಟೆಸ್ಟೆಂಟ್ ಅಂದ್ರೆ ಅದು ಸುಷ್ಮಾ' ಅನ್ನೋದು ಕೆಲವರ ಅಭಿಪ್ರಾಯ.

'ಬಿಗ್ ಬಾಸ್'ಗೆ ಧನ್ಯವಾದ

'ಬಿಗ್ ಬಾಸ್'ಗೆ ಧನ್ಯವಾದ

ಸುಷ್ಮಾ ವೀರ್ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದವರೂ ಇದ್ದಾರೆ.

ವೀಕ್ಷಕರು ಖುಷ್

ವೀಕ್ಷಕರು ಖುಷ್

ಸುಷ್ಮಾ ವೀರ್ ಎಂಟ್ರಿಕೊಟ್ಟಿರುವುದು 'ಬಿಗ್ ಬಾಸ್' ವೀಕ್ಷಕರಿಗೆ ಖುಷಿ ಕೊಟ್ಟಿದೆ ಅನ್ನೋದಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ.

ಎಂಟ್ರಿ ಸೂಪರ್

ಎಂಟ್ರಿ ಸೂಪರ್

ಸುಷ್ಮಾ ವೀರ್ ಎಂಟ್ರಿ ಚೆನ್ನಾಗಿತ್ತು ಅಂತ ಹೇಳುವವರೇ ಹೆಚ್ಚು.

ಮಾರಿ ಹಬ್ಬ ಕಾದಿದೆ

ಮಾರಿ ಹಬ್ಬ ಕಾದಿದೆ

ಶ್ರುತಿಗೆ ಮಾರಿ ಹಬ್ಬ ಕಾದಿದ್ಯಂತೆ!

ಶ್ರುತಿ ಬಂಡವಾಳ ಬಯಲಾಗುತ್ತಂತೆ!

ಶ್ರುತಿ ಬಂಡವಾಳ ಬಯಲಾಗುತ್ತಂತೆ!

ಶ್ರುತಿ ಮುಖವಾಡ ಕಳಚುವುದಕ್ಕೆ ಸುಷ್ಮಾ ವೀರ್ ಉತ್ತಮ ಸ್ಪರ್ಧಿಯಂತೆ!

ಎಲ್ಲರ ಕಾಲು ಎಳೀತದೆ ಕಾಲ!

ಎಲ್ಲರ ಕಾಲು ಎಳೀತದೆ ಕಾಲ!

'ಎಲ್ಲರು ಕಾಲು ಎಳೀತದೆ ಕಾಲ' ಅನ್ನೋದಕ್ಕೆ ಸುಷ್ಮಾ ಎಂಟ್ರಿನೇ ಸಾಕ್ಷಿ ಅಂತೆ!

ಇಂಗು ತಿಂದ ಮಂಗ

ಇಂಗು ತಿಂದ ಮಂಗ

'ಬಿಗ್ ಬಾಸ್' ನೀಡುತ್ತಿರುವ ಹೊಸ ಟ್ವಿಸ್ಟ್ ಗಳನ್ನ ವೀಕ್ಷಕರು ಎಂಜಾಯ್ ಮಾಡುತ್ತಿದ್ದಾರೆ ಅನ್ನೋದಕ್ಕೆ ಈ ಕಾಮೆಂಟ್ ಬೆಸ್ಟ್ ಎಕ್ಸಾಂಪಲ್!

ನಿಮ್ಮ ಅಭಿಪ್ರಾಯ ಏನು?

ನಿಮ್ಮ ಅಭಿಪ್ರಾಯ ಏನು?

'ಬಿಗ್ ಬಾಸ್' ಮನೆಗೆ ಸುಷ್ಮಾ ಎಂಟ್ರಿ ಕೊಟ್ಟಿರುವುದು ನಿಮಗೆ ಹೇಗೆ ಅನಿಸಿದೆ ಅಂತ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ...

English summary
Bigg Boss Kannada 3 Viewers are happy over the entry of Sushma Veer. Check out the viewers reaction here.
Please Wait while comments are loading...

Kannada Photos

Go to : More Photos