»   » ಬ್ಯಾಂಕಾಕ್ ನಲ್ಲಿ ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್' ವೇದಿಕೆ

ಬ್ಯಾಂಕಾಕ್ ನಲ್ಲಿ ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್' ವೇದಿಕೆ

Posted by:
Subscribe to Filmibeat Kannada

ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್' ಶೋ ಹೆಜ್ಜೆ ಹೆಜ್ಜೆಗೂ ಹೊಸತನವನ್ನು ಸೃಷ್ಟಿಸಿ ವೀಕ್ಷಕರ ಪ್ರೀತಿಗೆ ಪಾತ್ರವಾಗಿದೆ.

50ಕ್ಕೂ ಹೆಚ್ಚು ಸಿಬ್ಬಂದಿ, 6 ಸೂಪರ್ ಜೋಡಿಗಳು ಕರ್ನಾಟಕದಿಂದ ಥೈಲ್ಯಾಂಡ್ ನ ಬ್ಯಾಂಕಾಕ್ ಗೆ ತೆರಳಿ ಕನ್ನಡ ನಾಡಿನ ಸಂಸ್ಕೃತಿ ಹರಡಲು ಮಹಾನ್ ವೇದಿಕೆಯನ್ನು ನಿರ್ಮಿಸಿದ್ದಾರೆ.

ದೇಶ ಯಾವುದೇ ಆಗಿರಲಿ, ಭಾಷೆ ಯಾವುದೇ ಆಗಿರಲಿ, ಆದರೆ ಕಲೆಗೆ ಮಾತ್ರ ಎಲ್ಲೆಡೆ ಒಂದೇ ಬೆಲೆ. ಹಾಗೇ, 'ಡ್ಯಾನ್ಸ್ ಡ್ಯಾನ್ಸ್' ಶೋನಲ್ಲಿ ಇಲ್ಲಿಯವರೆಗೆ ಬೇರೆ ಭಾಷೆ, ನಡೆ ನುಡಿ, ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ನೃತ್ಯಗಳನ್ನು ನೋಡಿದ್ದೀರಿ. ಈಗ ಥೈಲ್ಯಾಂಡ್ ನ 'ಥಾಯ್ ಡ್ಯಾನ್ಸ್' ನೋಡುವ ಸುವರ್ಣಾವಕಾಶ ನಿಮ್ಮದು. [ಸ್ಯಾಂಡಲ್ ವುಡ್ ದಿಗ್ಗಜರ ಸಮಾಗಮದಲ್ಲಿ ಡ್ಯಾನ್ಸ್ ಡ್ಯಾನ್ಸ್]

suvarna-channel-s-dance-dance-show-at-thailand

135 ಅಡಿ ಉದ್ದದ, 35 ಅಡಿ ಎತ್ತರದ ಥೈಲ್ಯಾಂಡ್ ನ ಐತಿಹಾಸಿಕ ಪ್ರಸಿದ್ಧ ದೇವಾಲಯ 'ಡ್ರ್ಯಾಗನ್'ಗೆ ತೆರಳಿ ಅಲ್ಲಿನ ಪದ್ಧತಿಯಂತೆ ನಮನ ಸಲ್ಲಿಸಿ, 'ಡ್ಯಾನ್ಸ್ ಡ್ಯಾನ್ಸ್' ಪ್ರಾರಂಭಿಸಿದ್ದು ಕಾರ್ಯಕ್ರಮದ ವಿಶೇಷ. [ಚಿತ್ರಪುಟ; ತಾಜ್ ಮಹಲ್ ಮುಂದೆ ಹೆಜ್ಜೆ ಹಾಕಿದ 'ಸುವರ್ಣ' ಸ್ಪರ್ಧಿಗಳು]

'ಡ್ಯಾನ್ಸ್ ಡ್ಯಾನ್ಸ್ - ಥೈಲ್ಯಾಂಡ್ ಸ್ಪೆಷಲ್' ಕಾರ್ಯಕ್ರಮ ಇದೇ ಸೋಮವಾರ (04/07/16) ರಿಂದ ಶುಕ್ರವಾರದವರೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಅದಕ್ಕೂ ಮುನ್ನ ಥೈಲ್ಯಾಂಡ್ ನಲ್ಲಿ ಕ್ಲಿಕ್ ಆಗಿರುವ 'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದ ಫೋಟೋ ಗ್ಯಾಲರಿ ಇಲ್ಲಿದೆ, ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ ಮಾಡಿ ನೋಡಿ....

English summary
Kannada Entertainment Channel Suvarna has made an achievement by conducting 'Dance Dance' reality show in front of Dragon temple, Bangkok, Thailand.
Please Wait while comments are loading...

Kannada Photos

Go to : More Photos