»   » ಡ್ಯಾನ್ಸ್ ಶೋನಲ್ಲಿ 'ಬಾಹುಬಲಿ' ಜಲಪಾತದ ವೈಭವ ಅನಾವರಣ

ಡ್ಯಾನ್ಸ್ ಶೋನಲ್ಲಿ 'ಬಾಹುಬಲಿ' ಜಲಪಾತದ ವೈಭವ ಅನಾವರಣ

Posted by:
Subscribe to Filmibeat Kannada

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಸೆಲೆಬ್ರಿಟಿ ಜೋಡಿಗಳ 'ಡ್ಯಾನ್ಸ್ ಡ್ಯಾನ್ಸ್' ಶೋ ವಾರದಿಂದ ವಾರಕ್ಕೆ ರಂಗೇರುತ್ತಿದೆ. ವಿವಿಧ ರೀತಿಯ ಸಾಹಸಮಯ ನೃತ್ಯ ಪ್ರದರ್ಶನದಲ್ಲಿ ಸ್ಪರ್ಧಿಗಳು ಸಾಹಸಮಯ ಹೆಜ್ಜೆಗಳನ್ನು ಹಾಕುತ್ತಾ ಜನಮೆಚ್ಚುಗೆ ಗಳಿಸುತ್ತಿದ್ದಾರೆ.

ಅದೇ ರೀತಿ ಈ ಬಾರಿ ಕೂಡ ಹೊಸ ಸಾಹಸಮಯ ಪ್ರದರ್ಶನದೊಂದಿಗೆ ಡ್ಯಾನ್ಸ್ ಶೋ ವೀಕ್ಷಕರ ಎದುರು ಬರಲಿದೆ. ಸುಂದರ ತಾಣ ಕೇರಳದ ಅತಿರಪಲ್ಲಿ ಫಾಲ್ಸ್ ನಲ್ಲಿ ಬೃಹತ್ ವೇದಿಕೆ ಸಿದ್ದಪಡಿಸಿದ್ದು, ಅದರಲ್ಲಿ ಸ್ಪರ್ಧಿಗಳು ಡ್ಯಾನ್ಸ್ ಮಾಡಲಿದ್ದಾರೆ.[ಕನ್ನಡ ಕಿರುತೆರೆಯಲ್ಲಿ 'ಸ್ವಾತಿ ಮುತ್ತು' ಬೆಡಗಿ ಮೀನಾ!]

ಸುಮಾರು 330 ಅಡಿ ಅಗಲ, 82 ಅಡಿ ಎತ್ತರದಲ್ಲಿರುವ ವೇದಿಕೆಯಲ್ಲಿ ಸ್ಪರ್ಧಿಗಳು ಡ್ಯಾನ್ಸ್ ಮಾಡಲಿದ್ದಾರೆ. ಇನ್ನು ಈ ವೇದಿಕೆಯಲ್ಲಿ ಡ್ಯಾನ್ಸ್ ಮಾಡಲು ಎಷ್ಟು ಶ್ರಮಿಸಬೇಕಾಗುತ್ತದೋ, ಅಷ್ಟೇ ವೇದಿಕೆ ನಿರ್ಮಿಸಲು ಕೂಡ ಕಷ್ಟಪಟ್ಟಿದ್ದಾರೆ.[ಅಬ್ಬಾ.! ಚಲಿಸುವ ಟ್ರಕ್ ನಲ್ಲಿ ಏನಿದು ಸಾಹಸ]

ಎಸ್.ಎಸ್ ರಾಜಮೌಳಿ ಅವರ ಹಿಟ್ ಸಿನಿಮಾ 'ಬಾಹುಬಲಿ' ಕೂಡ ಈ ಜಾಗದಲ್ಲಿ ಶೂಟಿಂಗ್ ಆಗಿ ಬಹಳ ಫೇಮಸ್ ಆಗಿದ್ದು ಇತಿಹಾಸ. ಇದೀಗ ಕಿರುತೆರೆ ಕ್ಷೇತ್ರದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಡ್ಯಾನ್ಸ್ ಡ್ಯಾನ್ಸ್ ಶೋ ಹೊಸ ಸಾಹಸಕ್ಕೆ ಕೈ ಹಾಕಿರುವುದು ಸುವರ್ಣ ವಾಹಿನಿಯ ಹೆಗ್ಗಳಿಕೆ.[ಡ್ಯಾನ್ಸ್ ಶೋನ ಮಧ್ಯದಲ್ಲೇ ಖುಷ್ಬೂ ಎದ್ದು ಹೋಗಿದ್ದು ಯಾಕೆ]

ಈ ನೀರಿನಲ್ಲಿ ಮೀನುಗಳ ಸಾಲು, ಕಾಲಿಟ್ಟರೆ ಜಾರುವ ಜಾಗ, ಹಾಗೆ ತಂಪಾಗಿ ಬೀಸುವ ಗಾಳಿಯ ಮಧ್ಯೆ ನೃತ್ಯ ಮಾಡುವವರಿಗೆ ಇದೊಂದು ದೊಡ್ಡ ಚಾಲೆಂಜ್. ಹಾಗಾಗಿ ಪ್ರಾಣ ಭಯವಿಲ್ಲದೆ 7 ಜೋಡಿಗಳು ಹೇಗೆ ಈ ಅಖಾಡದಲ್ಲಿ ಗೆಲ್ಲುವವರು ಎಂಬುದನ್ನು ಇದೇ ಸೋಮವಾರದ (ಮಾರ್ಚ್ 14) ಸಂಚಿಕೆಯಿಂದ ನೋಡಬಹುದಾಗಿದೆ. ಮೈನವಿರೇಳಿಸುವ ಈ ಶೋ ಸೋಮವಾರದಿಂದ ಶುಕ್ರವಾರದವರೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Kannada Entertainment Channel Suvarna has come up with a different adventure by Kerala's Athirappilly Falls Seen in Dance Dance show.
Please Wait while comments are loading...

Kannada Photos

Go to : More Photos